ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಇಂತಹ ವಾತಾವರಣವನ್ನು ಕಾಣಬಹುದು. ಒಡಹುಟ್ಟಿದ ತಂಗಿಯನ್ನು ಅಥವಾ ಮನೆ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಕೊಟ್ಟ ಮೇಲೆ ಆಕೆಯನ್ನು ಹಬ್ಬ ಹರಿದಿನಗಳಲ್ಲಿ ಅಥವಾ ಹೆರಿಗೆ ಬಾಣಂತನ ಇತ್ಯಾದಿ ವಿಶೇಷ ದಿನಗಳಲ್ಲಿ ಪ್ರೀತಿಯಿಂದ ಕರೆತಂದು ಗೌರವ ಪೂರ್ವಕವಾಗಿ ಕಳುಹಿಸಿ ಕೊಡುವುದು ಇದು ಅಣ್ಣನ ಅಥವಾ ತಂದೆಯ ಅಥವಾ ತಂದೆಯ ಕುಟುಂಬದವರ ಜವಾಬ್ದಾರಿಯೂ ಆಗಿರುತ್ತದೆ.
ಜವಾಬ್ದಾರಿ ಎನ್ನುವುದಕ್ಕಿಂತ ಮನೆ ತುಂಬಾ ಓಡಾಡಿಕೊಂಡಿದ್ದ ನಮ್ಮ ಮನೆಗೆ ಹೆಣ್ಣು ಮಗು ಮದುವೆಯಾಗಿ ಮತ್ತೊಂದು ಮನೆಯ ಜವಾಬ್ದಾರಿ ಹೊತ್ತು ಈಗ ತನ್ನ ಮನೆಗೆ ಅತಿಥಿಯಾಗಿ ಹೋದಳಲ್ಲ ಎನ್ನುವ ನೋವನ್ನು ಆಕೆಯ ಬರುವಿಕೆಯ ಸಂಭ್ರಮ ಸ್ವಲ್ಪ ಮರೆಸುತ್ತದೆ ಆದರೆ ಆಧುನಿಕ ಯುಗದ ಅಬ್ಬರಕ್ಕೆ ಸಿಲುಕಿರುವ ನಾವು ಇಂದು ಇಂತಹ ಬೆಲೆ ಕಟ್ಟಲಾಗದ ಸಂತೋಷ ಕ್ಷಣಗಳನ್ನು ಹಣಕಾಸಿನಲ್ಲಿ ಲೆಕ್ಕ ಹಾಕಿ ಕಳೆದುಕೊಳ್ಳುವಷ್ಟು ಬಡವರಾಗಿ ಹೋಗಿದ್ದೇವೆ.
ಅದೇನೆ ಇರಲಿ, ಈ ರೀತಿ ಮದುವೆ ಆದಾಗ ಅಥವಾ ತವರು ಮನೆಗೆ ಹೋದಾಗ ಖಂಡಿತವಾಗಿಯೂ ತವರು ಮನೆಯಿಂದ ಕೆಲವು ಉಡುಗೊರೆಗಳನ್ನು ಕೊಡುತ್ತಾರೆ. ಕೆಲವು ಹೆಣ್ಣು ಮಕ್ಕಳು ಇದೇ ಬೇಕೆಂದು ಡಿಮ್ಯಾಂಡ್ ಮಾಡಿ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳು ಸಾತ್ವಿಕರಾಗಿದ್ದು ತವರು ಮನೆ ಚೆನ್ನಾಗಿರಲಿ ಎಂದು ಹರಸಿ ಹೋಗುತ್ತಾರೆ.
ಈ ಸುದ್ದಿ ಓದಿ:- BPL / ಅಂತ್ಯೋದಯ ರೇಷನ್ ಕಾರ್ಡ್ ಇರುವ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಹಣ.!
ಈ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು ಮತ್ತು ಕೆಲ ವಸ್ತುಗಳನ್ನು ಕೊಂಡು ಹೋದರೆ ಬಹಳ ಅದೃಷ್ಟ ಎಂದು ಕೂಡ ಹಿರಿಯರು ಪದ್ಧತಿಯಲ್ಲಿ ತಿಳಿಸಿದ್ದಾರೆ ಆ ಪ್ರಕಾರವಾಗಿ ಶಾಸ್ತ್ರದಲ್ಲಿ ಯಾವ ವಸ್ತುಗಳನ್ನು ಈ ರೀತಿ ಗಂಡನ ಮನೆಗೆ ತಂದರೆ ಶುಭ ಎನ್ನುವ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
* ತವರು ಮನೆಯಿಂದ ಹಸು ಏನಾದರೂ ಕರುವಿನ ಸಮೇತ ನಿಮ್ಮ ಗಂಡನ ಮನೆಗೆ ಉಡುಗೊರೆಯಾಗಿ ಬಂದರೆ ನಿಮ್ಮ ಗಂಡನ ಮನೆಯಲ್ಲಿ ಅದೃಷ್ಟ ಕುಲಾಯಿಸಿದಂತೆ ಸರಿ, ಸಾಮಾನ್ಯವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಈ ರೀತಿಯ ಪದ್ಧತಿ ಇದ್ದೇ ಇದೆ. ಈಗ ಇದರ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಕೂಡ ಗುರುತಿಸಿದ್ದೇವೆ.
