ಸಾಮಾನ್ಯವಾಗಿ ಭಕ್ತರುಗಳು ದೇವಸ್ಥಾನಕ್ಕೆ ಹೋದಾಗ ದೇವರಿಗೆ ತಮ್ಮ ಕೈಲಾದಷ್ಟು ಹಣ ಕಾಣಿಕೆಯಾಗಿ ಹಾಕುತ್ತಾರೆ. ವಿಶೇಷ ಹರಕೆ ಹೊತ್ತಿದ್ದರೆ ಚಿನ್ನ ಮತ್ತು ಬೆಳ್ಳಿಯನ್ನು ಅರ್ಪಿಸುತ್ತಾರೆ. ಆದರೆ ಪ್ರಪಂಚದಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಭಕ್ತರಿಗೆ ಚಿನ್ನದ ಬಿಸ್ಕೆಟ್ ಅನ್ನು ಕೊಡಲಾಗುತ್ತದೆ ಇಂತಹ ಒಂದು ದೇವಸ್ಥಾನ ಹಾಗೂ ಆಚರಣೆ ನಿಜವಾಗಲೂ ಭೂಮಿ ಮೇಲೆ ಇದೆಯಾ ಎನ್ನುವ ಆಶ್ಚರ್ಯ ಉಂಟಾದರೂ ಈ ರೀತಿ ಇರುವುದು ಖಂಡಿತ ಸತ್ಯ.
ಯಾಕೆಂದರೆ ಜಪಾನ್ ದೇಶದ ದೇವಸ್ಥಾನ ಒಂದರಲ್ಲಿ ಇಂತಹ ಆಚರಣೆ ಇದೆ. ಈ ದೇವಸ್ಥಾನದ ಬಗ್ಗೆ ಮತ್ತು ಇಲ್ಲಿರುವ ಆಚರಣೆ ಬಗ್ಗೆ ಹಾಗೂ ಬಂಗಾರದ ಬಿಸ್ಕೆಟ್ ಅನ್ನು ಉಡುಗೊರೆಯಾಗಿ ಕೊಡುವ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಿಮಗೂ ಸಹ ಈ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಜಪಾನ್ ದೇಶದ ದೇವರುಗಳಿಗೂ ಹಾಗೂ ಭಾರತ ದೇಶ ದೇವರುಗಳು ಸಾಕಷ್ಟು ಸಾಮ್ಯತೆ ಇದೆ ಎನ್ನುವ ಬಗ್ಗೆ ನಾವು ಕೇಳಿದ್ದೇವೆ. ಜೊತೆಗೆ ನಮ್ಮ ಪುರಾಣಗಳಿಗೂ ಅವರ ಧರ್ಮ ಗ್ರಂಥಗಳಿಗೂ ಸಹ ಹೋಲಿಕೆ ಇದೆ. ನಾವು ಪೂಜಿಸುವ ಸೂರ್ಯದೇವನನ್ನು ಅಲ್ಲಿ ಅಮಾರ್ತಸು ಎಂದು ಕರೆಯುತ್ತಾರೆ. ಜಪಾನ್ ದೇಶದ ಕಿಂಕಾಕು-ಜಿ ಎನ್ನುವ ದೇವಸ್ಥಾನವು ಸಾಕಷ್ಟು ವಿಷಯಗಳಿಂದ ಪ್ರಸಿದ್ಧಿ ಆಗಿದೆ. ಸುಮಾರು 5000 ವರ್ಷಗಳ ಹಿಂದಿಗೆ ಈ ಹೆಸರಿನಲ್ಲಿ ಸೂರ್ಯನ ದೇವಸ್ಥಾನವನ್ನು ಸ್ಥಾಪಿಸಲಾಗಿದೆ.
ಈ ದೇವಸ್ಥಾನ ನಿರ್ಮಾಣ ಮಾಡುವುದಕ್ಕೆ 500 ವರ್ಷಗಳು ಆಯಿತು ಎಂದು ಕಥೆಗಳಲ್ಲಿ ಹೇಳಲಾಗಿದೆ. ಈ ದೇವಸ್ಥಾನವನ್ನು ಬಂಗಾರದ ಲೇಪನಗಳಿಂದ ಅಲ್ಲದೆ ಪೂರ್ತಿ ಬಂಗಾರದಿಂದಲೇ ನಿರ್ಮಿಸಲಾಗಿದೆ ಎನ್ನುವುದು ಕೂಡ ಈ ದೇವಸ್ಥಾನದ ಮತ್ತೊಂದು ವಿಶೇಷತೆ. ಈ ದೇವಸ್ಥಾನವು ಅನೇಕ ಬಾರಿ ಭೂಕಂಪಕ್ಕೆ ಸಿಲುಕಿದೆ ಜಪಾನ್ ದೇಶದಲ್ಲಿ ಭೂಕಂಪ ಎನ್ನುವುದು ಹೊಸದೇನಲ್ಲ ಆದರೂ ಕೂಡ ಪ್ರತಿ ಬಾರಿ ಇದನ್ನು ಮತ್ತೆ ನಿರ್ಮಾಣ ಮಾಡಲಾಗಿದೆ.
