
ಗ್ಯಾಸ್ ಸಿಲೆಂಡರ್ ಬೆಲೆ ಪ್ರತಿ ತಿಂಗಳಿಂದ ತಿಂಗಳಿಗೆ ವ್ಯತ್ಯಾಸವಾಗುತ್ತದೆ. ಆದರೆ ಇದು ಇಳಿಮುಖವಾಗಿರದೇ ಏರುತ್ತಲಿರುವುದು ಗೃಹಿಣಿಯರ ತಲೆ ಬಿಸಿ ಹೆಚ್ಚು ಮಾಡಿದೆ. ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಪದೇ ಪದೇ ಗ್ಯಾಸ್ ಬೆಲೆ ಏರಿಕೆ ಆಗುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೇಂದ್ರ ಸರ್ಕಾರವು ಉಜ್ವಲ್ ಯೋಜನೆ ಅಡಿ ಬಡ ಕುಟುಂಬಗಳಿಗೂ ಕೂಡ ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಆದರೆ ಸಿಲಿಂಡರ್ ಬೆಲೆ ಏರಿಕೆ ಇರುವುದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಲಿ ಕೇಂದ್ರ ಸರ್ಕಾರವೇ ಇದಕ್ಕೊಂದು ಪರಿಹಾರ ತರಲಿ ಎಂದು ಪ್ರತಿಬಾರಿ ಬೆಲೆ ಹೆಚ್ಚಾದಾಗಲು ಕೂಡ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ.
ರಾಜ್ಯ ಸರ್ಕಾರಗಳು ಕೂಡ ಗ್ಯಾಸ್ ಬೆಲೆ ಏರಿಕೆ ಆದ ಸಂದರ್ಭದಲ್ಲಿ ಇದನ್ನು ಹಿಡಿತಕ್ಕೆ ತರುವ ಪ್ರಯತ್ನ ಮಾಡಬಹುದು. ತಮ್ಮಿಂದ ಆದಷ್ಟು ಇದಕ್ಕೆ ಕಡಿವಾಳ ಹಾಕಬಹುದು. ಹಾಗಾಗಿ ರಾಜ್ಯ ಸರ್ಕಾರಗಳ ಮೇಲು ಕೂಡ ಜನ ಒತ್ತಡ ಹೇರುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ರೀತಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿರುವುದನ್ನು ನಿಯಂತ್ರಣದಲ್ಲಿರಲು ಪ್ರಯತ್ನಿಸುತ್ತಿದ್ದರು.
ಕೂಡ ಕಚ್ಚಾ ತೈಲಗಳ ಬೆಲೆ ಏರಿಕೆ ಆಗಿರುವುದು ಹಾಗೂ ಸದ್ಯ ಜಗತ್ತಿನಲ್ಲಾಗುತ್ತಿರುವ ಅನೇಕ ವ್ಯತ್ಯಾಸ ಕಾರಣದಿಂದಾಗಿ ಈ ರೀತಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತಕ್ಷಣಕ್ಕೆ ಕಂಟ್ರೋಲಿಗೆ ತರಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಈ ಹಿಂದೆ ಸರ್ಕಾರದಿಂದ ಗ್ರಾಹಕರಿಗೆ ಸಬ್ಸಿಡಿ ಹಣ ಕೊಡುವುದಾಗಿ ಹೇಳಿತ್ತು, ಒಂದಷ್ಟು ತಿಂಗಳುಗಳ ಕಾಲ ಕೇಂದ್ರ ಸರ್ಕಾರದ ವತಿಯಿಂದ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಗ್ರಾಹಕರ ಖಾತೆಗಳಿಗೆ ಸಬ್ಸಿಡಿ ಹಣ ವರ್ಗಾವಣೆ ಕೂಡ ಆಗಿತ್ತು. ಆದರೆ ಕೆಲವೇ ತಿಂಗಳುಗಳಲ್ಲಿ ಇದು ನಿಂತು ಹೋಯಿತು.
