ಮನೆ ಅಂದಮೇಲೆ ಅದು ಅಂದವಾಗಿರುವುದು ಕೂಡ ಅಷ್ಟೇ ಮುಖ್ಯ. ಮನೆಗೆ ಯಾರೇ ಹೊರಗೆನಿಂದ ಬಂದು ನೋಡಿದರು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾರೆ ಎಂದು ಮೆಚ್ಚಬೇಕು. ಜೊತೆಗೆ ಮನೆಯಲ್ಲಿ ವಾಸಿಸುವ ನಮಗೂ ಕೂಡ ಮನೆ ಅಷ್ಟೇ ಕ್ಲೀನ್ ಆಗಿ ಕಾಣಬೇಕು. ಗೃಹಿಣಿಯರಿಗೆ ಇದೇ ಅತಿ ದೊಡ್ಡ ಸವಾಲಿನ ಕೆಲಸ. ಯಾಕೆಂದರೆ ಮನೆಯೆಂದ ಮೇಲೆ ಗಲೀಜಾಗುವುದು ಕೂಡ ಸರ್ವೇಸಾಮಾನ್ಯ ಅದರಲ್ಲಂತು ಅಡುಗೆ ಮನೆ, ಬಾತ್ರೂಮ್ ಇವುಗಳಲ್ಲಿ ಕಲೆಗಳು ಕಟ್ಟಿರುತ್ತವೆ.
ಅವುಗಳನ್ನೆಲ್ಲ ಹೋಗಲಾಡಿಸಿ ಹೊಸ ಮನೆಯಂತೆ ಪಳಪಳ ಹೊಳೆಯುವಂತೆ ಮಾಡಲು, ಮನೆಯ ಫ್ಲೋರ್ ಅನ್ನು ನೀಟಾಗಿ ಇಟ್ಟುಕೊಳ್ಳಲು ಗೃಹಿಣಿಯರು ಪಡುವ ಹರಸಹಸ ಅಷ್ಟಿಷ್ಟಲ್ಲ. ಮಾರ್ಕೆಟಲ್ಲಿ ಅದಕ್ಕಾಗಿಯೇ ದುಬಾರಿ ಬೆಲೆ ತೆತ್ತು ಕ್ಲೀನರ್ ಗಳನ್ನು ಕೂಡ ತರುತ್ತಾರೆ. ಆದರೆ ಇದ್ಯಾವುದರಿಂದಲೂ ಆಗದಷ್ಟು ಪರಿಣಾಮಕಾರಿಯಾಗಿ ಮನೆಯಲ್ಲೇ ಇರುವ ಒಂದು ಚಿಕ್ಕ ವಸ್ತು ಕೆಲಸ ಮಾಡುತ್ತದೆ.
ನಿಂಬೆ ಹಣ್ಣಿನ ಚಮತ್ಕಾರಿ ಗುಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಿಂಬೆ ಹಣ್ಣಿನ ರಸ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದನ್ನು ಎಲ್ಲರೂ ಬಲ್ಲರು. ಆರೋಗ್ಯದ ಸಮಸ್ಯೆಗಳೇ ಇರಲಿ ಅಥವಾ ಬಾಡಿಯನ್ನು ಡಿ ಟಾಕ್ಸಿನ್ ಮಾಡುವುದಕ್ಕೆ ಆಗಲಿ ನಿಂಬೆಹಣ್ಣು ಉತ್ತಮ ಔಷಧ. ಹೀಗೆ ದೇಹಕ್ಕೆ ಮಾತ್ರ ಅಲ್ಲದೆ ಮನೆಯ ಸೌಂದರ್ಯಕ್ಕೂ ಕೂಡ ಈ ನಿಂಬೆಹಣ್ಣು ಸಹಾಯಕ್ಕೆ ಬರುತ್ತದೆ. ಮನೆಯನ್ನು ಕ್ಲೀನ್ ಮಾಡುವ ಈ ಸುಲಭ ಟಿಪ್ ಗೂ ಕೂಡ ಇದನ್ನು ಉಪಯೋಗಿಸಿ ಕೊಳ್ಳಬಹುದು. ನೀವು ಮನೆಯಲ್ಲಿ ಅಡುಗೆಗೆ ನಿಂಬೆಹಣ್ಣಿನ ರಸವನ್ನು ಬಳಸುತ್ತೀರಿ ಬಳಿಕ ಅದರ ಸಿಪ್ಪೆಯನ್ನು ಬಿಸಾಕುತ್ತೀರಿ.
