ಸಂಕಟ ಬಂದಾಗ ವೆಂಕಟರಮಣ ಎನ್ನುವ ಗಾದೆಯು ಕನ್ನಡದಲ್ಲಿ ಜನಪ್ರಿಯವಾಗಿದೆ. ನೆರೆ ರಾಜ್ಯವಾದ ಆಂಧ್ರಪ್ರದೇಶದಲ್ಲಿ ನೆಲೆ ನಿಂತಿರುವ ಪುರಾಣ ಪ್ರಸಿದ್ಧವಾದ ಈ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ದೇಶದ ನಾನಾ ಮೂಲೆಗಳಿಂದಲೂ ಕೂಡ ಭಕ್ತರ ದಂಡು ಬರುತ್ತದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಂದ ದಿನವೂ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ವೆಂಕಟೇಶ್ವರನ ದರ್ಶನಕ್ಕಾಗಿ ಹೋಗುತ್ತಾರೆ.
ವೆಂಕಟೇಶ್ವರ ಸ್ವಾಮಿಯು ತನ್ನನ್ನು ಅರಸಿ ಬರುವ ಭಕ್ತರಗಳ ಏನೇ ಸಮಸ್ಯೆ ಇದ್ದರೂ ಕೂಡ ಪರಿಹಾರ ಮಾಡುತ್ತಾರೆ. ಒಂದು ಬಾರಿ ತಿರುಪತಿಯಲ್ಲಿ ನೆಲೆ ನಿಂತಿರುವ ಈ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರೆ ಅವರ ಜೀವನದ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುತ್ತಿರುವ ನಂಬಿಕೆ ಭಕ್ತಾದಿಗಳಲ್ಲಿ ಅಚಲವಾಗಿರುವುದರಿಂದ ದಿನೇ ದಿನೇ ಅಲ್ಲಿಗೆ ಹೋಗುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಅನೇಕರಿಗೆ ಒಂದು ಬಾರಿ ವೆಂಕಟೇಶ್ವರ ದರ್ಶನ ಮಾಡಿದ ಬಳಿಕ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ ನಂತರ ಅವರು ವಾಡಿಕೆಯಂತೆ ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ವೆಂಕಟೇಶ್ವರ ದರ್ಶನಕ್ಕಾಗಿ ಹೋಗುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಬಾರಿ ತಿರುಪತಿಗೆ ಹೋಗಿ ತಿಮ್ಮಪ್ಪನ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು ಕೂಡ ಅವರ ಸಮಸ್ಯೆ ಪರಿಹಾರ ಆಗುವುದೇ ಇಲ್ಲ ಇದಕ್ಕೆಲ್ಲ ಅವರು ಮಾಡುವ ನಾಲ್ಕು ತಪ್ಪುಗಳು ಕಾರಣ ಆಗಿರುತ್ತವೆ.
ತಿರುಪತಿಗೆ ಹೋಗುವ ಪ್ರತಿಯೊಬ್ಬರ ಗಮನವೂ ಕೂಡ ಗರ್ಭಗುಡಿಯಲ್ಲಿ ನಿಂತಿರುವ ವೆಂಕಟೇಶ್ವರ ವಿಗ್ರಹದ ಮೇಲೆ ಇರುತ್ತದೆ. ಕಾಲ್ನಡಿಗೆಯಲ್ಲಿ ಅಥವಾ ಆ ಜನಸಾಗರ ನಡುವೆ ಧರ್ಮದರ್ಶನ ವಿಶೇಷ ದರ್ಶನಕ್ಕಾಗಿ ಕಾದು ಸುಸ್ತಾಗಿ ವೆಂಕಟೇಶ್ವರ ದರ್ಶನ ಮಾಡಿದ ಬಳಿಕ ಏನನ್ನೋ ಸಾಧಿಸಿದ ಆನಂದ ಸಿಗುತ್ತದೆ ಆದರೆ ವೆಂಕಟೇಶ್ವರ ದರ್ಶನ ಮಾಡುವುದಕ್ಕೂ ಮುನ್ನ ಮತ್ತೊಂದು ಕೆಲಸ ಮಾಡಬೇಕು ಎನ್ನುವುದು ಅನೇಕರಿಗೆ ತಿಳಿದಿಲ್ಲ.
ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೂ ಮುನ್ನ ಅಲ್ಲೇ ನೆಲೆ ನಿಂತಿರುವ ವರಾಹನಾಥ ಸ್ವಾಮಿ ದೇವಾಲಯಕ್ಕೆ ಹೋಗಿ ವರಹನಾಥ ಸ್ವಾಮಿಯ ದರ್ನಶವನ್ನು ಪಡೆಯಬೇಕು ಹೀಗಿದ್ದಲ್ಲಿ ಮಾತ್ರ ತನಗೆ ತೃಪ್ತಿ ಆಗುವುದು ಅಂತವರ ಪೂಜೆ ನನಗೆ ಬೇಗ ಅರ್ಪಿತವಾಗುತ್ತದೆ ಎನ್ನುವುದನ್ನು ಸ್ವತಃ ವೆಂಕಟೇಶ್ವರ ಸ್ವಾಮಿಯೇ ಹೇಳಿದ್ದಾರೆ. ಜೊತೆಗೆ ಪುರಾಣ ಕಥೆಗಳ ಪ್ರಕಾರ ಭೂವರಹನಾಥ ಸ್ವಾಮಿ ಹಾಗೂ ವೆಂಕಟೇಶ್ವರನ ಸ್ವಾಮಿಯ ನಡುವೆ ಆಗಿರುವ ಒಪ್ಪಂದವೊಂದು ಆಗಿದೆ.
ಯಾಕೆಂದರೆ ವೆಂಕಟೇಶ್ವರ ಸ್ವಾಮಿಯ ನೆಲೆ ನಿಂತಿರುವ ಈ ಜಾಗವು ಭೂವರಹನಾಥ ಸ್ವಾಮಿಯದ್ದಾಗಿದ್ದು ಅಲ್ಲಿ ನೆಲೆಸಲು ಅನುಮತಿ ಕೇಳಿದಾಗ ಮೂರು ಒಪ್ಪಂದಗಳನ್ನು ಮಾಡಿಕೊಂಡ ಭೂವರಹ ಸ್ವಾಮಿಯು ವೆಂಕಟೇಶ್ವರ ಅವರಿಗೆ ಅನುಮತಿ ಕೊಟ್ಟಿದ್ದರು ಎಂದು ಉಲ್ಲೇಖ ಇದೆ. ಆ ಒಪ್ಪಂದ ಪತ್ರವು ಈಗ ಟಿಟಿಡಿ ವಸ್ತು ಸಂಗ್ರಹಾಲಯದಲ್ಲಿದ್ದು ಅಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬರೂ ಕೂಡ ನೋಡಬಹುದಾಗಿದೆ.
ಈ ಒಪ್ಪಂದದ ಪ್ರಕಾರ ತಿರುಪತಿಯಲ್ಲಿ ನಡೆಯುವ ಪ್ರಥಮ ಪೂಜೆ, ಪ್ರಥಮ ನೈವೇದ್ಯ ವರಹನಾಥ ಸ್ವಾಮಿಗೆ ಮತ್ತು ತನ್ನನ್ನು ಕಾಣಬಯಸುವ ಭಕ್ತಾದಿಗಳು ಮೊದಲಿಗೆ ವರಹನಾಥ ಸ್ವಾಮಿಯಾದ ನಿನ್ನನ್ನು ದರ್ಶನ ಮಾಡುತ್ತಾರೆ ಎಂದು ವೆಂಕಟೇಶ್ವರ ಸ್ವಾಮಿ ವಚನ ಕೊಟ್ಟಿದ್ದರಂತೆ. ಆದರೆ ಪೂಜೆ ಹಾಗೂ ನೈವೇದ್ಯದ ವಿಚಾರದಲ್ಲಿ ಇಂದಿಗೂ ಇದೆ ನಿಯಮ ನಡೆಯುತ್ತಿದೆ. ಭಕ್ತಾದಿಗಳಿಗೆ ಈ ವಿಷಯ ತಿಳಿಯದ ಕಾರಣ ಅವರು ಮೊದಲಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಿಲ್ಲುತ್ತಿದ್ದಾನೆ.
ವರ್ಷಗಳ ಬಳಿಕ ಈ ತಪ್ಪನ್ನು ತಿದ್ದುವ ಕಾರಣದಿಂದಾಗಿ ಭೂವರಹನಾಥ ಸ್ವಾಮಿ ದರ್ಶನ ಮಾಡದೆ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಲು ಹೋಗುವರಿಗೆ ಸಮಸ್ಯೆ ಆಗದೆ ಇರಲಿ ಎಂದು ವೆಂಕಟೇಶ್ವರ ಸ್ವಾಮಿಯ ಗರ್ಭಗುಡಿ ತಲುಪುವ ಮುನ್ನ ಸಿಗುವ ಗರುಡ ಕಂಬದ ಹಿಂದೆಯೇ ಭೂವರಹನಾಥ ಸ್ವಾಮಿಯ ವಿಗ್ರಹವನ್ನು ಕೂಡ ಕೆತ್ತಲಾಗಿದೆ ಅದನ್ನು ದರ್ಶನ ಮಾಡಿಕೊಂಡು ಬೇಕಾದರೂ ಭಕ್ತಾದಿಗಳು ವೆಂಕಟೇಶ್ವರ ದರ್ಶನಕ್ಕೆ ಹೋಗಬಹುದು. ಇದೇ ರೀತಿಯ ಇನ್ನು ಮೂರು ತಪ್ಪುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.