ಶ್ವೇತ ಹಾಗೂ ಶಂಕರ ಎನ್ನುವ ದಂಪತಿಗಳಿದ್ದರೂ ಆದರೆ ಇವರಿಬ್ಬರಲ್ಲಿ ಅನ್ಯೂನತೆ ಇರಲಿಲ್ಲ. ಸದಾ ಒಬ್ಬರಿಗೊಬ್ಬರು ನನ್ನ ವಿಚಾರಗಳಿಗೆ ಜಗಳ ಆಡುತ್ತಾ ಸಂಸಾರದ ಜವಾಬ್ದಾರಿಯನ್ನು ಮರೆತಿದ್ದರು. ಇತ್ತ ದುಡಿಯಬೇಕಿದ್ದ ಶಂಕರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ, ಮನೆ ನಿರ್ವಹಣೆಗಾಗಿ ದುಡಿಯಲು ಹೊರಹೋಗುತ್ತಿದ್ದ ಶ್ವೇತ ಮತ್ತೆ ಮನೆಗೆ ಬಂದ ಮೇಲೆ ಮನೆ ಕೆಲಸದ ಕಡೆ, ಆಸಕ್ತಿ ಕೊಡದೆ ಸದಾ ಬೇಸರದಿಂದ ಇರುತ್ತಿದ್ದಳು.
ಇದರಿಂದ ಮನೆ ಯಾವಾಗಲೂ ಕೆಟ್ಟ ವಾಸನೆಯಿಂದ ಹಾಗೂ ಮುಚ್ಚಿದ ಕಿಟಕಿಗಳನ್ನು ತೆರೆಯದೆ ಬೆಳಕಿಲ್ಲದೆ ಗಾಳಿ ಇಲ್ಲದೆ ಭೂತಬಂಗಲೇ ರೀತಿ ಆಗಿತ್ತು. ಜೊತೆಗೆ ಇಬ್ಬರಿಗೂ ಮಕ್ಕಳಿಲ್ಲ ಎನ್ನುವ ಚಿಂತೆ ಅದರಿಂದ ಪದೇಪದೇ ಜಗಳ ಆಗುತ್ತಿತ್ತು . ಅದೇ ಸಮಯಕ್ಕೆ ಆ ಊರಿಗೆ ಒಬ್ಬರು ಸಾಧು ಬಂದರು. ಎಲ್ಲರೂ ಆತನ ಬಳಿ ಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಿದ್ದರು. ಶ್ವೇತ ಹಾಗೂ ಶಂಕರ ನಾವು ಕೂಡ ಹೋಗೋಣ ಮಕ್ಕಳ ಸಮಸ್ಯೆಗೆ ಪರಿಹಾರ ಕೇಳೋಣ ಎಂದುಕೊಂಡು ಸಾಧುಗಳ ಬಳಿ ಹೋದರು.
ಇವರಿಬ್ಬರ ಸಮಸ್ಯೆಯನ್ನು ಆಲಿಸಿದ ಸಾಧುಗಳು ನಾನು ನಿಮಗೆ ಒಂದು ಮಣ್ಣಿನ ಪಾಟ್ ಕೊಡುತ್ತೇನೆ ಅದನ್ನು ಚೆನ್ನಾಗಿ ನೋಡಿಕೊಳ್ಳಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ ಎಂದರು. ಪಾಟ್ ಸಾಮಾನ್ಯವಾಗಿದ್ದರು ಸಾಧುಗಳ ಮಾತಿನ ಮೇಲಿರುವ ನಂಬಿಕೆಯಿಂದ ಅದನ್ನು ವಿಶೇಷ ಎಂದುಕೊಂಡರು. ಮನೆಗೆ ತಂದು ಪಾಟ್ ಎಲ್ಲಿಡುವುದು ಸ್ವಚ್ಛವಾಗಿ ಇಡೋಣ ಎಂದು ಸ್ವಲ್ಪ ಜಾಗವನ್ನು ಕ್ಲೀನ್ ಮಾಡಿ ಅಲ್ಲಿ ಪಾಟ್ ಇಟ್ಟರು. ಶಂಕರ ಮಣ್ಣು ಹಾಗೂ ಒಂದು ಗುಲಾಬಿ ಗಿಡ ತಂದು ಪಾಟಿಗೆ ಹಾಕಿದ. ಗಿಡ ಚೆನ್ನಾಗಿ ಬೆಳೆಯಬೇಕು ಎಂದರೆ ಬಿಸಿಲಿರಬೇಕು ಎಂದು ಮುಚ್ಚಿದ ಕಿಟಕಿಗಳನ್ನು ಶ್ವೇತ ತೆರೆದು ಹುಳ ಹುಪ್ಪಟೆ ಗಿಡದಲ್ಲಿ ಕೂರದೆ ಇರಲಿ ಎಂದು ಮನೆ ಪೂರ್ತಿ ಕ್ಲೀನ್ ಮಾಡಿ ಇಟ್ಟುಕೊಂಡಳು.
