ಎಲ್ಲರ ಹಬ್ಬಕ್ಕೆ ಚಿನ್ನವನ್ನು ಕೊಡಿಸ್ತಾರೆ ಆದ್ರೆ ನಾನು ಮಾತ್ರ ನನ್ನ ಹೆಂಡತಿಯ ತಾಳಿಯನ್ನೇ ಮಾರಿದೆ ಎಂದು ಕಣ್ಣೀರು ಹಾಕಿದ ನೆನಪಿರಲಿ ಪ್ರೇಮ್ ಈ ವಿಡಿಯೋ ನೋಡಿ.

ನೆನಪಿರಲಿ ಪ್ರೇಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಅಮೋಘವಾದ ಅಭಿನಯದಿಂದಲೇ ಎಲ್ಲರ ಗಮನವನ್ನು ಸೆಳೆದಿದ್ದರು ಅಷ್ಟೇ ಅಲ್ಲದೆ ಎರಡು ಸಾವಿರ ದಶಕದಲ್ಲಿ ಫೇಮಸ್ ನಟ ಅಂತಾನೂ ಕೂಡ ಗುರುತಿಸಿಕೊಂಡಿದ್ದಾರೆ. ಮೋಹಕತಾರೆ ರಮ್ಯಾ ಅವರ ಜೊತೆ ನಟನೆ ಮಾಡಿದಂತಹ ಜೊತೆಯಲಿ ಎಂಬ ಸಿನಿಮಾ ಆಕಾಲದಲ್ಲಿ ಬಹುದೊಡ್ಡ ಮಟ್ಟದಲ್ಲಿ ಹಿಟ್ಟಾಯ್ತು. ಈ ಕಾರಣದಿಂದಲೇ ಈಗಲೂ ಸಹ ಪ್ರೇಮ್ ಅವರು ತಮ್ಮ ಹೆಸರಿನ ಮುಂದೆ ನೆನಪಿರಲಿ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡಿದ್ದರೆ. ಇದರಿಂದಲೇ ತಿಳಿಯುತ್ತದೆ ಈ ಸಿನಿಮಾ ಇವರಿಗೆ ಎಷ್ಟು ಸ್ಥಾನಮಾನ ಗೌರವವನ್ನು ತಂದುಕೊಟ್ಟಿತು ಅಂತ.

ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಮಳೆ, ಚೌಕ, ನೆನಪಿರಲಿ, ಪಲ್ಲಕ್ಕಿ, ಮಸ್ತ್ ಮೋಹಬಾದ್, ಚೆಲುವೆ ನಿನ್ನ ನೋಡಲು, ಸವಿ ಸವಿ ನೆನಪು, ಶತ್ರು, ಗೌತಮ್, ರಿಂಗ್ ರೋಡ್, ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಫೇರ್ ಅಂಡ್ ಲವ್ಲಿ, ಎರಡನೇ ಮದುವೆ, ಗುಣವಂತ, ಹೊಂಗನಸು, ಚಾರ್ಮಿನಾರ್, ಚಂದ್ರ, ಲೈಫ್ ಜೊತೆ ಒಂದು ಸೆಲ್ಫಿ, ಪ್ರೇಮ ಪೂಜ್ಯಂ ಹೀಗೆ ಕನ್ನಡದ ಸುಮಾರು 20ಕ್ಕೂ ಅಧಿಕ ಚಲನಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಆದರೆ ಇವರು ಸಿನಿಮಾದಲ್ಲಿ ಅವಕಾಶ ಗಟ್ಟಿಸಿಕೊಂಡಿದ್ದ ಕಥೆಯನ್ನು ಕೇಳಿದರೆ ಎಂತವರಾದರೂ ಕೂಡ ಒಂದು ಕ್ಷಣ ಆಶ್ಚರ್ಯ ಪಡುತ್ತಾರೆ ಹೌದು.