* ತವರು ಮನೆಯಲ್ಲಿ ಅನುಕೂಲಕರ ಪರಿಸ್ಥಿತಿ ಇದ್ದು ಗಂಡನ ಮನೆಯಲ್ಲಿ ಬಹಳ ಕಷ್ಟ ಅಥವಾ ಸಮಸ್ಯೆ ಇದ್ದಾಗ ನೀವು ನಿಮ್ಮ ಪರಿಸ್ಥಿತಿ ಹೇಳಿಕೊಳ್ಳದೆ ಇದ್ದಾಗಲೂ ತಂದೆ ಕಡೆಯಿಂದ ಅಥವಾ ಅಣ್ಣನ ಕಡೆಯಿಂದ ಹೀಗೆ ತವರು ಮನೆಯಿಂದ ನಿಮಗೆ ಉಡುಗೊರೆ ರೂಪದಲ್ಲಿ ಹಣ ಏನಾದರೂ ಬಂದರೆ ಆಗಲು ಕೂಡ ನಿಮ್ಮ ಗಂಡನ ಮನೆ ಕಷ್ಟ ತೀರಿದಂತೆ ಸರಿ.
ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
ಆ ಹಣವನ್ನು ಉಪಯೋಗಿಸಿಕೊಂಡು ನೀವು ಹೊಸ ಚೈತನ್ಯದಿಂದ ಮತ್ತೆ ಯಾವುದೇ ವ್ಯಾಪಾರ ವ್ಯವಹಾರ ಅಥವಾ ಕೃಷಿ ಮಾಡಲು ಪ್ರಯತ್ನಿಸಿ ಮತ್ತು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ದುಡಿಯಿರಿ ಅಂದಿನಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆ.
* ತವರು ಮನೆಯ ಸಂಬಂಧಗಳು ಯಾವಾಗಲೂ ಒಂದೇ ರೀತಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ ಅಮ್ಮ ಇದ್ದ ಜಾಗದಲ್ಲಿ ನಾಳೆ ಅತ್ತಿಗೆ ಬರಬಹುದು ಆಗ ತವರು ಮನೆಗೆ ಹೋಗುವ ಮನಸೇ ಅನೇಕರಿಗೆ ಕಳೆದು ಹೋಗಿರುತ್ತದೆ.
ಆದರೆ ಈ ತಪ್ಪು ಮಾಡಬೇಡಿ ಪರಿಸ್ಥಿತಿ ಹೇಗೆ ಇದ್ದರು ಕಾಲ ಎಷ್ಟೇ ಮುಂದುವರೆದಿದ್ದರೂ, ನಿಮಗೆ ತಂದೆ ಮನೆಗಿಂತ ಹೆಚ್ಚಿನ ಸಿರಿ ಇದ್ದರೂ ಹೆಣ್ಣು ಮಕ್ಕಳು ಪತಿ ಹಾಗೂ ಮಕ್ಕಳ ಜೊತೆ ಆಗಾಗ ತವರು ಮನೆಗೆ ಹೋಗುತ್ತಿರಬೇಕು ಮತ್ತು ಬರುವಾಗ ತಪ್ಪದೇ ಅರಿಶಿನ ಕುಂಕುಮ ಬಳೆ ಹೂವು ಇತ್ಯಾದಿ ಮಂಗಳ ದ್ರವ್ಯಗಳನ್ನು ಮತ್ತು ಕುಟುಂಬದ ಹಿರಿಯರ ಆಶೀರ್ವಾದವನ್ನು ಪಡೆದು ಬರಬೇಕು.
ಈ ಸುದ್ದಿ ಓದಿ:- ಮಾರ್ಚ್ 25ರಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ, ನಿಮ್ಮೆಲ್ಲರ ಕಷ್ಟ, ದಾರಿದ್ರ್ಯ, ಬಡತನ ಕಳೆಯಲು ಈ ದಿನ ಶಿವ, ವಿಷ್ಣು, ಲಕ್ಷ್ಮೀ ಮುಂದೆ ಈ ವಸ್ತು ಇಟ್ಟು ಪ್ರಾರ್ಥಿಸಿ.!
ಹೀಗೆ ಮಾಡುವುದರಿಂದ ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ತೊಂದರೆಗಳು ಬಂದಿದ್ದರು ಅದನ್ನು ಎದುರಿಸಲು ಧೈರ್ಯ ಬರುತ್ತದೆ ಮತ್ತು ಕಲ್ಲಿನಂತಹ ಕಷ್ಟಗಳು ಮಂಜಿನಂತೆ ಕರಗುತ್ತವೆ.