ಶಂಕರ್ ನಾಗ್ ಈ ಹೆಸರು ಕೇಳಿದರೆ ಒಂದು ರೀತಿಯ ಸಂಚಲನ ಯಾಕೆಂದರೆ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಅಷ್ಟೇ ಚುರುಕಾಗಿ ಇರುತ್ತಿದ್ದ ವ್ಯಕ್ತಿತ್ವದವರು. ಕನ್ನಡಿಗರು ಇವರನ್ನು ಆಟೋರಾಜ ಕರಾಟೆ ಕಿಂಗ್ ಹೀಗೆ ನಾನಾ ಹೆಸರಿನಿಂದ ಕರೆಯುತ್ತಾರೆ. ಶಂಕರ್ ನಾಗ್ ಅವರು ಮೂಲತಃ ಹೊನ್ನಾವರ ದವರು. ನವೆಂಬರ್ 9, 1959ರಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪಡೆದು ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಹೋಗಿದ್ದರು. ಆದರೆ ಅಲ್ಲಿಂದ ಮುಂದೆ ಅವರ ಬದುಕಿನ ದಿಕ್ಕೇ ಬದಲಾಗಿ ಹೋಯಿತು. ಅಲ್ಲಿ ಮರಾಠಿ ನಾಟಕಗಳನ್ನು ನೋಡುತ್ತಿದ್ದ ಇವರು ಅವುಗಳಿಂದ ಪ್ರಭಾವಿತರಾಗಿ ತಾವು ಕೂಡ ಕನ್ನಡದಲ್ಲಿ ಇದೇ ರೀತಿ ಸಾಧನೆ ಮಾಡಬೇಕು ಎಂದು ಹಂಬಲಿಸಿ ಕರ್ನಾಟಕಕ್ಕೆ ಹಿಂದಿರುಗಿದರು. ಇವರ ಎಲ್ಲಾ ಕಾರ್ಯಗಳಿಗೂ ಸಹ ಬೆನ್ನೆಲುಬಾಗಿ ಇದ್ದವರು ಇವರ ಸಹೋದರನಾದ ಅನಂತನಾಗ್ ಅವರು.
ಮುಂಬೈನಲ್ಲಿ ಶಂಕರ್ ನಾಗ್ ಅವರಿಗೆ ಅರುಂಧತಿನಾಗ್ ಅವರ ಜೊತೆ ಸ್ನೇಹವಾಗಿ ನಂತರ ಅವರಿಬ್ಬರು ಪ್ರೀತಿಸಿ ಮದುವೆಯಾದರು. ಕರ್ನಾಟಕಕ್ಕೆ ಬಂದಮೇಲೆ ಶಂಕರನಾಗ್ ಅವರ ಜೊತೆ ಅವರು ಕೂಡ ಅವರ ಕನಸುಗಳಿಗೆ ನೀರೆರೆಯುತ್ತಿದ್ದರು. ಶಂಕರ್ ನಾಗ್ ಅವರು ಕನ್ನಡ ಸಿನಿಮಾರಂಗದ ಪ್ರತಿಭಾನ್ವಿತ ನಟ ಆ ಸಮಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟರಾಗಿದ್ದವರು ಇವರು. ಇವರು ಕನ್ನಡ ಸಿನಿಮಾರಂಗದ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಹಾಗೂ ಸಿನಿಮಾ ಕಥೆಯನ್ನು ಹಾಗೂ ಅದಕ್ಕೆ ಬರಹವನ್ನು ಸಿದ್ಧಪಡಿಸುವ ಕೆಲಸವನ್ನು ಸ್ವತಃ ಇವರೇ ಮಾಡುತ್ತಿದ್ದರು. ಇವರ ಅಭಿನಯ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಪ್ರತಿಯೊಂದು ಸಿನಿಮಾ ಕೂಡ ಒಂದು ವಿಭಿನ್ನ ಪ್ರಯತ್ನವೇ ಆಗಿತ್ತು. ಇವರು ನಟಿಸಿದ ಒಂದಾನೊಂದು ಕಾಲದಲ್ಲಿ, ಆಕ್ಸಿಡೆಂಟ್, ನಾಗಿಣಿ ಜನ್ಮ ಜನ್ಮದ ಅನುಬಂಧ, ಸೀತಾರಾಮು, ಮೂಗನ ಸೇಡು, ಸಾಂಗ್ಲಿಯಾನ ಇನ್ನು ಮುಂತಾದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿತ್ತು.
