ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಬಟ್ಟೆಯನ್ನು ವಾಷಿಂಗ್ ಮಷೀನ್ ಗೆ ಹಾಕಿ ಬಟ್ಟೆಯನ್ನು ಒಗೆಯುತ್ತಿದ್ದಾರೆ ಆದರೆ ವಾಷಿಂಗ್ ಮಷೀನ್ ನಲ್ಲಿ ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಇಲ್ಲವಾದರೆ ಬಟ್ಟೆಗಳು ಹಾಳಾಗುವ ಸನ್ನಿವೇಶಗಳು ಇರುತ್ತದೆ.
ಅದೇನೆಂದರೆ ಹಿಂದಿನ ದಿನವೇ ಬಟ್ಟೆಯನ್ನು ನೆನೆ ಹಾಕಿ ಆನಂತರ ಬೆಳಗ್ಗೆ ಆ ಬಟ್ಟೆಯನ್ನು ಒಗೆಯುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಬಟ್ಟೆಗಳಲ್ಲಿ ತೂತು ಕಾಣಿಸಿಕೊಳ್ಳುತ್ತದೆ ಕೆಲವೊಮ್ಮೆ ಬಟ್ಟೆ ಹರಿದು ಹೋಗುತ್ತದೆ ಹಾಗಾಗಿ ಇಂತಹ ವಿಧಾನಗಳನ್ನು ಅನುಸರಿಸಬಾರದು ಬದಲಿಗೆ ಬಟ್ಟೆ ಒಗೆಯುವ ಸಮಯದಲ್ಲಿ ಮಾತ್ರ ಬಟ್ಟೆಯನ್ನು ನೆನೆ ಹಾಕಿ ಬಟ್ಟೆಯನ್ನು ಒಗೆಯುವು ದರಿಂದ ಬಟ್ಟೆಗಳು ಹಾಳಾಗುವುದಿಲ್ಲ ಹಾಗೂ ಹೆಚ್ಚಿನ ದಿನ ಬಟ್ಟೆ ಬಾಳಿಕೆಗೆ ಬರುತ್ತದೆ.
ಇನ್ನು ಕೆಲವೊಂದಷ್ಟು ಜನ ಕೊಳೆಯಾಗಿರುವಂತಹ ಬಟ್ಟೆಗಳನ್ನು ಒಗೆಯುವುದಕ್ಕೆ ಬಿಸಿ ನೀರಿನಲ್ಲಿ ಸರ್ಫ್ ಎಕ್ಸೆಲ್ ಪೌಡರ್ ಹಾಕಿ ರಾತ್ರಿ ನೆನೆ ಹಾಕಿ ಬೆಳಗ್ಗೆ ಒಗೆಯುತ್ತಾರೆ ಈ ರೀತಿ ಮಾಡುವುದರಿಂದಲೂ ಕೂಡ ಬಟ್ಟೆಗಳಲ್ಲಿ ತೂತು ಕಾಣಿಸಿಕೊಳ್ಳುತ್ತದೆ ಹಾಗೂ ಬಟ್ಟೆ ಬೇಗನೆ ಹಾಳಾಗುತ್ತದೆ.
ಹಾಗಾದರೆ ಈ ದಿನ ಈ ರೀತಿಯ ಸಂದರ್ಭದಲ್ಲಿ ಹರಿದಿರುವಂತಹ ಬಟ್ಟೆಗಳಾಗಿರಬಹುದು ತೂತಾಗಿರುವಂತಹ ಬಟ್ಟೆಗಳನ್ನು ಹೇಗೆ ಮತ್ತೆ ಸರಿಪಡಿಸಬಹುದು ಯಾವ ವಿಧಾನವನ್ನು ಅನುಸರಿಸುವುದರಿಂದ ಈ ಒಂದು ಸಮಸ್ಯೆಗೆ ನಾವು ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.
ಸಾಮಾನ್ಯವಾಗಿ ಟೈಲರಿಂಗ್ ಅಂಗಡಿಗಳಲ್ಲಿ ನಿಮಗೆ ಬಕ್ರಂ ಪೇಪರ್ ಎನ್ನುವುದು ಸಿಗುತ್ತದೆ ಇದು ಇದ್ದರೆ ಸಾಕು ನಿಮ್ಮ ಬಟ್ಟೆಗಳನ್ನು ಸರಿಪಡಿಸಿಕೊಳ್ಳ ಬಹುದು. ಅದು ಹೇಗೆ ಎಂದು ಈ ಕೆಳಗೆ ತಿಳಿಯೋಣ. ಮೊದಲು ತೂತಾಗಿರುವ ಬಟ್ಟೆಯನ್ನು ತೆಗೆದುಕೊಳ್ಳಬೇಕು ಆನಂತರ ಪೇಪರ್ ಅನ್ನು ತೆಗೆದು ಕೊಳ್ಳಬೇಕು ಅದರಲ್ಲಿ ನುಣುಪಾಗಿರುವಂತಹ ಭಾಗವನ್ನು ಮೇಲಕ್ಕೆ ಮಾಡಿ.
