ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ವಾಹನಗಳ ಅಗತ್ಯ ಇದೆ. ಪ್ರತಿಯೊಂದು ಮನೆಗೂ ಕೂಡ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ್ದೇ ಆಗಲಿ ಒಂದು ವಾಹನ ಬೇಕೇ ಬೇಕು. ಇಂದಿನ ಧಾವಂತ ಬದುಕಿನಲ್ಲಿ ಸಮಯಕ್ಕೆ ಸರಿಯಾಗಿ ನಮ್ಮ ಕೆಲಸಗಳು ಆಗಬೇಕು ಎಂದರೆ ವಾಹನಗಳ ಮೊರೆ ಹೋಗಲೇಬೇಕು. ಆದರೆ ಈ ರೀತಿ ವಾಹನಗಳ ಖರೀದಿಗೆ ಬಹಳ ಶ್ರಮ ಹಾಕಬೇಕು.
ಹಲವು ದಿನಗಳ ವರೆಗೆ ದುಡಿದ ಹಣವನ್ನು ಹೂಡಿಕೆ ಮಾಡಿ ಅಥವಾ ಇದಕ್ಕಾಗಿ ಲೋನ್ ಮಾಡಿ ವಾಹನಗಳನ್ನು ಖರೀದಿಸುತ್ತೇವೆ. ಒಂದು ಬಾರಿ ವಾಹನ ನಮ್ಮದು ಎಂದು ಆದಮೇಲೆ ಅದರ ಮೇಲೆ ಒಂದು ಸೆಂಟಿಮೆಂಟ್ ಬೆಳೆಯುತ್ತದೆ. ಹಾಗಾಗಿ ಆ ವಾಹನ ಬಹಳ ದಿನಗಳವರೆಗೆ ನಮ್ಮ ಜೊತೆ ಇರಬೇಕು ಎನ್ನುವ ಇಚ್ಛೆ ಉಂಟಾಗುತ್ತದೆ. ಜೊತೆಗೆ ನಾವು ಅದರ ಮೂಲಕವೇ ಸಂಚಾರ ಮಾಡುವುದರಿಂದ ನಮ್ಮ ಸಂಪೂರ್ಣ ಪ್ರಾಣದ ಜವಾಬ್ದಾರಿ ಅದರ ಮೇಲೆ ಇರುತ್ತದೆ.
ಹಾಗಾಗಿ ವಾಹನ ಖರೀದಿಸುವಾಗ ಕೆಲ ನಿಯಮಗಳನ್ನು ಪಾಲಿಸಿದರೆ ನಿಮ್ಮ ಆರೋಗ್ಯಕ್ಕೂ ತೊಂದರೆ ಆಗದಂತೆ ಹಾಗೂ ಬಹಳ ದಿನಗಳವರೆಗೆ ವಾಹನವು ನಿಮ್ಮ ಮನೆಯಲ್ಲಿ ಇರುವಂತೆ ನೋಡಿಕೊಳ್ಳಬಹುದು. ಶುಭ ಕಾರ್ಯಗಳನ್ನು ಮಾಡುವಾಗ ಯಾರು ಸಹಾ ರಾಹುಕಾಲ, ಗುಳಿಕ ಕಾಲ ಮತ್ತು ಯಮಗಂಡ ಕಾಲದಲ್ಲಿ ಮಾಡುವುದಿಲ್ಲ. ಇದೇ ನಿಯಮ ವಾಹನ ಖರೀದಿಗೂ ಕೂಡ ಅನ್ವಯಿಸುತ್ತದೆ.
ಯಾಕೆಂದರೆ ವಾಹನವು ಲಕ್ಷ್ಮಿ ಸ್ವರೂಪದಲ್ಲಿ ನಮ್ಮ ಮನೆಗೆ ಬರುವುದರಿಂದ ಅದನ್ನು ಒಳ್ಳೆ ಘಳಿಗೆಯಲ್ಲಿ ಖರೀದಿಸಿ ಮನೆಗೆ ತರಬೇಕು. ಆದ್ದರಿಂದ ಈ ಮೂರು ಕಾಲಗಳನ್ನು ಬಿಟ್ಟು ವಾಹನ ಖರೀದಿಸಬೇಕು. ಅದರಲ್ಲೂ ಗೋಧೂಳಿ ಲಗ್ನದ ಸಮಯದಲ್ಲಿ ವಾಹನ ಖರೀದಿ ಮಾಡಿದರೆ ಬಹಳ ಒಳ್ಳೆಯದು ಎನ್ನುತ್ತದೆ ಶಾಸ್ತ್ರ.
