ನಮ್ಮ ನಾಡಿನಲ್ಲಿ ಹಬ್ಬವೆಂದರೆ ಸಂಭ್ರಮ ಸಡಗರದಿಂದ ತುಂಬಿರುತ್ತದೆ, ಅದರಲ್ಲೂ ನಮ್ಮ ಹಿಂದೂ ಸಾಂಪ್ರದಾಯಿಕ ಹಬ್ಬಗಳೆಂದರೆ ವಿಶಿಷ್ಟ ವಿಭಿನ್ನಗಳಿಂದ ಕೂಡಿರುತ್ತದೆ. ಅವುಗಳಿಗೆ ಪುರಾಣದಲ್ಲಿ ನಿರ್ದಿಷ್ಟವಾದ ಕಾರಣಗಳು ಇವೆ, ನಾಡಿನ ಸಮಸ್ತ ಜನಗಳ ಮನೆಗಳಲ್ಲೂ ಬಾಗಲಿಗೆ ತೋರಣ, ಬಾಳೆ ಕಂದುಗಳು, ಮನೆಯ ಮುಂದೆ ರಂಗು ರಂಗಿನ ರಂಗೋಲಿ ಎಲ್ಲವೂ ಕಣ್ಣಿಗೆ ಆನಂದ ತಂದು ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಹಬ್ಬವು ಖುಷಿಯಿಂದ ಕೂಡಿದ್ದು ಎಲ್ಲರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮನ್ನು ಅಲಂಕರಿಸಿಕೊಂಡು ಬಂಧು-ಮಿತ್ರರ ಜೊತೆಯಲ್ಲಿ ಒಟ್ಟಾಗಿ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಆಚರಿಸುವ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬವು ಒಂದಾಗಿದೆ.
ಗೌರಿ ಹಬ್ಬವು ಪಾರ್ವತಿ ದೇವಿಯ ಗೌರಿ ಅವತಾರಕ್ಕೆ ಸಮರ್ಪಿತವಾದ ಹಿಂದೂ ಹಬ್ಬವಾಗಿದೆ, ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ಹಬ್ಬವನ್ನು ಗಣೇಶ ಚತುರ್ಥಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಗೌರಿ ಹಬ್ಬವನ್ನು ಸ್ವರ್ಣಗೌರಿ ಹಬ್ಬವೆಂದೂ ಕರೆಯಲಾಗುತ್ತದೆ, ಗೌರಿ ಹಬ್ಬ ದಿನದಂದು ಗೌರಿ ದೇವಿಯನ್ನು ಪೂಜಿಸಲಾಗುತ್ತದೆ, ಗೌರಿಯು ಪಾರ್ವತಿ ದೇವಿಯ ಅತ್ಯಂತ ಸುಂದರವಾದ ಮೈಬಣ್ಣದ ಅವತಾರವಾಗಿದೆ. ಈ ಪವಿತ್ರ ಹಬ್ಬದಂದು ಸಂತೋಷದ ವೈವಾಹಿಕ ಜೀವನಕ್ಕಾಗಿ ಗೌರಿ ದೇವಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಈ ದಿನ ಇತರ ಸಾಮಾನ್ಯ ವಿವಾಹಿತ ಮಹಿಳೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುವಂತೆ ಗೌರಿ ದೇವಿಯು ಮನೆಗೆ ಬರುತ್ತಾಳೆ ಎಂದು ನಂಬಲಾಗಿದೆ.
ಮರುದಿನ ಮಾತೆ ಗೌರಿಯನ್ನು ಕೈಲಾಸ ಪರ್ವತಕ್ಕೆ ಕರೆದುಕೊಂಡು ಹೋಗುವಂತೆ ಅವಳ ಮಗ ಗಣೇಶನು ಬರುತ್ತಾನೆ. ಈ ದಿನದಂದು ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಹದಿನಾರು ರೀತಿಯ ಶೃಂಗಾರವನ್ನು ಮಾಡಿಕೊಂಡು ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುತ್ತಾರೆ. ಈ ದಿನ ಮಹಿಳೆಯರು ಪಾರ್ವತಿ ದೇವಿಗೆ ಸುಮಂಗಲಿಯರು ಬಳಸುವ ವಸ್ತುಗಳನ್ನು ಅರ್ಪಿಸುತ್ತಾರೆ. ಈ ವಿಶಿಷ್ಟವಾದ ಗೌರಿ ಗಣೇಶ ಹಬ್ಬದಂದು ಮೋದಕವು ಗಣೇಶನಿಗೆ ಬಹಳ ಪ್ರಿಯವಾದ ತಿಂಡಿ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಕೂಡ ಸೋಶಿಯಲ್ ಮೀಡಿಯಾ ದಲ್ಲಿ ಆಚರಣೆಗಳನ್ನು ಜೋರಾಗಿ ಆಚರಿಸಲಾಗುತ್ತದೆ. ಚಲನಚಿತ್ರ ನಟ ನಟಿಯರು ಹಾಗೂ ಸೋಶಿಯಲ್ ಮೀಡಿಯಾದ ಪ್ರಮುಖ ಕಲಾವಿದರು ಇವರೆಲ್ಲರೂ ತಮ್ಮ ಮನೆಯ ಹಬ್ಬದ ಆಚರಣೆಗಳನ್ನು ಮೀಡಿಯಾಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ.
ಈ ಬಾರಿ ಪ್ರಮುಖ ನಟ ನಟಿಯರ ಪೈಕಿ ಹಬ್ಬವನ್ನು ಆಚರಿಸುವಲ್ಲಿ ನಮ್ಮ ಕನ್ನಡ ಚಿತ್ರರಂಗ ಸೇರಿ ಕಿರುತೆರೆಯಲ್ಲೂ ಸಹ ಸಾಕಷ್ಟು ಬಾರಿ ಅಭಿನಯಿಸಿರುವ ನಟಿ ಸುಧಾರಣೆಯವರು ಇದ್ದಾರೆ. ಅವರ ಮನೆಯಲ್ಲಿ ಗೌರಿ ಗಣೇಶದ ಹಬ್ಬವು ಜೋರಾಗಿದ್ದು, ತಮ್ಮ ಮನೆಯ ಗೌರಿಯ ಮುಂದೆ ಮಗಳು ಕುಳಿತಿರುವ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ನಾಡಿನ ಸಮಸ್ತ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸುಧಾರಣೆಯವರ ಮಗಳು ಸಾಂಪ್ರದಾಯಕ ಉಡುಪುಗಳಿಂದ ತುಂಬಾ ಮುದ್ದಾಗಿ ಕಂಡಿದ್ದು, ಆ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಅವರ ಕುಟುಂಬದೊಡನೆ ಸಂಭ್ರಮ ಆಚರಣೆಯ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ಸಹ ತಮ್ಮ ಪತಿಯ ಜೊತೆಗೆ ನಿಂತು ಹಸಿರು ಸೀರೆಯಿಂದ ಕಂಗೊಳಿಸುತ್ತಾ, ತಮ್ಮ ಮನೆಯ ಗೌರಿ ಬಳಿ ನಿಂತಿರುವ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಹಬ್ಬವನ್ನು ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸಿದ್ದಾರೆ.