ಇದುವರೆಗೆ ಸುಮಾರು 23 ಬಾರಿ ಈ ದೇವಸ್ಥಾನವನ್ನು ಮತ್ತೆ ಸ್ಥಾಪಿಸಲಾಗಿದ್ದು, ಈಗಲೂ ಸಹ ಚಿನ್ನದಿಂದಲೇ ಇದು ಸ್ಥಾಪಿತವಾಗಿದೆ. ಜೊತೆಗೆ ಚಿನ್ನದ ವಿಚಾರದಲ್ಲಿ ಈ ದೇವಸ್ಥಾನದ ಬಗ್ಗೆ ಇರುವ ಮತ್ತೊಂದು ಪ್ರಮುಖವಾದ ವಿಷಯ ಏನೆಂದರೆ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಚಿನ್ನದ ಉಡುಗೊರೆಯನ್ನು ಭಕ್ತಾದಿಗಳಿಗೆ ನೀಡುತ್ತಾರೆ ಎನ್ನುವುದು. ಈ ದೇವಾಲಯದಲ್ಲಿ ಏಳು ವರ್ಷಗಳಿಗೊಮ್ಮೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ, ಈ ಜಾತ್ರೆಯನ್ನು ಒಂದು ರೀತಿಯಲ್ಲಿ ಜಪಾನ್ ದೇಶದ ಹಬ್ಬ ಎಂದು ಹೇಳಬಹುದು.
ಯಾಕೆಂದರೆ 12 ಕೋಟಿ ಜನಸಂಖ್ಯೆ ಇರುವ ಜಪಾನ್ ದೇಶದಲ್ಲಿ ಅಷ್ಟು ಜನರು ಕೂಡ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. 10 ದಿನಗಳ ವರೆಗೆ ನಡೆಯುವ ಈ ಜಾತ್ರೆಗೆ 10 ದಿನಗಳು ಕೂಡ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಶಾಲಾ ಕಾಲೇಜುಗಳಿಗೂ ರಜೆ ಕೊಡಲಾಗುತ್ತದೆ. ಜಪಾನ್ ದೇಶದವರು ಬೊಂಬೆಗಳ ವೇಷ ಹಾಕಿಕೊಂಡು ಹಬ್ಬದನ್ನು ಎಂಜಾಯ್ ಮಾಡುತ್ತಾರೆ.
ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಒಂದು ಚೀಟಿಯಲ್ಲಿ ಅವರ ವಿವರಗಳನ್ನು ಬರೆದು ಹಾಕಬೇಕು ಈ ರೀತಿ ಬರೆದು ಹಾಕಿದ 5000 ಮಂದಿಗೆ 150 ಗ್ರಾಂ ಬೆಲೆ ಬಾಳುವ ಚಿನ್ನದ ಬಿಸ್ಕೆಟ್ ಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಹಬ್ಬದ ಕೊನೆಗೆ ದಿನ ಅಂದರೆ ಹತ್ತನೇ ದಿನ ಇದನ್ನು ಅನೌನ್ಸ್ ಮಾಡಲಾಗುತ್ತದೆ ಉಡುಗೊರೆ ತೆಗೆದುಕೊಳ್ಳಲು ಅವರಿಲ್ಲದ ಪಕ್ಷದಲ್ಲಿ ಅವರ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಿ ಕೊಡಲಾಗುತ್ತದೆ. ಜಪಾನ್ ನಲ್ಲಿ 150 ಗ್ರಾಂ ಚಿನ್ನದ ಬಿಸ್ಕೆಟ್ ಬೆಲೆ 6 ಲಕ್ಷಕ್ಕಿಂತ ಅಧಿಕ ಆದರೆ ನಮ್ಮ ಭಾರತ ದೇಶದ ಚಿನ್ನದ ಬೆಲೆ ಪ್ರಕಾರ ಇದರ ಮೌಲ್ಯ ಒಂಬತ್ತು ಲಕ್ಷವನ್ನು ದಾಟುತ್ತದೆ. ಈ ರೀತಿ ಅಚ್ಚರಿಯ ಆಚರಣೆ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.