ಅದನ್ನು ತೂತಾಗಿರುವಂತಹ ಬಟ್ಟೆಯ ಕೆಳಭಾಗಕ್ಕೆ ಇಟ್ಟು ಬಟ್ಟೆಯನ್ನು ಸ್ವಲ್ಪ ಹತ್ತಿರಕ್ಕೆ ಇಟ್ಟು ಸಣ್ಣ ಪ್ರಮಾಣದಲ್ಲಿ ಆ ಒಂದು ಸ್ಥಳಕ್ಕೆ ಐರನ್ ಮಾಡಬೇಕು ಈ ರೀತಿ ಮಾಡುವುದರಿಂದ ಆ ಒಂದು ಬಕ್ರo ಪೇಪರ್ ಬಟ್ಟೆಯನ್ನು ಮೊದಲಿನ ಸ್ಥಿತಿಗೆ ತರುತ್ತದೆ. ಈ ವಿಧಾನವನ್ನು ಅನುಸರಿ ಕೊಳ್ಳುವುದರಿಂದ ಈ ಸಮಸ್ಯೆಗಳನ್ನು ನೀವು ಬಗೆಹರಸಿಕೊಳ್ಳಬಹುದು ಅದೇ ರೀತಿಯಾಗಿ ನಿಮಗೆ ಇಷ್ಟವಾಗಿರುವಂತಹ ಬಟ್ಟೆ ಸ್ವಲ್ಪವಾಗಿ ಹರಿದಿದ್ದರೆ.
ಆ ಒಂದು ಸ್ಥಳಕ್ಕೂ ಕೂಡ ಇದೇ ವಿಧಾನವನ್ನು ಅನುಸರಿಸುವುದರಿಂದ ಹರಿದಿರುವಂತಹ ಬಟ್ಟೆಯನ್ನು ಸಹ ಸರಿಪಡಿಸಿಕೊಳ್ಳಬಹುದು.
ಈ ಒಂದು ಬಕ್ರಂ ಪೇಪರ್ ಇಡುವಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಗಮನಿಸಬೇಕಾಗಿರುವಂತಹ ಅಂಶ ಏನು ಎಂದರೆ ಬಕ್ರಮ್ ಪೇಪರ್ ನಲ್ಲಿ ನುಣುಪಾಗಿರುವಂತಹ ಭಾಗವು ಮೇಲಕ್ಕೆ ಬರಬೇಕು ಅದರಲ್ಲಿ ಒಂದು ರೀತಿಯ ಗಂ ಅಂಶ ಇರುತ್ತದೆ.
ಇದರಿಂದ ಬಟ್ಟೆ ಸರಿಪಡಿಸುವು ದಕ್ಕೆ ಸಾಧ್ಯವಾಗುತ್ತದೆ ಹಾಗೇನಾದರೂ ನೀವು ಅದನ್ನು ಸರಿಯಾಗಿ ಇಟ್ಟಿಲ್ಲ ಎಂದರೆ ಈ ರೀತಿ ಬಟ್ಟೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಈ ಒಂದು ವಿಷಯವನ್ನು ತಿಳಿದು ಕೊಂಡು ಇದರ ಬಗ್ಗೆ ಗಮನವಹಿಸಿ ಆನಂತರ ನಿಮ್ಮ ಬಟ್ಟೆಯನ್ನು ಸರಿಪಡಿಸಿಕೊಳ್ಳುವುದು ಉತ್ತಮ.
ಈ ರೀತಿ ಮಾಡುವುದರಿಂದ ಹಾಳಾಗಿರುವಂತಹ ಬಟ್ಟೆಯನ್ನು ಸುಲಭವಾಗಿ ಸರಿಪಡಿಸಬಹುದು ಅದನ್ನು ಆಚೆ ಬಿಸಾಡುವ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣಕಾಸು ಅವಶ್ಯಕತೆ ಇರುವುದಿಲ್ಲ. ಬಕ್ರಂ ಪೇಪರ್ ನಿಮಗೆ ಸಿಗಲಿಲ್ಲ ಎಂದರೆ ಆನ್ಲೈನ್ ನಲ್ಲಿ ಇದನ್ನು ನೀವು ಬುಕ್ ಮಾಡಿ ತರಿಸಿಟ್ಟುಕೊಂಡು ಇಂತಹ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳ ಬಹುದು.