ಭಾರತ ದೇಶದಲ್ಲಿಯೇ ಅತ್ಯಂತ ಮುಂದುವರೆದ ನಗರ ಇನ್ನೂ ಮುಂದೆ ಹೋಗುತ್ತಿರುವ ನಗರ ನಮ್ಮ ಬೆಂಗಳೂರು. ನಿಮಗೆ ಗೊತ್ತಿದೆಯೋ ಇಲ್ಲವೋ ಸಾವಿರಾರು ವರ್ಷಗಳ ಹಿಂದೆ ಕೂಡ ಅತ್ಯಂತ ಮುಂದುವರೆದ ನಗರ ಈ ಬೆಂಗಳೂರು ಆಗಿತ್ತು. ಚೋಳ ಸಾಮ್ರಾಜ್ಯವು ಈ ಬೆಂಗಳೂರು ನಗರವನ್ನು ಮೊದಲ ಬಾರಿಗೆ ನಾಮಕರಣ ಮಾಡಿದ್ದು ವೆಲ್ಲೂರು ಅಂತ.
ಈ ಪದದ ಅರ್ಥ ಏನು ಎಂದರೆ ಸಿಟಿ ಆಫ್ ಗಾಡ್ಸ್ ಎಂದು. ಅಂದರೆ ಸೈನಿಕರ ನಗರ. ಈಗಿನ ಸಮಯದಲ್ಲಿ ಲಕ್ಷಾಂತರ ಯುವಕರು ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾರೆ. ಅದೇ ರೀತಿ ಅಂದಿನ ಸಮಯದಲ್ಲಿಯೂ ಕೂಡ ಲಕ್ಷಾಂತರ ಜನರು ಶಸ್ತ್ರ ವಿದ್ಯೆಯನ್ನು ಕಲಿಯಲು ಬೆಂಗಳೂರಿಗೆ ಬರುತ್ತಿದ್ದರು.
ಹೊಯ್ಸಳ ಹಾಗೂ ಚೋಳ ಸಾಮ್ರಾಜ್ಯ ಆಳಿದ ಬೆಂಗಳೂರಿನಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಪುರಾತನವಾದ ದೇವಸ್ಥಾನಗಳನ್ನು ಇಂದಿಗೂ ಕೂಡ ನೋಡಬಹುದು. ಅದೇ ರೀತಿ ಆ ದೇವಸ್ಥಾನಗಳಲ್ಲಿ ಒಂದಾಗಿರುವಂತಹ ಅತ್ಯದ್ಭುತವಾದಂತಹ ಪುರಾತನವಾದಂತಹ ದೇವಸ್ಥಾನದ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಿರ್ಮಾಣಗೊಂಡಂತಹ ಮೊದಲ ದೇವಸ್ಥಾನ ಎಂದು ಸಹ ಹೇಳಲಾಗಿದೆ.
ಹಾಗಾದರೆ ಈ ಒಂದು ದೇವಸ್ಥಾನ ಇರುವುದಾದರೂ ಎಲ್ಲಿ ಇದರ ಸಂಪೂರ್ಣವಾದಂತಹ ಮಾಹಿತಿ ಎಲ್ಲವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಕರ್ನಾಟಕದ ರಾಜಧಾನಿ ಬೆಂಗಳೂರು ಇದೇ ಬೆಂಗಳೂರಿನಲ್ಲಿ ಇರುವ ದೊಮ್ಮಲೂರು ನಗರದ ಐದನೇ ಅಡ್ಡರಸ್ತೆಯಲ್ಲಿ ನೆಲೆಸಿರುವ ಚೊಕ್ಕ ನಾಥ ಸ್ವಾಮಿ ದೇವಸ್ಥಾನ. ಈ ಚೊಕ್ಕನಾಥ ಸ್ವಾಮಿ ದೇವಸ್ಥಾನದಲ್ಲಿ ನೆಲೆಸಿರುವುದು ವಿಷ್ಣು ದೇವರು.
