ಭಾರತದಾತ್ಯಂತ ಅನೇಕ ವಿಶೇಷ ದೇವಾಲಯಗಳು ಇವೆ. ಕೆಲವು ಪುರಾಣ ಪ್ರಸಿದ್ಧ ದೇವಾಲಯಗಳಾಗಿದ್ದರೆ ಕೆಲವು ಇತಿಹಾಸದಲ್ಲಿ ಉಲ್ಲೇಖವಾಗಿರುವ ವಿಶೇಷ ದೇವಾಲಯಗಳಾಗಿವೆ. ಪ್ರತಿಯೊಂದು ದೇವಸ್ಥಾನದ ನಿರ್ಮಾಣದ ಹಿಂದೆ ಒಂದೊಂದು ವಿಶೇಷತೆ ಇದ್ದು, ಕೆಲವು ವಾಸ್ತುಶಿಲ್ಪ ಶೈಲಿಯಿಂದಲೇ ಗಮನ ಸೆಳೆಯುತ್ತದೆ. ಇನ್ನು ಕೆಲವು ದೇವಸ್ಥಾನಗಳು ಅಲ್ಲಿ ನಡೆಯುವ ಪವಾಡಗಳಿಂದ ಹೆಚ್ಚು ಹೆಸರುವಾಸಿಯಾಗಿ ಜನರನ್ನು ಆಕರ್ಷಿಸುತ್ತಿವೆ.
ಇಂತಹ ವಿಶೇಷತೆಗಳನ್ನು ಹೊಂದಿರುವ ದೇವಸ್ಥಾನಗಳು ಕರ್ನಾಟಕದಲ್ಲಿ ಸಾಕಷ್ಟು ಇವೆ. ಅದರಲ್ಲಿ ಶಿವನ ದೇವಸ್ಥಾನಗಳೇ ಅನೇಕ. ಕರ್ನಾಟಕದಲ್ಲಿರುವ ಒಂದು ಶಿವನ ದೇವಾಲಯದಲ್ಲಿ ಮಾತ್ರ 359 ಮುಖಗಳನ್ನು ಹೊಂದಿರುವ ಶಿವಲಿಂಗವನ್ನು ಕಾಣಬಹುದು ಮತ್ತು ಈ ದೇವಸ್ಥಾನವು ನಿರ್ಮಾಣವಾಗಿರುವ ಶೈಲಿಯಿಂದಲೇ ಹೆಚ್ಚು ಹೆಸರುವಾಸಿ ಆಗಿರುವ ದೇವಸ್ಥಾನವಾಗಿದೆ.
ಈ ದೇವಸ್ಥಾನ ಇರುವುದು ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ. ಕರ್ನಾಟಕದ ವಿಜಯಪುರದಿಂದ 84 ಕಿಲೋಮೀಟರ್ ಪ್ರಯಾಣ ಮಾಡಿದರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗ ಸಿಗುತ್ತದೆ. ಎರಡು ಗಡಿ ಭಾಗಕ್ಕೂ ಸೇರಿರುವ ಹತ್ತರ ಸಾಂಗ್ ಎಂಬ ಹಳ್ಳಿಯಲಿ ಈ ರೀತಿ ಪುರಾಣ ಪ್ರಸಿದ್ಧವಾದ ಶ್ರೀ ಹರಿಹರೇಶ್ವರ ದೇವಸ್ಥಾನವಿದೆ. ಕರ್ನಾಟಕದ ಹರಿಹರ ಎನ್ನುವ ಪ್ರದೇಶದಲ್ಲೂ ಕೂಡ ಶ್ರೀ ಹರಿಹರೇಶ್ವರ ಎನ್ನುವ ಪ್ರಖ್ಯಾತ ದೇವಾಲಯ ಇದೆ.
ಆದರೆ ಆ ದೇವಸ್ಥಾನಕ್ಕೂ ಮತ್ತು ಈ ದೇವಸ್ಥಾನಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು ಈ ದೇವಸ್ಥಾನವು ಪಾಸ್ವರ್ಡ್ ದೇವಸ್ಥಾನ ಎಂದೇ ಪರಿಚಿತವಾಗಿದೆ. ಯಾಕೆಂದರೆ ಈ ದೇವಸ್ಥಾನದಲ್ಲಿ ಎಲ್ಲವೂ ಸೀಕ್ರೆಟ್ ಲಾಕ್ ಗಳ ರೀತಿ ಇರುತ್ತದೆ. ದೇವಸ್ಥಾನದ ಕಂಬಗಳು, ಕೆತ್ತನೆಗಳು, ಮೆಟ್ಟಿಲುಗಳು ಎಲ್ಲವನ್ನು ಕೂಡ ತಿರುಗಿಸಿ ಲಾಕ್ ಮಾಡಬಹುದಾಗಿದೆ. ಮೆಟ್ಟಿಲುಗಳನ್ನು ಮುಟ್ಟಿದರೆ ಶಿವಲಿಂಗವು ಅಲುಗಾಡುತ್ತದೆ, ಕಂಬಗಳನ್ನು ಮುಟ್ಟಿದರೆ ಶಿಲ್ಪಗಳು ತಿರುಗುತ್ತವೆ, ಇಂತಹ ವಿಸ್ಮಯವನ್ನು ಭಾರತದಲ್ಲಿ ಇಲ್ಲಿ ಮಾತ್ರ ಕಾಣಲು ಸಾಧ್ಯ.
