ನಿಮ್ಮೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮದ್ದಣ್ಣ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸುದ್ದಿಗೆ ಕಾಂಟ್ರವರ್ಸಿ ಆಗುತ್ತಲೇ ಇರುತ್ತಾರೆ. ಅದರಲ್ಲಿಯೂ ಕೂಡ ನಮ್ಮ ಕನ್ನಡ ಸಿನಿಮಾಗಳಿಗೆ ಮತ್ತು ನಮ್ಮ ಕನ್ನಡ ಭಾಷೆಗೆ ಸಂಬಂಧಪಟ್ಟ ಹಾಗೆ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹುಟ್ಟಿದ್ದು ಬೆಳೆದದ್ದು ಅವಕಾಶ ಗಿಟ್ಟಿಸಿಕೊಂಡಿದ್ದು ಎಲ್ಲವು ಕನ್ನಡದಿಂದಲೇ ಆದರೆ ಹೆಚ್ಚು ಸದ್ದು ಮಾಡುತ್ತಿರುವುದು ಮಾತ್ರ ಟಾಲಿವುಡ್ ಬಾಲಿವುಡ್ ಕಾಲಿವುಡ್ ನಲ್ಲಿ ಹೇಳಬಹುದು. ಅದೇನೇ ಆಗಿರಲಿ ಯಾವ ರಾಜ್ಯದಲ್ಲಾದರೂ ಹೇಗಾದರೂ ನಟನೆ ಮಾಡಲಿ ಅದು ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಆದರೂ ಕೂಡ ಪದೇ ಪದೇ ನಮ್ಮ ಕನ್ನಡ ಭಾಷೆಯ ಮೇಲೆ ಅಸಡ್ಡೆ ತೋರದು ನೋಡುತ್ತಿದ್ದರೆ ನಿಜಕ್ಕೂ ಬೇಸರವಾಗುತ್ತದೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಹೌದು ನಟಿ ರಶ್ಮಿಕ ಮದ್ದಣ್ಣ ಅವರು ಮತ್ತೊಮ್ಮೆ ಕನ್ನಡಕ್ಕೆ ಅವಮಾನ ಮಾಡಿದ ವಿಚಾರವೂ ಇದೀಗ ಹೊರ ಬದ್ದಿದೆ ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಅವರು ಮಾಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಮೂರು ತಿಂಗಳ ಹಿಂದೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ತೆರೆ ಕಂಡಿತು. ಈ ಒಂದು ಸಿನಿಮಾ ಪಾನ್ ಇಂಡಿಯಾ ಸಿನಿಮಾ ವಾಗಿದ್ದರಿಂದ ಸುಮಾರು ಐದು ಭಾಷೆಯಲ್ಲಿ ಡಬ್ಬ ಆಗಿತ್ತು ಈ ಸಮಯದಲ್ಲಿ ರಶ್ಮಿಕ ಮದ್ದಣ್ಣ ಅವರು ಖಾಸಗಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಂತಹ ಸಮಯದಲ್ಲಿ ಡಬ್ಬಿಂಗ್ ಕೆಲಸ ಪ್ರಾರಂಭವಾಗಿದೆ ಅಂತ ಹೇಳಿದಾಗ ನೀವು ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುತ್ತೀರಾ ಅಂತ ಕೇಳಿದಾಗ.
ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುವುದು ನನಗೆ ಕಷ್ಟವಾಗುತ್ತದೆ ಅಷ್ಟೇ ಅಲ್ಲದೆ ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುವುದಕ್ಕೆ ನನಗೆ ಸಮಯವಿಲ್ಲ ಎಂದು ಹೇಳಿ ಹೊರಟಿದ್ದರು. ಆದರೆ ಇದೀಗ ರಶ್ಮಿಕ ಹಾಗೂ ಬಾಲಿವುಡ್ ನ ಅಮಿತಾಬ್ ಬಚ್ಚನ್ ನಟನೆಯ ಗುಡ್ ಬೈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ತಿಂಗಳು ಈ ಸಿನಿಮಾ ತೆರೆ ಮೇಲೆ ಕಾಣಲಿದೆ ಈ ಒಂದು ಚಿತ್ರದ ಪ್ರಮೋಷನ್ ಕಾರ್ಯಕ್ಕಾಗಿ ಇದೀಗ ರಶ್ಮಿಕ ಮತ್ತು ಅಮಿತಾ ಬಚ್ಚನ್ ಹಾಗೂ ಚಿತ್ರತಂಡದವರು ಎಲ್ಲರೂ ಕೂಡ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ಸಮಯದಲ್ಲಿ ಸಂದರ್ಶನದಲ್ಲಿ ಡಬ್ಬಿಂಗ್ ಕೆಲಸದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ ರಶ್ಮಿಕ ಮದ್ದಣ್ಣ ಅವರು ಮಾತನಾಡಿದಂತಹ ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಹೌದು ರಶ್ಮಿಕ ಮದ್ದಣ್ಣ ಅವರು ಈ ಒಂದು ಸಂದರ್ಶನದಲ್ಲಿ ಹೇಳಿಕೊಂಡಿರುವ ವಿಚಾರವೇನೆಂದರೆ ಗುಡ್ ಬೈ ಸಿನಿಮಾಗೆ ಹಿಂದಿ ಭಾಷೆಯಲ್ಲಿ ನಾನೇ ಡಬ್ಬಿಂಗ್ ಮಾಡಿದ್ದೇನೇ. ಹೊಸ ಭಾಷೆಯನ್ನು ಕಲಿತ ಅನುಭವ ನನಗಾಗಿದೆ ಇದೇ ಮೊದಲ ಬಾರಿಗೆ ನಾನು ಹಿಂದಿಯಲ್ಲಿ ಡಬ್ಬಿಂಗ್ ಮಾಡಿರುವುದು ನನಗೆ ಖುಷಿಯನ್ನು ತಂದಿದೆ ಅಂತ ಹೇಳಿದ್ದಾರೆ. ಇದರ ಜೊತೆಗೆ ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುತ್ತೀರಾ ಅಂತ ಕೇಳಿದಾಗ ಕನ್ನಡಕ್ಕೆ ಡಬ್ಬಿಂಗ್ ಮಾಡಲು ಸಾಧ್ಯವಿಲ್ಲ ಹಿಂದಿಗಿಂತಲೂ ಕೂಡ ಕನ್ನಡ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕನ್ನಡ ಅಭಿಮಾನಿಗಳು ರಶ್ಮಿಕ ಅವರಿಗೆ ಚೀಮಾರಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಕನ್ನಡದಲ್ಲಿಯೇ ಕನ್ನಡದಲ್ಲಿ ನಿಮಗೆ ಡಬ್ಬಿಂಗ್ ಮಾಡುವುದಕ್ಕೆ ಅಷ್ಟೊಂದು ಕಷ್ಟವಾಗುತ್ತದೆಯೇ ಹಿಂದಿಯಲ್ಲಿ ಡಬ್ಬಿಂಗ್ ಮಾಡುವುದಕ್ಕೆ ಕಷ್ಟವೇನಿಲ್ಲವಾ ಎಂದು ಕಿಡಿ ಕಾರಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