ನಿಮ್ಮೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮದ್ದಣ್ಣ ಅವರು 2017 ರಲ್ಲಿ “ಕಿರಿಕ್ ಪಾರ್ಟಿ” ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಕನ್ನಡದ ಸಮರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಇವರ ನಟನೆ ಮಾಡಿದ ನಂತರ ಹಲವಾರು ಭಾಷೆಗಳಲ್ಲಿ ಇವರಿಗೆ ಸಿನಿಮಾ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಮೊದಲಿಗೆ ವಿಜಯ್ ದೇವರಕೊಂಡ ಅವರ “ಗೀತ ಗೋವಿಂದಂ” ಎಂಬ ತೆಲುಗು ಸಿನಿಮಾದಲ್ಲಿ ನಾಯಕ ನಟಿಯಾಗಿ ಅವಕಾಶ ದೊರೆಯುತ್ತದೆ. ತದನಂತರ ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಅನ್ನು ಕೊಡ ಮಾಡುತ್ತದೆ. ಈ ಸಿನಿಮಾ ಹಿಟ್ ಆದ ನಂತರ ರಶ್ಮಿಕ ಮದ್ದಣ್ಣ ಅವರ ಬೇಡಿಕೆ ಹೆಚ್ಚಾಗುತ್ತದೆ ನಂತರ ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಾರೆ. ಚಿರಂಜೀವಿ ಸರ್ಜಾ, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಬಹಳಷ್ಟು ನಾಯಕರ ಜೊತೆಗೆ ತೆರೆಯನ್ನು ಹಂಚಿಕೊಳ್ಳುತ್ತಾರೆ.
ಅನಂತರ ಈಗ ತಮಿಳು ಸಿನಿಮಾ ಕ್ಷೇತ್ರ ಹೋಗೋಣ ಕಾಲಿಟ್ಟು ದಳಪತಿ ವಿಜಯ್ ಅವರ ಜೊತೆಯಲ್ಲಿ ನಟಿಯಾಗಿ ನಡೆಸುತ್ತಿದ್ದಾರೆ ಕನ್ನಡಕ್ಕಿಂತಲೂ ಈಗ ಹೆಚ್ಚಾಗಿ ಪರಭಾಷೆಯಲ್ಲೇ ತುಂಬಾನೇ ಬ್ಯುಸಿ ಆಗಿರುವಂತಹ ರಶ್ಮಿಕ ಅವರು ಇದೀಗ ಕನ್ನಡ ಭಾಷೆಯನ್ನು ಅಸಡ್ಡೆ ಮಾಡುತ್ತಿರುವುದು ನಿಜಕ್ಕೂ ಕೂಡ ತುಂಬಾನೇ ಶೋಚನೀಯ ಅಂತ ಹೇಳಬಹುದು. ಏಕೆಂದರೆ ಇವರು ಹುಟ್ಟು ಬೆಳದದ್ದು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡದ್ದು ಎಲ್ಲವೂ ಕೂಡ ಕರ್ನಾಟಕದಲ್ಲಿ ಮತ್ತು ಕನ್ನಡದಲ್ಲಿ ಆದರೆ ಈಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಭಾಷೆಯಲ್ಲಿ ನಟಿಯಾದೆ ಎಂಬ ಕಾರಣಕ್ಕಾಗಿ ನನಗೆ ಕನ್ನಡ ಭಾಷೆ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ. ನಾನು ಬೇರೆ ಭಾಷೆಗಳಲ್ಲಿ ತುಂಬಾ ಚೆನ್ನಾಗಿ ಮಾತನಾಡುತ್ತೇನೆ ಅಂತ ಸಂದರ್ಶನಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ
ಇದನ್ನು ಕೇಳಿದಂತಹ ಕನ್ನಡಿಗರು ನಿಜಕ್ಕೂ ಕೂಡ ಆ’ಕ್ರೋ’ಶವನ್ನು ವ್ಯಕ್ತಪಡಿಸಿದ್ದಾರೆ ಏಕೆಂದರೆ ಮೂಲತಹ ಕನ್ನಡದವರೇ ಕೊಡಗಿನವರ ಕನ್ನಡ ಬರುತ್ತದೆ. ಆದರೂ ಕೂಡ ಇವರಿಗೆ ಒಂದಷ್ಟು ಸಿನಿಮಾಗಳಿಂದ ಹೆಸರು ಸಿಕ್ಕಿತು ಎಂಬ ಕಾರಣಕ್ಕಾಗಿ ಈಗ ಕನ್ನಡವನ್ನೇ ಮರೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನೆಟ್ಟಿಗರ ವಾದವಾಗಿದೆ. ಇದಕ್ಕೆ ಪೂರಕವಾಗುವಂತೆ ನಮ್ಮ ಸ್ಯಾಂಡಲ್ ವುಡ್ ನ ಹಲವಾರು ನಟರು ಮತ್ತು ನಟಿಯರು ಎಲ್ಲ ವೇದಿಕೆಗಳಲ್ಲೂ ಕೂಡ ನಾವು ಬೆಳೆದು ಬಂದದ್ದು ಕನ್ನಡ ಭಾಷೆಯಿಂದ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಹಾಗಾಗಿ ನಾವು ಎಲ್ಲಿ ಹೋಗಿದ್ದರು ಕೂಡ ಮೊದಲು ಕನ್ನಡಕ್ಕೆ ಮತ್ತು ಕನ್ನಡ ಇಂಡಸ್ಟ್ರಿಗೆ ಗೌರವವನ್ನು ಸಲ್ಲಿಸುತ್ತೇವೆ. ಅದೇ ರೀತಿ ಪರಭಾಷೆಗಳಿಗೆ ಕೂಡ ಗೌರವವನ್ನು ನೀಡುತ್ತೇವೆ ಆದರೆ ನಮ್ಮ ಮೊದಲ ಆದ್ಯತೆ ಕನ್ನಡ ಮಾತ್ರ ಆಗಿರುತ್ತದೆ ಅಂತ ಹೇಳಿಕೊಂಡಿದ್ದರು. ಯಶ್ ಆಗಿರಬಹುದು, ಅಪ್ಪು ಆಗಿರಬಹುದು, ಸುದೀಪ್ ಆಗಿರಲಿ ಅಥವಾ ರಚಿತರಾಮ್ ಆಗಿರಲಿ ಹೀಗೆ ಕನ್ನಡದ ಬಹುತೇಕ ನಟ-ನಟಿಯರು ಬೇರೆ ಭಾಷೆಗಳಿಗೆ ವೇದಿಕೆಯಲ್ಲಿ ಸಂಭಾಷಣೆ ಮಾಡುವುದಕ್ಕಿಂತ ಮುಂಚೆ ಕನ್ನಡದಲ್ಲಿ ತಮ್ಮ ಮಾತನ್ನು ಪ್ರಾರಂಭ ಮಾಡುವುದನ್ನು ನಾವು ನೋಡಬಹುದಾಗಿದೆ.
