ಜನನ ಮತ್ತು ಮರಣ ಪ್ರಮಾಣ ಪತ್ರ ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಜೀವನದ ಹಲವು ಹಂತಗಳಲ್ಲಿ ಬಹಳ ಅಗತ್ಯವಾದ ದಾಖಲೆಯಾಗಿದೆ. ವ್ಯಕ್ತಿಯೋರ್ವನಿಗೆ ಆತನ ಜನನ ಪ್ರಮಾಣ ಪತ್ರ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಲು ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ. ಅದೇ ರೀತಿ ಮರಣ ಪ್ರಮಾಣ ಪತ್ರ ಆ ವ್ಯಕ್ತಿಯ ವಾರಸುದಾರರಿಗೆ ಮರಣದ ನಂತರದ ಕಾನೂನು ಕೆಲಸಗಳಿಗೆ ಬೇಕಾಗುತ್ತದೆ.
ಈ ಕಾರಣಕ್ಕಾಗಿ ಸರ್ಕಾರವು ಜನನ ಮತ್ತು ಮರಣ ನೋಂದಣಿಯನ್ನು ಕಡ್ಡಾಯಗೊಳಿಸಿ ಅದಕ್ಕೆ ಪ್ರಮಾಣ ಪತ್ರವನ್ನು ಕೂಡ ನೀಡುತ್ತಿದೆ. ನಂತರ ಸಂಬಂಧ ಪಟ್ಟ ಕಚೇರಿಗಳಲ್ಲಿ ಇದಕ್ಕಾಗಿ ಅರ್ಜಿ ಸಲ್ಲಿಸಿ ಪಡೆಯಬಹುದು ಆದರೆ ಅಂತರ ರಾಜ್ಯದಿಂದ ಬಂದು ರಾಜ್ಯದಲ್ಲಿ ಮೃತ ಪಟ್ಟವರಿಗೆ ಈ ಪ್ರಕ್ರಿಯೆ ಕಷ್ಟದಾಯಕವಾಗಿತ್ತು.
ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಲುವಾಗಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಯೋಜನೆಯೊಂನ್ನು ರೂಪಿಸಿ ಜಾರಿಗೆ ತಂದಿದ್ದಾರೆ. ಉಡುಪಿ ಜಿಲ್ಲೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಿನಕ್ಕೆ ನೂರಾರು ಮಂದಿ ಬರುತ್ತಾರೆ. ವೈದ್ಯರು ಅವರ ಪ್ರಾಣ ರಕ್ಷಣೆಗೆ ಎಷ್ಟೇ ಪ್ರಯತ್ನ ಪಟ್ಟರು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಸಂಬಂಧಿಕರು ಅವರ ಮೃ’ತ ದೇಹವನ್ನು ತಮ್ಮ ಸ್ಥಳಗಳಿಗೆ ಕೊಂಡೊಯ್ಯುವುದು ಅನಿವಾರ್ಯವಾಗಿರುತ್ತದೆ.
ಇಂಥಹ ಸಂದರ್ಭದಲ್ಲಿ ಜನನ ಮರಣ ಪ್ರಾಧಿಕಾರಕ್ಕೆ ತಕ್ಷಣ ಪ್ರಮಾಣ ಪತ್ರ ಕೊಡುವಂತೆ ಅರ್ಜಿ ಸಲ್ಲಿಸಿದರೂ ಕೆಲವೊಮ್ಮೆ ತಾಂತ್ರಿಕ ದೋಷದಿಂದ ಅಂದು ಆ ಪ್ರಕ್ರಿಯೆ ಪೂರ್ತಿಗೊಳ್ಳುವುದಿಲ್ಲ. ಈ ರೀತಿಯಾದಾಗ ಮತ್ತೊಮ್ಮೆ ರಾಜ್ಯಕ್ಕೆ ಮರಣ ಪ್ರಮಾಣ ಪತ್ರ ಪಡೆಯಲು ಅವರ ಕುಟುಂಬಸ್ಥರು ಬರಬೇಕಾಗುತ್ತದೆ.
ಈ ಸಮಸ್ಯೆಯನ್ನು ಮನಗಂಡ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕುಮಾರ್ ರಾವ್ ಇನ್ನು ಮುಂದೆ ಇಂಥ ಸಮಸ್ಯೆ ಜಿಲ್ಲೆಯಲ್ಲಿ ತಲೆದೋರಬಾರದು ಎನ್ನುವ ಕಾರಣಕ್ಕೆ ಯೋಜನೆಯನ್ನು ರೂಪಿಸಿ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಯ ಮೂಲಕ ಉಡುಪಿ ಜಿಲ್ಲೆಯ ಮಣಿಪಾಲ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ ಮತ್ತು ಜಿಲ್ಲೆಯಲ್ಲಿ ಇತರೇ ಕಾರಣಗಳಿಂದ ಮರಣ ಹೊಂದಿದ.
ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವ್ಯಕ್ತಿಗಳ ಕುಟುಂಬದ ಮನೆ ಬಾಗಿಲಿಗೆ ಮರಣ ಪ್ರಮಾಣಪತ್ರವನ್ನು ಅಂಚೆ ಮೂಲಕ ತಲುಪಿಸುವ ನಾಗರೀಕ ಸ್ನೇಹಿ ವಿಶಿಷ್ಠ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಮೃ’ತರ ಕುಟುಂಬದವರು ಮರಣ ಪ್ರಮಾಣ ಪತ್ರಕ್ಕೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಾಗ ಅಂಚೆಯಲ್ಲಿ ಕಳುಹಿಸಿ ಕೊಡುವ ಆಯ್ಕೆಯನ್ನು ಆಯ್ದುಕೊಂಡರೆ 80 ರೂ
ಶುಲ್ಕ ಮಾತ್ರ ಸ್ವೀಕರಿಸಿ ಅವರು ದಾಖಲೆಯಲ್ಲಿ ತಿಳಿಸಿದ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುವ ಕಾರ್ಯವನ್ನು ಈ ಜನಸ್ನೇಹಿ ಯೋಜನೆ ಮಾಡುತ್ತದೆ. ಉಡುಪಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಉಡುಪಿ ನಗರದ ಸ್ಥಳೀಯ ಜನನ ಮರಣ ನೊಂದಣಿ ಪ್ರಾಧಿಕಾರ ಹಾಗೂ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಗಳು ಈ ಸೇವೆ ಒದಗಿಸಲು ಒಪ್ಪಿಕೊಂಡಿವೆ.
ಈ ವಿಶಿಷ್ಟ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ವಿಕಲಾಂಗ ಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವರು, ಉಡುಪಿ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದಾರೆ. ಕುಟುಂಬಸ್ಥರನ್ನು ಕಳೆದುಕೊಂಡ ದುಃಖದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಪದೇ ಪದೇ ಕಛೇರಿಗಳನ್ನು ಅಲೆರುವ ಕಷ್ಟವನ್ನು ಪರಿಹರಿಸುವ ಈ ಯೋಜನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಜಿಲ್ಲೆಯ ಎಲ್ಲಾ ನಗರಸಭೆಗಳು ಇದನ್ನು ರೂಢಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.