Home Useful Information ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ

ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ

0
ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ

 

● ಕಡ್ಲೆಹಿಟ್ಟಿಗೆ ಸ್ವಲ್ಪ ಉದ್ದಿನ ಬೇಳೆ ಹಿಟ್ಟು ಬೆರೆಸಿ ಪಕೋಡ ಮಾಡುವುದರಿಂದ ಪಕೋಡದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
● ಹಾಲಿನ ಕೆನೆಗೆ ಒಂದು ಟೀ ಚಮಚದಷ್ಟು ಸಕ್ಕರೆಯನ್ನು ಸೇರಿಸಿ ಕಾಯಿಸಿದರೆ ನಂತರ ಬೆಣ್ಣೆ ಕೂಡ ಹೆಚ್ಚಾಗಿ ಬರುತ್ತದೆ.
● ಬಾಳೆಹಣ್ಣಿನ ಗೊನೆಯನ್ನು ನೇತು ಹಾಕುವುದರಿಂದ ಬಾಳೆಹಣ್ಣು ಒಂದು ವಾರ ಆದರೂ ಹಾಳಾಗುವುದಿಲ್ಲ.

● ಬೇಳೆ ಬೇಗ ಬೇಯಿಸಲು ಮತ್ತು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಅದಕ್ಕೆ ಸ್ವಲ್ಪ ಅರಿಶಿನ ಹಾಗೂ ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ.
● ಮಳೆಗಾಲದ ದಿನಗಳಲ್ಲಿ ಮಸಾಲೆ ಪದಾರ್ಥಗಳು ಹಾಳಾಗದಂತೆ ತಡೆಯಲು ಅವುಗಳನ್ನು ಗಾಜಿನ ಜಾರ್ ಅಲ್ಲಿ ಸಂಗ್ರಹಿಸಿಡಿ.
● ಬೆಲ್ಲದ ಪಾಕವನ್ನು ತಯಾರಿಸುವಾಗ ಆ ಪಾತ್ರೆಗೆ ಮೊದಲು ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿದರೆ ಪಾಕವು ಪಾತ್ರೆಗೆ ಅಂಟಿಕೊಳ್ಳುವುದಿಲ್ಲ.

● ಒಣಗಿದ ಮೆಕ್ಕೆಜೋಳವನ್ನು ಒಂದು ದಿನ ಬಿಸಿನಲ್ಲಿ ಇಡಿ, ಇದರಿಂದ ಪಾಪ್ಕಾರ್ನ್ ಮಾಡಿದರೆ ಚೆನ್ನಾಗಿ ಬರುತ್ತದೆ.
● ಹಾಲಿನಿಂದ ಹೆಚ್ಚಿನ ಕೆನೆಯನ್ನು ತೆಗೆಯಬೇಕು ಎಂದರೆ ಮೊದಲಿಗೆ ಹಾಲನ್ನು ಚೆನ್ನಾಗಿ ಕಾಯಿಸಿ, ನಂತರ ಅದನ್ನು ಫ್ರಿಡ್ಜಲ್ಲಿ ಇಡಿ. ಈ ರೀತಿ ಮಾಡುವುದರಿಂದ ಹಾಲಿನ ಕೆನೆ ದಪ್ಪ ಆಗುತ್ತದೆ ಹೆಚ್ಚು ಕೆನೆ ಸಿಗುತ್ತದೆ.
● ಟಮೋಟದಲ್ಲಿ ಸಿಪ್ಪೆಯನ್ನು ತೆಗೆಯಬೇಕು ಎಂದರೆ ಮೊದಲಿಗೆ ಟೊಮೆಟೊ ಮೇಲೆ ಗೆರೆಯನ್ನು ಎಳೆಯಿರಿ ನಂತರ ಅದನ್ನು ಎರಡು ನಿಮಿಷ ಬಿಸಿ ನೀರಿನಲ್ಲಿ ಬೇಯಿಸಿ, ಈಗ ಸಿಪ್ಪೆ ಸುಲಭವಾಗಿ ಬರುತ್ತದೆ.

