ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವು ಹಿಂದಿಯಲ್ಲಿ ಅಮಿತಾ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ಕೌನ್ ಬನೆಗ ಕರೊಡ್ಪತಿ ರೀತಿಯಲ್ಲೇ ನಡೆಯುವ ಕನ್ನಡದ ರಿಯಾಲಿಟಿ ಶೋ. ಈ ಕಾರ್ಯಕ್ರಮವು ಈಗಾಗಲೇ ಸಕ್ಸಸ್ ಫುಲ್ ಆಗಿ ನಾಲ್ಕು ಸೀಸನ್ ಗಳನ್ನು ಕನ್ನಡದಲ್ಲಿ ಮುಗಿಸಿದೆ. ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮವು ನಂತರ ಕಲರ್ಸ್ ಕನ್ನಡ ವಾಹಿನಿ ಮೂಲಕ ತೆರೆಕಾಣಲು ಶುರುವಾಯಿತು. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಇದರ ನಾಲ್ಕು ಸೀಸನ್ ಗಳನ್ನು ಪುನೀತ್ ರಾಜಕುಮಾರ್ ಅವರು ಅತ್ಯಂತ ಸರಳ, ಸೌಮ್ಯ ಹಾಗೂ ಸುಂದರವಾಗಿ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮವನ್ನು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಗೃಹಿಣಿಯರು ಸೇರಿದಂತೆ ಕಾಲೇಜು ಮಕ್ಕಳು, ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ಎಲ್ಲರೂ ಸಹ ನೋಡುತ್ತಿದ್ದರು. ಈ ರೀತಿಯಾಗಿ ಮನೆಮಂದಿಯಲ್ಲಾ ಟಿವಿ ಮುಂದೆ ಕುಳಿತು ನೋಡಬಹುದಾದ ಕಾರ್ಯಕ್ರಮವಾಗಿತ್ತು ಇದು.
ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಹಲವು ಹಂತಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು ಹಾಗೂ ಪ್ರತಿ ಹಂತಕ್ಕೆ ಅವರಿಗೆ ಒಂದೊಂದು ಮೊತ್ತದ ಹಣವನ್ನು ಬಹುಮಾನವಾಗಿ ಕೊಡಲಾಗುತ್ತಿತ್ತು. ಒಟ್ಟು ಇದರಲ್ಲಿ 15 ಪ್ರಶ್ನೆಗಳು ಇರಲಿದ್ದು, ಕೊನೆಯ 15ನೇ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದವರು ಒಂದು ಕೋಟಿ ಹಣವನ್ನು ಗೆಲ್ಲುತ್ತಿದ್ದರು. ಕನ್ನಡದಲ್ಲಿ ಈ ಕಾರ್ಯಕ್ರಮದ ಎರಡನೇ ಆವೃತ್ತಿಯಲ್ಲಿ ಹುಸೇನ್ ಬಾಷಾ ಎನ್ನುವವರು ಒಂದು ಕೋಟಿ ಹಣವನ್ನು ಗೆದ್ದು ದಾಖಲೆ ಮಾಡಿದ್ದರು ಹಾಗೂ ಇದುವರೆಗೂ ಈ ದಾಖಲೆಯನ್ನು ಮುರಿಯಲು ಯಾರಿಗೂ ಸಹಾ ಸಾಧ್ಯವಾಗಿಲ್ಲ. 2013ರ ಏಪ್ರಿಲ್ 28 ಹಾಗೂ 29ನೇ ತಾರೀಕಿನಂದು ಈ ಎಪಿಸೋಡ್ ಗಳು ಪ್ರಸಾರವಾಗಿದ್ದವು. ಈ ಕಾರ್ಯಕ್ರಮದಲ್ಲಿ ಕೇಳಲಾಗುವ ಪ್ರಶ್ನೆಗಳು ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ ಎನ್ನುವ ಕಾರಣದಿಂದಲೂ ಹಾಗೂ ಈ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ್ ಅವರು ಅಷ್ಟು ಅದ್ಭುತವಾಗಿ ನಡೆಸಿಕೊಡುವ ಕಾರಣದಿಂದ ಜನರು ಈ ಕಾರ್ಯಕ್ರಮವನ್ನು ಅಷ್ಟು ಮೆಚ್ಚಿದ್ದರು.