ಆದರೆ ಇನ್ನು ಮುಂದೆ ಈ ರೀತಿ ಮಾಡಬೇಡಿ. ಈ ನಿಂಬೆ ಹೋಳುಗಳನ್ನು ಫ್ರಿಜ್ ಅಲ್ಲಿ ಶೇಖರಿಸಿ ಇಡಿ. ಇಲ್ಲವಾದರೆ ಒಣಗಿಸಿ ಇಟ್ಟುಕೊಳ್ಳಿ. ಮನೆ ಕ್ಲೀನ್ ಮಾಡುವಾಗ ಈ ರೀತಿ ಏಳೆಂಟು ನಿಂಬೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ. ಈಗ ಅದನ್ನು ಒಂದು ಜಾಲರಿ ಸಹಾಯದಿಂದ ಶೋಧಿಸಿಕೊಳ್ಳಿ ಆ ರಸಕ್ಕೆ ಒಂದು ಚಮಚ ಅಡುಗೆ ಸೋಡಾ ಅಥವಾ ಇನೋ ಪುಡಿಯನ್ನು ಸೇರಿಸಿ.
ಈಗ ನೀವು ಮನೆ ಕ್ಲೀನ್ ಮಾಡುವ ಸೊಲ್ಯೂಷನ್ ರೆಡಿ ಆಯ್ತು. ಇದನ್ನು ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ಹಾಕಿಕೊಂಡು ಒರೆಸಿದರೆ ಟೈಲ್ಸ್ ಮೇಲೆ ಇರುವ ಎಲ್ಲಾ ಕರೆಯು ಕೂಡ ಮಾಯವಾಗುತ್ತದೆ. ಹಾಗೆಯೇ ಸಿಲಿಂಡರ್ ಇಡುವ ಜಾಗದಲ್ಲಿ ಆಗಿರುವ ತುಕ್ಕಿನ ಕಲೆಗೂ ಕೂಡ ಇದರ ಜೊತೆಗೆ ಸ್ವಲ್ಪ ಸೋಪ್ ವಾಟರ್ ಹಾಕಿ ಒರೆಸಿದರೆ ಸಾಕು ಮತ್ತೆ ಮೊದಲಿನ ರೀತಿ ಆಗುತ್ತದೆ.
ಅಡುಗೆ ಮನೆಯ ಅರಿಶಿಣದ ಕಲೆ, ಎಣ್ಣೆ ಜಿಡ್ಡು, ಮಸಾಲೆ ಕಲೆ ತೆಗೆಯಲು ಗ್ಯಾಸ್ ಸ್ಟವ್ ಒರಿಸಲು ಅಡುಗೆ ಮನೆಯ ಟೈಲ್ಸ್ ಗಳನ್ನು ಕ್ಲೀನ್ ಮಾಡಲು ಇದನ್ನು ಬಳಸಬಹುದು. ಈ ಸಲ್ಯೂಷನ್ ಹಾಕಿ ಐದು ನಿಮಿಷ ಬಿಟ್ಟು ಸ್ಕ್ರಬ್ಬರ್ ಇಂದ ನೀಟಾಗಿ ಉಜ್ಜಿ ನೀರಿನಿಂದ ತೊಳೆದರೆ ಅಡುಗೆ ಮನೆ ಮತ್ತೆ ಪಳಪಳ ಎನ್ನುತ್ತದೆ. ಹಾಗೆ ಬಾತ್ರೂಮ್ ಕಲೆಗಳು, ವಾಷ್ ಬೇಸಿನ್,ಸಿಂಕ್, ಟ್ಯಾಪ್ ಗಳ ಮೇಲಿನ ಕಲೆಗಳು ಈ ರೀತಿ ಎಲ್ಲಾ ಕಲೆಗಳಿಗೂ ಕೂಡ ಈ ಸಲ್ಯೂಷನ್ ಚೆನ್ನಾಗಿ ವರ್ಕ್ ಆಗುತ್ತದೆ. ಇನ್ನು ಮುಂದೆ ಈ ಉಪಾಯ ಬಳಸಿ ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ.