ಪರಿಶುದ್ಧವಾದ ಪ್ರೀತಿಗೆ ಜಾತಿ, ಧರ್ಮ, ಹಣ, ಅಂತಸ್ತು, ದೇಶ, ಗಡಿಯ ಬೇಧ ಇಲ್ಲ ಎನ್ನುವುದು ನಿಜವಾದರೂ ಬಳಿಕ ಆ ಜೋಡಿ ಮದುವೆ ಆಗುವುದಕ್ಕೆ ಇದು ಅಡ್ಡಿಯಾಗುತ್ತದೆ. ಇದುವರೆಗೆ ನಾವು ಅನೇಕ ಪಾಪುಲರ್ ಲವ್ ಸ್ಟೋರಿಗಳ ಬಗ್ಗೆ ಕೇಳಿರುತ್ತೇವೆ. ಏಳು ಸಮುದ್ರಗಳನ್ನು ದಾಟಿ ಪ್ರೀತಿ ಹುಡುಕಿ ಬಂದವರ ಕಥೆ, ಅರಮನೆಯಂತಹ ವೈಭೋಗದಲ್ಲಿ ಬೆಳೆದವರು ಮನೆ ಆಳನ್ನು ಪ್ರೀತಿಸಿ ಕುಟುಂಬದ ವಿರೋಧ ಬಂದಾಗ ಪ್ರೀತಿ ಒಪ್ಪಿಕೊಂಡು ಎಲ್ಲವನ್ನು ಬಿಟ್ಟು ಪ್ರೇಮಿ ಜೊತೆ ಬಡತನದಲ್ಲೇ ಬದುಕು ಕಳೆದ ಕಥೆಗಳು ಚರಿತ್ರೆಯ ಪುಟದಲ್ಲಿ ದಾಖಲಾಗಿವೆ.
ಆದರೆ ಈಗಿನ ಕಾಲದಲ್ಲಿ ದೇಶದಲ್ಲಿ ಹೆಚ್ಚು ಸುದ್ದಿ ಆಗುತ್ತಿರುವ ಲವ್ ಸ್ಟೋರಿಗಳನ್ನು ನೋಡಿದಾಗ ಅನೇಕರ ಪ್ರೀತಿಗೆ ಬೇರೆ ಎಲ್ಲದಕ್ಕಿಂತ ಜಾತಿಯೇ ಅಡ್ಡವಾಗಿದೆ. ಪ್ರತಿದಿನವೂ ಕೂಡ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರೀತಿಗೆ ಕುಟುಂಬದವರು ಅಥವಾ ಸಮುದಾಯ ಅಡ್ಡ ಬಂದಿರುವುದು ಅಥವಾ ಜಾತಿ ಕಾರಣದಿಂದ ಪ್ರೇಮಿಗಳು ದೂರ ಆಗಿರುವುದು ಒಂದು ವೇಳೆ ಪ್ರೀತಿಗಾಗಿ ಒಬ್ಬರ ಧರ್ಮವನ್ನು ಇನ್ನೊಬ್ಬರು ಒಪ್ಪಿಕೊಂಡಿದ್ದರೆ ಅದಕ್ಕೆ ಬೇರೊಂದು ಹೆಸರು ಕೊಟ್ಟು ವಿವಾದ ಆಗಿರುವ ಸುದ್ದಿಗಳನ್ನು ನೋಡುತ್ತಿದ್ದೇವೆ.
ಅದರಲ್ಲೂ ಹಿಂದೂ ಮತ್ತು ಮುಸ್ಲಿಂ ಧರ್ಮದ ನಡುವೆ ಪ್ರೇಮ ವಿವಾಹ ಆದರೆ ಅದು ದೇಶದ ಯಾವುದೇ ಮೂಲೆಯಲ್ಲಿ ನಡೆದಿದ್ದರೂ ದೇಶದಾದ್ಯಂತ ಎಲ್ಲರ ಗಮನವನ್ನು ಸೆಳೆದುಬಿಡುತ್ತದೆ. ಇದುವರೆಗೆ ಹಿಂದು ಯುವತಿಯರು ಮುಸ್ಲಿಂ ಧರ್ಮವನ್ನು ಸ್ವೀಕರಿಸಿ ಮತಾಂತರವಾಗಿ ವಿವಾಹ ಮಾಡಿಕೊಂಡಿರುವ ಉದಾಹರಣೆಗಳ ಬಗ್ಗೆ ನೋಡಿದ್ದೇವೆ.
ಇದಕ್ಕೆ ಹಿಂದೂ ಧರ್ಮದ ವಿರೋಧ ಸದಾ ಇದ್ದು ಈ ರೀತಿ ಹಿಂದೂ ಯುವತಿಯರನ್ನು ಮುಸ್ಲಿಂ ಗೆ ಬದಲಾಯಿಸಿಕೊಂಡರೆ ಅದು ಪ್ರೀತಿ ಹೆಸರಿನಲ್ಲಿ ಮಾಡುತ್ತಿರುವ ಮೋಸ, ಇದು ಲವ್ ಜಿಹಾದ್ ಎನ್ನುತ್ತಾರೆ. ಆದರೆ ಮಧ್ಯ ಪ್ರದೇಶದಲ್ಲಿ ಈ ಸ್ಟೋರಿ ಉಲ್ಟಾ ಆಗಿದೆ. ಮಧ್ಯಪ್ರದೇಶದ ನರಸಿಂಗ್ ಪುರದ ಫಾಜಿಲ್ ಖಾನ್ ಎನ್ನುವ ಮುಸ್ಲಿಂ ಯುವಕ ಸೋನಾಲಿ ಎನ್ನುವ ಹೆಸರಿನ ಹಿಂದೂ ಯುವತಿಯನ್ನು ಮದುವೆ ಆಗುವ ಉದ್ದೇಶದಿಂದ ಹಿಂದು ಧರ್ಮವನ್ನು ಸ್ವೀಕರಿಸಿದ್ದಾರೆ.
ಫಾಜಿಲ್ ಖಾನ್ ಮತ್ತು ಸೋನಾಲಿ ಬಹು ವರ್ಷಗಳ ಸ್ನೇಹಿತರು ಮತ್ತು ಅವರ ನಡುವೆ ಪ್ರೀತಿ ಚಿಗುರಿ ಅದು ಇಬ್ಬರಲ್ಲೂ ಆಳವಾಗಿ ಬೇರೂರಿತ್ತು. ಆದರೆ ಮದುವೆ ವಿಷಯಕ್ಕೆ ಧರ್ಮ ಅಡ್ಡಿಯಾಗಿದ್ದರಿಂದ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿ ಸೋನಾಲಿಯನ್ನು ಮದುವೆ ಆಗಿದ್ದಾರೆ. ಫಾಜಿಲ್ ಖಾನ್ ಎಂದು ಇದ್ದ ತಮ್ಮ ಹೆಸರನ್ನು ಅಮನ್ ರೈ ಎಂದು ಬದಲಾಯಿಸಿಕೊಂಡಿದ್ದಾರೆ.
ಈ ವಿವಾಹವು ಮಧ್ಯಪ್ರದೇಶದ ಕರೇಲಿ ರಾಮ್ ದೇವಾಲಯದಲ್ಲಿ ನಡೆದಿದ್ದು ಇವರ ಮದುವೆಗೆ ಇಬ್ಬರ ಕುಟುಂಬವೂ ಕೂಡ ಸಾಕ್ಷಿಯಾಗಿತ್ತು ಎನ್ನುವುದು ಇನ್ನೂ ವಿಶೇಷ. ಈಗ ವಿವಾಹ ನೋಂದಣಿಗಾಗಿ ಇಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಮಾಧ್ಯಮದರ ಜೊತೆ ತಮ್ಮ ವಿವಾಹದ ಬಗ್ಗೆ ಮಾಹಿತಿ ಹಂಚಿಕೊಂಡ ಅಮನ್ ರೈ ಅವರು ಮತ್ತೊಂದು ವಿಷಯದ ಬಗ್ಗೆ ತಿಳಿಸಿದ್ದಾರೆ.
ಅದೇನೆಂದರೆ, ಅಮನ್ ರೈ ಅವರ ತಂದೆ ಹಿಂದೂ. ನನ್ನ ತಂದೆ ನನ್ನ ತಾಯಿಯನ್ನು ಮದುವೆಯಾಗುವ ಕಾರಣಕ್ಕಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು ಈಗ ನಾನು ನನ್ನ ಪತ್ನಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮರಳಿದ್ದೇನೆ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಇವರಿಬ್ಬರ ಮದುವೆ ನಡೆದಿರುವ ಫೋಟೋಗಳು ವೈರಲ್ ಆಗಿದ್ದು ಅಮನ್ ರೈ ಘರ್ ವಾಪಾಸಿಯಾದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.