ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳದ ದೇವಾಲಯಗಳು ತಮ್ಮ ಶಿಲ್ಪಕಲೆಯಿಂದಲೇ ಜನಮನ ಸೆಳೆಯುತ್ತವೆ. ಇದೆಲ್ಲವೂ ಹೊಯ್ಸಳರ ಕೊಡುಗೆ ಆಗಿದ್ದು, ಹೊಯ್ಸಳರ ತಮ್ಮ ಆಡಳಿತ ಕಾಲದಲ್ಲಿ ಕರ್ನಾಟಕದ ದಕ್ಷಿಣದಾದ್ಯಂತ ಸಾಕಷ್ಟು ಈ ರೀತಿಯ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ದೇವಾಲಯಗಳು ದಕ್ಷಿಣ ಕರ್ನಾಟಕದಲ್ಲಿಯೇ ಕಂಡುಬರುತ್ತವೆ.
ಹೊಯ್ಸಳರ ಕಾಲ ಎಂದ ಕೂಡಲೇ ಅವರ ಶ್ರೀಮಂತ ವಾಸ್ತು ಶೈಲಿಯ ದೇವಾಲಯಗಳೇ ನೆನಪಿಗೆ ಬರುತ್ತವೆ. ಪ್ರೇಕ್ಷಣೀಯ ಸ್ಥಳಗಳೆನಿಸಿರುವ ಈ ದೇವಾಲಯಗಳು ಮಾತ್ರವಲ್ಲದೆ ಹಾಸನದ ಬಹುತೇಕ ಗ್ರಾಮಗಳಲ್ಲಿ ಇಷ್ಟೇ ಪ್ರಭಾವಶಾಲಿಯಾದ ಅನೇಕ ದೇವಾಲಯಗಳು ಹೊಯ್ಸಳ ಕಾಲದಲ್ಲಿ ನಿರ್ಮಾಣ ಆಗಿವೆ. ಹೊಯ್ಸಳರ ಹೆಸರಾಂತ ದೊರೆಯಾದ ರಾಜ ವಿಷ್ಣುವರ್ಧನನ ಕಾಲದಿಂದ ಹಿಡಿದು ನಂತರದಲ್ಲಿ ಬಂದ ಹೊಯ್ಸಳ ಸಾಮ್ರಾಜ್ಯದ ಅನೇಕ ಅರಸರುಗಳು ಕೂಡ ಈ ರೀತಿ ಅಲ್ಲಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಇವರ ನಿರ್ಮಾಣದ ಒಂದೊಂದು ದೇವಾಲಯವು ಕೂಡ ತನ್ನದೇ ಆದ ವಿಶೇಷತೆಯಿಂದ ಕೂಡಿದೆ. ಅದರಲ್ಲಿ ಹಾಸನ ಜಿಲ್ಲಾ ಕೇಂದ್ರದಿಂದ 13 ಕಿಲೋ ಮೀಟರ್ ಅಂತರದಲ್ಲಿರುವ ಶಾಂತಿಗ್ರಾಮ ಎನ್ನುವ ಊರಿನಲ್ಲಿರುವ ಶ್ರೀ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿ ದೇವಾಲಯದ ವಿಶೇಷ ಶಕ್ತಿಯ ಬಗ್ಗೆ ಈ ಲೇಖನದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ರಾಜ ವಿಷ್ಣುವರ್ಧನ ತನ್ನ ಪ್ರೀತಿಯ ಮಡದಿ ಶಾಂತಲೆಗಾಗಿ ಈ ಗ್ರಾಮವನ್ನು ನಿರ್ಮಿಸಿದರು ಎನ್ನುವ ಕಥೆಗಳಿವೆ.
ಆದ್ದರಿಂದಲೇ ಈ ಊರಿಗೆ ಶಾಂತಿಗ್ರಾಮ ಎನ್ನುವ ಹೆಸರು ಬಂದಿದೆ ಎಂದು ಹೇಳುತ್ತಾರೆ. ಇನ್ನು ಈ ಊರಿನಲ್ಲಿರುವ ವಿಶೇಷ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿಯ ದೇವಾಲಯವು ಕೂಡ ಹೊಯ್ಸಳರ ಶೈಲಿಯೊಂದಿಗೆ ನಿರ್ಮಾಣವಾಗಿದೆ. ಇಲ್ಲಿರುವ ಯೋಗ ಭೋಗ ನರಸಿಂಹ ಸ್ವಾಮಿಯ ವಿಗ್ರಹವು 12ನೇ ಶತಮಾನಕ್ಕಿಂತ ಹಳೆಯದು ಎಂದು ಪುರತತ್ವ ಇಲಾಖೆಯ ಹೇಳಿದೆ ಆದರೆ 12ನೇ ಶತಮಾನದಲ್ಲಿ ಹೊಯ್ಸಳ ದೊರೆ ವೀರಬಳ್ಳಾಲ ಈ ದೇವಾಲಯದ ಜೀರ್ಣೋದರ ಕ್ರಿಯೆಯನ್ನು ಮಾಡಿಸಿ ಆ ಮೂಲಭೂಗ್ರಹವನ್ನು ಅಲ್ಲೇ ಪ್ರತಿಷ್ಠಾಪಿಸಿದ್ದಾರೆ ಎಂದು ಇತಿಹಾಸದಲ್ಲಿದೆ.