ಶಂಕರ ಕೂಡ ಗಿಡ ಚೆನ್ನಾಗಿ ಬೆಳೆಯಲಿ ಎನ್ನುವ ಕಾರಣಕ್ಕೆ ಇದಕ್ಕೆ ಸಹಾಯ ಮಾಡುತ್ತಿದ್ದ ಇಬ್ಬರಲ್ಲೂ ಅನ್ಯೋನ್ಯತೆ ಬೆಳೆಯಿತು. ಹೂ ಇನ್ನೂ ಬಿಡಲಿಲ್ಲ ಎನ್ನುವ ಕಾರಣಕ್ಕೆ ಮನೆಯಿಂದ ಬಾಲ್ಕನಿ ಗೆ ತಂದು ಗಿಡ ಇಟ್ಟರು ಆ ಸ್ಥಳವೇ ಲಕ್ಷ್ಮಿ ಸ್ಥಳ ಎನ್ನುವಂತೆ ಶ್ವೇತಳಿಗೆ ಅನಿಸಿತು ಅದಕ್ಕಾಗಿ ಅದನ್ನೆಲ್ಲಾ ಸ್ವಚ್ಛ ಮಾಡಿ ನೀರಿಟ್ಟು ರಂಗೋಲಿ ಇಟ್ಟು ಗುಲಾಬಿ ಗಿಡವಿದ್ದ ಪಾಟ್ ಪೂಜೆ ಮಾಡಲು ಶುರು ಮಾಡಿದಳು. ಶಂಕರ ಇನ್ನೊಂದು ನಾಲ್ಕು ಪಾಟ್ ಇಡೋಣ ಚೆನ್ನಾಗಿ ಕಾಣುತ್ತದೆ ಎಂದು ಮತ್ತಷ್ಟು ಪಾಟ್ ಗಳಲ್ಲಿ ಗಿಡ ನೆಟ್ಟ.
ಕೊನೆಗೂ ಅವರ ಅದೃಷ್ಟದ ಹೂ ಬಿಟ್ಟೆ ಬಿಟ್ಟಿತು ಅದೇ ಸಮಯಕ್ಕೆ ಶ್ವೇತಾ ಸಿಹಿ ಸುದ್ದಿ ಕೊಟ್ಟಳು. ಈ ವಿಷಯ ತಿಳಿಯುತ್ತಿದ್ದಂತೆ ಶಂಕರ ತನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡ ಹೆಂಡತಿ ಮಕ್ಕಳಿಗಾಗಿ ಹೆಚ್ಚು ದುಡಿಯಲು ಆರಂಭಿಸಿದ. ಜೊತೆಗೆ ಅರಿವಿಲ್ಲದಂತೆ ಹೂ ಗಿಡಗಳನ್ನು ಬೆಳೆಸುವ ಅಭ್ಯಾಸ ಅವರಲ್ಲಿ ರೂಢಿಯಾಯಿತು. ಅಕ್ಕಪಕ್ಕ ಮನೆಯವರು ರಸ್ತೆಯಲ್ಲಿ ಹೋಗುವವರೆಲ್ಲ ಹೂ ಗಿಡ ಮಾರುತ್ತೀರ ಎಂದು ಕೇಳಲು ಆರಂಭಿಸಿದರು.
ತಕ್ಷಣವೇ ದಂಪತಿ ನಾವು ನರ್ಸರಿ ಆರಂಭಿಸೋಣ ಎಂದು ಯೋಚನೆ ಮಾಡಿ ಸಣ್ಣದಾಗಿ ಆರಂಭಿಸಿದರು, ಶ್ವೇತ ಹೆಣ್ಣು ಮಗುವಿಗೆ ಜನ್ಮ ಸಹ ನೀಡಿದಳು ಆ ಮಗುವಿಗೆ ಸಾಧನ ಎಂದು ಹೆಸರಿಟ್ಟರು. ಈಗ ನರ್ಸರಿ ನೋಡಿಕೊಂಡು ಸುಖ ಸಂಸಾರದಲ್ಲಿ ಮೂರು ಜನ ಸಂತೋಷವಾಗಿದ್ದಾರೆ. ಇಲ್ಲಿ ಮಣ್ಣಿನ ಮಡಕೆ ಚಮತ್ಕಾರ ಮಾಡಿಲ್ಲ, ಬದಲಾಗಿ ಮಡಿಕೆ , ಸಾಧುಗಳ ಮಾತಲಿಟ್ಟ ನಂಬಿಕೆ ಅವರ ಶ್ರಮದ ಪ್ರತಿಫಲವಾಗಿ ಇಂದು ಅವರ ಅದೃಷ್ಟ ಬದಲಾಯಿತು.