ಬೆರೆ ನಟ-ನಟಿಯರಿಗೆ ಕನ್ನಡದ ಮೇಲೆ ಇಷ್ಟೊಂದು ಅಭಿಮಾನವಿದೆ ಆದರೆ ರಶ್ಮಿಕ ಮದ್ದಣ್ಣ ಅವರಿಗೆ ಮಾತ್ರ ಅಭಿಮಾನ ಯಾಕೆ ಇಲ್ಲ ಎಂಬುದು ಇದೀಗ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಅದೇನೇ ಆಗಲಿ ಇದು ಒಂದು ವಿಚಾರ ಈಗ ಮತ್ತೊಂದು ವಿಚಾರ ಏನೆಂದರೆ ತೆಲುಗಿನ ಸಾಯಿ ಪಲ್ಲವಿ ಅವರು ಕನ್ನಡ ಭಾಷೆಯನ್ನು ಕಲಿಯುತ್ತಿರುವುದು ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ಅಷ್ಟೇ ಅಲ್ಲದೆ ಕನ್ನಡಭಾಷೆಗೆ ಇರುವಂತಹ ತಾಕತ್ತು ಮತ್ತು ಶಕ್ತಿ ಎಷ್ಟು ಎಂಬುದನ್ನು ತೆಲುಗಿನ ನಟಿ ತೋರಿಸಿಕೊಟ್ಟಿದ್ದಾರೆ ಎಂದು ಕೂಡ ಹೇಳಬಹುದು. ಹೌದು ಸಾಯಿ ಪಲ್ಲವಿ ಅವರು ಮೂಲತಃ ತೆಲುಗಿನವರು ತೆಲುಗಿನಲ್ಲಿ ಬಹಳಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಮಲಯಾಳಂ ಕೂಡ ಹಲವಾರು ಸಿನಿಮಾಗಳಿಗೆ ನಾಯಕ ನಟಿಯಾಗಿ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳನ್ನು ತುಂಬಾ ಸರಳವಾಗಿ ಮಾತನಾಡುತ್ತಾರೆ. ಇವರಿಗೆ ಇದು ಕಷ್ಟದಾಯಕ ವೇನೆಲ್ಲ ಏಕೆಂದರೆ ಬಹಳ ವರ್ಷದಿಂದಲೂ ಕೂಡ ಈ ಸಿನಿಮಾ ಕ್ಷೇತ್ರದಲ್ಲಿ ಇವರು ಕೆಲಸ ಮಾಡಿದ್ದಾರೆ.
ಆದರೆ ಇಲ್ಲಿಯವರೆಗೂ ಕೂಡ ಸಾಯಿ ಪಲ್ಲವಿ ಅವರು ಕನ್ನಡ ಭಾಷೆ ಯಾವ ಸಿನಿಮಾದಲ್ಲೂ ಕೂಡ ನಟನೆ ಮಾಡಿಲ್ಲ ಆದರೆ ಮೊಟ್ಟಮೊದಲ ಬಾರಿಗೆ ಇವರು “ಗಾರ್ಗಿ” ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ಕೂಡ ಬಿಡುಗಡೆ ಕಾಣುತ್ತಿದೆ ಹಾಗಾಗಿ ಎಲ್ಲಾ ಭಾಷೆಗೂ ಕೂಡ ಸ್ವತಃ ಸಾಯಿ ಪಲ್ಲವಿ ವಾಯ್ಸ್ ಡಬ್ಬಿಂಗ್ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ ಕನ್ನಡ ಬರದೇ ಇದ್ದರೂ ಕೂಡ ಕನ್ನಡವನ್ನು ಕಲಿತುಕೊಂಡು ಇದೀಗ ವಾಯ್ಸ್ ಡಬ್ಬಿಂಗ್ ನೀಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಇವರ ಪರಿಶ್ರಮಕ್ಕೆ ಹಾಗೂ ಇವರ ಕನ್ನಡ ಅಭಿಮಾನಕ್ಕೆ ನಾವು ಮೆಚ್ಚಲೇಬೇಕು. ಒಂದು ವೇಳೆ ಇವರು ಕನ್ನಡ ಭಾಷೆಯನ್ನು ಕಡೆಗಣಿಸುವುದು ಆಗಿದ್ದರೆ ನನಗೆ ಕನ್ನಡ ಬರುವುದಿಲ್ಲ ನನಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಸಾಧ್ಯವಿಲ್ಲ ನೀವು ಬೇರೆ ವ್ಯಕ್ತಿಗಳಿಂದ ವಾಯ್ಸ್ ಡಬ್ಬಿಂಗ್ ಮಾಡಿಸಿಕೊಳ್ಳಿ ಅಂತ ಹೇಳಬಹುದಾಗಿತ್ತು.
