ಕೊರೊನ ಲಾಕ್ಡೌನ್ ಆದ ಕಾರಣದಿಂದ ಎಲ್ಲೆಡೆ ವರ್ಕ್ ಫ್ರಮ್ ಹೋಮ್ ಎನ್ನುವ ಮಾದರಿಯ ಕೆಲಸಗಳು ಚಾಲ್ತಿಗೆ ಬಂದವು. ಲಾಕ್ಡೌನ್ ಸಮಯದಲ್ಲಿ ಹೊರಗೆ ಓಡಾಡಲು ವ್ಯವಸ್ಥೆ ಇಲ್ಲದ ಕಾರಣ ಮತ್ತು ಆಫೀಸಿಗಳಲ್ಲಿ ಹೆಚ್ಚು ಜನರು ಸೇರಬಾರದು ಎನ್ನುವ ಕಾರಣಕ್ಕಾಗಿ ಈ ರೀತಿ ಅನುಕೂಲತೆ ಮಾಡಿಕೊಡಲಾಯಿತು. ಆದರೆ ಅದರ ಪ್ರಭಾವ ಈಗ ಜನರ ಮೇಲೆ ಎಷ್ಟಾಗಿದೆ ಎಂದರೆ ಯಾರು ಕೂಡ ಮರಳಿ ಕಂಪನಿಗೆ ಹೋಗಿ ಕೆಲಸ ಮಾಡಲು ಇಚ್ಛೆ ಪಡುತ್ತಿಲ್ಲ.
ಮನೆಯಲ್ಲಿಯೇ ಇದ್ದುಕೊಂಡು ಕೆಲಸ ಮಾಡುವ ಕೆಲಸ ಸಿಕ್ಕರೆ ಸಾಕು ಎಂದು ಬಯಸುತ್ತಿದ್ದಾರೆ. ಇದರ ಜೊತೆಗೆ ಮನೆಯಲ್ಲಿರುವ ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಕೂಡ ಪಾರ್ಟ್ ಟೈಮ್ ಗೆ ಮನೆಯಲ್ಲೇ ಮಾಡಬಹುದಾದ ಕೆಲಸಗಳು ಸಿಕ್ಕರೆ ಸಾಕು ಎಂದು ನೋಡುತ್ತಿರುತ್ತಾರೆ. ಈ ಬಗ್ಗೆ ಇಂಟರ್ನೆಟ್ ಅಲ್ಲೂ ಕೂಡ ಸಾಕಷ್ಟು ಸರ್ಚ್ಗಳು ಮಾಡುತ್ತಾರೆ.
ಆನ್ಲೈನ್ ನಲ್ಲಿ ಡಾಟಾ ಎಂಟ್ರಿ ವರ್ಕ್ ಅಥವಾ ಆನ್ಲೈನ್ ನಲ್ಲಿ ಕಾಲ್ ಸೆಂಟರ್ ವರ್ಕ್ ಅಥವಾ ಆನ್ಲೈನಲ್ಲಿ ಯಾವುದಾದರೂ ಕೆಲಸಗಳು ಸಿಗುತ್ತದೆಯಾ ಎಂದು ನೋಡುತ್ತಿರುತ್ತಾರೆ. ಇಂಥವರನ್ನು ಗುರುತಿಸಿ ಕೆಲವು ಕಂಪನಿಗಳು ಕೆಲಸವನ್ನು ಕೊಡುತ್ತವೆ. ಆದರೆ ಇವರಿಗೆಲ್ಲಾ ಸಿಗುವುದು ಕಂಪನಿಗಳ ಬ್ರಾಂಡನ್ನು ಪ್ರಮೋಟ್ ಮಾಡುವ ಕೆಲಸಗಳು.
ಉದಾಹರಣೆಗೆ ಯಾವುದಾದರೂ ಒಂದು ಫೈನಾನ್ಸ್ ಕಂಪನಿ ಇವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತದೆ ಜೊತೆಗೆ ಒಂದು ತಿಂಗಳಿಗೆ ಕನಿಷ್ಠ ಮೊತ್ತದ ಹಣವನ್ನು ಸಂಬಳವಾಗಿ ಕೊಡುತ್ತೇವೆ ಎಂದು ಹೇಳುತ್ತವೆ. ಉದಾಹರಣೆಗೆ 15,000 ಸಂಬಳವನ್ನು ಕೊಡುತ್ತೇವೆ ಇದು ನಿಮಗೆ ಫಿಕ್ಸೆಡ್ ಸ್ಯಾಲರಿ ಇಷ್ಟು ಸಿಗಬೇಕು ಎಂದರೆ ನೀವು ದಿನಕ್ಕೆ ಇಷ್ಟು ಕರೆಗಳನ್ನು ಮಾಡಲೇಬೇಕು ಎಂದು ಟಾರ್ಗೆಟ್ ನೀಡುತ್ತವೆ.
