ಬೆಂಗಳೂರು ನಗರದಲ್ಲಿ ಸುಮಾರು 1000ಕ್ಕೂ ಹೆಚ್ಚು ದೇವಾಲಯಗಳಿವೆ. ಬೆಂಗಳೂರಿನಲ್ಲಿ ಶಿವ ಪಾರ್ವತಿ, ವಿಷ್ಣು, ವೆಂಕಟೇಶ್ವರ, ಅಣ್ಣಮ್ಮ ಈ ರೀತಿ ಶಕ್ತಿ ದೇವತೆಗಳಿಂದ ಹಿಡಿದು ಗಣಪತಿ, ನವಗ್ರಹಗಳು ರಾಮ ಸೀತ ಆಂಜನೇಯ ದೇವರ ದೇವಸ್ಥಾನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಬೆಂಗಳೂರಿನಲ್ಲಿರುವ ಒಟ್ಟು ದೇವಾಲಯಗಳಲ್ಲಿ 200 ಹೆಚ್ಚು ಆಂಜನೇಯ ದೇವಾಲಯಗಳೇ ಇವೆ.
ಒಂದೊಂದು ದೇವಾಲಯಗಳು ಕೂಡ ಒಂದೊಂದು ರೀತಿಯ ವಿಶೇಷವನ್ನು ಹೊಂದಿದ್ದು ಬಾಣಸವಾಡಿಯಲ್ಲಿರುವ ದೇವಾಲಯವು ತೆಂಗಿನ ಕಾಯಿ ಆಂಜನೇಯ ದೇವಸ್ಥಾನ ಎಂದು ಹೆಸರು ಪಡೆದಿದೆ. ಮೆಜೆಸ್ಟಿಕ್ ಇಂದ 12 ಕಿಲೋಮೀಟರ್ ಅಂತರದಲ್ಲಿರುವ ಬಾಣಸವಾಡಿಯ BBMP ಕಚೇರಿ ಪಕ್ಕ ಈ ದೇವಾಲಯ ಇದೆ. ಇಲ್ಲಿ ನಡೆಯುವ ಒಂದು ವಿಶೇಷ ಪವಾಡದ ಕಾರಣ ಈ ದೇವಾಲಯವನ್ನು ತೆಂಗಿನಕಾಯಿ ಆಂಜನೇಯ ದೇವಾಲಯ ಎಂದು ಕರೆಯುತ್ತಾರೆ.
ಈ ದೇವಸ್ಥಾನವು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ದೇವಸ್ಥಾನದಲ್ಲಿರುವ ವಿಗ್ರಹ ಸಾಲಿಗ್ರಾಮದಾಗಿದ್ದು ಆಂಜನೇಯನ ಕೂದಲಿನಿಂದ ಆದ ದೇವಸ್ಥಾನ ಇದು ಎಂದು ಪ್ರತೀತಿ ಇದೆ. ರಾಮಾಯಣ ಕಾಲಘಟ್ಟದಲ್ಲಿ ರಾಮ ಸೀತೆ ಲಕ್ಷ್ಮಣ ಮೂರು ಜನರು ಕೂಡ ಈ ದೇವಸ್ಥಾನದ ಜಾಗದಲ್ಲಿ ಸಮಯ ಕಳೆದಿದ್ದರು ಆಗ ಅಲ್ಲಿ ಆಂಜನೇಯನ ಬಾಲದಿಂದ ಒಂದು ಕೂದಲು ಉದುರುತ್ತದೆ.
ನಂತರದ ಸಮಯದಲ್ಲಿ ಇಲ್ಲೇ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಜನ ಮಾತನಾಡುತ್ತಾರೆ. ಪ್ರತಿದಿನವೂ ಕೂಡ ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ ಬೆಳಗ್ಗೆ 7:30 ರಿಂದ 12:30 ಹಾಗೂ ಸಂಜೆ 5:30 ರಿಂದ 8:00ವರೆವರೆಗೆ ಈ ದೇವಸ್ಥಾನವು ಓಪನ್ ಇರುತ್ತದೆ. ಈ ದೇವಸ್ಥಾನಕ್ಕೆ ಸ್ಥಳೀಯರು ಮಾತ್ರವಲ್ಲದೇ ವಿದೇಶಿಗರು ಕೂಡ ಭೇಟಿ ಕೊಡುತ್ತಾರೆ.
