Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪರ್ಸ್ ಅಥವಾ ಬ್ಯಾಗ್ ನಲ್ಲಿ ಈ ವಸ್ತು ಇಡುವುದರಿಂದ ದುಡ್ಡಿನ ಸಮಸ್ಯೆ ದೂರ ಆಗಿ ಸಂಪಾದನೆ ಹೆಚ್ಚಾಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.

Posted on May 11, 2023February 4, 2025 By Kannada Trend News No Comments on ಪರ್ಸ್ ಅಥವಾ ಬ್ಯಾಗ್ ನಲ್ಲಿ ಈ ವಸ್ತು ಇಡುವುದರಿಂದ ದುಡ್ಡಿನ ಸಮಸ್ಯೆ ದೂರ ಆಗಿ ಸಂಪಾದನೆ ಹೆಚ್ಚಾಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.

 

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್, ಡಿಜಿಟಲ್ ವ್ಯವಹಾರ ಇವೆಲ್ಲ ರೂಢಿ ಆಗಿರುವುದರಿಂದ ಪರ್ಸ್, ಬ್ಯಾಗಗಳಲ್ಲಿ ದುಡ್ಡು ಇಟ್ಟುಕೊಳ್ಳುವ ಅಭ್ಯಾಸವೇ ರೂಢಿ ತಪ್ಪಿ ಹೋಗಿದೆ. ಆದರೂ ಕೂಡ ಆಪತ್ಕಾಲಕ್ಕೆ ಎಂದುಕೊಂಡಾದರೂ ಅಥವಾ ಲಕ್ಷ್ಮಿ ತಾಯಿಯ ಅನುಗ್ರಹ ಆಗಲಿ ಎನ್ನುವ ಕಾರಣಕ್ಕಾಗಾದರೂ ಪರ್ಸಲ್ಲಿ ಹಣ ಇಟ್ಟುಕೊಂಡಿರಲೇಬೇಕು.

ಈ ರೀತಿ ಪರ್ಸನಲ್ ಹಣ ಇಟ್ಟುಕೊಳ್ಳುವ ವಿಧಾನದಿಂದ ಕೂಡ ಲಕ್ಷ್ಮಿ ದೇವಿ ಅನುಗ್ರಹ ಪಡೆದು ಹಣ ಹೆಚ್ಚಾಗುವಂತೆ ಮಾಡಬಹುದು. ಪರ್ಸ್ ಗಳು ಮತ್ತು ಹ್ಯಾಂಡ್ ಬ್ಯಾಗ್ಗಳಲ್ಲೂ ಕೂಡ ಹಣ ಇಡುವುದರಿಂದ ಅದು ಸಹ ತಾಯಿಯ ವಾಸಸ್ಥಾನಕ್ಕೆ ಸಮ. ಅಲ್ಲಿ ಇಷ್ಟ ಬಂದದ್ದನ್ನೆಲ್ಲಾ ಇಡುವ ಹಾಗಿಲ್ಲ ,ಕೆಲವು ವಸ್ತುಗಳಿಗೆ ಅಷ್ಟೇ ಅಲ್ಲಿ ಜಾಗ ಇರಬೇಕು. ಆ ರೀತಿ ಪಾಲಿಸಿದರೆ ಶೀಘ್ರವಾಗಿ ತಾಯಿ ಆಶೀರ್ವಾದ ದೊರೆತು ಇನ್ನು ಹೆಚ್ಚಿನ ಹಣ ಆಕರ್ಷಣೆ ಉಂಟಾಗುತ್ತದೆ.

ಪರ್ಸಿನಲ್ಲಿ ಕೆಲವರು ಸಿಕ್ಕಸಿಕ್ಕ ವಸ್ತುಗಳನೆಲ್ಲ ಹಾಕಿಕೊಳ್ಳುತ್ತಾರೆ. ಹಣ, ಕೀಗಳು, ಚೀಟಿಗಳು ಇನ್ನಿತರ ಯಾವುದೋ ಬಳಕೆ ಆಗದ ವಸ್ತುಗಳು, ಬೇಕಾಗಿರುವ ವಸ್ತುಗಳು ಎಲ್ಲವನ್ನು ಒಟ್ಟಿಗೆ ಹಾಕಿ ಒಂದನ್ನು ತೆಗೆದುಕೊಳ್ಳಲು ಹೋಗಿ ಮತ್ತೊಂದನ್ನು ಕೆಳಗೆ ಬೀಳಿಸುತ್ತಿರುತ್ತಾರೆ. ಇದೊಂದು ಅಸಂಬದ್ಧ ವಿಧಾನ, ಈ ರೀತಿ ಇದ್ದರೆ ಖಂಡಿತವಾಗಿಯೂ ಹಣದ ಆಕರ್ಷಣೆ ಮಾಡುವ ಶಕ್ತಿ ಆ ಪರ್ಸ್ ಗೆ ಇರುವುದಿಲ್ಲ.

ಪರ್ಸ್, ಬ್ಯಾಗ್ ಎಷ್ಟು ಅಚ್ಚುಕಟ್ಟಾಗಿ ಇರುತ್ತದೆಯೋ ಅಷ್ಟೇ ಶಕ್ತಿಯು ಆ ಪರ್ಸ್ಗೆ ಇರುತ್ತದೆ. ಹಾಗಾಗಿ ಎಲ್ಲಕ್ಕೂ ಒಂದು ಸಪರೇಟ್ ವ್ಯವಸ್ಥೆ ಮಾಡಿ ದಿನನಿತ್ಯಕ್ಕೆ ಬೇಕಾದ ವಸ್ತುಗಳನ್ನು ಒಂದು ಕಡೆ ಇಡಿ. ಬೇಡದ ವಸ್ತುಗಳನ್ನು ಯಾವುದನ್ನೂ ಸಹ ಪರ್ಸಲ್ಲಿ ಇಡಬೇಡಿ. ಜೊತೆಗೆ ಹಾಗಾಗಿ ನಿಮ್ಮ ಪರ್ಸ್ ಮತ್ತು ಹ್ಯಾಂಡ್ ಬ್ಯಾಗ್ ಗಳನ್ನು ಕ್ಲೀನ್ ಮಾಡುತ್ತಿರಿ ಮತ್ತು ಈ ವಸ್ತುಗಳನ್ನು ಇಡುವುದನ್ನು ಮರೆಯಬೇಡಿ.

ಯಾಕೆಂದರೆ ಈ ವಸ್ತುಗಳಿಗೆ ಧನಾಕರ್ಷಣೆ ಮಾಡುವ ಶಕ್ತಿ ಇರುತ್ತದೆ. ಹಿರಿಯರು ಉಡುಗೊರೆ ರೂಪದಲ್ಲಿ ಕೊಟ್ಟ ಹಣ ಪರ್ಸಲ್ಲಿ ಇಡಬೇಕು, ನಮ್ಮ ಹಿರಿಯರು ನಮಗೆ ಆಶೀರ್ವಾದ ಮಾಡಿ ಅವರ ಕೈಯಿಂದ ಆದಷ್ಟು ಪ್ರೀತಿಯಿಂದ ಹಣವನ್ನು ಕೊಟ್ಟಿರುತ್ತಾರೆ. ಅಂತಹ ಹಣವನ್ನು ಸಾಧ್ಯವಾದಷ್ಟು ಖರ್ಚು ಮಾಡದೆ ಇಟ್ಟುಕೊಳ್ಳಬೇಕು. ಒಂದು ರೂಪಾಯಿ ನಾಣ್ಯ ಅಥವಾ ಇಪ್ಪತ್ತು ರೂಪಾಯಿ ನೋಟುಗಳನ್ನು ಯಾವಾಗಲೂ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು, ಆದರೆ ಯಾವುದೇ ಕಾರಣಕ್ಕೂ ಇವುಗಳನ್ನು ಖರ್ಚು ಮಾಡಬಾರದು.