ನಟ ಪ್ರೇಮ್ ಅವರ ಬಳಿ ಪ್ರತಿಭೆ ಮತ್ತು ಕಲೆ ಇದ್ದರೂ ಕೂಡ ಇವರಿಗೆ ಸಿನಿಮಾದಲ್ಲಿ ಅವಕಾಶ ದೊರೆಯುವುದಕ್ಕೆ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾರೆ. ಮಧ್ಯಮ ವರ್ಗದ ಯುವಕನೊಬ್ಬ ಸಿನಿಮಾದಲ್ಲಿ ಅವಕಾಶ ಪಡೆಯುವುದಕ್ಕಾಗಿ ಏನೆಲ್ಲ ಸಂಕಷ್ಟಗಳನ್ನು ಎದುರಿಸಿದರು ಎಂದು ಇವರು ಹೇಳಿದಂತಹ ಕಥೆಯನ್ನು ಕೇಳಿದರೆ ನಿಜಕ್ಕೂ ಅದು ಅದೊಂದು ರೋಚಕ ಅಂತಾನೆ ಹೇಳಬಹುದು. ಪ್ರೇಮ್ ಅವರು ಶಿಕ್ಷಕ ವೃತ್ತಿಯನ್ನು ಮಾಡುತ್ತಾರೆ ಈ ಸಮಯದಲ್ಲೇ ಜ್ಯೋತಿ ಎಂಬ ಯುವತಿಯನ್ನು ಪ್ರೀತಿಸುತ್ತಾರೆ. ಆದರೆ ಈ ಪ್ರೀತಿಗೆ ಮನೆಯವರ ಒಪ್ಪಿಗೆ ಇರುವುದಿಲ್ಲ ಇಬ್ಬರದ್ದು ಕೂಡ ಮಧ್ಯಮ ವರ್ಗದ ಕುಟುಂಬದ ಆದರೆ ಜ್ಯೋತಿಯವರನ್ನು ಮದುವೆಯಾಗಲೇಬೇಕು ಎಂಬ ಕಾರಣದಿಂದಾಗಿ ಇಬ್ಬರೂ ಕೂಡ ಮನೆವರೆಗೆ ತಿಳಿಯದಂತಹ ಆಂಬುಲೆನ್ಸ್ ನಲ್ಲಿ ಹೋಗಿ ದೇವಸ್ಥಾನ ಒಂದರಲ್ಲಿ ಮದುವೆಯಾಗುತ್ತಾರೆ.

ತದನಂತರ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಇಬ್ಬರೂ ಕೂಡ ಮನೆ ಬಿಟ್ಟು ಬಂದಿರುತ್ತಾರೆ ಮಾಡುವುದಕ್ಕೆ ಕೈನಲ್ಲಿ ಯಾವುದೇ ಕೆಲಸ ಇರುವುದಿಲ್ಲ ಈ ಸಮಯದಲ್ಲಿ. ಪ್ರೇಮ್ ಅವರು ತಮ್ಮ ಹೆಂಡತಿಯ ತಾಳಿಯನ್ನು ತೆಗೆದುಕೊಂಡು ಅದನ್ನು ಮಾರಿ ಜೀವನ ಸಾಗಿಸುತ್ತಾರಂತೆ. ವಿಶೇಷ ಏನೆಂದರೆ ಪ್ರೀತಿಸಿ ಮದುವೆಯಾದಂತಹ ಹುಡುಗಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಆಕೆಗೆ ಏನು ಕಷ್ಟ ಕೊಡಬಾರದು ಎಂದು ಪ್ರೇಮ್ ಅವರು ಅಂದುಕೊಂಡಿದ್ದರಂತೆ.

ಆದರೆ ಯಾವುದೇ ಕೆಲಸ ಕಾರ್ಯ ದೊರೆಯದೆ ಇದ್ದಾಗ ಕುಟುಂಬ ನಡೆಸುವುದು ಕೂಡ ಕಷ್ಟದ ಪರಿಸ್ಥಿತಿ ಏರ್ಪಟ್ಟಾಗ ಅನಿವಾರ್ಯ ಕಾರಣದಿಂದಾಗಿ ಪ್ರೇಮ್ ಅವರು ತಮ್ಮ ಹೆಂಡತಿಯ ತಾಳಿಯನ್ನು ಮಾರಬೇಕಾದಂತಹ ಅನಿವಾರ್ಯ ಎದುರಾಗುತ್ತದೆ. ಇದರ ಬಗ್ಗೆ ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಪ್ರೇಮ್ ಅವರು ಹೇಳಿದಂತಹ ಈ ಮಾತನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಕಣ್ಣೀರು ಬರುತ್ತದೆ ಹೌದು ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Leave a Comment

WhatsApp Group Join Now
Telegram Group Join Now