Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಯಲ್ಲಿ ಗಂಡಸರು ಈ ರೀತಿ ಇರುವುದು ಒಳ್ಳೆಯದಲ್ಲ.! ದರಿದ್ರ ಪುರುಷರ ಲಕ್ಷಣಗಳು ಇವು.!

Posted on June 26, 2023June 26, 2023 By Kannada Trend News No Comments on ಮನೆಯಲ್ಲಿ ಗಂಡಸರು ಈ ರೀತಿ ಇರುವುದು ಒಳ್ಳೆಯದಲ್ಲ.! ದರಿದ್ರ ಪುರುಷರ ಲಕ್ಷಣಗಳು ಇವು.!

 

ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ಇರುವಷ್ಟು ಅನುಕಂಪ ಕರುಣೆ ಗಂಡು ಮಕ್ಕಳ ಬೆಲೆ ಇರುವುದಿಲ್ಲ. ಗಂಡು ಮಕ್ಕಳು ಒಂದು ವಯಸ್ಸು ದಾಟುತ್ತಿದ್ದಂತೆ ದೊಡ್ಡವರಾಗಿ ಬಿಡುತ್ತಾರೆ ಯಾರು ಹೇಳದೆ ಇದ್ದರೂ ಕೂಡ ಮನೆಯ ಪರಿಸ್ಥಿತಿ ನೋಡಿ ಅವರೇ ಜವಾಬ್ದಾರಿಗಳನ್ನು ತೆಗೆದುಕೊಂಡು ನಿಭಾಯಿಸಲು ಪ್ರಯತ್ನಿಸುತ್ತಾರೆ.

ಗಂಡು ಮಕ್ಕಳು ಎಂದ ತಕ್ಷಣ ಒರಟು ಸ್ವಭಾವದವರು, ಧೈರ್ಯವಂತರು, ಹಠವಾದಿಗಳು ಇಂತಹದೇ ಭಾವನೆಗಳು ಬಂದರೂ ಕೂಡ ಆ ಗಂಡು ಮನಸ್ಸಿನ ಒಳಗಡೆ ಇರುವ ನೋವು, ಕನಸು ಹಾಗೂ ಕುಟುಂಬದ ಮೇಲೆ ಇರುವ ಪ್ರೀತಿ ಎಲ್ಲರಿಗೂ ಕಾಣುವುದಿಲ್ಲ. ತನ್ನ ಕುಟುಂಬಕ್ಕಾಗಿ ತನ್ನೆಲ್ಲ ಕನಸುಗಳನ್ನು ಬಲಿಕೊಟ್ಟು ತನ್ನ ಬದುಕನ್ನೇ ಬದಲಿಸಿಕೊಂಡು ಮನೆಯವರಿಗಾಗಿ ಬದುಕುವರು ಗಂಡು ಮಕ್ಕಳು.

ಒಂದು ಕುಟುಂಬದಲ್ಲಿ ತಂದೆಯಾಗಿ, ಅಣ್ಣನಾಗಿ, ಮಗನಾಗಿ, ಪತಿಯಾಗಿ ಹೀಗೆ ನಾನಾ ಪಾತ್ರಗಳ ಜವಾಬ್ದಾರಿ ತುಂಬುವುದರಲ್ಲಿ ಅವರ ಬದುಕಿನ ಆಯಸ್ಸು ತುಂಬಿಹೋಗಿರುತ್ತದೆ. ಎಲ್ಲಾ ಗಂಡಸರು ಕೂಡ ಕೆಟ್ಟವರಲ್ಲ ಹಾಗೆಯೇ ಎಲ್ಲಾ ಪುರುಷರು ಕೂಡ ಒಳ್ಳೆಯವರು ಅಲ್ಲ. ಈ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವ ಗಂಡು ಮಕ್ಕಳಲ್ಲಿಯೇ ಅನೇಕರ ಬಗ್ಗೆ ನಮಗೆ ಅಸಮಾಧಾನ ಇದ್ದೆ ಇರುತ್ತದೆ.

ಕೆಲವರನ್ನು ನೋಡಿದರೆ ತಕ್ಷಣವೇ ಕೋಪ ಬರುತ್ತದೆ ನಮ್ಮ ಸಂಬಂಧಿಕರ ಕುಟುಂಬದಲ್ಲೇ ಇರುವ ಅಥವಾ ಸ್ನೇಹಿತೆಯರು ಸ್ನೇಹಿತರು ಹೇಳುವ ಪುರುಷರ ಬಗ್ಗೆ ಕೇಳುತ್ತಿರುವಾಗಲೇ ನಮಗೆ ಸಹನೆಯ ಕಟ್ಟೆ ಹೊಡೆಯುತ್ತದೆ. ಇಂತಹ ಗಂಡಸರೂ ಕೂಡ ನಮ್ಮ ನಡುವೆಯೇ ಇದ್ದಾರೆ. ಇಂಥವರು ಮನೆಗೂ ಮಾರಕ ಸಮಾಜಕ್ಕೂ ಮಾರಕ.

ಹಾಗಾಗಿ ಯಾವೆಲ್ಲ ಪುರುಷರು ದರಿದ್ರ ಪುರುಷರಾಗಿರುತ್ತಾರೆ, ಅವರ ಲಕ್ಷಣಗಳು ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಜವಾಬ್ದಾರಿಯನ್ನು ನಿಭಾಯಿಸಲು ಮೊದಲಿಗೆ ಬೇಕಾಗಿರೋದು ಹಣ, ಹಣ ಮಾಡಲು ಉದ್ಯೋಗ. ಯಾವ ಪುರುಷನು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ಮನೆಯವರಿಗಾಗಿ ತನಗಾಗಿ ದುಡಿಯುವುದಿಲ್ಲ ಅಂತವರು ಬದುಕಿನ ಅರ್ಥವನ್ನು ತಿಳಿದಿರುವುದಿಲ್ಲ. ಕುಡಿಯದೆ ಸೋಂಬೇರಿಗಳಾಗಿರುವುದು ಕೆಟ್ಟ ಪುರುಷನ ಮೊದಲ ಲಕ್ಷಣ.

ಯಾವ ಗಂಡಸರು ಪ್ರತಿ ಮಾತಿಗೂ ಬೈಗುಳಗಳನ್ನು ಸೇರಿಸಿ ವಾದ ಮಾಡಿ ಬಾಯಿ ಮುಚ್ಚಿಸುತ್ತಾರೋ ಹಾಗೂ ವಾದವನ್ನು ಗೆಲ್ಲುತ್ತಾರೋ ಅವರು ಸಹ ಕೆಟ್ಟ ಪುರುಷರೇ. ಯಾವ ಗಂಡಸರು ತಂದೆ ತಾಯಿಯನ್ನು ಗೌರವಿಸುವುದಿಲ್ಲ ಹಾಗೂ ಮಡದಿಯನ್ನು ಗೌರವಿಸುವುದಿಲ್ಲ, ಸಾರಾಯಿ ಕುಡಿದು ಬಂದು ಅವರಿಗೆ ತೊಂದರೆ ಕೊಡುತ್ತಾರೆ ಅವರೆಲ್ಲಾ ದರಿದ್ರ ಪುರುಷರೇ. ಇತರರ ಮುಂದೆ ಹೆಂಡತಿಗೆ ಗೌರವ ಕೊಡದೆ ಇರುವುದು, ಹೆಂಡತಿಯ ಪ್ರತಿ ಕೆಲಸದಲ್ಲೂ, ಪ್ರತಿ ಮಾತಿನಲ್ಲೂ ತಪ್ಪು ಹುಡುಕುವುದು ದುಷ್ಟತನದ ಲಕ್ಷಣವಾಗಿದೆ.

ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಪ್ರತಿ ಖರ್ಚಿಗೂ ಬೆಳೆದ ಮೇಲೂ ಕೂಡ ಕುಟುಂಬದವರನ್ನೇ ಅವಲಂಬಿಸುವುದು ಜೊತೆಗೆ ದುಡಿದರೂ ಕೂಡ ಅದನ್ನು ಕುಟುಂಬ ನಿರ್ವಹಣೆಗೆ ನೀಡದೆ ಕುಡಿದು ಮೋಜು-ಮಸ್ತಿ ಮಾಡಿ ಊರು ತಿರುಗಲು ಖರ್ಚು ಮಾಡುವುದು ಇದು ಕೂಡ ಜವಾಬ್ದಾರಿ ಇಲ್ಲದ ಕೆಟ್ಟ ವ್ಯಕ್ತಿಯ ಲಕ್ಷಣ.

ತಡವಾಗಿ ಮಲಗುವುದು, ತಡವಾಗಿ ಏಳುವುದು, ತಡವಾಗಿ ಊಟ ಮಾಡುವುದು ಧೂಮಪಾನ ಮದ್ಯಪಾನ ತಂಬಾಕು ಸೇವನೆ ಜೂಜಾಡುವುದು ಈ ಪ್ರತಿ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳುವವರು ಕೂಡ ಕೆಟ್ಟ ಪುರುಷರಾಗಿರುತ್ತಾರೆ. ಇಂತಹ ಗುಣಗಳು ಇದ್ದವರು ಆದಷ್ಟು ಬೇಗ ತಮ್ಮ ತಪ್ಪನ್ನು ಮನವರಿಕೆ ಮಾಡಿಕೊಂಡು ಬದಲಾಗಲಿ ಎನ್ನುವುದಷ್ಟೇ ಈ ಲೇಖನದ ಆಶಯ.

Useful Information
WhatsApp Group Join Now
Telegram Group Join Now

Post navigation

Previous Post: ಫ್ರಿಡ್ಜ್ ಹೊಸದರಂತೆ ಇರಬೇಕು, ಬಹಳ ದಿನ ಬಾಳಿಕೆ ಬರಬೇಕು, ರಿಪೇರಿಗೆ ಬರಬಾರದು ಅಂದ್ರೆ ಈ ಉಪಾಯ ಮಾಡಿ ಸಾಕು.!
Next Post: ಮದುವೆ ಆದ ಹೆಣ್ಣು ಈ ವಿಷಯಗಳನ್ನು ತಿಳಿದುಕೊಂಡಿಲ್ಲ ಎಂದರೆ ಡಿವೋರ್ಸ್ ಆಗುವುದು ಗ್ಯಾರಂಟಿ…!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore