ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ನಂಬಲಾಗುವ ಪುರಾಣಗಳಲ್ಲಿ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಜೀವನದಲ್ಲಿ ನಾವು ಒಂದಲ್ಲ ಒಂದು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಈ ಹೊರೆಯನ್ನು ಇಳಿಸಲು ಆಗದೆ ಯಾರ ಜೊತೆ ಹಂಚಿಕೊಳ್ಳಲು ಸಾಧ್ಯವಾಗದೇ ನರಳುತ್ತಿರುತ್ತೇವೆ. ಅಂತಹ ಸಮಯದಲ್ಲಿ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಸಾಕು ಅದೆಲ್ಲಾ ನಿವಾರಣೆ ಆಗುತ್ತದೆ ಎನ್ನುವುದನ್ನು ಶಿವಪುರಾಣದಲ್ಲಿ ತಿಳಿಸಲಾಗಿದೆ.

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರ ಲಿಂಗ ಸ್ವರೂಪಿಯಾದ ಶಿವನ ಮುಂದೆ ಕುಳಿತುಕೊಂಡು ಭಕ್ತಿಯಿಂದ ನಂಬಿಕೆಯಿಂದ ನಿಮ್ಮ ಸಮಸ್ಯೆಗಳನ್ನೆಲ್ಲ ಹೇಳಿಕೊಂಡು 108 ಬಾರಿ ಪಂಚಾಕ್ಷರಿ ಮಂತ್ರವನ್ನು ಜಪಿಸಿದರೆ ಸಾಕ್ಷಾತ್ ಪರಶಿವನೆ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುವ ಮಾರ್ಗವನ್ನು ತೋರಿಸುತ್ತಾರೆ ಎನ್ನುವುದನ್ನು ಹೇಳುತ್ತದೆ ಶಿವಪುರಾಣ.
ಪ್ರತಿ ಮನುಷ್ಯನು ನಾನ ಕಷ್ಟಗಳಿಗೆ ಸಿಲುಕಿ ಕೊಂಡಾಗ ಶಿವನನ್ನು ಆರಾಧಿಸುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆದುಕೊಂಡರೆ ಹಾಗೂ ಕೆಲವರಿಗೆ ಕೆಲ ದಾನಗಳನ್ನು ಕೊಟ್ಟರೆ ಸಮಸ್ಯೆಗಳು ಪರಿಹಾರ ಆಗುತ್ತದೆ ಜೊತೆಗೆ ತಾವು ದಾನ ಕೊಟ್ಟಂತಹ ಧನಧಾನ್ಯಗಳು 100 ಪಟ್ಟು ಅವರಿಗೆ ಮರಳು ಸಿಗುತ್ತದೆ ಎನ್ನುವುದನ್ನು ಕೂಡ ಶಿವಪುರಾಣ ತಿಳಿಸಿದೆ. ಈ ಎಲ್ಲಾ ಕ್ರಿಯೆಗಳನ್ನು ಮಾಡುವ ಮುನ್ನ ಶರೀರ ಹಾಗೂ ಮನಸ್ಸು ಶುದ್ದಿಯಾಗಿರಬೇಕು.
ಶಿವನೊಬ್ಬನೇ ದಿಕ್ಕು ಸಕಲ ಜೀವಗಳಲ್ಲೂ ಕೂಡ ಶಿವನಿದ್ದಾನೆ ಎನ್ನುವ ನಂಬಿಕೆ ಬರಬೇಕು. ಈ ಭಾವ ಬಂದಾಗ ನಮಗೆ ತಿಳಿದೋ ತಿಳಿಯದೋ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಧೈರ್ಯ ತುಂಬುತ್ತಾ ಬರುತ್ತದೆ. ಈ ರೀತಿ ಸಕಾರಾತ್ಮಕ ಮನೋಭಾವನೆ ಮನಸ್ಸಿನಲ್ಲಿ ತುಂಬಿಕೊಂಡಾಗ ಬದುಕು ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲು ಶುರು ಆಗುತ್ತದೆ ಬದುಕಿನಲ್ಲಿ ಭರವಸೆ ತುಂಬುತ್ತದೆ.
ದಾನ ಕೊಡುವ ವಿಚಾರದಲ್ಲಿ ಶಿವಪುರಾಣದಲ್ಲಿ ತಿಳಿಸಿರುವ ಪ್ರಕಾರ ಉಪ್ಪನ್ನು ದಾನ ಕೊಡುವುದರಿಂದ ಯಾವುದೇ ರೀತಿಯ ಋಣಗಳಲ್ಲಿ ಸಿಲುಕಿಕೊಂಡಿದ್ದರೆ ಸಾಲಬಾಧೆಯಿಂದ ಸಂಕಷ್ಟ ಪಡುತ್ತಿದ್ದರೆ ಅದು ನಿವಾರಣೆ ಆಗುತ್ತದೆ. ಸೋಮವಾರದಂದು ಉಪ್ಪನ್ನು ದಾನ ಮಾಡುವುದು ಶ್ರೇಷ್ಠ ಆದರೆ ಉಪ್ಪನ್ನು ನೇರವಾಗಿ ಬೇರೆಯವರ ಕೈಗೆ ಕೊಡದೆ ಉಪ್ಪಿನ ಪ್ಯಾಕ್ ಅನ್ನು ಅವರ ಮುಂದೆ ಇಡಬೇಕು ನಂತರ ಅವರು ಸ್ವೀಕರಿಸಬೇಕು.
ಇದೇ ರೀತಿ ಬೆಲ್ಲದ ದಾನ ಕೊಡುವುದರಿಂದ ಮನೆಯಲ್ಲಿ ಸಂಬಂಧಗಳು ಗಟ್ಟಿಯಾಗುತ್ತದೆ ಎಂದು ನಂಬಲಾಗಿದೆ. ಗಂಡ ಹೆಂಡತಿ ಮಧ್ಯೆ ಮನಸ್ತಾಪ ವಿರಸ ಇದ್ದರೆ ಮಕ್ಕಳುಗಳು ಸರಿಯಾಗಿ ಮಾತು ಕೇಳುತ್ತಿಲ್ಲ ಎಂದರೆ ಈ ರೀತಿಯ ಯಾವುದೇ ಸಮಸ್ಯೆ ಇದ್ದರೂ ಸಂಬಂಧಗಳಲ್ಲಿ ಸಿಹಿ ತುಂಬಲು ಸೋಮವಾರದ ದಿನ ಬೆಲ್ಲವನ್ನು ದಾನ ಕೊಟ್ಟರೆ ಒಳ್ಳೆಯದು.
ಕೆಲವರಿಗೆ ಎಷ್ಟೇ ಬುದ್ಧಿವಂತರಾಗಿದ್ದರು ಕೂಡ ಕೆಲಸ ಸಿಗುತ್ತಿಲ್ಲ ಅಥವಾ ಆ ಕೆಲಸ ಅವರಿಗೆ ಇಷ್ಟವಾಗುವುದಿಲ್ಲ. ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ಸಿಗದೇ ಒದ್ದಾಡುತ್ತಿರುವವರು ಸೋಮವಾರದಂದು ಎಳ್ಳನ್ನು ದಾನ ಕೊಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಸೋಮವಾರ ದಿನ ಬಿಳಿ ಎಳ್ಳು ದಾನ ಕೊಡಬೇಕು, ಕಪ್ಪು ಎಳ್ಳನ್ನು ದಾನ ಮಾಡಲು ಶನಿವಾರ ಸೂಕ್ತ. ತುಪ್ಪವನ್ನು ದಾನ ಕೊಡುವುದರಿಂದ ಕೂಡ ರೋಗ ಮುಕ್ತರಾಗುತ್ತಾರೆ ಜೊತೆಗೆ ಅವರು ಬಲಿಷ್ಠರಾಗುತ್ತಾರೆ ಎನ್ನುವುದನ್ನು ಹೇಳುತ್ತೆ ಶಿವ ಪುರಾಣ.
ಹಾಗೆಯೇ ಧನಧಾನ್ಯಗಳನ್ನು ದಾನ ಕೊಡುವುದರಿಂದ ಅನ್ನಪೂರ್ಣೇಶ್ವರಿ ಅನುಗ್ರಹವು ಸಹ ಶಿವನ ಅನುಗ್ರಹದ ಜೊತೆ ದೊರೆಯುತ್ತದೆ. ಅವರ ಕುಟುಂಬಕ್ಕೆ ಎಂದೂ ಅನ್ನದ ಕೊರತೆ ಆಗುವುದಿಲ್ಲ ಎನ್ನುವುದನ್ನು ಕೂಡ ಶಿವಪುರಾಣದಲ್ಲಿ ತಿಳಿಸಲಾಗಿದೆ. ಈ ರೀತಿ ದಾನದ ಆಚರಣೆಯನ್ನು ಸೋಮವಾರ ಮಾಡಿ ನಿಮ್ಮ ಸಂಕಷ್ಟಗಳಿಂದ ಹೊರಬನ್ನಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*