
ಮೂಲತಃ ಕರ್ನಾಟಕದವರಾಗಿ ಈಗ ಭಾರತದಾದ್ಯಂತ ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಕರೆಸಿಕೊಂಡಿರುವ ಪ್ರಭುದೇವ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ವೈವಾಹಿಕ ಜೀವನದ ಕುರಿತು ಸದಾ ವಿವಾದದಲ್ಲಿ ಇದ್ದ ಡ್ಯಾನ್ಸಿಂಗ್ ಸ್ಟಾರ್ ಈಗ ತಮ್ಮ ಕುಟುಂಬದ ಸಂಭ್ರಮದ ಸಂತಸವನ್ನು ಹಂಚಿಕೊಂಡಿದ್ದಾರೆ. ಕೆಲವೇ ವರ್ಷಗಳ ಹಿಂದೆ ಎರಡನೇ ಮದುವೆ ಆಗಿದ್ದ ಪ್ರಭುದೇವ ಈಗ ಹೆಣ್ಣು ಮಗುವಿನ ತಂದೆ ಆಗಿದ್ದಾರೆ.
ಮನೆಗೆ ಮಹಾಲಕ್ಷ್ಮಿಯನ್ನು ಆಗಮನ ಮಾಡಿಕೊಂಡಿರುವ ಪ್ರಭುದೇವ ಅವರ ಬದುಕಿನ ಈ ಸುದ್ದಿಯನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಭುದೇವ ಅವರು ಈ ಹಿಂದೆ ತಮ್ಮ ಮುದ್ದಿನ ಮಗನನ್ನು ಕಳೆದುಕೊಂಡಿದ್ದರು. ಬಹಳ ವರ್ಷಗಳ ನಂತರ ಮಗಳ ಆಗಮನ ಆ ನೋವನ್ನು ಮರೆಸುವಂತಿದೆ.
ಪ್ರಭುದೇವ್ ಅವರು ದಕ್ಷಿಣ ಭಾರತದ ಹೆಸರಾಂತ ಡ್ಯಾನ್ಸಿಂಗ್ ಮಾಸ್ಟರ್ ಮೂಗೂರು ಸುಂದರ್ ಮಾಸ್ಟರ್ ಅವರ ಹಿರಿಯ ಮಗ. ಮೈಸೂರು ಬಳಿಯ ಟಿ ನರಸೀಪುರದಲ್ಲಿ ಬೆಳೆದಂತಹ ಪ್ರಭುದೇವ ಇಂದು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ನಿರ್ಮಾಪಕನಾಗಿ ನಿರ್ದೇಶಕನಾಗಿ ಕೊರಿಯೋಗ್ರಾಫರ್ ಆಗಿ ಹೀರೋ ಆಗಿ ಮಿಂಚಿದ್ದಾರೆ.
ಬಹುಮುಖ ಪ್ರತಿಭೆ ಎಂದು ಕರೆಸಿಕೊಂಡಿರುವ ಪ್ರಭುದೇವ ಅವರು ಡ್ಯಾನ್ಸಿಂಗ್ ವಿಷಯದಲ್ಲಿ ವಿಪರೀತ ಒಲವು ಹೊಂದಿದ್ದ ಕಾರಣ ಇಂದು ಭಾರತದಲ್ಲಿ ಈ ಕ್ಷೇತ್ರದಲ್ಲಿ ನಂಬರ್ ವನ್ ಆಗಿದ್ದಾರೆ. ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಎನ್ನುವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಪ್ರಭುದೇವ್ ಅವರು ಬಹುತೇಕ ಅವರ ಬದುಕಿನ ಎಲ್ಲಾ ವಿಷಯವನ್ನು ಕೂಡ ಕನ್ನಡಿಗರ ಎದುರು ತೆರೆದಿಟ್ಟಿದ್ದರು.