ಈ ದೇವಸ್ಥಾನವನ್ನು 8000 ವರ್ಷಗಳ ಹಿಂದೆ ನಿರ್ಮಿಸಲಾಯಿತು ಎಂದು ಒಂದು ಪುರಾಣ ತಿಳಿಸಿದರೆ, 13,000ಕ್ಕೂ ಹೆಚ್ಚಿನ ಹಿಂದಿನದು ಎನ್ನುವುದಕ್ಕೆ ಮತ್ತೊಂದು ಪುರಾಣದ ಸಾಕ್ಷಿ ಇದೆ. ಪುರಾಣ ಕಥೆಗಳ ಪ್ರಕಾರ ಶಿವ ಮತ್ತು ವಿಷ್ಣುವಿನ ನಡುವೆ ವೈ ಮನಸು ಉಂಟಾಗಿ ಕಾಳಗ ನಡೆದಾಗ ವಿಷ್ಣು ತನ್ನ 350 ಮುಖಗಳನ್ನು ತೆರೆದು ಶಿವನ ಮೇಲೆ ದಾಳಿ ಮಾಡುತ್ತಾರೆ. ಆಗ ಶಿವನು ತನ್ನ ಮೂರನೇ ಕಣ್ಣಿನ ಪ್ರಭಾವದಿಂದ ಇದೆಲ್ಲವನ್ನು ಕೂಡ ಬಂಧಿಸಿದರು.
ಆಗಲೇ ಈ ಶಿವಲಿಂಗ ಸೃಷ್ಟಿಯಾಯಿತು ಹಾಗಾಗಿ ಇದನ್ನು ಯಾರು ಪ್ರತಿಷ್ಠಾಪಿಸಿಲ್ಲ ಸಾಕ್ಷಾತ್ ಶಿವನೇ ಈ ಶಿವಲಿಂಗವನ್ನು ಇಲ್ಲಿ ನೆಲೆಗೊಳಿಸಿದ್ದಾರೆ. ನಂತರ ಚಂದಗುಪ್ತ ಮೌರ್ಯನ ಕಾಲದಲ್ಲಿ ಇಲ್ಲಿ ದೇವಾಲಯ ನಿರ್ಮಿತವಾಗಿತ್ತು ಎನ್ನುವುದನ್ನು ಇತಿಹಾಸ ಹೇಳುತ್ತದೆ ಮತ್ತು ಚಂದ್ರ ಗೌಪ್ತ ಮೌರ್ಯನ ಮೊಮ್ಮಗ ಅಶೋಕನ ಕಿರಿಯ ಸಹೋದರ ವಿಟ ಅಶೋಕರು ಇದನ್ನು ಮಂತ್ರ ವಿದ್ಯೆಯಿಂದ ಇನ್ನಷ್ಟು ಜೀರ್ಣೋದ್ಧಾರಗೊಳಿಸಿದರು ಎಂದು ಕೆಲವು ಕಥೆಗಳು ತಿಳಿಸುತ್ತವೆ.
ಈ ಶಿವಲಿಂಗವು 4500 ಕೆಜಿ ತೂಕವನ್ನು ಹೊಂದಿವೆ. ಈ ಶಿವಾಲಯದಲ್ಲಿರುವ ಎರಡು ಗುಹೆಗಳು ಕಾಣದ ಲೋಕಕ್ಕೆ ದಾರಿ ತೋರಿಸುತ್ತವೆ, ಇನ್ನು ಸಹ ಆ ರಹಸ್ಯವನ್ನು ಬೇಧಿಸಲು ಯಾರಿಂದಲೂ ಕೂಡ ಸಾಧ್ಯವಾಗಿಲ್ಲ ಎನ್ನುವುದನ್ನು ಚರಿತ್ರೆಯ ಕಥೆಗಳು ಹೇಳುತ್ತವೆ. ಒಂದು ಗುಹೆಯೂ ನಾಗಲೋಕದ ದಾರಿಯನ್ನು ತೋರಿದರೆ ಮತ್ತೊಂದು ಲೋಕವು ಪಾತಾಳದ ಲೋಕದ ದಾರಿಯನ್ನು ತೋರುತ್ತದೆ ಎಂದು ನಂಬಲಾಗಿದೆ. ಇಂತಹ ಪ್ರಭಾವಶಾಲಿ ದೇವಸ್ಥಾನಕ್ಕೆ ಸಾಧ್ಯವಾದರೆ ನೀವು ಸಹ ನಿಮ್ಮ ಕುಟುಂಬದೊಡನೆ ಒಮ್ಮೆ ಭೇಟಿ ಕೊಡಿ.