ಸಿನಿಮಾ ಮಾತ್ರವಲ್ಲದೆ ರಂಗಭೂಮಿಯಲ್ಲಿ ಕೂಡ ಇವರು ಕೆಲಸ ಮಾಡುತ್ತಿದ್ದರು. ಇವರು ಮಾಲ್ಗುಡಿ ಡೇಸ್ ಎನ್ನುವ ಧಾರಾವಾಹಿಯನ್ನು ಕೂಡ ನಿರ್ದೇಶಿಸಿದ್ದರು. ಇದು ಇಂದಿಗೂ ಸಹ ಕನ್ನಡಿಗರ ಹೆಮ್ಮೆಯಾಗಿದೆ. ಇಷ್ಟೊಂದು ಚುರಕಾಗಿರುತ್ತಿದ್ದ ಸದಾ ಪಾದರಸದಂತೆ ಯಾವಾಗಲೂ ಉತ್ಸಾಹದಿಂದ ಇರುತ್ತಿದ್ದ ದಿನದ 24 ಗಂಟೆಯೂ ಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡು ಸಿನಿಮಾವನ್ನು ಪ್ರಪಂಚ ಮಾಡಿಕೊಂಡಿದ್ದ ಇವರು ತಾವು ಗಳಿಸಿದ ಹಣವನ್ನೆಲ್ಲ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದರು. ಎಷ್ಟೋ ಬಾರಿ ಸಿನಿಮಾ ಶೂಟಿಂಗ್ ನಡೆಯುವ ಸ್ಥಳವನ್ನು ಇವರು ಮನೇ ಮಾಡಿಕೊಂಡು ಬಿಡುತ್ತಿದ್ದರು ಎಂದು ಇವರ ಹತ್ತಿರದವರು ಹೇಳುತ್ತಾರೆ. ಆದರೆ ಇವರು ಸಿನಿಮಾದ ಮೂಲಕ ಕರ್ನಾಟಕಕ್ಕೆ ಚಿರಪರಿಚಿತರಾದರು ಕೂಡ ಇವರು ಸಿನಿಮಾವನ್ನು ಬಿಟ್ಟು ವಿಭಿನ್ನ ರೀತಿಯಲ್ಲಿ ಆಲೋಚನೆಯನ್ನು ಮಾಡುತ್ತಿದ್ದರು ಹಾಗೂ ಕರ್ನಾಟಕದ ಅಭಿವೃದ್ಧಿಗಾಗಿ ಸದಾ ಚಿಂತಿಸುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಬೆಂಗಳೂರಿಗೆ ಮೆಟ್ರೋ ತರಿಸಬೇಕು ಎನ್ನುವುದು ಅವರ ಬಹುದೊಡ್ಡ ಕನಸುಗಳಲ್ಲಿ ಒಂದು.
