ಬಟ್ಟೆ ಒಗೆಯುವುದು ಗೃಹಿಣಿಯರ ಅತಿ ಸವಾಲಿನ ಕೆಲಸ. ಈಗ ಆ ಕೆಲಸವನ್ನು ಸುಲಭ ಮಾಡಲು ವಾಷಿಂಗ್ ಮಿಷನ್ ಗಳು ಬಂದಿವೆ. ಆದರೆ ಬಟ್ಟೆಗಳಿಗೆ ಆಗಿರುವ ಕಲೆಯನ್ನು ಹೋಗಿಸುವುದೇ ಅವರಿಗೆ ಚಾಲೆಂಜ್. ಅದರಲ್ಲೂ ಬಿಳಿ ಬಟ್ಟೆಗಳಲ್ಲಿರುವ ಕಲೆಗಳನ್ನು ಹೋಗಿಸುವುದಂತೂ ಸವಾಲಿನ ಕೆಲಸವೇ ಸರಿ ಬಿಳಿ ಬಟ್ಟೆ ಹೆಸರೇ ಹೇಳುವಂತೆ ಶುಭ್ರವಾಗಿದ್ದಾಗ ಮಾತ್ರ ಅದನ್ನು ಹಾಕಿಕೊಂಡರೆ ಒಂದು ಲುಕ್.
ಆಫೀಸಿಗೆ ಹೋಗುವವರು, ಶಾಲೆಗೆ ಹೋಗುವ ಮಕ್ಕಳ ಯೂನಿಫಾರಂ, ಕಾಲೇಜಿಗೆ ಹೋಗುವವರ ಬಿಳಿ ಬಟ್ಟೆಗಳಲ್ಲಿ ಕಲೆ ಇದ್ದರೆ ಅವರಿಗೆ ಬಹಳ ಮುಜುಗರ ಆಗುತ್ತದೆ, ಜೊತೆಗೆ ಕಾನ್ಫಿಡೆನ್ಸ್ ಅನ್ನು ಕೂಡ ಕಲೆ ಕಡಿಮೆ ಮಾಡಿ ಬಿಡುತ್ತದೆ ಹಾಗಾಗಿ ಈ ಬಿಳಿ ಬಟ್ಟೆಯನ್ನು ಮತ್ತೆ ಹಾಲಿನ ಬಣ್ಣಕ್ಕೆ ತರಲು ಹೆಣ್ಣು ಮಕ್ಕಳು ಪಡುವ ಪಾಡು ಅಷ್ಟಿಷ್ಟಲ್ಲ.
ಯಾವುದೇ ಕಂಪನಿಯ ಡಿಟರ್ಜೆಂಟ್ ಪೌಡರ್ ಲಿಕ್ವಿಡ್ ಗಳನ್ನು ಬಳಸಿದರು, ಅದೆಷ್ಟೇ ವಿಧದ ಡಿಟರ್ಜೆಂಟ್ ಬಾರ್ ಗಳನ್ನು ಬದಲಿಸಿ ನೋಡಿದರೂ ಕೂಡ ಈ ಬಿಳಿ ಬಟ್ಟೆಯ ಮೇಲಿನ ಕಲೆ ಹೋಗದೆ ಇರುವುದು ಬೇಸರ ತರಿಸಿದೆ, ಇದಕ್ಕಾಗಿ ಯಾರ್ಯಾರು ಏನೇನು ಹೇಳಿದ್ದಾರೆ ಎಲ್ಲಾ ಟಿಪ್ಸ್ಗಳನ್ನು ಬಳಸಿ ನೋಡಿ ಆಗಿದೆ ಆದರೂ ಕೂಡ ಬಿಳಿ ಬಟ್ಟೆಯಲ್ಲಿರುವ ಕಾಲರ್ ಮೇಲಿನ ಕೊಳೆ ಕಪ್ ಗಳಲ್ಲಿ ಇರುವ ಕೊಳೆ ಜಗ್ಗಿಲ್ಲ ಎಂದು ಹೇಳುವವರು ಈಗ ನಾವು ಹೇಳುವ ಈ ಟೆಕ್ನಿಕ್ ಬಳಸಿ ಸಾಕು.
ಬಿಳಿ ಬಟ್ಟೆ ಮಾತ್ರ ಅಲ್ಲದೆ ಉಳಿದ ಬಟ್ಟೆಗಳಲ್ಲೂ ಆಗಿರುವ ಅರಿಶಿಣದ ಕಲೆ, ನೇಲ್ ಫಾಲಿಶ್, ಪೇಯಿಂಟ್ ಬಣ್ಣ, ಬಾಳೆಹಣ್ಣಿನ ಕಲೆ ಇಂತಹ ಕಠಿಣ ಕಲೆಗಳು ಕೂಡ ನಿಮಿಷಗಳಲ್ಲಿ ಮಾಯವಾಗಿ ಬಿಡುತ್ತದೆ. ಅಷ್ಟು ಪರಿಣಾಮಕಾರಿಯಾಗಿ ಒಂದು ಪ್ರಾಡಕ್ಟ್ ಕೆಲಸ ಮಾಡುತ್ತದೆ.