ಹಣದ ಒಡತಿ ಆದ ಲಕ್ಷ್ಮಿ ದೇವಿಯ ಫೋಟೋ ಕೂಡ ಚಿಕ್ಕದಾಗಿದ್ದರೂ ಪರವಾಗಿಲ್ಲ ಇಟ್ಟುಕೊಂಡಿರಬೇಕು, ಇದರಿಂದ ಲಕ್ಷ್ಮಿ ಆಶೀರ್ವಾದ ದೊರೆಯುತ್ತದೆ. ಬೆಳ್ಳಿ ನಾಣ್ಯವನ್ನು ಕೂಡ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು. ಆರು ಹಳದಿ ಬಣ್ಣದ ಕವಡೆಗಳನ್ನು ಕೂಡ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಮತ್ತು 21 ಅಕ್ಕಿ ಕಾಳುಗಳನ್ನು ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಿ ಅದನ್ನು ಒಂದು ಕಾಗದದಲ್ಲಿ ಅಥವಾ ಪೌಚ್ ಅಲ್ಲಿ ಹಾಕಿಕೊಂಡು ಅದನ್ನು ಸಹ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು.

ಇದರಿಂದ ಬಹಳ ಒಳ್ಳೆಯದಾಗುತ್ತದೆ. ಕಮಲದ ಹೂ ಲಕ್ಷ್ಮಿ ದೇವಿಗೆ ಇಷ್ಟವಾದ ಹೂ ಆಗಿರುವ ಕಾರಣ ಕಮಲದ ಬೀಜಗಳಿಗೂ ಕೂಡ ಹಣ ಆಕರ್ಷಣೆ ಮಾಡುವ ಶಕ್ತಿ ಇರುತ್ತದೆ ಇವುಗಳನ್ನು ಬೆಸ ಸಂಖ್ಯೆಯಲ್ಲಿ ಇಟ್ಟುಕೊಳ್ಳಬೇಕು. ಇದರ ಜೊತೆ ಒಂದು ಅರಳಿ ಮರದ ಎಲೆಯನ್ನು ಸ್ವಚ್ಛವಾಗಿ ತೊಳೆದು ಅದರಲ್ಲಿ ಕೇಸರಿ ಯಿಂದ ಶ್ರೀ ಎಂದು ಬರೆದು ಅದನ್ನು ಸಹ ಇಟ್ಟು ಕೊಳ್ಳಬೇಕು ಇದೆಲ್ಲವನ್ನು ಇಟ್ಟುಕೊಳ್ಳುವುದರಿಂದ ಖಂಡಿತವಾಗಿಯೂ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ದೀರ್ಘಕಾಲದ ವರೆಗೆ ನಿಮಗೆ ಹಣದ ಹೊಳೆಯೇ ಹರಿದು ಬರುತ್ತದೆ. ಆದರೆ ಈ ಎಲ್ಲಾ ಆಚರಣೆ ಮಾಡಿದ ಬಳಿಕ ನೀವು ಅಷ್ಟೇ ಶ್ರಮದಿಂದ ನಿಮ್ಮ ಕೆಲಸ ಕಾರ್ಯಗಳನ್ನು ಕೂಡ ಮಾಡಬೇಕು, ಜೊತೆಗೆ ಸದಾ ನಗುನಗುತ್ತ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬಳಸಿಕೊಂಡು ಹಸನ್ಮುಖಿ ಆಗಿರಬೇಕು. ಸದಾ ಒಳ್ಳೆಯತನದ ಬಗ್ಗೆ ಯೋಚನೆ ಮಾಡುತ್ತಾ ಸಕರಾತ್ಮಕವಾಗಿ ಬದುಕಿದರೆ ಖಂಡಿತ ಧನಾಕರ್ಷಣೆ ಉಂಟಾಗುತ್ತದೆ.

Devotional
WhatsApp Group Join Now
Telegram Group Join Now

Post navigation

Previous Post: ಮಹಿಳೆಯರು ತಾಳಿಯ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ. ಗಂಡನ ಆಯಸ್ಸು, ಶ್ರೇಯಸ್ಸು ಇದರಲ್ಲಿಯೇ ನಿರ್ಧಾರವಾಗುವುದು.!
Next Post: ಹುಟ್ಟಿದ ದಿನಾಂಕದ ಮೂಲಕವೇ ನಿಮ್ಮ ವಿವಾಹ ಯಾವಾಗ ಆಗುತ್ತದೆ ಎಂದು ತಿಳಿದುಕೊಳ್ಳಬಹುದು ಹೇಗೆ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore