ನಮ್ಮ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಕುಡಿವ ಒಂದು ಪೇಯ ಎಂದರೆ ಅದು ಟೀ. ಕೆಲವರಿಗೆ ಟೀ ಕುಡಿಯದೆ ದಿನವೇ ಆರಂಭ ಆಗುವುದಿಲ್ಲ. ಹಾಗಾಗಿ ಬೆಡ್ ಗಳಲ್ಲಿಯೇ ಟಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಯಾವುದೇ ಆಫೀಸಿನಲ್ಲಿ ಆದರೂ ಕೂಡ ಟೀಗಾಗಿ ಒಂದು ಬ್ರೇಕ್ ಇದ್ದೇ ಇರುತ್ತದೆ.
ಬೆಳಿಗ್ಗೆ ಕುಡಿವ ಟೀ ಗೆ ಒಂದು ಶಕ್ತಿ ಇದ್ದರೆ, ಸಂಜೆ ಸಮಯ ಕುಡಿಯುವ ಟೀ ಗೆ ಮನಸ್ಸು ಹಾಗೂ ದೇಹವನ್ನು ರಿಲಾಕ್ಸ್ ಮಾಡುವ ಒಂದು ವಿಶೇಷ ಗುಣ ಇರುತ್ತದೆ. ಕೆಲವರಿಗೆ ಟೀ ಕುಡಿದರೆ ಸಾಕು ಅವರ ಮೆದುಳು ಪಾದರಸದಂತೆ ಚುರುಕಾಗಿ ಕೆಲಸ ಮಾಡಲು ಶುರು ಆಗುತ್ತದೆ ಮತ್ತು ಬಾಡಿ ಆಕ್ಟಿವ್ ಆಗುತ್ತದೆ ಇಷ್ಟೆಲ್ಲ ಕಾರಣಗಳಿಂದ ಟೀ ಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ.
ಆದರೆ ಟೀ ಕುಡಿಯುವುದರಿಂದ ದೇಹಕ್ಕೆ ಏನು ಪ್ರಯೋಜನವಿಲ್ಲ, ಆರೋಗ್ಯ ಹಾಳಾಗುತ್ತದೆ ಎನ್ನುವ ಮಾತುಗಳನ್ನು ಕೂಡ ಕೆಲವರು ಆಡುತ್ತಾರೆ. ಇದನ್ನು ಸಂಪೂರ್ಣವಾಗಿ ಒಪ್ಪಲು ಆಗುವುದಿಲ್ಲ. ಒಂದು ಮಿತಿಯಲ್ಲಿ ಸರಿಯಾದ ರೀತಿಯಲ್ಲಿ ಟೀ ಕುಡಿಯುವುದರಿಂದ ದೇಹಕ್ಕೆ ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ, ಬದಲಾಗಿ ಪ್ರಯೋಜನಗಳೆ ಉಂಟಾಗುತ್ತದೆ ಎಂದು ಹೇಳಬಹುದು.
ಆದರೆ ಟೀ ಮಾಡುವ ವಿಧಾನ ಮತ್ತು ಅದಕ್ಕೆ ಬಳಸುವ ಪದಾರ್ಥಗಳಿಂದ ಟೀ ಆರೋಗ್ಯಕ್ಕೆ ಪೂರಕವೋ, ಮಾರಕವೋ ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲರೂ ಸಹ ಹಾಲು, ಸಕ್ಕರೆ, ನೀರು ಮತ್ತು ಟೀ ಪುಡಿ ಹಾಕಿ ಟೀ ಮಾಡುತ್ತಾರೆ. ಕೆಲವರು ಬ್ಲಾಕ್ ಟೀ, ಗ್ರೀನ್ ಟೀ ಇವುಗಳ ಮೊರೆ ಹೋಗುತ್ತಾರೆ. ಇವುಗಳ ಜೊತೆ ಕೆಲ ವಿಶೇಷ ಪದಾರ್ಥಗಳನ್ನು ಸೇರಿಸಿ ನೋಡಿ ಟೀ ನ ರುಚಿ ಹೆಚ್ಚಾಗುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿ ಆಗುತ್ತದೆ.
