ಕೊತ್ತಂಬರಿ ಸೊಪ್ಪು ಬಹುಬೇಗ ಹಾಳಾಗುವ ಒಂದು ಪದಾರ್ಥ. ಫ್ರಿಡ್ಜ್ ಅಲ್ಲಿ ಇಟ್ಟರೂ ಕೂಡ ಕೊತ್ತಂಬರಿ ಸೊಪ್ಪು ಬಹಳ ಬೇಗ ಕೆಟ್ಟು ಹೋಗುತ್ತದೆ. ಆದರೆ ಕೊತ್ತಂಬರಿ ಸೊಪ್ಪನ್ನು ತಂದ ತಕ್ಷಣವೇ ಒಂದು ಟಿಪ್ಸ್ ಫಾಲೋ ಮಾಡುವುದರಿಂದ ಬಹಳ ದಿನಗಳವರೆಗೆ ಕೊತ್ತಂಬರಿ ಸೊಪ್ಪು ಬಾಳಿಕೆ ಬರುವ ಹಾಗೆ ಮಾಡಬಹುದು. ಯಾಕೆಂದರೆ ಕೆಲವೊಮ್ಮೆ ಕೊತ್ತಂಬರಿ ಸೊಪ್ಪಿಗೆ ವಿಪರೀತ ರೇಟ್ ಇರುತ್ತದೆ.
ಕೆಲವೊಮ್ಮೆ ಮಾರ್ಕೆಟ್ ಅಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದಿಲ್ಲ ಇನ್ನು ಕೆಲವೊಮ್ಮೆ ಕಡಿಮೆ ರೇಟ್ ಕಡಿಮೆ ಇದೆ ಎಂದು ಹೆಚ್ಚು ತಂದಾಗ ಹೆಚ್ಚು ದಿನ ಅದು ಬಾಳಿಕೆ ಬರದೆ ಹಾಳಾದರೂ ಹಣ ವ್ಯರ್ಥ ಆದಂತೆ ಅನಿಸುತ್ತದೆ. ಹಾಗಾಗಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಹೆಚ್ಚು ದಿನ ಕೊತ್ತಂಬರಿ ಸೊಪ್ಪು ಬಾಳಿಕೆ ಬರುವ ಹಾಗೆ ಮಾಡಿ.
ನೀರಿನ ಬಾಟಲಿ ಎಲ್ಲರ ಮನೆಯಲ್ಲೂ ಕೂಡ ಇರುತ್ತದೆ ಈ ರೀತಿ ಬಿಸಿಲರಿ ಅಥವಾ ಯಾವುದೇ ವಾಟರ್ ಬಾಟಲ್ ಗಳನ್ನು ಬಿಸಾಡುವ ಬದಲು ಅದನ್ನೇ ಹಲವು ಕೆಲಸಗಳಿಗೆ ಬಳಸಿಕೊಳ್ಳಬಹುದು. ಅದೇ ರೀತಿ ಕೊತ್ತಂಬರಿ ಸೊಪ್ಪನ್ನು ಹಾಳಾಗದಂತೆ ನೋಡಿಕೊಳ್ಳುವ ಟ್ರಿಕ್ ಗೂ ಕೂಡ ಈ ಬಿಸಿಲಲ್ಲಿ ಬಾಟಲ್ ಅನುಕೂಲಕ್ಕೆ ಬರುತ್ತದೆ. ನೀರು ಖಾಲಿಯಾದ ಮೇಲೆ ಆ ಬಾಟಲನ್ನು ತೆಗೆದುಕೊಳ್ಳಿ.
ಅದನ್ನು ಅಳತೆ ನೋಡಿ ಕಾಲು ಭಾಗದಿಂದ ಕೆಳಗೆ ಮಧ್ಯಕ್ಕೆ ಸಿಝರ್ ಸಹಾಯದಿಂದ ಪೂರ್ತಿ ಕಟ್ ಮಾಡಿ ಮೇಲಿನ ಭಾಗಕ್ಕೆ ಪ್ರತಿ 1/2 ಇಂಚಿಗೂ ಸುತ್ತಲೂ ಕಟ್ ಮಾಡಿ ಈ ರೀತಿ ಆದ ಬಳಿಕ ಪಕ್ಕದಲ್ಲಿಟ್ಟು, ನೀವು ತಂದಿರುವ ಕೊತ್ತಂಬರಿ ಸೊಪ್ಪನ್ನು ಕ್ಲೀನ್ ಮಾಡಿಕೊಳ್ಳಿ.
