ಮನುಷ್ಯನ ಎಲ್ಲ ಪೂಜೆ, ಆರಾಧನೆ ವ್ರತ ತಪಗಳ ಮೂಲ ಭಗವಂತನೇ ಆಗಿದ್ದಾನೆ. ಭಗವಂತ ಎನ್ನುವ ಆ ಒಂದು ಹೆಸರಿನ ನಂಬಿಕೆಯಿಂದ ಇಷ್ಟೆಲ್ಲಾ ಜರುಗುತ್ತದೆ. ಆದರೆ ಆ ಹೆಸರಿಗೆ ಎಷ್ಟು ಶಕ್ತಿ ಇದೆ ಎಂದರೆ ಆ ನಂಬಿಕೆಯಿಂದ ಕಲ್ಲು ಕೂಡ ಕರಗುತ್ತದೆ, ಒಣ ಗಿಡ ಕೂಡ ಚಿಗುರುತ್ತದೆ, ವಿಷವು ಕೂಡ ಅಮೃತವಾಗುತ್ತದೆ. ಆ ರೀತಿ ಬಲವಾದ ನಂಬಿಕೆ ಇದ್ದಲ್ಲಿ ಖಂಡಿತ ಅಂತಹ ಅದ್ಭುತಗಳು ನಡೆಯುತ್ತದೆ.
ಇದನ್ನೆಲ್ಲ ಕಂಡ ಮಹಾಶರಣರು ಕೂಡ ತಮ್ಮ ವಚನಗಳಲ್ಲಿ ಇದನ್ನೇ ತಿಳಿಸಿ ಹೋಗಿದ್ದಾರೆ. ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಭಯವು ಹಯನಹುದಯ್ಯ ಕೂಡಲಸಂಗಮದೇವ ಎಂದು. ಹೀಗೆ ದೇವನೊಬ್ಬ ನಾಮ ಹಲವು ಎನ್ನುವುದು ಕೂಡ ಸತ್ಯ. ಯಾವುದೇ ಹೆಸರಿನಿಂದ ಭಗವಂತ ಎಂದು ನಂಬಿಕೆಯಿಂದ ಕರೆದರೂ ಆ ನಂಬಿಕೆ ಎನ್ನುವ ಪಾಸಿಟಿವ್ ಶಕ್ತಿ ನಮ್ಮನ್ನು ಪೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಜಗತ್ತಿನಲ್ಲಿ ಎಷ್ಟು ಜನರು ಇದ್ದಾರೆ ಅಷ್ಟೇ ಸಂಖ್ಯೆಯ ದೇವಾನು ದೇವತೆಗಳು ಕೂಡ ಇದ್ದಾರೆ ಎನ್ನುವ ಮಾತು ಇದೆ. ಮತ್ತು ಇದನ್ನೆಲ್ಲ ನಿರ್ವಹಿಸುವ ಎಲ್ಲವನ್ನು ಮೀರಿದ ಪ್ರಬಲ ಶಕ್ತಿ ಇದೆ, ಆದರೆ ಇಚ್ಛೆಯಿಂದ ಇದೆಲ್ಲ ನಡೆಯುತ್ತಿದೆ ಎನ್ನುವುದು ಕೂಡ ನಾವು ಕಾಣದ ಸತ್ಯ. ಯುಗ ಯುಗಾಂತರಗಳಿಂದ, ತಲಾತಲಾಂತರದಿಂದ ಇದನ್ನೇ ಸಾರಿರುವುದರಿಂದ ನಾವು ಕಣ್ಣು ಮುಚ್ಚಿ ಇದನ್ನು ನಂಬಬಹುದಾಗಿದೆ.
ಯಾವಾಗ ಬದುಕಿನಲ್ಲಿ ಎಲ್ಲ ನಂಬಿಕೆಯು ಕಳೆದು ಹೋಗುತ್ತದೆಯೋ ಆಗ ಮನುಷ್ಯ ತನ್ನ ಆಧ್ಯಾತ್ಮದ ಸೆಲೆಯನ್ನು ಹುಡುಕಿ ಹೊರಡುತ್ತಾನೆ. ನಂತರ ಆತನಿಗೆ ನಿಜವಾದ ಆನಂದ ಸಿಗುತ್ತದೆ. ಜ್ಞಾನೋದಯವಾಗಿ ಈ ಪ್ರಪಂಚದಲ್ಲಿ ಇರುವ ಅಗೋಚರ ಶಕ್ತಿಗಳ ಬಗ್ಗೆ ನಂಬಿಕೆ ಬರುತ್ತದೆ. ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ನಮ್ಮ ಆಯಸ್ಸು ಮುಗಿಯವರೆಗೆ ಈ ಭವ ಬಂಧನದ ಪಾಶದಲ್ಲಿ ಸಿಲುಕಿ ನರಳಲೇಬೇಕು.
