ಮೇಷ ರಾಶಿಯವರಿಗೆ ರಾಹು ಮತ್ತು ಬೃಹಸ್ಪತಿ, ರಾಶಿಯಲ್ಲಿಯೇ ಇದ್ದಾರೆ. ಇದರಿಂದ ನಿಮಗೆ ಹಲವಾರು ರೀತಿಯ ತೊಂದರೆಗಳು ಸಂಭವಿಸುತ್ತದೆ ಆದರೆ ಈ ಎಲ್ಲಾ ರೀತಿಯ ತೊಂದರೆಗಳಿಂದ ನಿಮ್ಮನ್ನು ಒಂದು ಶಕ್ತಿಯ ರಕ್ಷಿಸುತ್ತಿದೆ. ಹಾಗಾದರೆ ಆ ಒಂದು ಶಕ್ತಿ ಯಾವುದು ಹಾಗೂ ಆ ಒಂದು ಶಕ್ತಿ ನಿಮ್ಮನ್ನು ಈ ಒಂದು ತಿಂಗಳಲ್ಲಿ ಯಾವ ರೀತಿಯಾಗಿ ಕಾಪಾಡುತ್ತದೆ.
ಎನ್ನುವುದನ್ನು ಈ ದಿನ ತಿಳಿಯೋಣ. ವಿಶೇಷವಾಗಿ ಜುಲೈ 17ನೇ ತಾರೀಖಿನವರೆಗೆ ನಿಮಗೆ ಒಂದು ಗ್ರಹ ರಕ್ಷಣೆಯನ್ನು ಮಾಡುತ್ತದೆ. ಇದ ರಿಂದ ನಿಮಗೆ ಯಾವುದೇ ರೀತಿಯ ಕೆಲಸ ಕಾರ್ಯಗಳಾಗಿರಬಹುದು ಪ್ರತಿಯೊಂದರಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುತ್ತಾ ಹೋಗು ತ್ತದೆ. ಅದರಲ್ಲೂ ಸರ್ಕಾರಿ ನೌಕರರಿಗೆ, ಸರ್ಕಾರದಿಂದ ಯಾವುದೇ ರೀತಿಯ ಕೆಲಸವನ್ನು ನೀವು ಮಾಡುತ್ತಿದ್ದರೆ ಅವೆಲ್ಲದರಲ್ಲಿಯೂ ಕೂಡ ಜಯ ಸಿಗುತ್ತದೆ.
ಯಾವುದೇ ರೀತಿಯ ಕೋರ್ಟ್ ಕೇಸ್ ವಿಚಾರವಾಗಿ ಅರ್ಜಿಯನ್ನು ಹಾಕಿದ್ದರೆ ಅಥವಾ ಯಾವುದಾದರೂ ಬೇರೆ ಸರ್ಕಾರಿ ಕೆಲಸಕ್ಕೆ ಪ್ರಯತ್ನಿ ಸುತ್ತಿದ್ದರೆ ಅದರೆಲ್ಲದರಲ್ಲಿಯೂ ಕೂಡ ನೀವು ಜಯಶೀಲರಾಗುತ್ತೀರಿ. ಅದರಲ್ಲೂ ಈ ಎಲ್ಲಾ ರೀತಿಯ ಕೆಲಸಗಳು 17ನೇ ತಾರೀಖಿನ ಒಳಗಡೆ ನಡೆಯುವಂತದ್ದು ಆನಂತರ ಸ್ವಲ್ಪ ಮಟ್ಟಿಗೆ ಅದರಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ತಕ್ಷಣವೇ ಅದೆಲ್ಲವೂ ನಿಂತು ಹೋಗುವ ಸಾಧ್ಯತೆಗಳು ಕೂಡ ಇದೆ.
ಆದ್ದರಿಂದ 17ನೇ ತಾರೀಖಿನ ಒಳಗಾಗಿ ಯಾವುದೇ ರೀತಿಯ ವಿಚಾರದ ಲ್ಲಿಯೂ ಹೆಚ್ಚು ಮುಂಜಾಗ್ರತೆಯನ್ನು ವಹಿಸಿ ಆ ಕೆಲಸವನ್ನು ಪೂರ್ಣ ಗೊಳಿಸಿಕೊಳ್ಳುವುದು ಉತ್ತಮ. ಅದರಲ್ಲೂ ವಿಶೇಷವಾಗಿ ನಿಮ್ಮ ಸುಖಕ್ಕೆ ತೊಂದರೆಯನ್ನು ಕೊಡುತ್ತಾನೆ ರವಿ. ಇದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಕುಂಟಿತ, ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತದೆ, ಆದರೆ ವಿಶೇಷವಾಗಿ ಚತುರ್ಥದಲ್ಲಿ ನಿಮಗೆ ಸುಖ ಸಿಗುತ್ತದೆ. ರವಿ ಚತುರ್ಥಕ್ಕೆ ಹೋದಾಗ ಸೇರಿಕೊಳ್ಳುವುದು
ಬುಧ ಗ್ರಹವನ್ನು. ಇದರಿಂದ ಬಹಳಷ್ಟು ಫಲಗಳನ್ನು ಕೊಡುತ್ತಾನೆ. ಈ ಸಂದರ್ಭದಲ್ಲಿ ಧೈರ್ಯ ವನ್ನು ಹೆಚ್ಚಿಸುವುದಾಗಿರಬಹುದು ನಿಮ್ಮ ಉತ್ಸಾಹಕತೆಯನ್ನು ಹೆಚ್ಚಿಸುವುದಾಗಿರಬಹುದು ಒಟ್ಟಾರೆಯಾಗಿ ನಿಮಗೆ ಈ ಒಂದು ಸಮಯದಲ್ಲಿ ಬುದ್ಧಿ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ. ವಿಶೇಷವಾಗಿ ಬುಧ ಸಂಪತ್ತಿನ ಕ್ರೂಢೀಕರಣವನ್ನು ಮಾಡುತ್ತಾನೆ ಎಂದು ಹೇಳುತ್ತಾರೆ. ಆದ್ದರಿಂದ ಬಹಳಷ್ಟು ಮೂಲದಿಂದ ನಿಮಗೆ ಹಣಕಾಸಿನ ಆಗಮನ ಉಂಟಾಗುತ್ತದೆ.
ಅಂದರೆ ನಿಮ್ಮ ಯಾವ ಆದಾಯದ ಮೂಲಗಳು ಇರುತ್ತವೆಯೋ ಅದ ರಿಂದ ಸಕಾಲಕ್ಕೆ ನಿಮಗೆ ಹಣ ಬಂದು ತಲುಪುತ್ತದೆ. ಹಾಗೂ ಈ ಸಮಯದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸು ವುದು ಉತ್ತಮ. ಹಾಗೂ ಈ ಸಮಯದಲ್ಲಿ ನಿಮ್ಮ ಮಕ್ಕಳು ನಿಮಗೆ ಹೆಚ್ಚು ತೊಂದರೆಗಳನ್ನು ಉಂಟು ಮಾಡುತ್ತಿರುತ್ತಾರೆ ಪ್ರತಿಯೊಂದು ವಿಷಯಕ್ಕೂ ಹಠ ಮಾಡುವುದು ಮಾಡುತ್ತಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.