ಮತ್ತು ನೀವು ಕಸ್ಟಮರ್ ಗಳ ಜೊತೆ ಮಾತನಾಡಿ ಕನ್ವೆನ್ಸ್ ಮಾಡಿ ಲೋನ್ ತೆಗೆದುಕೊಳ್ಳುವಂತೆ ಮಾಡಿದರೆ ಅದಕ್ಕೂ ಕೂಡ ನಿಮಗೆ ಇನ್ಸೆಂಟಿವ್ ಕೊಡುತ್ತೇವೆ ಎಂದು ಹೇಳುತ್ತಾರೆ. ಉದಾಹರಣೆಗೆ ನೀವು ಒಂದು ಲಕ್ಷ ಯಾರಾದರೂ ಲೋನ್ ತೆಗೆದುಕೊಳ್ಳುವಂತೆ ಮಾಡಿದರೆ ನಿಮಗೆ 10,000 ಇನ್ಸೆಂಟಿವ್ ಕೊಡುತ್ತೇವೆ ಎಂದು ಹೇಳುತ್ತಾರೆ. ಕೆಲಸಗಳಿಗೆ ಸೇರಿಕೊಳ್ಳಲು ಬಳಸುವ ಅಭ್ಯರ್ಥಿಗಳನ್ನು ಕೆಲವೊಂದು ಕಂಪನಿಗಳು ಹಾಗೆ ಸೇರಿಸಿಕೊಳ್ಳುವುದಿಲ್ಲ.
ಮೊದಲಿಗೆ ಕನಿಷ್ಠ 5000 ಅಥವಾ 10,000 ಹಣವನ್ನು ನೀವು ಕಟ್ಟಬೇಕು ಎಂದು ಹೇಳಿ ಸುಲಿಗೆ ಮಾಡುತ್ತವೆ. ಬಳಿಕ ಇವುಗಳ ವರಸೆ ಬದಲಾಗಿ ಹೋಗುತ್ತದೆ. ಯಾಕೆಂದರೆ ಅವರೇ ಒಂದಷ್ಟು ಕಸ್ಟಮರ್ ಲಿಸ್ಟ್ ಕೊಡುತ್ತಾರೆ ಆ ನಂಬರಿಗೆ ಕರೆ ಮಾಡಿದರೆ ಅವರ್ಯಾರು ಸ್ವೀಕರಿಸುವುದಿಲ್ಲ. ಅಲ್ಲಿಗೆ ನಿಮ್ಮ ಫಿಕ್ಸೆಡ್ ಸ್ಯಾಲರಿ ಹೋಗಿ ಬಿಡುತ್ತದೆ, ಯಾಕೆಂದರೆ ನೀವು ಕಂಪನಿ ಹೇಳಿದ ಸಮಯದವರೆಗೆ ಫೋನಿನಲ್ಲಿ ಮಾತನಾಡಲು ಆಗುವುದಿಲ್ಲ.
ಅಪ್ಪಿ ತಪ್ಪಿ ಯಾರಾದರೂ ಕರೆ ಸ್ವೀಕರಿಸಿ ನೀವು ಅವರನ್ನು ಲೋನ್ ತೆಗೆದುಕೊಳ್ಳುವಂತೆ ಕನ್ವೆನ್ಸ್ ಮಾಡಿದರೆ ಅವರು ಒಂದು ಲಕ್ಷ ಲೋನ್ ತೆಗೆದುಕೊಂಡರೆ ಅಂದೇ ನಿಮ್ಮ ಕೆಲಸ ಹೋಗಿಬಿಡುತ್ತದೆ. ಯಾಕೆಂದರೆ ನಿಮಗೆ ಆ ಇನ್ಸೆಂಟಿವ್ ಕೊಡಲು ಕಂಪನಿಗೆ ಇಷ್ಟ ಇರುವುದಿಲ್ಲ, ನಿಮ್ಮನ್ನು ಬಳಸಿಕೊಂಡು ಅವರು ಕಸ್ಟಮರ್ ಗಳನ್ನು ಹಿಡಿದಿರುತ್ತಾರೆ ಅಷ್ಟೇ.
ನಿಮಗೆ ಹಣ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹೇಳದೆ ಕೇಳದೆ ಕೆಲಸದಿಂದ ತೆಗೆದುಬಿಡುತ್ತಾರೆ. ಬಹುತೇಕ ಆನ್ಲೈನ್ ವರ್ಕ್ ಗಳು ಇದೇ ರೀತಿ ಇರುತ್ತವೆ. ಕೊನೆಯಲ್ಲಿ ನೀವು ಯಾರಾದರೂ ಆಫರ್ ಮಾಡಿ ಅವರು ಇದಕ್ಕೆ ಜಾಯಿನ್ ಆಗುವಂತೆ ಮಾಡಿದರೆ ನಿಮ್ಮ ಹಣ ವಾಪಸ್ಸು ಕೊಡುತ್ತೇವೆ ಎಂದು ಹೇಳಿ ಆಗಲು ಕೂಡ ಮೋಸ ಮಾಡುತ್ತಾರೆ.
ಹಾಗಾಗಿ ಯಾವುದೇ ವರ್ಕ್ ಫ್ರಮ್ ಹೋಮ್ ಕೆಲಸವನ್ನು ಹುಡುಕುವ ಮುನ್ನ ಅಥವಾ ಅದನ್ನು ಒಪ್ಪಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರೆ ಈ ರೀತಿ ಮೋಸ ಹೋಗಿರುವ ಪ್ರಕರಣಗಳು ಹೆಚ್ಚಾಗಿವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ತಪ್ಪದೆ ಹಂಚಿಕೊಳ್ಳಿ.