ಪೋರ್ಟೆಬಲ್ ಡಿಟರ್ಜೆಂಟ್ ಎನ್ನುವ ಹೆಸರಿನ ಒಂದು ಚಿಕ್ಕ ಬಾಟಲ್ ರೀತಿ ಇರುವ ಪ್ರಾಡಕ್ಟ್ ಅಮೆಜಾನ್ ಅಲ್ಲಿ ಸಿಗುತ್ತದೆ ಅಥವಾ ಅಂಗಡಿಗಳಲ್ಲೂ ಕೂಡ ಸಿಗಬಹುದು ವಿಚಾರಿಸಿ ತೆಗೆದುಕೊಳ್ಳಬೇಕು. ಇದರ ಕ್ಯಾಪ್ ತೆಗೆದರೆ ಒಳಗಡೆ ಬಾಲ್ ರೂಪದ ಜಲ್ ಹಾಗೆ ಕಾಣುವ ಡಿಟರ್ಜೆಂಟ್ ಇರುತ್ತದೆ.
ಇದನ್ನು ಬಿಳಿ ಬಟ್ಟೆಯಲ್ಲಿ ಎಲ್ಲೆಲ್ಲಿ ಕಲೆಗಳು ಆಗಿರುತ್ತವೆ ಆ ಭಾಗಕ್ಕೆ ಮಾತ್ರ ಹಚ್ಚಬೇಕು. ಕಾಲರ್ ಗಳು, ಕಪ್ ಗಳು ಅಥವಾ ಅರಿಶಿನದ ಕಲೆಗೆ, ನೇಲ್ ಪಾಲಿಷ್ ಕಲೆ ಅಥವಾ ಇನ್ನಿತರ ಯಾವುದೇ ಕಲೆ ಆಗಿದ್ದರು ಯಾವ ಕಲೆಯನ್ನು ನಿಮ್ಮ ಬಟ್ಟೆಯಿಂದ ತೆಗೆಯಬೇಕು ಅದರ ಮೇಲೆ ಹಾಕಬೇಕು ಬಳಿಕ ಇದನ್ನು ಬ್ರಶ್ ಸಹಾಯದಿಂದ ಮ್ಯಾನುಅಲ್ ಆಗಿ ಉಜ್ಜಿ ವಾಶ್ ಮಾಡಿ ಹಾಕಬಹುದು.
ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ವಾಶ್ ಮಾಡುತ್ತೇವೆ ಎನ್ನುವವರು ಈ ರೀತಿ ಪೋರ್ಟೆಬಲ್ ಡಿಟರ್ಜೆಂಟ್ ಅನ್ನು ಉಜ್ಜಿ ನಂತರ ವಾಷಿಂಗ್ ಮಿಷನ್ ಗೆ ಹಾಕಬಹುದು. ನೀವೇ ಆಶ್ಚರ್ಯ ಪಡುವ ರೀತಿಯಲ್ಲಿ ಯಾವುದೇ ಕಲೆಗಳು ಇದ್ದರೂ ಕೂಡ ಅದು ಹೊರಟುಹೋಗಿರುತ್ತದೆ. ಬಿಳಿ ಬಟ್ಟೆಗಳು ಮಾತ್ರ ಅಲ್ಲದೆ, ಬಿಳಿ ಶೂ ಬಿಳಿ ಸ್ಕೂಲ್ ಬ್ಯಾಗ್ ಗಳು, ವ್ಯಾನಿಟಿ ಬ್ಯಾಗ್ ಗಳು ಈ ರೀತಿ ಬಿಳಿ ಬಣ್ಣದ ಯಾವುದೇ ವಸ್ತುಗಳ ಮೇಲೆ ಕಲೆಯನ್ನು ತೊಳೆಯಲು ಇದನ್ನು ಬಳಸಬಹುದು. ಈ ಪ್ರಾಡಕ್ಟ್ ಬಳಸಿದ ಮೇಲೆ ನಿಮಗೆ ಇದರ ಫಲಿತಾಂಶದ ಬಗ್ಗೆ ತಿಳಿಯುತ್ತದೆ. ಬಳಿಕ ಇದರ ಅನುಕೂಲತೆ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಕೂಡ ಮಾಹಿತಿ ಹಂಚಿಕೊಳ್ಳಿ.