ಬೇರುಗಳನ್ನು ತೆಗೆದು ಕೊಳಕಾಗಿರುವ ಅಥವಾ ಕೆಂಪಾಗಿರುವ ಕೊತ್ತಂಬರಿ ಸೊಪ್ಪನ್ನು ತೆಗೆದು ಕ್ಲೀನ್ ಆಗಿರುವ ಕೊತ್ತಂಬರಿ ಸೊಪ್ಪು ಅನ್ನು ಈ ಬಾಟಲಿಯಲ್ಲಿ ತುಂಬಿ ಮೇಲ್ಭಾಗವನ್ನು ಅರ್ಧ ಇಂಚಿಗೆ ಕಟ್ ಮಾಡಿಕೊಂಡು ಇಟ್ಟುಕೊಂಡ ಆ ಭಾಗವನ್ನು ಲಾಕ್ ಮಾಡಿ ಮುಚ್ಚುಳ ಹಾಕಿ. ಈ ರೀತಿ ಮಧ್ಯದಲ್ಲಿ ಕಟ್ ಮಾಡಿರುವುದರಿಂದ ಅದಕ್ಕೆ ಎಷ್ಟು ಗಾಳಿ ಬೇಕು ಅಷ್ಟು ಗಾಳಿ ಮಾತ್ರ ಒಳ ಹೋಗುತ್ತಿರುತ್ತದೆ ಇದರಿಂದ ಕೊತ್ತಂಬರಿ ಸೊಪ್ಪು ಕೊಳೆತು ಹೋಗುವುದಿಲ್ಲ.
ಈಗ ಇದನ್ನು ಫ್ರಿಡ್ಜ್ ಒಳಗೆ ಇಟ್ಟು ಎಷ್ಟು ದಿನ ಬೇಕಾದರೂ ನೀವು ಉಪಯೋಗಿಸಬಹುದು ಜೊತೆಗೆ ನೀವು ಉಪಯೋಗಿಸಿದ ಮೇಲೆ ಎಷ್ಟು ಕೊತ್ತಂಬರಿಸೊಪ್ಪು ಉಳಿದಿದೆ ಎನ್ನುವುದು ಕೂಡ ಟ್ರಾನ್ಸ್ಪರೆಂಟ್ ಆಗಿಯೇ ಕಾಣುತ್ತದೆ. ಈ ರೀತಿಯಾಗಿ ಕೊತ್ತಂಬರಿ ಸೊಪ್ಪಿನ ಕ್ವಾಂಟಿಟಿಗೆ ಅನುಗುಣವಾಗಿ ದೊಡ್ಡ ಬಾಟಲ್ ಅಥವಾ ಹೆಚ್ಚು ಬಾಟಲ್ ಗಳಲ್ಲಿ ಈ ರೀತಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.
ಕೊತ್ತಂಬರಿ ಸೊಪ್ಪು ಮಾತ್ರ ಅಲ್ಲದೆ ಪುದಿನ ಸೊಪ್ಪು, ಕರಿಬೇವು ಸೊಪ್ಪು ಇವುಗಳಿಗೂ ಸಹ ಇದನ್ನೇ ಅಪ್ಲೈ ಮಾಡಬಹುದು. ಈ ರೀತಿಯಾಗಿ ಮನೆಯಲ್ಲಿ ಇರುವ ವಸ್ತುಗಳನ್ನು ವೇಸ್ಟ್ ಎಂದು ಬಿಸಾಕುವ ಬದಲು ಅವುಗಳನ್ನೇ ಸರಿಯಾಗಿ ಬಳಸಿಕೊಂಡು ಈ ರೀತಿ ಅವುಗಳಿಂದ ಉಪಯೋಗ ಪಡೆದುಕೊಳ್ಳಬಹುದು ಮತ್ತು ಮನೆಗೆ ಹಣ ಕೊಟ್ಟು ತರುವ ವಸ್ತುಗಳು ಹೆಚ್ಚು ದಿನ ಬಾಳಕೆ ಬರುವ ರೀತಿ ಸಹ ನೋಡಿಕೊಳ್ಳಬಹುದು. ಈ ಟ್ರಿಕ್ ಅನ್ನು ತಪ್ಪದೆ ಒಮ್ಮೆ ಟ್ರೈ ಮಾಡಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.