● ಯಾವುದೇ ಮಸಾಲೆ ಪುಡಿ ಅಥವಾ ಸಾಂಬಾರ್ ಪುಡಿ ಬೇಗ ಹಾಳಾಗಬಾರದು ಎಂದರೆ ಅದರಲ್ಲಿ ಕಲ್ಲುಪ್ಪನ್ನು ಸೇರಿಸಿ ಇಡಿ.
● ಮಾವಿನಕಾಯಿ ಉಪ್ಪಿನಕಾಯಿ ಮಾಡುವಾಗ ಅದರಲ್ಲಿ ಸ್ವಲ್ಪ ಬೆಲ್ಲವನ್ನು ಸೇರಿಸಿದರೆ ಉಪ್ಪಿನಕಾಯಿ ರುಚಿಯಾಗಿರುತ್ತದೆ.
● ಸಾಂಬಾರ್ ಮಾಡುವಾಗ ತರಕಾರಿ ಮತ್ತು ಬೇಳೆ ಬೆಂದ ನಂತರ ಅಷ್ಟೇ ಹುಣಸೆ ರಸವನ್ನು ಸೇರಿಸಿ.

● ಮಳೆಗಾಲದಲ್ಲಿ ಉಪ್ಪು ನೀರಾಗಿ ಹೋಗುತ್ತದೆ, ಅದು ನೀರಾಗದಂತೆ ತಪ್ಪಿಸಬೇಕು ಎಂದರೆ ಒಂದು ಹಿಡಿ ಅಕ್ಕಿಯನ್ನು ಹಾಕಿಡಿ.
● ಅನ್ನ ಮಾಡುವಾಗ ಒಂದು ಚಿಕ್ಕ ಚಮಚದಷ್ಟು ನಿಂಬೆ ರಸವನ್ನು ಸೇರಿಸಿದರೆ ಅನ್ನ ಬಿಳಿಯಾಗಿರುತ್ತದೆ, ಮತ್ತು ಉದುರು ಉದುರಾಗಿ ಇರುತ್ತದೆ.
● ಹಲ್ವಾ ಮಾಡುವಾಗ ಸಕ್ಕರೆಯನ್ನು ಸೇರಿಸುವ ಬದಲು ಸಕ್ಕರೆ ಪಾಕವನ್ನು ಸೇರಿಸಿದರೆ ಹಲ್ವಾದ ರುಚಿ ಇನ್ನು ಹೆಚ್ಚಾಗುತ್ತದೆ.

● ಟಮೋಟೋ ಸೂಪ್ ಗಟ್ಟಿಯಾಗಿರಬೇಕು, ರುಚಿಯಾಗಿರಬೇಕು ಎಂದರೆ ಅದರಲ್ಲಿ ಸ್ವಲ್ಪ ಬ್ರೆಡ್ ತುಂಡುಗಳನ್ನು ಸೇರಿಸಿ ಮಿಕ್ಸಿಗೆ ಹಾಕಿ.
● ಹಾಲನ್ನು ಕುದಿಸುವಾಗ ಹಾಲಿನ ಪಾತ್ರೆ ಮೇಲೆ ಒಂದು ಮರದ ಚಮಚವನ್ನು ಇಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ.

● ಹಾಲಿಗೆ ಹೆಪ್ಪು ಹಾಕಿದರೂ ಮೊಸರು ಆಗಿಲ್ಲ ಎಂದರೆ ಒಂದು ಅಗಲವಾದ ಚಪ್ಪಟೆ ತಟ್ಟೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಪಾತ್ರೆಯನ್ನು ಇಡಿ, ಒಂದು ಗಂಟೆ ಒಳಗಡೆ ಮೊಸರು ತಯಾರಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪಾತ್ರೆಯನ್ನಾಗಲಿ ಅಥವಾ ತಟ್ಟೆಯನ್ನಾಗಲಿ ಒಂದು ಗಂಟೆವರೆಗೆ ಅಲುಗಾಡಿಸಬಾರದು. ಅದು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು.

● ಸಮೋಸ ಹಿಟ್ಟನ್ನು ಕಲಸುವಾಗ ಅದರ ಜೊತೆಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿದರೆ ಸಮೋಸ ಗರಿಗರಿಯಾಗಿ ಬರುತ್ತದೆ.
● ಮಳೆಗಾಲದಲ್ಲಿ ಅಕ್ಕಿಯಲ್ಲಿ ಹುಳಗಳು ಕೀಟಗಳು ಬರಬಾರದು ಎಂದರೆ ಆ ಹಕ್ಕಿಗೆ ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಇಡಿ.
● ಈರುಳ್ಳಿಯನ್ನು ಕತ್ತರಿಸಿದ ಮೇಲೆ ಕೈ ಅದೇ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಅಡುಗೆ ಸೋಡವನ್ನು ಕೈಗೆ ಹಾಕಿಕೊಂಡು ಉಜ್ಜಿ ತೊಳೆದುಕೊಳ್ಳಿ.

LEAVE A REPLY

Please enter your comment!
Please enter your name here