ಈ ದೇವಸ್ಥಾನದ ವಿಶೇಷತೆ ಈ ರೀತಿ ಬೇರೆ ದೇಶದವರು ಕೂಡ ಆಕರ್ಷಿತರಾಗುವುದಕ್ಕೆ ಕಾರಣವಾಗಿದೆ. ದೇವಸ್ಥಾನದಲ್ಲಿ ನಡೆಯುವ ಒಂದು ಪವಾಡದ ಬಗ್ಗೆ ಅಮೆರಿಕದ ಸುದ್ದಿ ಸೆಂಟ್ರಲ್ ಎನ್ನುವ ಸುದ್ದಿ ಮಾಧ್ಯಮ ಕೂಡ ವರದಿಯನ್ನು ಪ್ರಸಾರ ಮಾಡಿದೆ. ಈ ದೇವಸ್ಥಾನದಲ್ಲಿ ತೆಂಗಿನಕಾಯಿ ಆಂಜನೇಯ ದೇವಸ್ಥಾನ ಎಂದು ಹೆಸರು ಬರಲು ಕಾರಣ ಏನೆಂದರೆ, ಭಕ್ತಾದಿಗಳು ಇಲ್ಲಿಗೆ ಬಂದು ಆಂಜನೇಯನನ್ನು ಪ್ರಾರ್ಥಿಸಿ ಮೂರು ಪ್ರದಕ್ಷಿಣೆ ಹಾಕಿ ದರ್ಶನ ಮಾಡಿ ಕುಳಿತುಕೊಂಡು ಧ್ಯಾನ ಮಾಡಿದರೆ ತೆಂಗಿನಕಾಯಿ ಹೊಡೆಯುವ ಶಬ್ದ ಕೇಳಿಸುತ್ತದೆ ಇದು ನಮ್ಮನ್ನು ರೋಮಾಂಚನ ಮಾಡಿಬಿಡುತ್ತದೆ.
ಈ ರೀತಿ ಆದರೆ ನೀವು ಅಂದುಕೊಳ್ಳುತ್ತಿರುವ ಕೆಲಸ ಆಗುತ್ತದೆ ಎಂದು ಅರ್ಥ. ಒಂದು ವೇಳೆ ಶಬ್ದ ಕೇಳಿಸದಿದ್ದರೆ ಆ ಕೆಲಸ ನಡೆಯುವುದಿಲ್ಲ ಎಂದು ಅರ್ಥ. ಈ ಒಂದು ಅನುಭವವನ್ನು ಇದುವರೆಗೆ ಲಕ್ಷಾಂತರ ಭಕ್ತಾದಿಗಳು ಪಡೆರುವುದರಿಂದ ದಿನೇ ದಿನೇ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ದೇವಸ್ಥಾನದಲ್ಲಿ ಮತ್ತೊಂದು ವಿಶೇಷತೆ ನಡೆಯುತ್ತದೆ. ಏನೆಂದರೆ ಆಂಜನೇಯನ ವಿಗ್ರಹದಲ್ಲಿ ಕಣ್ಣೀರು ಬರುತ್ತದೆ. ಆದರೆ ಇದು ಕಣ್ಣೀರಲ್ಲ ಆನಂದ ಬಾಷ್ಪ ಎಂದು ಆ ನೀರು ಗಂಗಾ ನದಿಯ ನೀರು ಇರಬಹುದು ಎಂದು ಹೇಳುತ್ತಾರೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯುವ ಹನುಮ ಜಯಂತಿ ಸಮಯದಲ್ಲಿ ಮಾತ್ರ ಈ ರೀತಿ ಹನುಮನ ವಿಗ್ರಹದಿಂದ ಕಣ್ಣೀರು ಬರುತ್ತದೆ ಈ ಒಂದು ಪವಾಡವನ್ನು ನೋಡಿ ತುಂಬಿ ಕಣ್ತುಂಬಿಕೊಳ್ಳಲು ವಿದೇಶಿಗರು ಕೂಡ ಆ ಸಮಯದಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ನೀವು ಸಹ ಬೆಂಗಳೂರಿನವರಾಗಿದ್ದರೆ ಅಥವಾ ಕರ್ನಾಟಕದ ಯಾವುದೇ ಭಾಗದವರಾಗಿದ್ದರು ಜೀವಮಾನದಲ್ಲಿ ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಭೇಟಿ ಕೊಡಿ.