ಪ್ರತಿಯೊಬ್ಬರು ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಮಾಡುತ್ತಿದ್ದರು ಕೂಡ ತೆಗೆದುಕೊಂಡು ಸಾಲವನ್ನು ಮರಳಿ ತೀರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೆಲ ಎಚ್ಚರಿಕೆಗಳನ್ನು ವಹಿಸಬೇಕು. ಯಾಕೆಂದರೆ ಶನಿವಾರದಂದು ಯಾವುದೇ ಕಾರಣಕ್ಕೂ ಸಾಲ ತೆಗೆದುಕೊಳ್ಳಬಾರದು.
ಶನಿವಾರದಂದು ತೆಗೆದುಕೊಂಡ ಸಾಲ ಬೇಗ ತೀರುವುದಿಲ್ಲ ಮತ್ತು ಶನಿವಾರದಂದು ಸಾಲ ಪತ್ರಗಳಿಗೆ ಸಹಿ ಕೂಡ ಮಾಡಬಾರದು, ಯಾವುದೇ ಸಾಲ ಪತ್ರಗಳಿಗೆ ಸಹಿ ಮಾಡುವಾಗ ಕಪ್ಪು ಬಣ್ಣದ ಇಂಕನ್ನು ಬಳಸಬಾರದು. ಮತ್ತು 8,17,26 ಈ ದಿನಾಂಕಗಳಲ್ಲಿ ಸಾಲ ತೆಗೆದುಕೊಂಡರೆ ಆ ಸಾಲ ಕೂಡ ಬೇಗ ತೀರುವುತ್ತಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಈ ದಿನಗಳಂದು ಸಾಲ ಪಡೆಯಬೇಡಿ.
ನೀವೇನಾದರೂ ಈಗಾಗಲೇ ಸಾಲ ಮಾಡಿದ್ದರೆ ಆದಷ್ಟು ಬೇಗ ಋಣ ಮುಕ್ತರಾಗಬೇಕು ಎಂದು ಬಯಸುತ್ತಿದ್ದರೆ ಆಂಜನೇಯ ಸ್ವಾಮಿಯನ್ನು ಈ ರೀತಿ ಪ್ರಾರ್ಥಿಸಿ. ನಿಮಗೆ ಸಾಧ್ಯವಾದಷ್ಟು ವಾರ ಮಂಗಳವಾರ ದಿನದಂದು ಸಂಜೆ ಹೊತ್ತು ಸ್ಥಾನ ಮಾಡಿ ಮಡಿಯುಟ್ಟು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ.
ಈ ರೀತಿ ಹೋಗುವಾಗ ಮನೆಯಿಂದ ಹಸಿರು ಬಣ್ಣದ ತಾಜಾ ವೀಳ್ಯದೆಲೆ ತೆಗೆದುಕೊಂಡು ಅದರ ತೊಟ್ಟನ್ನು ಬಿಡಿಸಿ ಅದಕ್ಕೆ ಎರಡು ಲವಂಗ ಹಾಗೂ ಒಂದು ಏಲಕ್ಕಿಯನ್ನು ಹಾಕಿ ಪ್ಯಾನ್ ರೀತಿ ಮಾಡಿಕೊಳ್ಳಿ. ನಿಮ್ಮೊಂದಿಗೆ ಅದನ್ನು ತೆಗೆದುಕೊಂಡು ಹೋಗಿ ಆಂಜನೇಯ ಸ್ವಾಮಿಗೆ ಅರ್ಪಿಸಿ ಮತ್ತು ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಸಾಲದ ಹೊರೆ ಇಳಿಸುವಂತೆ ಕೇಳಿಕೊಳ್ಳಿ.
ಮಂಗಳಾರದಂದು ಹರಿಯುವ ನದಿಯ ಬಳಿ ಹೋಗಿ ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ತೊಟ್ಟನ್ನು ಬಿಡಿಸಿ ಒಂದು ಬಾರಿ ಫೋಲ್ಡ್ ಮಾಡಿ. ಈ ರೀತಿ ಪೋಲ್ಡ್ ಮಾಡುವಾಗ ವಿಳ್ಯದೆಲೆಯ ಬಿರುಸಾದ ಭಾಗ ಹೊರಮುಖ ಇರಬೇಕು, ನುಣುಪಾದ ಭಾಗ ಒಳಮುಖವಾಗಿ ಇರಬೇಕು. ಅದರ ಮೇಲೆ ಎರಡು ಲವಂಗವನ್ನು ಹಾಕಿ ನಿಮ್ಮ ಕಷ್ಟಗಳನೆಲ್ಲ ಹೇಳಿಕೊಂಡು ಆಂಜನೇಯನನ್ನು ಪ್ರಾರ್ಥಿಸಿ ಮತ್ತು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಿ.
ಈ ರೀತಿ ಸಾಧ್ಯವಾದಷ್ಟು ಮಂಗಳವಾರಗಳು ಮಾಡಿ ನಿಮ್ಮ ಸಮಸ್ಯೆ ಕೂಡ ನೀರಿನಂತೆ ಕೊಚ್ಚಿ ಹೋಗುತ್ತದೆ. ಅದೇ ರೀತಿಯ ಮತ್ತೊಂದು ಉಪಾಯ ಇದೆ ಇದನ್ನು ಮನೆಯ ಮಹಿಳೆಯರು ಮಾಡಬಹುದು. ಅದೇನೆಂದರೆ ಶನಿವಾರದಂದು ಉಪ್ಪು ಹಾಕದ ಆಹಾರ ಪದಾರ್ಥಗಳನ್ನು ಸೇವಿಸಬಾರದು, ತೀರ ಅವಶ್ಯಕತೆ ಇದ್ದರೆ ಕಲ್ಲು ಉಪ್ಪು ಹಾಕಿದ ಆಹಾರವನ್ನು ಸೇವಿಸಬಹುದು.
ಈರುಳ್ಳಿ, ಬೆಳ್ಳುಳ್ಳಿ ಈ ರೀತಿ ಪದಾರ್ಥಗಳನ್ನು ಹಾಕದೆ ಇವುಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿ ಆಚರಣೆ ಮಾಡಬೇಕು. ಶನಿವಾರದಂದು ಸಂಜೆ ಹೊತ್ತು ಸ್ನಾನ ಮಾಡಿ ರಾತ್ರಿ ಹನ್ನೊಂದು ಗಂಟೆಯ ಮೇಲೆ ಆಂಜನೇಯ ಸ್ವಾಮಿಗೆ ಕೆಂಪು ಬಣ್ಣದ ಹೂಗಳಿಂದ ಅಲಂಕಾರ ಮಾಡಿ ಧೂಪದೀಪ ಬೆಳಗಿ ನೈವೇದ್ಯ ಅರ್ಪಿಸಿ ಸಾಲದ ಪರಿಹಾರಕ್ಕಾಗಿ ಪ್ರಾರ್ಥಿಸಿ, ಹನುಮಾನ್ ಚಾಲೀಸ ವನ್ನು ಪಠಿಸಬೇಕು.
ಈ ರೀತಿ 11 ವಾರಗಳು ಮಾಡಿದರೆ ಆದಷ್ಟು ಬೇಗ ಸಾಲ ಮುಕ್ತರಾಗುತ್ತೀರಿ ಮತ್ತು ಮಹಿಳೆಯರು ಸಾಧ್ಯವಾದಷ್ಟು ಆಂಜನೇಯಕ್ಕೆ ಕೆಂಪು ಹೂವುಗಳನ್ನು ಅರ್ಪಿಸಬೇಕು ಮತ್ತು ಪುರುಷರು ಕೇಸರಿಯನ್ನು ಅರ್ಪಿಸಿದರೆ ಬಹಳ ಬೇಗ ಸಾಲದಿಂದ ಮುಕ್ತಿ ಹೊಂದುತ್ತಾರೆ. ಇದರ ಜೊತೆಗೆ ಕನಕಧಾರ ಸ್ತೋತ್ರ, ಋಣಮೋಚನ ಮಂಗಳ ಸ್ತೋತ್ರ ಇವುಗಳನ್ನು ಪಾರಾಯಣ ಮಾಡಿ ಹಾಗೂ ಮತ್ತಷ್ಟು ಶ್ರಮದಿಂದ ಆದಷ್ಟು ಬೇಗ ಸಾಲದಿಂದ ಹೊರಬರಲು ಕೆಲಸ ಮಾಡಿ.