ಅದಕ್ಕಾಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಆ ಕಾಲದಲ್ಲಿಯೇ ಇದಕ್ಕಾಗಿ ಸ್ಕೆಚ್ ರೆಡಿ ಮಾಡಿಸಿದ್ದರಂತೆ. ಈ ರೀತಿ ಹಲವಾರು ಆಲೋಚನೆಗಳು ಇನ್ನೂ ಅವರ ಮನಸ್ಸಿನಲ್ಲಿತ್ತು ಮತ್ತು ಸದಾ ಜನಸೇವೆ ಮಾಡುವ ಹಂಬಲವೂ ಕೂಡ ಅವರಲ್ಲಿತ್ತು. ಇಂತಹ ಪ್ರತಿಭಾವಂತ ನಟ ಹಾಗೂ ಸಹೃದಯಿ ಮತ್ತು ಒಳ್ಳೆಯ ಚಿಂತಕನನ್ನು ಕಳೆದುಕೊಂಡಿದ್ದು ಕೇವಲ ಸಿನಿಮಾರಂಗ ಮಾತ್ರವಲ್ಲದೆ ಕರ್ನಾಟಕ ಮತ್ತು ಭಾರತಕ್ಕೆ ಒಂದು ದೊಡ್ಡ ನಷ್ಟ ಎನ್ನಬಹುದು. ಈಗಲೂ ಸಹ ಈ ಮರೆಯಲಾಗದ ಮಾಣಿಕ್ಯ ಮೇಲೆ ಕನ್ನಡಿಗರಿಗೆ ಅಭಿಮಾನಿ ಎಷ್ಟಿದೆಯೆಂದರೆ ನೀವು ಯಾವುದೇ ಆಟೋ ನೋಡಿದರೂ ಸಹ ಅಲ್ಲಿ ನಮ್ಮ ಶಂಕರಣ್ಣನ ಫೋಟೋ ಮತ್ತು ಸ್ಟಿಕರ್ಗಳು ತಪ್ಪದೇ ಇರುತ್ತದೆ. ಅವರೇನಾದರೂ ಇನ್ನೂ ಬದುಕಿದ್ದರೆ ನಮ್ಮ ಕನ್ನಡ ಚಿತ್ರರಂಗವೂ ಆಗಿನ ಕಾಲದಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಈ ರೀತಿಯಾಗಿ ಸಿನಿಮಾಗಳ ಮೇಲೆ ಹಾಗೂ ಕನ್ನಡದ ನೆಲದ ಮೇಲೆ ವಿಭಿನ್ನ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದ ವ್ಯಕ್ತಿ ಶಂಕ್ರಣ್ಣ ರವರು.
ಶಂಕರ್ ನಾಗ್ ಅವರು ಅಷ್ಟು ಚಿಕ್ಕವಯಸ್ಸಿಗೆ ನಮ್ಮನ್ನೆಲ್ಲಾ ಅಗಲಿ ಹೋದದ್ದು ತುಂಬಾ ನೋವಿನ ಸಂಗತಿ ಆದರೆ ಆದಿನ ಆಕ್ಸಿಡೆಂಟ್ ಆದ ಜಾಗದಲ್ಲಿ ಅದೇ ಕಾರಿನಲ್ಲಿ ಅರುಂಧತಿ ನಾಗ್ ಮತ್ತು ಶಂಕರ್ ನಾಗ್ ಅವರ ಪುತ್ರಿ ಕಾವ್ಯನಾಗ್ ಕೂಡ ಇದ್ದರು. ಅದೃಷ್ಟವಶಾತ್ ಇವರಿಬ್ಬರು ಪ್ರಾಣಾಪಯದಿಂದ ಪಾರಾಗಿದ್ದರು. ಈ ಘಟನೆ ನಡೆದ ಬಳಿಕ ಅರುಂಧತಿನಾಗ್ ಅವರು ಸಿನಿಮಾಗಳಲ್ಲಿ ಅಷ್ಟೊಂದು ಕಾಣಿಸಿಕೊಳ್ಳಲಿಲ್ಲ ಅವರು ತಮ್ಮ ಪಾಡಿಗೆ ತಾವು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು. ಶಂಕರನಾಗ್ ಅವರ ಆಸೆಯಂತೆ ಅವರು ಬೆಂಗಳೂರಿನಲ್ಲಿ ರಂಗಮಂದಿರ ಕಟ್ಟಬೇಕು ಎಂದು ಕನಸು ಕಂಡಿದ್ದ ಆ ಕನಸನ್ನು ನನಸು ಮಾಡಲು ಕೆಲಸ ಮಾಡುತ್ತಿದ್ದರು. ಆಗಲೂ ಸಹ ಇವರೆಲ್ಲರಿಗೆ ಸಹಾಯಕ್ಕೆ ನಿಂತಿದ್ದು ಶಂಕರ್ ನಾಗ್ ಅವರ ಅಣ್ಣ ಅನಂತನಾಗ್ ಅವರು. ಅಷ್ಟೇ ಅಲ್ಲದೆ ಅರುಂಧತಿನಾಗ್ ಅವರಿಗೆ ಮಗಳು ಕಾವ್ಯ ನಾಗ್ ಅವರನ್ನು ಬೆಳೆಸುವ ಅವರ ವಿದ್ಯಾಭ್ಯಾಸ ನೋಡಿಕೊಳ್ಳುವ ಮತ್ತು ಅವರ ಭವಿಷ್ಯವನ್ನು ಕಟ್ಟಿಕೊಡುವ ಜವಾಬ್ದಾರಿಯೂ ಇತ್ತು.
