Home Useful Information ಬಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ. ವಾಷಿಂಗ್ ಮಿಷನ್ ಬಳಸುವವರು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

ಬಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ. ವಾಷಿಂಗ್ ಮಿಷನ್ ಬಳಸುವವರು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

0
ಬಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ. ವಾಷಿಂಗ್ ಮಿಷನ್ ಬಳಸುವವರು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

 

ಈಗಿನ ಕಾಲದಲ್ಲಿ ಬಟ್ಟೆಗಳನ್ನು ಮ್ಯಾನುವಲ್ ಆಗಿ ವಾಶ್ ಮಾಡುವಷ್ಟು ಸಮಯ ಹಾಗೂ ಆಸಕ್ತಿ ಯಾರಲ್ಲೂ ಇಲ್ಲ. ಯಂತ್ರಶಕ್ತಿಯಿಂದ ತಮ್ಮ ದಿನನಿತ್ಯದ ಕೆಲಸಗಳನ್ನು ಸರಾಗ ಮಾಡಿಕೊಳ್ಳುವ ಅನುಕೂಲತೆ ಇರುವುದರಿಂದ ಯಾರೂ ಕೂಡ ದೈಹಿಕ ಶ್ರಮ ಹೆಚ್ಚಾಗಿರುವ ಕೆಲಸಗಳನ್ನು ಕಷ್ಟಪಟ್ಟು ಮಾಡಲು ಇಚ್ಛೆ ಪಡುವುದಿಲ್ಲ.

ಜೊತೆಗೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ದುಡಿಯುವ ಅನಿವಾರ್ಯತೆ ಇರುವುದರಿಂದ ಮನೆಯಲ್ಲಿರುವ ಗೃಹಣಿ ಕೂಡ ಈಗ ಮನೆ ನಿಭಾಯಿಸುವುದರ ಜೊತೆಗೆ ಸಮಯ ಹೊಂದಿಸಿಕೊಂಡು ದುಡಿಯುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ ಹಾಗಾಗಿ ಇಂತವರಿಗೆ ಮನೆ ಕೆಲಸಕ್ಕೆ ಯಂತ್ರಗಳು ನೆರವಾಗುತ್ತಿವೆ.

ಆದರೆ ಅವುಗಳ ಮೂಲಕ ಹೇಗೆ ಅಚ್ಚುಕಟ್ಟಾಗಿ ಕೆಲಸ ತೆಗೆಯಬೇಕು ಎನ್ನುವ ಕಲೆ ಗೊತ್ತಿರಬೇಕು. ಅದರ ಬಗ್ಗೆ ಕೆಲ ಟಿಪ್ ಗಳನ್ನು ಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಬಟ್ಟೆ ಒಗೆಯುವ ಕೆಲಸಕ್ಕೆ ಈಗ ಎಲ್ಲರ ಮನೆಯಲ್ಲೂ ಕೂಡ ವಾಷಿಂಗ್ ಮಿಷನ್ ಗಳು ಇವೆ. ಅವರವರ ಇಚ್ಛೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಫ್ರಂಟ್ ಲೋಡ್ ಅಥವಾ ಟಾಪ್ ಲೋಡ್ ಅಥವಾ ಮಾರ್ಕೆಟ್ ನಲ್ಲಿ ಹೆಚ್ಚು ಪ್ರತಿಚಲಿತದಲ್ಲಿರುವ ಕಂಪನಿ ಮಿಷನ್ ಗಳನ್ನು ಖರೀದಿಸಿ ತಂದು ಬಟ್ಟೆ ವಾಶ್ ಮಾಡುತ್ತಾರೆ.

ಈ ರೀತಿ ಬಟ್ಟೆ ವಾಶ್ ಮಾಡುವವರು ತಾವು ಮ್ಯಾನುವಲ್ ಆಗಿ ವಾಷ್ ಮಾಡಿದಷ್ಟು ಮಿಷಿನ್ ನಲ್ಲಿ ಹಾಕಿದ ಬಟ್ಟೆಗಳು ಕ್ಲೀನ್ ಆಗಿಲ್ಲ ಎನ್ನುವ ದೂರು ಹೇಳುವುದು ಸರ್ವೆ ಸಾಮಾನ್ಯ. ಈ ರೀತಿ ಆಗಲು ಅವರೇ ಮಾಡುವ ಕೆಲಸಗಳು ಕಾರಣ ಆಗಿವೆ. ಅದರಲ್ಲೂ ಫ್ರಂಟ್ ಡೋರ್ ವಾಷಿಂಗ್ ಮಿಷನ್ ಬಳಸುತ್ತಿರುವವರು ಮಾಡುತ್ತಿರುವ ಸಣ್ಣ ತಪ್ಪುಗಳಿಂದ ಅವರ ಬಟ್ಟೆ ಕ್ಲೀನ್ ಆಗಿ ವಾಶ್ ಆಗುತ್ತಿಲ್ಲ.