ಇದರ ಜೊತೆ ಈ ಕಾರ್ಯಕ್ರಮಕ್ಕೆ ಬರುವ ಜನರ ಬಗ್ಗೆ ತಿಳಿದುಕೊಳ್ಳಲು ಅವರ ಜೊತೆ ಪುನೀತ್ ರಾಜಕುಮಾರ್ ಅವರು ಸ್ಪಂದಿಸುವ ರೀತಿಯನ್ನು ನೋಡಲು ಈ ಎಲ್ಲಾ ಕಾರಣಗಳಿಂದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಹೆಚ್ಚಾಗಿ ಜನರು ನೋಡುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರು ಈ ಕಾರ್ಯಕ್ರಮದ ನಂತರ ಫ್ಯಾಮಿಲಿ ಪವರ್ ಎನ್ನುವ ರಿಯಾಲಿಟಿ ಶೋ ಅನ್ನು ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದರು. ಅದು ಕೂಡ ಒಂದು ಕುಟುಂಬದ 5 ಮಂದಿ ಭಾಗವಹಿಸುವ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮವೂ ಸಹ ಕನ್ನಡ ಜನರ ಮೆಚ್ಚುಗೆ ಪಡೆದಿತ್ತು ಹಾಗೂ. ಮನೆಮಂದಿ ಎಲ್ಲರೂ ಕೂತು ನೋಡಬಹುದಾದ ಕಾರ್ಯಕ್ರಮವಾದ ಕಾರಣ ಅತಿ ಹೆಚ್ಚು ಜನರು ಈ ಕಾರ್ಯಕ್ರಮವನ್ನು ನೋಡುತ್ತಿದ್ದರು. ಇದೆಲ್ಲವನ್ನು ನೋಡಿ ಪುನೀತ್ ರಾಜಕುಮಾರ್ ಅವರನ್ನು ನಮ್ಮ ಕನ್ನಡದ ಜನರು ಅವರ ಮನೆ ಮಗ ಎಂದೇ ಭಾವಿಸಿದ್ದರು.
ಆದರೆ ವಿಧಿ ಅವರನ್ನು ತುಂಬಾ ಬೇಗ ನಮ್ಮೆಲ್ಲರಿಂದ ದೂರ ಮಾಡಿದ್ದು ಈ ಕಾರ್ಯಕ್ರಮವನ್ನು ಈಗ ನಡೆಸಿಕೊಡುವವರು ಯಾರು ಎನ್ನುವ ಗೊಂದಲ ಎಲ್ಲರಿಗೂ ಇದೆ. ಸದ್ಯಕ್ಕೆ ಈಗ ಕನ್ನಡದ ಕೋಟ್ಯಾಧಿಪತಿಯ ಐದನೇ ಆವೃತ್ತಿಯ ತಯಾರಿ ನಡೆಯುತ್ತಿದ್ದು ಕೆಲವು ಮೂಲಗಳಿಂದ ಶಿವರಾಜಕುಮಾರ್ ಅಥವಾ ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗೆಯೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಡೆಸಿಕೊಟ್ಟು ಗೆದ್ದಿರುವ ರಮೇಶ್ ಅರವಿಂದ್ ಅವರೇ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎನ್ನುವ ವದಂತಿಗಳು ಕೂಡ ಎಲ್ಲೆಡೆ ಹಬ್ಬಿದೆ. ಈ ಕಾರ್ಯಕ್ರಮವನ್ನು ಮುಂದೆ ಯಾರೆ ನಡೆಸಿಕೊಟ್ಟರು ಕನ್ನಡದ ಜನತೆ ಮಾತ್ರ ಪುನೀತ್ ರಾಜಕುಮಾರ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನೀವೇನಾದರೂ ಅಪ್ಪು ಅಭಿಮಾನಿಗಳಾಗಿದ್ದರೆ ಅಪ್ಪು ಅಂತ ಕಾಮೆಂಟ್ ಮಾಡಿ