ಪ್ರಭುದೇವ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ರಮ್ಲತ್ ಎನ್ನುವ ಮುಸ್ಲಿಂ ಯುವತಿಯನ್ನು ಪ್ರಭುದೇವ್ ಅವರು ಪ್ರೇಮ ವಿವಾಹ ಆಗಿದ್ದರು. ಮದುವೆಯಾದ ಬಳಿಕ ಅವರು ಹಿಂದು ಆಗಿ ರಮಲತಾ ಎಂದು ಹೆಸರನ್ನು ಬದಲಾಯಿಸಿಕೊಂಡು ಪ್ರಭುದೇವ ಅವರ ಜೊತೆ ಸಂತೋಷದಿಂದ ಇದ್ದರು. ಇವರಿಗೆ ಮೂರು ಜನ ಗಂಡು ಮಕ್ಕಳು ಇದ್ದರು.
ಆದರೆ ಮೊದಲನೇ ಮಗ ಕ್ಯಾನ್ಸರ್ ಕಾಯಿಲೆಯಿಂದ ಮ.ರಣ ಹೊಂದಿದ್ದರು. ಆ ನೋವಿನಿಂದ ಮನೆಯಿಂದ ಹೊರಗೊಳಿಯುತ್ತಿದ್ದ ಪ್ರಭುದೇವ ಅವರು ದಿನಕಳೆದಂತೆ ನಟಿ ನಯನತಾರ ಜೊತೆ ಲಿವಿಂಗ್ ಇನ್ ರಿಲೇಶನ್ಶಿಪ್ ಅಲ್ಲಿ ಇದ್ದರು. ಇದೇ ವಿಚಾರಕ್ಕೆ ರಮಲತಾ ಅವರ ಜೊತೆ ವೈಮನಸ್ಸು ಏರ್ಪಟ್ಟು ಇಬ್ಬರು ವಿ.ಚ್ಛೇದನ ಪಡೆದುಕೊಂಡರು. ಇದೇ ಕಾರಣದಿಂದ ನಯನತಾರ ಕೂಡ ಪ್ರಭುದೇವ ಅವರ ಬದುಕನಿಂದ ದೂರ ಹೋದರು.
ಹಲವು ವರ್ಷಗಳವರೆಗೆ ಒಬ್ಬಂಟಿಯಾಗಿದ್ದ ಪ್ರಭುದೇವ ಅವರು ಕೊರೊನ ಲಾಕ್ ಡೌನ್ ವೇಳೆಯಲ್ಲಿ ಎರಡನೇ ವಿವಾಹ ಆಗಿದ್ದರು. ಇವರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯಯನ್ನೇ ಪ್ರೀತಿಸಿ ವಿವಾಹವಾದರು. ಈಗ ಈ ಜೋಡಿಗೆ ಹೆಣ್ಣು ಮಗುವಾಗಿದೆ. ಇವರ ಎರಡನೇ ಪತ್ನಿ ಹೆಸರು ಹಿಮಾನಿ ಸಿಂಗ್ ವೃತ್ತಿಯಲ್ಲಿ ವೈದ್ಯ ಆಗಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿರುವುದಿಲ್ಲ.
ಜೊತೆಗೆ ಕ್ಯಾಮರಗಳ ಎದುರು ಕೂಡ ಕಾಣಿಸಿಕೊಳ್ಳುವುದಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅವರು ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು ಅದರಲ್ಲೂ ಸಹ ಕಾರ್ಯಕ್ರಮಕ್ಕೆ ಬಾರದೆ ವಿಟಿ ಕಳುಹಿಸಿದ್ದರು. ಸಂಸಾರದ ವಿಷಯ ಹೊರತುಪಡಿಸಿ ಸಾಧನೆಯಲ್ಲಿ ಸಾಗರವಾಗಿರುವ ಪ್ರಭುದೇವ ಅವರು ಇನ್ನಷ್ಟು ವರ್ಷ ಕುಟುಂಬದ ಜೊತೆ ಸಂತೋಷದಿಂದಿರಲಿ ಎಂದು ಹಾರೈಸೋಣ.