ಚೊಕ್ಕ ಎಂದರೆ ತೆಲುಗು ಭಾಷೆಯಲ್ಲಿ ಸೊಗಸುಗಾರ ಎಂಬ ಅರ್ಥ ಬರುತ್ತದೆ. ಈ ದೇವಸ್ಥಾನ ನಿರ್ಮಾಣಗೊಂಡಿದ್ದು 10ನೇ ಶತಮಾನದಲ್ಲಿ. ಹತ್ತನೇ ಶತಮಾನದಲ್ಲಿ ಕೆತ್ತನೆ ಮಾಡಿದ ಕಲಾಕೃತಿಗಳು ಈ ದೇವಸ್ಥಾನ ದಲ್ಲಿ ಇದೆ ನಾವು ಅವುಗಳನ್ನು ಈಗಲೂ ಸಹ ನೋಡಬಹುದು. ಅಷ್ಟೇ ಅಲ್ಲದೆ ಈ ದೇವಸ್ಥಾನದ ಕಲ್ಲಿನ ಮೇಲೆ ಚೋಳ ಸಾಮ್ರಾಜ್ಯದ ತಮಿಳು ಶಾಸನವಿದ್ದು ಹತ್ತನೇ ಶತಮಾನದಲ್ಲಿ ಬರೆದ ಶಾಸನ ಎಂದು ಕೂಡ ಹೇಳಲಾಗುತ್ತದೆ.
ಈ ತಮಿಳು ಶಾಸನಗಳು ಚೋಳ ಸಾಮ್ರಾಜ್ಯದ ಕಥೆ ಮತ್ತು ದೇವಸ್ಥಾನದ ಮಹತ್ವವನ್ನು ಹೇಳುತ್ತದೆ. ಬೆಂಗಳೂರು ನಗರದಲ್ಲೇ ಅತ್ಯಂತ ಸುಂದರವಾದ ದೇವಸ್ಥಾನ ಎಂದು ಸಹ ಬಿರುದು ಸಿಕ್ಕಿದೆ. ಈ ಚೊಕ್ಕನಥ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಪವಾಡ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ ಎಂದು ಹೇಳಬಹುದು.
ದೇವಸ್ಥಾನದಲ್ಲಿ ನೆಲೆಸಿರುವ ವಿಷ್ಣು ಮೂಲ ವಿಗ್ರಹವನ್ನು ದೇವಸ್ಥಾನದ ಮೂಲ ಗರ್ಭಗುಡಿಯಲ್ಲಿ ಎತ್ತರದ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾ ಗಿದೆ. ಈ ದೇವಸ್ಥಾನ ಯಾವ ರೀತಿ ನಿರ್ಮಾಣ ಆಗಿದೆ ಎಂದು ನಿಮಗೆ ತಿಳಿದರೆ ನೀವು ಈಗಲೇ ಈ ದೇವಸ್ಥಾನಕ್ಕೆ ಹೋಗುತ್ತೀರಿ. ಅಷ್ಟು ವಿಸ್ಮಯ ಹಾಗೂ ವೈಜ್ಞಾನಿಕವಾಗಿ ಹತ್ತನೇ ಶತಮಾನದಲ್ಲಿಯೇ ನಿರ್ಮಾಣ ಮಾಡಿದ್ದಾರೆ.
ವಿಷ್ಣುದೇವರ ಮೂಲ ವಿಗ್ರಹವು ಅಂತರಿಕ್ಷ ದಿಂದ ಬರುವ ಕಾಸ್ಮಿಕ್ ಕಿರಣಗಳನ್ನು ಹೀರಿಕೊಂಡು ದೇವಸ್ಥಾನದ 12 ದಿಕ್ಕುಗಳಿಗೂ ಈ ಕಾಸ್ಮಿಕ್ ಕಿರಣಗಳನ್ನು ಹರಡುತ್ತದೆ. ಪ್ರತ್ಯೇಕವಾಗಿ ದೇವಸ್ಥಾನದ 12 ದಿಕ್ಕುಗಳಿಗೂ ಈ ಕಾಸ್ಮಿಕ್ ಕಿರಣಗಳನ್ನು ಬಿಡುತ್ತದೆ. ವಿಜ್ಞಾನಿಗಳೇ ಈ ವಿಚಾರದ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಾರೆ. ಕಾಸ್ಮಿಕ್ ರೇಸ್ ಅನ್ನು ಪ್ರಾಣಿಕ್ ಎನರ್ಜಿ ಎಂದು ಸಹ ಹೇಳಲಾಗುತ್ತದೆ ಈ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರು ಕೂಡ ಈ ಕಾಸ್ಮಿಕ್ ಎನರ್ಜಿ ಯನ್ನು ತೆಗೆದುಕೊಳ್ಳುವುದಕ್ಕೆ ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.