ಕರ್ನಾಟಕದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಚಾರ ವೇಳೆ ಘೋಷಿಸಿದ್ದ ಗ್ಯಾರೆಂಟಿ ಕಾರ್ಡ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ವರ್ಷದ ಆರಂಭದಿಂದಲೇ ಕಾಂಗ್ರೆಸ್ ಸರ್ಕಾರ ಶುರು ಮಾಡಿದ್ದ ಪ್ರಜಾಧ್ವನಿ ಯಾತ್ರೆಯಿಂದಲೇ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ನಾಯಕರುಗಳು ಮಾತನಾಡುತ್ತಿದ್ದರು.
ಅದರಲ್ಲೂ ಈ ವರ್ಷ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಕಾರ್ಡ್ ನ 5 ಯೋಜನೆಗಳು ಕರ್ನಾಟಕ ಜನತೆಯ ಮತಸೆಳೆಯಲು ಪ್ರಮುಖ ಅಸ್ತ್ರವಾಗಿದ್ದವು. ಅಂತಿಮವಾಗಿ ಕಾಂಗ್ರೆಸ್ ಸರ್ಕಾರವು ಗೆದ್ದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಘೋಷಣೆ ಆಗಿದ್ದಾರೆ. ಕಾಂಗ್ರೆಸ್ ಪಕ್ಷವು ಹೇಳಿದ್ದ ರೀತಿಯಲ್ಲಿ ಅಧಿಕಾರ ಬಂದ ಕೂಡಲೇ ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಆದೇಶ ಹೊರಡಿಸಿ ಎಂದು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವಂತೆ ರಾಜ್ಯದ ಜನತೆಯಿಂದ ಒತ್ತಡ ಹೆಚ್ಚಾಗುತ್ತಿದೆ.
ಮೊದಲ ಗ್ಯಾರಂಟಿ ಯೋಜನೆಯಾಗಿ ಅನೌನ್ಸ್ ಆಗಿದ್ದ ಕರ್ನಾಟಕದ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಉಚಿತ ಎನ್ನುವ ಘೋಷಣೆ ಬಗ್ಗೆ ಜನರು ಹೆಚ್ಚು ಗೊಂದಲಕ್ಕೀಡಾಗಿದ್ದಾರೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಕರ್ನಾಟಕವನ್ನು ಬೆಳಗುವ ಧ್ಯೇಯದೊಂದಿಗೆ ಮನೆಮನೆಗೂ ಕೂಡ ವಿದ್ಯುತ್ ಉಚಿತ ಕೊಡುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿತ್ತು.
ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂತಾದವರು ಈ ಬಗ್ಗೆ ಮಾತನಾಡಿದ್ದ ವಿಡಿಯೋ ತುಣುಕುಗಳು ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಹಾಗಾಗಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಜನಸಾಮಾನ್ಯರು ಮೇ ತಿಂಗಳಿನಿಂದಲೇ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ. ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತಲ್ಲ ಈಗ ಅವರೇ ಅಧಿಕಾರಕ್ಕೆ ಬಂದಿದ್ದಾರೆ ನಮ್ಮನ್ನು ಕರೆಂಟ್ ಬಿಲ್ ಕೇಳಲು ಬರಬೇಡಿ ಎಂದು ಪಟ್ಟು ಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಕೂಡ ವಿದ್ಯುತ್ ಬಿಲ್ ನೀಡಲು ಹೋಗುವ ಪ್ರತಿನಿಧಿಗಳಿಗೆ ಗ್ರಾಮಸ್ಥರುಗಳು ಅವಾಜ್ ಹಾಕಿ ವಾಪಸ್ ಕಳಿಸುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ರಚನೆ ಆಗಿ ನಂತರ ಫ್ರೀಯಾಗಿ ಕೊಡಬಹುದು ಆದರೆ ಈವರೆಗೆ ನೀವು ಬಳಸಿರುವ ವಿದ್ಯುತ್ತನ್ನು ಫ್ರೀ ಕೊಡಲು ಆಗುವುದಿಲ್ಲ.
ಹಿಂದಿನ ಬಿಲ್ ಆದರೂ ಪಾವತಿ ಮಾಡಲೇಬೇಕು, ಉಚಿತ ಯೋಜನೆ ಕುರಿತು ಯಾವ ಆದೇಶವು ಸರ್ಕಾರದಿಂದ ಬಂದಿಲ್ಲ ಹಾಗಾಗಿ ನಮ್ಮ ಇಲಾಖೆ ಕೊಟ್ಟಿರುವ ಕೆಲಸವನ್ನು ನಾವು ಮಾಡಬೇಕು ನಮ್ಮ ಕರ್ತವ್ಯ ಮಾಡಲು ಬಿಡಿ. ನಿಮಗೆ ವಿದ್ಯುತ್ ಬಿಲ್ ಕೊಡುತ್ತೇವೆ ಪಾವತಿ ಮಾಡಿ ಎಂದು ಗ್ರಾಮ ಪಂಚಾಯಿತಿಯ ವಿದ್ಯುತ್ ಪ್ರತಿನಿಧಿಗಳು ಹೇಳಿದರೂ ಕೂಡ ಜನಸಾಮಾನ್ಯರು ಕೇಳುವ ಮನಸ್ಥಿತಿಯಲ್ಲಿ ಇಲ್ಲ.
ಹಾಗಾದ್ರೆ ಕಾಂಗ್ರೆಸ್ ಕೊಟ್ಟಿದ್ದು ಬರೀ ಭರವಸೆಗಳ ಆ ಮಾತುಗಳೆಲ್ಲ ಸುಳ್ಳಾ? ಎಂದು ಮರು ಪ್ರಶ್ನೆ ಕೇಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಜಾರಿ ಮಾಡಿದರೆ ಜೂನ್ ತಿಂಗಳ ನಂತರದ ವಿದ್ಯುತ್ ಬಿಲ್ ಉಚಿತ ಆಗಬಹುದು ಆದರೂ ಕೂಡ ಅದರಲ್ಲಿ ಕಂಡಿಷನ್ಸ್ ಗಳು ಏನೇನು ಇರುತ್ತವೆ ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಅನುಮೋದನೆ ಸಿಗುವವರೆಗೂ ಕೂಡ ವಿದ್ಯುತ್ ಪಾವತಿ ಮಾಡಬೇಕು ಎಂದು ಹೇಳುತ್ತಿದ್ದರು.
ಕೂಡ ಜನಸಾಮಾನ್ಯರು ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ ನಾವಂತೂ ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟುವುದೇ ಇಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ನಾಡಿನಾದ್ಯಂತ ಕೂಡ ಇದೇ ಪರಿಸ್ಥಿತಿ ಇದೆ. ಸದ್ಯಕ್ಕಿಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ವಿದ್ಯುತ್ ಪ್ರತಿನಿಧಿ ಒಬ್ಬರು ವಿದ್ಯುತ್ ಬಿಲ್ ಸಂಗ್ರಹ ಮಾಡಲು ಹೋದಾಗ ಊರಿನ ಗ್ರಾಮಸ್ಥರು ಜೊತೆ ಮಾತಿನ ಚಕಮಕಿಗಿಳಿದ ವಿಡಿಯೋ ಹರಿದಾಡುತ್ತಿದೆ. ವೀಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.