ಟೀ ಮಾಡುವಾಗ ಶುಂಠಿ ಸೇರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿ ಯಾವುದೇ ರೀತಿ ನೋವುಗಳು ಇದ್ದರೂ ಕೂಡ ಆ ನೋವನ್ನು ನಿವಾರಣೆ ಮಾಡುವ ಶಕ್ತಿ ಶುಂಠಿಗೆ ಇರುತ್ತದೆ ಮತ್ತು ಕೆಮ್ಮು, ಕಫ, ಇನ್ಫೆಕ್ಷನ್ ಗಳನ್ನು ಕಡಿಮೆ ಮಾಡುವ ಗುಣವನ್ನು ಕೂಡ ಶುಂಠಿ ಹೊಂದಿದೆ. ಹಾಗಾಗಿ ಟೀಗೆ ಶುಂಠಿಯನ್ನು ಸೇರಿಸಿ.
ಜೊತೆಗೆ ದಾಲ್ಚಿನ್ನಿ ಪುಡಿಯನ್ನು ಕೂಡ ಸೇರಿಸಿ. ಇದು ದೇಹದ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಬಿಪಿ ನಾರ್ಮಲ್ ಮಾಡಲು ಹೆಲ್ಪ್ ಮಾಡುತ್ತದೆ ಮತ್ತು ಟೀ ರುಚಿಯನ್ನು ಕೂಡ ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಕೂಡ ಸೇರಿಸಿ ಇದರ ಜೊತೆಗೆ ಏಲಕ್ಕಿ ಕೂಡ ಪ್ರಕೃತಿದತ್ತವಾಗಿರುವ ಒಂದು ಆಂಟಿ ಬಯೋಟೆಕ್ ಇದನ್ನು ಸಹ ಟೀಗೆ ಸೇರಿಸುವುದರಿಂದ ರಕ್ತನಾಳದಲ್ಲಿರುವ ಬ್ಲೋಟಿಂಗ್ ಗಳನ್ನು ಇದು ಸರಿಪಡಿಸುತ್ತದೆ.
ರಕ್ತನಾಳಗಳಿಗೆ ಶಕ್ತಿಯನ್ನು ತುಂಬುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ ಹಾಗೂ ಟೀ ಗೆ ಒಳ್ಳೆ ಸುವಾಸನೆಯನ್ನು ಕೊಡುತ್ತದೆ. ಹಾಗಾಗಿ ಇವುಗಳನ್ನು ಸಹಾ ಟೀ ನಲ್ಲಿ ಸೇರಿಸಿ. ಅರ್ಧ ಚಮಚ ಶುಂಠಿ, ಕಾಲು ಚಮಚ ದಾಲ್ಚಿನ್ನಿ ಮತ್ತು ಒಂದು ಏಲಕ್ಕಿಯನ್ನು ಹಾಕಿ ಒಂದು ಚಮಚ ನಿಮ್ಮ ಮನೆಯಲ್ಲಿ ಉಪಯೋಗಿಸುವ ಟೀಪುಡಿಯನ್ನು ಹಾಕಿ ನೀರಿನಲ್ಲಿ ಚೆನ್ನಾಗಿ ಕುದಿಸಿ.
ನೀವು ಎಷ್ಟು ಚೆನ್ನಾಗಿ ನೀರಿನಲ್ಲಿ ಇದೆಲ್ಲವನ್ನು ಕುದಿಸುತ್ತಿರೋ ಅಷ್ಟು ಅದರಲ್ಲಿರುವ ಅಲ್ಕಲಿನ್ ಅಂಶಗಳು ಒಂದಕೊಂದು ಬೆರೆತುಕೊಳ್ಳುತ್ತವೆ. ಕೊನೆಯಲ್ಲಿ ಇದಕ್ಕೆ ಹಾಲನ್ನು ಸೇರಿಸಿ ಸ್ವಲ್ಪ ಕುದಿಸಿ ಸೇವಿಸಿ. ಇದನ್ನು ಶುಗರ್ ಫ್ರೀ ಆಗಿಯೇ ಸೇವಿಸಬಹುದು. ಒಂದು ವೇಳೆ ಸಿಹಿ ಬೇಕಾದಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಹಾಕುವುದರಿಂದ ಇನ್ನೂ ಒಳ್ಳೆಯದು. ಈ ಮೆಥಡ್ ಅಲ್ಲಿ ಟೀ ಮಾಡಿ ಕುಡಿದು ಆರೋಗ್ಯ ವೃದ್ಧಿಸಿಕೊಳ್ಳಿ.