ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷವು ಹೊರಡಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳದ್ದೇ ಮಾತುಕತೆ. ಕಾಂಗ್ರೆಸ್ ಪಕ್ಷವು ಈ ವರ್ಷದ ವಿಧಾನಸಭಾ ಚುನಾವಣೆ ಮೇಲೆ ತನ್ನ ಚುನಾವಣಾ ಪ್ರಣಾಳಿಕೆ ಅಸ್ತ್ರವಾಗಿ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಘೋಷಿಸಿತ್ತು. ತಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಿ ಬಂದರೆ ಕ್ಯಾಬಿನೆಟ್ ಮೊದಲ ಮೀಟಿಂಗ್ ಅಲ್ಲೇ ಇದನ್ನು ಚರ್ಚಿಸಿ ಜಾರಿಗೆ ತರುವುದಾಗಿ ಹೇಳಿತ್ತು.
ಅಂತೆಯೇ 135 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಗೆದ್ದಿದೆ. ಇದಕ್ಕೆಲ್ಲ ಜನರು ಕಾಂಗ್ರೆಸ್ ಸರ್ಕಾರದ ಮಾತುಗಳ ಮೇಲೆ ಇಟ್ಟಿರುವ ನಂಬಿಕೆಯ ಕಾರಣವಾಯಿತು. ಈಗ ಕಾಂಗ್ರೆಸ್ ಪಕ್ಷವು ಕೂಡ ಗೆದ್ದ ನಂತರ ತಾನು ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇದೆ.
ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ಎಂಟು ಸಚಿವರನ್ನು ಆರಿಸಿ ಅವರ ಜೊತೆ ಚರ್ಚಿಸಿ, ಈ ಗ್ಯಾರಂಟಿ ಕಾರ್ಡ್ ಯೋಜನೆ ಬಗ್ಗೆ ತಾತ್ವಿಕ ಆದೇಶ ನೀಡಿದ್ದರು. ಕರ್ನಾಟಕ ರಾಜ್ಯದ ಸಾಲದ ಹೊರೆ ಹೆಚ್ಚಾಗದಂತೆ ಯಾವುದೇ ಬೆಲೆಯನ್ನು ಆದರೂ ತೆತ್ತು ಖಡಾಖಂಡಿತವಾಗಿ ಕೊಟ್ಟ ಮಾತನ್ನು ಉಳಿಸಿಕೊಂಡು ಐದು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯ ಅವರು ಇದಕ್ಕಾಗಿ 50 ಸಾವಿರ ಕೋಟಿ ಹಣ ಬೇಕಾಗುವ ನಿರೀಕ್ಷೆ ಇದೆ ಎಂದಿದ್ದರು.
ಜೊತೆಗೆ ಆದೇಶ ಪತ್ರದಲ್ಲಿ ಮುಂದಿನ ಸಭೆಯಲ್ಲಿ ಇದರ ಬಗ್ಗೆ ಇನ್ನೂ ಆಳವಾಗಿ ಚರ್ಚಿಸಿ, ಈ ಯೋಜನೆಗಳಿಗೆ ಇರುವ ಮಾನದಂಡಗಳ ಬಗ್ಗೆ ನಿಯಮಗಳ ಬಗ್ಗೆ ಮತ್ತು ಮಾರ್ಗಸೂಚಿ ಬಗ್ಗೆ ಶೀಘ್ರದಲ್ಲಿ ಮತ್ತೊಂದು ಆದೇಶ ಪತ್ರ ಹೊರಡಿಸಿ ತಿಳಿಸಲಾಗುವುದು ಎಂದು ಹೇಳಿದರು. ಅಷ್ಟರಲ್ಲೇ ಜನಸಾಮಾನ್ಯರು ಪಕ್ಷ ಹೇಳಿದ್ದ ಯೋಜನೆಗಳು ಜಾರಿಗೆ ಬಂದಿವೆ ಎನ್ನುವ ರೀತಿ ಸರ್ಕಾರದ ಪ್ರತಿನಿಧಿಗಳೊಂದಿಗೆ ವರ್ತಿಸಿರುವ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.