ಸಾಮಾನ್ಯವಾಗಿ ಲಕ್ಷ್ಮಿ ನರಸಿಂಹ ಸ್ವಾಮಿಯ ದೇವಾಲಯಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ತೊಡೆಯ ಮೇಲೆ ಕುಳಿತಿರುವ ವಿಗ್ರಹವನ್ನು ಕಾಣುತ್ತೇವೆ. ಆದರೆ ಈ ದೇವಾಲಯದ ವಿಗ್ರಹದಲ್ಲಿ ನರಸಿಂಹ ಸ್ವಾಮಿಯು ಯೋಗ ದಾರಿಯಾಗಿದ್ದು ಯೋಗದ ಭಂಗಿಯಲ್ಲಿ ಕುಳಿತಿದ್ದಾರೆ. ನರಸಿಂಹ ಸ್ವಾಮಿಯ ವಿಗ್ರಹದ ಕೆಳಗೆ ಚಿಕ್ಕದಾಗಿ ಲಕ್ಷ್ಮಿ ವಿಗ್ರಹವು ಕೂಡ ಇದೆ. ಮತ್ತು ಎರಡು ಕೈಗಳಲ್ಲಿರುವ ಶಂಖ ಹಾಗೂ ಚಕ್ರಗಳು ಸಾಮಾನ್ಯವಾಗಿ ಇರುವ ಉಗ್ರ ನರಸಿಂಹನ ವಿಗ್ರಹದಂತೆ ಇರದೆ ಅದಲು ಬದಲಾಗಿ ಇವೆ.
ನಿತ್ಯವೂ ಇಲ್ಲಿಗೆ ಬಂದು ಅನೇಕ ಭಕ್ತಾದಿಗಳು ಸ್ವಾಮಿಯ ಕೃಪೆಗೆ ಪಾತ್ರವಾಗುತ್ತಾರೆ. ಮತ್ತು ಈ ದೇವಸ್ಥಾನದ ಬಗ್ಗೆ ಜನಪ್ರಿಯವಾಗಿರುವ ಸುದ್ದಿಯೇನೆಂದರೆ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ಸಮಸ್ಯೆ ಅಥವಾ ಕೋರಿಕೆಗಳಿದ್ದರೂ ಕೂಡ ಪ್ರತಿದಿನ ಮುಂಜಾನೆ ದೇವಾಲಯದ ಬಳಿ ಇರುವ ಕೊಳದಲ್ಲಿ ಮುಳುಗಿ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿದರೆ, ಲಕ್ಷ್ಮಿ ವರದ ಯೋಗ ಭೋಗ ನರಸಿಂಹ ಸ್ವಾಮಿ ಧ್ಯಾನಿಸುತ್ತಾ 48 ಪ್ರದಕ್ಷಿಗಳನ್ನು ಹಾಕಿದರೆ ಅದು ಸಿದ್ಧಿ ಆಗುತ್ತದೆ ಎನ್ನುವ ನಂಬಿಕೆ ಇದೆ.
ಮತ್ತು ಕೋರಿಕೆ ನೆರವೇರಿದ ನಂತರ ಒಂದು ದಿನ ಬಂದು ಅಲ್ಲಿ ಬರುವ ಭಕ್ತಾದಿಗಳಿಗೆ ತಮ್ಮ ಶಕ್ತಿಯನುಸಾರ ಪ್ರಸಾದದ ವ್ಯವಸ್ಥೆ ತಪ್ಪದೆ ಮಾಡಬೇಕು ಎನ್ನುವ ರೂಢಿ ಕೂಡ ಇದೆ. ಆ ಪ್ರಭಾವಶಾಲಿ ದೇವಾಲಯಕ್ಕೆ ನೀವು ಕೂಡ ಒಮ್ಮೆ ತಪ್ಪದೆ ಭೇಟಿ ಕೊಡಿ, ಶ್ರೀ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿ ಕೃಪೆಗೆ ಪಾತ್ರರಾಗಿ.