ಒಮ್ಮೊಮ್ಮೆ ವಿಧಿಯಾಟದಲ್ಲಿ ಸೋತು ಸಣ್ಣವಾಗುತ್ತವೆ. ಅಂತಹ ಸಮಯದಲ್ಲೆಲ್ಲ ಸಂಕಟ ಬಂದಾಗ ಭಗವಂತನನ್ನು ಮಾತ್ರ ನೆನೆಯಲು ಸಾಧ್ಯ. ಬದುಕಿನ ಈ ಜಂಜಾಟವನ್ನೆಲ್ಲ ನಮ್ಮ ಅಷ್ಟು ಸಾಮರ್ಥ್ಯ ಹಾಕಿ ಎದುರಿಸುವ ಪ್ರಯತ್ನ ಮಾಡಿದರು ಕಾಣದ ಶಕ್ತಿಯಾಗಿ ಆ ಒಂದು ಹೆಸರು ಕೊಡುವ ಬಲವೇ ಬೇರೆ. ಹೆಗಲ ಬಾರ ಬೇಕಾದರೂ ಹಂಚಬಹುದು ಆದರೆ ಮನದ ಭಾರಕೆ ಹೆಗಲಿಲ್ಲ ಎನ್ನುವ ಮಾತು ಇದೆ.
ಆದರೆ ಮನದ ಭಾರ ಇಳಿಸಿಕೊಳ್ಳಲು ಭಗವಂತನ ಒಂದು ಹೆಸರು ಸಾಕು. ಆ ಹೆಸರನ್ನು ಹಿಡಿದು ಕರೆದರೆ ಸಕಲ ಭಾರಗಳು ಇಳಿದು ಮನಸ್ಸು ಹಾಗೂ ಬದುಕು ಹಗುರಾವುದರಲ್ಲಿ ಯಾವುದೇ ಅನುಮಾನ ಇಲ್ಲ. ಆ ಹೆಸರು ಯಾವುದು ಎಂದರೆ ಅದನ್ನು ಪುರಾಣಗಳಲ್ಲಿ ಆದಿ ಹಾಗೂ ಅಂತ್ಯಗಳಿಲ್ಲದ ಶಕ್ತಿಯ ಹೆಸರು ಎಂದು ಕರೆಯುತ್ತಾರೆ. ಈ ಹೆಸರನ್ನೇ ಶಿವನು ಸಹ ತಾನು ವಿಷ ಕುಡಿದ ಘಳಿಗೆಯಲ್ಲಿ ನೆನೆದಿದ್ದು ಎನ್ನುವ ಮಾತು ಇದೆ.
ಅಂತಹ ಹೆಸರು ಶ್ರೀರಾಮನ ಹೆಸರು ಎನ್ನುವ ನಂಬಿಕೆಯೂ ಇದೆ. ಶ್ರೀರಾಮ ಜಪವನ್ನು ಭಕ್ತಿಯಿಂದ ಮನದಲ್ಲಿ ಧ್ಯಾನಿಸಿದವರಿಗೆ ಎಂತಹ ಕಷ್ಟಗಳು ಕೂಡ ಕರಗಿ ನೀರಾಗಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಅವರು ನಡೆಯುವ ಹಾದಿ ಮುಳ್ಳಾದರು ಕೂಡ ರಾಮ ನಾಮ ಜಪ ಮಾಡಿದರೆ ಅದೇ ಹೂವಿನ ಹಾಸಿಗೆ ಆಗಿ ಬದಲಾಗುತ್ತದೆ. ಇಂತಹ ಶಕ್ತಿ ಇರುವ ಶ್ರೀ ರಾಮನ ಹೆಸರನ್ನು ಸದಾ ಧ್ಯಾನ ಮಾಡುತ್ತಾ ಆದಷ್ಟು ದಿನನಿತ್ಯದ ಜಂಜಾಟಗಳಿಂದ ಮುಕ್ತರಾಗೋಣ.