ಆದರೆ ಸಾಯಿ ಪಲ್ಲವಿ ಅವರು ಈ ರೀತಿ ಮಾಡಲಿಲ್ಲ ಬದಲಾಗಿ ಸ್ವತಃ ತಾವೇ ಕನ್ನಡದ ಒಂದೊಂದು ಪದಗಳನ್ನು ಅಕ್ಷರಗಳನ್ನು ಕಲಿತು ಈ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡಬೇಕು ಅಂತ ಡಬ್ಬಿಂಗ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸಾಯಿ ಪಲ್ಲವಿ ಅವರು ಕನ್ನಡ ಪದಗಳನ್ನು ಕಲಿಯುತ್ತಿರುವಂತಹ ಹಾಗೂ ಕನ್ನಡ ಡೈಲಾಗ್ ಗಳನ್ನು ವಾಯ್ಸ್ ಓವರ್ ಮಾಡುತ್ತಿರುವಂತಹ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಕನ್ನಡ ಅಭಿಮಾನಿಗಳು ಮತ್ತು ನೆಟ್ಟಿಗರು ಸಾಯಿ ಪಲ್ಲವಿ ಅವರಿಗೆ ಮೆಚ್ಚಿಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ನಮ್ಮ ನೆಲದಲ್ಲಿ ಹುಟ್ಟಿ ನಮ್ಮ ಭಾಷೆಯಲ್ಲಿ ಮೊದಲ ಬಾರಿಗೆ ಸಿನಿಮಾ ಅವಕಾಶವನ್ನು ಗಿಟ್ಟಿಸಿಕೊಂಡು ಈಗ ಪರಭಾಷೆಯಲ್ಲಿ ಮಿಂಚುತ್ತಿರುವಂತಹ ನಟ-ನಟಿಯರಿಗಿಂತ ಸಾಯಿ ಪಲ್ಲವಿ ಅವರು ಎಷ್ಟೋ ಮೇಲು ಅಂತ ಹೇಳಿದ್ದಾರೆ ನಿಜಕ್ಕೂ ಕೂಡ ಸಾಯಿ ಪಲ್ಲವಿ ಅವರ ಒಂದು ಕನ್ನಡಾಭಿಮಾನವನ್ನು ನಾವು ಗೌರವಿಸಲೇಬೇಕು.
ಇನ್ನು ಮುಂದೆಯಾದರೂ ರಶ್ಮಿಕ ಮದ್ದಣ್ಣ ಅವರು ಸ್ವಲ್ಪವಾದರೂ ಕೂಡ ಕನ್ನಡದ ಬಗ್ಗೆ ಪ್ರೀತಿ ಮತ್ತು ಒಲವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಏಕೆಂದರೆ ಬೇರೆ ಭಾಷೆಯ ನಟ-ನಟಿಯರಿಗೆ ಇರುವಷ್ಟು ಕಿಂಚಿತ್ತು ಗೌರವ ಎಂಬುದು ರಶ್ಮಿಕ ಮದ್ದಣ್ಣ ಅವರಿಗೆ ಇಲ್ಲ ಅಂತ ಅನಿಸುತ್ತದೆ. ಇನ್ನು ಮುಂದೆಯಾದರೂ ಸಾಯಿ ಪಲ್ಲವಿ ಅವರನ್ನು ನೋಡಿ ಇವರು ಕಲಿತುಕೊಳ್ಳಲಿ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ನೀವೇನಾದರೂ ಸಾಯಿ ಪಲ್ಲವಿ ಅವರು ಮಾಡಿದಂತಹ ಈ ಕೆಲಸವನ್ನು ಮೆಚ್ಚುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ನಮಗೆ ಸಾಯಿಪಲ್ಲವಿ ಅಂತ ಹೇಳಿ, ರಶ್ಮಿಕ ಮದ್ದಣ್ಣ ಅವರ ಮಾಡುತ್ತಿರುವಂತಹ ಅವಮಾನವನ್ನು ನೀವು ಖಂ’ಡಿಸುವುದಾದರೆ ರಶ್ಮಿಕ ಮದ್ದಣ್ಣ ಅಂತ ಕಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.