ಕಾವ್ಯ ನಾಗ್ ಅವರಿಗೆ ಶಂಕರ್ ನಾಗ್ ಅವರು ಅಗಲಿದಾಗ ಕೇವಲ ಐದು ವರ್ಷ ಆಗಿನಿಂದ ಇವರ ಸಂಪೂರ್ಣ ಜವಾಬ್ದಾರಿಯನ್ನು ಅರುಂಧತಿನಾಗ್ ಅವರೇ ನೋಡಿಕೊಂಡರು. ಅಪ್ಪನಂತೇ ವಿಭಿನ್ನ ವಿಭಿನ್ನ ಆಲೋಚನೆ ಹೊಂದಿದ್ದ ಇವರು ಸಿನಿಮಾರಂಗಕ್ಕೆ ಹೋಗುವ ಮನಸ್ಸು ಮಾಡಲಿಲ್ಲ. ಬದಲಾಗಿ ಪ್ರಕೃತಿ ಬಗ್ಗೆ ಒಲವು ಹೊಂದಿದ್ದ ಇವರು ವೈಲ್ಡ್ಲೈಫ್ ಬಯಾಲಜಿ ಎನ್ನುವ ವಿಷಯದಲ್ಲಿ ಪದವಿ ಪಡೆದರು. ಇವತ್ತು ತಮ್ಮ ಬಾಲ್ಯ ಸ್ನೇಹಿತನಾಗಿದ್ದ ಸಲೀಲ್ ಎನ್ನುವವರನ್ನು 2010ರಲ್ಲಿ ವಿವಾಹವಾಗಿ ವಿಯೆಟ್ನಾಂನಲ್ಲಿ ಸೆಟಲ್ ಆಗಿ ಒಳ್ಳೆಯ ಲೈಫ್ ಲೀಡ್ ಮಾಡುತ್ತಿದ್ದರು. ಆದರೆ ಇವರಿಬ್ಬರ ಮನಸ್ಸು ಮಾತ್ರ ಕರ್ನಾಟಕದ ಕಡೆ ಸೆಳೆಯುತ್ತಿತ್ತು ಹಾಗಾಗಿ ಲಕ್ಷಾಂತರ ರೂ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಐಷಾರಾಮಿ ಜೀವನವನ್ನು ಬಿಟ್ಟು ತುಂಬಾ ಸರಳವಾಗಿ ಈಗ ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಕೋಕೊನೆಸ್ ಎನ್ನುವ ಶುದ್ಧವಾದ ತೆಂಗಿನ ಎಣ್ಣೆ ಉತ್ಪಾದಿಸುವ ಕಂಪನಿಯನ್ನು ಕಟ್ಟಿ ಈ ಮೂಲಕ ಕರುನಾಡಿಗೆ ಶುದ್ಧವಾದ ತೆಂಗಿನ ಎಣ್ಣೆ ತಲುಪಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಕಾವ್ಯ ಅವರು ಮಾಡುತ್ತಿರ ಕೆಲಸದ ಬಗ್ಗೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಂತರ ತಿಳಿಸಿ.