ಗೋಧೂಳಿ ಲಗ್ನದಲ್ಲಿ ಮನೆಗೆ ಏನೇ ಬಂದರು ಅದು ಅದು ಇನ್ನಷ್ಟು ಹೆಚ್ಚಾಗುತ್ತದೆ. ಯಾಕೆಂದರೆ, ಹೆಸರಿನಲ್ಲಿ ಇರುವಂತೆ ಗೋಧೂಳಿ ಎಂದರೆ ಮನೆಯಿಂದ ಮೇಯಲು ಹೊರಗೆ ಹೋಗಿದ್ದ ಚತುಷ್ಪಾದ ಪ್ರಾಣಿಗಳೆಲ್ಲ ಹೊಟ್ಟೆ ತುಂಬಾ ಮೇವು ಮೇದು ಸುರಕ್ಷಿತವಾಗಿ ಮನೆಗೆ ಬಂದು ಸೇರುವಂತಹ ಘಳಿಗೆ ಅದು. ಹಾಗಾಗಿ ಗೋಧೂಳಿ ಲಗ್ನಕ್ಕೆ ಅಷ್ಟೊಂದು ಪ್ರಶಾಸ್ತ್ಯ ಇದೆ.
ಇತ್ತೀಚಿಗೆ ಎಲ್ಲಾ ಶೋರೂಮ್ ಗಳಲ್ಲೂ ಕೂಡ ವ್ಯವಹಾರಗಳು ಬೆಳಗ್ಗೆ 10 ರ ಮೇಲೆ ನಡೆಯುವುದರಿಂದ ಮತ್ತು ವಾಹನ ಡೆಲಿವರಿ ಸಂಜೆ ಸಮಯ ಸಿಗುವುದರಿಂದ ವಾಹನವನ್ನು ಖರೀದಿಸುವ ಗ್ರಾಹಕರಿಗೆ ಈ ಸಮಯದಿಂದ ಅನುಕೂಲತೆ ಆಗುತ್ತದೆ. ಇದೇ ಸಮಯದಲ್ಲಿ ಕರೆದಿಸಿ ಮತ್ತು ತಪ್ಪದೆ ನಿಮ್ಮ ಹತ್ತಿರದಲ್ಲಿರುವ ಯಾವ ದೇವಸ್ಥಾನದಲ್ಲಾದರೂ ಪೂಜೆ ಮಾಡಿಸಿ ನಂತರ ಮನೆಗೆ ತೆಗೆದುಕೊಂಡು ಬನ್ನಿ.
ಶುಕ್ರವಾರದ ಸಂಜೆ ಸಮಯದಲ್ಲಿ ಈ ರೀತಿ ಗೋಧೂಳಿ ಲಗ್ನದಲ್ಲಿ ವಾಹನವನ್ನು ಮನೆಗೆ ತರುವುದರಿಂದ ಇನ್ನು ಹೆಚ್ಚಿನ ಶುಭ ಎಂದು ನಂಬಲಾಗಿದೆ. ಈ ರೀತಿ ಓರೆಗಳನ್ನು ನೋಡಿ ವಾಹನಗಳನ್ನು ಖರೀದಿಸಿದಾಗ ಅದರಿಂದ ನಮಗೆ ಲಾಭ ಹಾಗೂ ಸುರಕ್ಷತೆಯು ಇರುತ್ತದೆ, ಇದನ್ನು ಸಹ ನಂಬಲೇಬೇಕು. ಹೀಗೆ ಮಾಡಿದಾಗ ಹಲವು ದಿನಗಳವರೆಗೆ ನಮ್ಮ ಜೊತೆಯಲ್ಲಿ ವಾಹನ ಇರುವ ಸಾಧ್ಯತೆ ಇರುತ್ತದೆ.
ಮನೆಗೆ ತರುವ ಯಾವುದೇ ವಸ್ತುವಾದರೂ ಲಕ್ಷ್ಮಿ ಸ್ವರೂಪ ಆಗಿರುವುದರಿಂದ ಅದಕ್ಕೆ ಸಮಯ ಕೊಟ್ಟು ಶುಭ ಘಳಿಗೆಯಲ್ಲಿ ತೆಗೆದುಕೊಂಡು ಬನ್ನಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.