ಹೀಗಾಗಿ ಮಾಧ್ಯಮಗಳಿಗೆ ಮುಂದೆ ಉಪ ಮುಖ್ಯಮಂತ್ರಿಗಳಾದ ಡಿ
ಕೆ ಶಿವಕುಮಾರ್ ಅವರು ಸಿಕ್ಕಾಗ ಈ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನದ ಬಗ್ಗೆ, ಈ ಯೋಜನೆಗಳ ಕುರಿತು ಪ್ರಶ್ನಿಸಲಾಗಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಈ ರೀತಿ ಇತ್ತು. ನಾವು ಕೊಟ್ಟ ಮಾತಿನಂತೆ ಗ್ಯಾರಂಟಿಯಾಗಿ ಐದು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎನ್ನುವ ಅಭಯವನ್ನು ಕರ್ನಾಟಕದ ಜನತೆಗೆ ನೀಡುತ್ತೇವೆ.
ಅದರಲ್ಲಿ ಎರಡು ಮಾತಿಲ್ಲ ಆದರೆ ಬೇಕಾಬಿಟ್ಟಿಯಾಗಿ ಯೋಜನೆಯನ್ನು ಜಾರಿಗೆ ತರುವಂತೆ ಇಲ್ಲ. ಮನೆ ಒಡತಿಗೆ ರೂ.2,000 ಕೊಡುತ್ತೇವೆ ಎನ್ನುವ ಗೃಹಲಕ್ಷ್ಮಿ ಯೋಜನೆ ತಂದಿದ್ದೇವೆ. ನಿಮ್ಮ ಮನೆಯಲ್ಲಿ ಮನೆ ಒಡತಿ ಸೊಸೆನಾ ಅಥವಾ ಅತ್ತೆನಾ ಎಂದು ಹೇಗೆ ನಿರ್ಧರಿಸುತ್ತೀರಿ? ಕೆಲವು ಮನೆಯಲ್ಲಿ ಆ ಮನೆ ಗಂಡಸರು ಈ ರೀತಿ ಸಿಗುವ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ರೀತಿ ಅನ್ಯಾಯವಾಗದಂತೆ ಮನೆಯನ್ನು ನಿರ್ವಹಿಸುವ ಒಡತಿಗೆ ಹಣ ಸೇರುವಂತೆ ಯೋಜನೆ ರೂಪಿಸುತ್ತಿದ್ದೇವೆ.
ಅದಕ್ಕಾಗಿ ಬ್ಯಾಂಕ್ ಖಾತೆ ಇರಬೇಕು ಎನ್ನುವುದನ್ನು ಹೇಳುತ್ತಿವೆ. ಬ್ಯಾಂಕ್ ಖಾತೆ ಇಲ್ಲದಿದ್ದವರು ಬ್ಯಾಂಕ್ ಖಾತೆ ಮಾಡಿಸಬೇಕು, ಫೋಟೋ ಇಲ್ಲದವರು ಅದನ್ನು ಕೂಡ ತೆಗಿಸಬೇಕು ಹಾಗಾಗಿ ಸ್ವಲ್ಪ ತಾಳ್ಮೆಯಿಂದ ಇರಬೇಕು. ಜೂನ್ 1ನೇ ತಾರೀಕಿನಂದು ಮತ್ತೆ ಕ್ಯಾಬಿನೆಟ್ ಮೀಟಿಂಗ್ ಇದೆ ಆ ದಿನದಂದು ಇವುಗಳ ಬಗ್ಗೆ ಸ್ಪಷ್ಟಪಡಿಸಲಿದ್ದೇವೆ ಎಂದು ಪ್ರಶ್ನೆ ಮಾಡಿದ ಮಾಧ್ಯಮ ವರದಿಗಾರರಿಗೆ DCM ಉತ್ತರಿಸಿದ್ದಾರೆ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*