ಹೀಗಾಗಿ ಜನ ಮತ್ತೆ ಸರ್ಕಾರಿಗಳಿಗೆ ಶಪಿಸುತ್ತಿದ್ದಾರೆ. ಸರ್ಕಾರದ ಹೊರತು ಈ ರೀತಿ ಅಡುಗೆ ಅನಿಲ ಬೆಲೆಯನ್ನು ಇಳಿಕೆ ಮಾಡಲು ಮತ್ತೇನಾದರೂ ಪರ್ಯಾಯ ಮಾರ್ಗಗಳಿದೆಯೇ ಎಂದು ನೋಡುವವರಿಗೆ ಈಗೊಂದು ಒಳ್ಳೆ ಅಪರ್ಚುನಿಟಿ ಸಿಗುತ್ತಿದೆ. ನೀವು ಈಗ ನಾವು ಹೇಳುವ ರೀತಿ ಸಿಲಿಂಡರ್ ಬುಕ್ ಮಾಡುವುದರಿಂದ ಒಂದು ತಿಂಗಳಿಗೆ 2 ಸಿಲಿಂಡರ್ ಬುಕ್ ಮಾಡಿದರು ಕೂಡ ಅದರಲ್ಲಿ ಪ್ರತಿ ಬಾರಿ 50 ರೂಪಾಯಿಯನ್ನು ಉಳಿಸಬಹುದು.
ಈಗ ಕರೆಂಟ್ ಬಿಲ್ ಕಟ್ಟುವುದಕ್ಕೆ, ವಾಟರ್ ಬಿಲ್ ಕಟ್ಟುವುದಕ್ಕೆ, ಹಣ ವರ್ಗಾವಣೆ ಮಾಡುವುದಕ್ಕೆ ಈ ರೀತಿ ಎಲ್ಲದಕ್ಕೂ ಕೂಡ ಆನ್ಲೈನ್ ಫ್ಯಾಟ್ ಫಾರ್ಮ್ಗಳ ಮೊರೆ ಹೋಗುವುದರಿಂದ ಗ್ಯಾಸ್ ಸಿಲಿಂಡರ್ ಬುಕ್ಕಿಂಗೂ ಸಹ ಜನ ಇದೇ ಮಾರ್ಗವನ್ನು ಅನುಸರಿಸುತ್ತಾನೆ. ನೀವೇನಾದರೂ Paytm ಆಪ್ ಹೊಂದಿದ್ದು Paytm ಆಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ, ನಿಮಗೆ ಈ ಅವಕಾಶ ಸಿಗಲಿದೆ.
ಈ ಆಪ್ ಮೂಲಕ ಗ್ಯಾಸ್ ಸಿಲೆಂಡರ್ ಬುಕ್ ಮಾಡುವ ಆಪ್ಷನ್ ಕ್ಲಿಕ್ ಮಾಡಿ ಅದರಲ್ಲಿ ನೀವು ಸದ್ಯಕ್ಕೆ ಭಾರತದಲ್ಲಿ ವಿತರಣೆ ಆಗುತ್ತಿರುವ ಇಂಡಿಯನ್, ಭಾರತ್, HP ಕಂಪನಿ ಸಿಲಿಂಡರ್ ಬಳಸುತ್ತಿದ್ದರೂ ಅದನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಗ್ರಾಹಕರ ಸಂಖ್ಯೆಯನ್ನು ಕೂಡ ನಮೂದಿಸಿ. ಹಣ ಪೇ ಮಾಡುವ ಆಪ್ಷನ್ ಬಂದಾಗ ಅದನ್ನು AU ಕಾರ್ಡ್ ಇಂದ ಪೇ ಮಾಡಿ. ಯಾಕೆಂದರೆ AU ಕಾರ್ಡ್ ತನ್ನ ಪಾವತಿಯ ಮೇಲೆ 5% ರಿಯಾಯಿತಿ ನೀಡುತ್ತಿದೆ. ಈಗ ಸಿಲಿಂಡರ್ ಬೆಲೆ 1103ರೂ. ಇರುವುದರಿಂದ ಇದರಲ್ಲಿ 50 ರೂಪಾಯಿ ನಿಮಗೆ ಕಡಿಮೆ ಆಗುತ್ತದೆ.