ಇನ್ನು ಮುಂದೆ ವಾಷಿಂಗ್ ಮಿಷನ್ ಗೆ ಬಟ್ಟೆ ಹಾಕಿ ವಾಷ್ ಮಾಡುವಾಗ ನಾವು ಹೇಳುವ ಉಪಾಯಗಳನ್ನು ಬಳಸಿ ನಿಮ್ಮ ಬಟ್ಟೆ ಹೇಗೆ ಕ್ಲೀನ್ ಆಗುತ್ತದೆ ಎಂದು ನೀವೇ ಕಣ್ಣಾರೆ ನೋಡಿ. ಫ್ರಂಟ್ ಲೋಡ್ ಮಿಷನ್ ಬಳಸುವವರು ಡಿಟರ್ಜೆಂಟ್ ಬಳಸುವುದರ ಬದಲು ಲಿಕ್ವಿಡ್ ಬಳಸುವುದು ಉತ್ತಮ. ಎಲ್ಲರೂ ಮೊದಲು ಬಟ್ಟೆಯನ್ನು ತುಂಬಿ ಡಿಟರ್ಜೆಂಟ್ ಅಥವಾ ಲಿಕ್ವಿಡ್ ಹಾಕಿ ಆಮೇಲೆ ಪ್ರೋಗ್ರಾಮ್ ಸೆಟ್ ಮಾಡಿ ಸ್ಟಾರ್ಟ್ ಮಾಡುತ್ತಾರೆ ಈ ವಿಧಾನ ತಪ್ಪು.

ಮೊದಲಿಗೆ ಬಟ್ಟೆಗಳನ್ನು ಹಾಕಿ ಪ್ರೋಗ್ರಾಮ್ ಸೆಟ್ ಮಾಡಿ ಸ್ಟಾರ್ಟ್ ಮಾಡಿ ಅದು ನೀರು ತೆಗೆದುಕೊಳ್ಳಲು ಶುರು ಮಾಡಿದಾಗ ಬಾಕ್ಸ್ ಅಲ್ಲಿ ಡಿಟರ್ಜೆಂಟ್ ಅಥವಾ ಲಿಕ್ವಿಡ್ ಹಾಕಬೇಕು. ಈ ರೀತಿ ಮಾಡಿದಾಗ ನೀರಿನ ಜೊತೆ ಲಿಕ್ವಿಡ್ ಅಥವಾ ಡಿಟರ್ಜೆಂಟ್ ಚೆನ್ನಾಗಿ ಮಿಕ್ಸ್ ಆಗಿ ಬಟ್ಟೆ ಕ್ಲೀನ್ ಆಗಲು ಅನುಕೂಲವಾಗುತ್ತದೆ.

ಎಷ್ಟು ಕೆಜಿ ಮಿಷನ್ ತೆಗೆದುಕೊಳ್ಳುತ್ತಾರೋ ಅಷ್ಟು ಬಟ್ಟೆಗಳನ್ನು ತುಂಬುವುದು ತಪ್ಪು. 1:3 ಅನುಪಾತದಲ್ಲಿ ಅಂದರೆ ಮುಕ್ಕಾಲು ಭಾಗ ಬಟ್ಟೆ ತುಂಬಿ ಕಾಲು ಭಾಗ ಖಾಲಿ ಬಿಡಬೇಕು, ಈ ರೀತಿ ಬಿಟ್ಟಾಗ ರೊಟೇಷನ್ ಆಗಲು ಅನುಕೂಲವಾಗುತ್ತದೆ. ಆಗ ಬಟ್ಟೆ ಚೆನ್ನಾಗಿ ಕ್ಲೀನ್ ಆಗಿ ಪರ್ಫಾರ್ಮೆನ್ಸ್ ಚೆನ್ನಾಗಿರುತ್ತದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಪೂರ್ತಿಯಾಗಿ ಬಟ್ಟೆಗಳನ್ನು ತುಂಬಬೇಡಿ.

ಹಾಗೆಯೇ ಫ್ರಂಟ್ ಲೋಡ್ ಬಳಸುವವರು ಸ್ಟಾಂಡ್ ಹಾಕುವ ಅವಶ್ಯಕತೆಯೂ ಇಲ್ಲ. ಫ್ರಂಟ್ ಲೋಡ್ ಮಿಷನ್ 70 ರಿಂದ 80 ಕೆಜಿ ತೂಕ ಇರುವುದರಿಂದ ಅವುಗಳಿಗೆ ಸ್ಟ್ಯಾಂಡ್ ಅವಶ್ಯಕತೆ ಇರುವುದಿಲ್ಲ, ಸ್ಟಾಂಡ್ ಹಾಕಿದರೂ ಕೂಡ ಜಾಗ ಬೇರೆ ಇದ್ದಾಗ ಅದು ರನ್ ಆಗುವಾಗ ಮೂವ್ ಆದರೆ ಮಷೀನ್ ಮೋಟರ್ ಗೆ ತೊಂದರೆ ಆಗುತ್ತದೆ.

LEAVE A REPLY

Please enter your comment!
Please enter your name here