ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಕಾಯಿಲೆ ಮನುಷ್ಯನನ್ನು ಬಾಧಿಸುತ್ತಿದೆ. ಹುಟ್ಟಿದ ಚಿಕ್ಕ ಮಗುವಿನಿಂದ ಹಿಡಿದು ವೃದ್ಧರವರಿಗೆ ಆನೇಕರು ತನಗೆ ಆ ನೋವು ಅಥವಾ ಈ ಆರೋಗ್ಯ ಸಮಸ್ಯೆ ಎಂದು ದೂರು ಹೇಳಬಹುದನ್ನು ನಾವು ಕೇಳಿದ್ದೇವೆ. ಜೊತೆಗೆ ಪ್ರತಿಯೊಂದು ಆಸ್ಪತ್ರೆ ಮತ್ತು ಕ್ಲಿನಿಕ್ ಅಲ್ಲಿ ರೋಗಿಗಳ ದಂಡೆ ಇರುತ್ತದೆ.
ಸಾಮಾನ್ಯವಾಗಿ ಯಾವುದೇ ರೀತಿಯ ದೈಹಿಕ ಸಮಸ್ಯೆಗೆ ನಾವು ತಕ್ಷಣ ಮೊರೆ ಹೋಗುವುದು ವೈದ್ಯರ ಬಳಿ ಅಥವಾ ಮಾತ್ರೆಗಳ ಮೇಲೆ. ಬಿಪಿ, ಶುಗರ್, ಥೈರಾಯ್ಡ್, ಜ್ವರ, ನೆಗಡಿ ಹೀಗೆ ಎಲ್ಲದಕ್ಕೂ ಕೂಡ ಮಾತ್ರೆಗಳನ್ನು ಸೇವಿಸುತ್ತೇವೆ. ಮಾತ್ರೆಗಳು ಇಂದು ನಮ್ಮ ದಿನನಿತ್ಯದ ಆಹಾರ ಸೇವನೆಯಲ್ಲಿ ಒಂದು ಜಾಗವನ್ನು ಗಿಟ್ಟಿಸಿಕೊಂಡಿವೆ. ಆದರೆ ಇದೆಲ್ಲವೂ ರಾಸಾಯನಿಕಯುಕ್ತ ಔಷಧಿ ಆಗಿವೆ. ಇದರ ಸೇವನೆ ಆದ ತಕ್ಷಣವೇ ಕಾಯಿಲೆ ವಾಸಿ ಆಗುವುದು ನಿಜ ಆದರು ಕೂಡ ಅದರ ಬಗ್ಗೆ ಚಿಂತೆ ಮಾಡಲೇ ಬೇಕಾಗಿದೆ.
ಯಾಕೆಂದರೆ ಜ್ವರದ ಮಾತ್ರೆ ತೆಗೆದುಕೊಂಡಾಗ ಅದು ಜ್ವರವನ್ನು ಮಾತ್ರ ಕಡಿಮೆ ಮಾಡುತ್ತದೆ. ಹಾಗೆಯೇ ಯಾವುದೇ ನೋವಿಗೆ ಸಮಸ್ಯೆಗೆ ಮಾತ್ರೆ ತೆಗೆದುಕೊಂಡಾಗಲೂ ಆ ರೋಗವನ್ನು ಅದು ಪರಿಹಾರ ಮಾಡುತ್ತದೆ. ಹಾಗೆ ಒಂದು ವೇಳೆ ಅದು ಸರಿಯಾಗಿ ಕೆಲಸ ಮಾಡಿಲ್ಲ ಎಂದಾಗ ಡೋಸ್ ಹೆಚ್ಚಿಗೆ ಕೊಡುತ್ತೇವೆ ಆಗ ಅದು ಸರಿ ಹೋಗುತ್ತದೆ. ಇದು ಹೇಗೆ ಸಾಧ್ಯವಾಯಿತು ಎಂದು ನೋಡುವುದಾದರೆ ಇದೆಲ್ಲವೂ ದೇಹದ ಮೇಲೆ ಬೀಳುವ ಒತ್ತಡ ಆಗಿದೆ.
ಈಗ ನಾವು ಸೇವಿಸುತ್ತಿರುವ ರಾಸಾಯನಿಕ ಔಷಧಿಗಳು ಇತ್ತೀಚೆಗೆ ಬಂದಿರುವುದು ಆದರೆ ಮಾನವನ ದೇಹವು ಲಕ್ಷಾಂತರ ವರ್ಷದ ಹಿಂದೆಯೇ ರಚನೆ ಆಗಿದೆ. ಹಿಂದೆಲ್ಲಾ ಆಯುರ್ವೇದ ಪದ್ಧತಿಯಲ್ಲಿ ಮಾತ್ರ ಔಷಧಿಗಳನ್ನು ಸೇವಿಸುತ್ತಿದ್ದರು ಅದು ಪ್ರಕೃತಿದತ್ತವಾಗಿ ಇರುತ್ತಿತ್ತು.
ಯಾಕೆಂದರೆ ನಮ್ಮ ದೇಹವು ಕೂಡ ಪ್ರಕೃತಿಗೆ ಹೊಂದಿಕೊಂಡಿತ್ತು. ನಮ್ಮ RNA, DNA ಮತ್ತು ಡೀಪ್ ಮೆಮೊರಿಯಲ್ಲಿ ನಮ್ಮ ದೇಹವು ಪ್ರಕೃತಿಗೆ ಅಥವಾ ಆಯುರ್ವೇದ ಪದ್ಧತಿಗೆ ಸ್ಪಂದಿಸುತ್ತದೆ. ನೈಸರ್ಗಿಕವಾಗಿರುವ ಔಷಧಿಗೆ ದೇಹದಲ್ಲಿರುವ ಸಮಸ್ಯೆ ಪರಿಹಾರ ಮಾಡುವ ಶಕ್ತಿ ಇದೆ ಎನ್ನುವುದು ರೆಕಾರ್ಡ್ ಆಗಿದೆ. ಆದರೆ ಕೆಮಿಕಲ್ ಯುಕ್ತ ಮಾತ್ರೆಗಳನ್ನು ನಾವು ಇತ್ತೀಚೆಗೆ ಸೇವಿಸುತ್ತೇವೆ. ಹೀಗಾಗಿ ಒಮ್ಮೊಮ್ಮೆ ಅವು ಸರಿಯಾಗಿ ವರ್ಕ್ ಆಗುವುದಿಲ್ಲ.
ಯಾಕೆಂದರೆ ಯಾವುದೇ ಒಂದು ಹೊರಗಿನ ಅಪರಿಚಿತ ಆಹಾರ ದೇಹಕ್ಕೆ ಪ್ರವೇಶ ಆದಾಗ ಒಳಗಿರುವ ರಚನೆ ಅದಕ್ಕೆ ಸ್ಪಂದಿಸುವುದಿಲ್ಲ, ಆಗ ಹೆಚ್ಚಿನ ಡೋಸ್ ಕೊಟ್ಟು ಅದು ವರ್ಕ್ ಆಗುವ ಹಾಗೆ ಮಾಡಲಾಗುತ್ತದೆ. ಇದನ್ನೇ ದೇಹದ ಮೇಲೆ ಬೀಳುವ ಒತ್ತಡ ಎಂದು ಹೇಳಬಹುದು ಇದರಿಂದ ಅಡ್ಡ ಪರಿಣಾಮ ಆಗದೇ ಇರುವುದಿಲ್ಲ.
ಈ ಹೈ ಡೋಸ್ ಬಗ್ಗೆ ವಿವರವಾಗಿ ಹೇಳುವುದಾದರೆ ಯಾವುದೇ ಒಂದು ಔಷಧಿಯನ್ನು ದೇಹಕ್ಕೆ ನೀಡಿದಾಗ ಮೊದಲಿಗೆ ಲಿವರ್ ಗುರುತಿಸಿ ಹಿಡಿಯುತ್ತದೆ ಆಗ ಅದು ವರ್ಕ್ ಆಗದು ರಕ್ತ ಜೊತೆ ಸೇರಲು ಅದು ಬಿಡುವುದಿಲ್ಲ ನಂತರ ಡೋಸೇಜ್ ಮಾಡಿದಾಗ ಲಿವರ್ ಕಂಟ್ರೋಲ್ ಇಂದ ಅದು ತಪ್ಪುತ್ತದೆ. ಆಗ ಅದು ದೇಹ ಪ್ರವೇಶಿಸಿ ಪ್ರತಿಕ್ರಿಸುತ್ತದೆ.
ಮೊದಲಿಗೆ ಆರೋಗ್ಯ ಸುಧಾರಿಸಿದರೂ ಕೂಡ ಬಹಳ ದಿನಗಳ ನಂತರ ಅದು ಅದರ ಸೈಡ್ ಎಫೆಕ್ಟ್ ಕಾಣಿಸಿಕೊಳ್ಳಲು ಶುರು ಆಗುತ್ತದೆ. ಹಾಗಾಗಿ ಎಲ್ಲಾ ಕೆಮಿಕಲ್ ಯುಕ್ತ ಮಾತ್ರೆ ಮತ್ತು ಔಷಧಿಗಳಿಗೆ ಪರಿಣಾಮ ಇದೇ ರೀತಿ ಇರುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಇವುಗಳ ಸೇವನೆ ಮುನ್ನ ಮತ್ತೊಮ್ಮೆ ಮಗದೊಮ್ಮೆ ಯೋಚಿಸಿ ಸೇವನೆ ಮಾಡಬೇಕು. ಈ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