ಪ್ರತಿಯೊಬ್ಬರೂ ಕೂಡ ತಮಗೆ ಕಷ್ಟಗಳು ಬಂದಾಗ ಅಥವಾ ಯಾವುದಾದರೂ ಕೋರಿಕೆಗಳು ನೆರವೇರಬೇಕು ಎಂದಾಗ ಅವರ ಮನೆ ದೇವರಿಗೆ ಮುಡುಪನ್ನು ಕಟ್ಟಿಕೊಳ್ಳುತ್ತಾರೆ ಅಥವಾ ಇಷ್ಟ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ವೆಂಕಟೇಶ್ವರನಿಗೆ ಒಂದು ವಿಶೇಷವಾದ ವಿಧಾನದ ಮೂಲಕ ಈ ರೀತಿ ಮುಡುಪು ಕಟ್ಟಿಕೊಂಡರೆ ಎಂತಹ ಸಮಸ್ಯೆ ಇದ್ದರೂ ಕೂಡ ಅದು ಶೀಘ್ರವಾಗಿ ಪರಿಹಾರ ಆಗುತ್ತದೆ, ಈ ರೀತಿ ಮುಡುಪು ಕಟ್ಟಿಕೊಂಡ ನಲವತ್ತೆಂಟು ದಿನಗಳಾದ ಒಳಗೆ ಆಗುತ್ತದೆ ಎನ್ನುವುದು ನಂಬಿಕೆ.
ಯಾಕೆಂದರೆ ಕಲಿಯುಗದ ದೈವ ಎಂದು ಕರೆಸಿಕೊಂಡಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಸಂಕಟಗಳನ್ನು ಪರಿಹಾರ ಮಾಡುವ ಸ್ವಾಮಿ ಹಾಗೂ ಹಣಕಾಸಿನ ತೊಂದರೆಗಳನ್ನು ನಿವಾರಣೆ ಮಾಡುವ ದೇವರು ಎಂದೇ ಹೆಸರುವಾಸಿ ಆಗಿರುವುದರಿಂದ ಆರೋಗ್ಯ ಅಷ್ಟೈಶ್ವರ್ಯ ಮತ್ತು ನೆಮ್ಮದಿಗಾಗಿ ಎಲ್ಲರೂ ವೆಂಕಟೇಶ್ವರ ಸ್ವಾಮಿಯನ್ನು ಬೇಡುತ್ತಾರೆ.
ವೆಂಕಟೇಶ್ವರ ಸ್ವಾಮಿಗೆ ಮುಡುಪನ್ನು ಕಟ್ಟಿಕೊಳ್ಳಬೇಕು ಎಂದರೆ ಈ ರೀತಿ ಮಾಡಬೇಕು ಮನೆಯನ್ನು ಶುದ್ಧ ಮಾಡಿ, ಮಡಿಯುಟ್ಟು ಮನೆಯಲ್ಲಿ ಮೊದಲಿಗೆ ಗಣಪತಿಯನ್ನು ಆರಾಧನೆ ಮಾಡಿ ಗಣಪತಿ ಮುಂದೆ ಐದು ಬತ್ತಿಗಳನ್ನು ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು. ಓಂ ಗಣಪತಿಯೇ ನಮಃ ಎಂದು 21 ಬಾರಿ ಮಂತ್ರ ಹೇಳಿ ಗಣಪತಿ ಬಳಿ ವೆಂಕಟೇಶ್ವರ ಸ್ವಾಮಿಗೆ ಮಡುಪನ್ನು ಕಟ್ಟಿಕೊಳ್ಳುತ್ತೇವೆ ಇದು ನೆರವೇರಂತೆ ಮಾಡು ಎಂದು ಕೋರಿಕೊಳ್ಳಬೇಕು.
ಈ ರೀತಿ ಮಾಡಿದರೆ ಅದು ಶೀಘ್ರವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ಇದೆ. ನಂತರ ಒಂದು ಬಿಳಿ ಬಟ್ಟೆಯನ್ನು ಅರಿಶಿಣದ ನೀರಿನಲ್ಲಿ ಅದ್ದಿ ಒಣಗಿಸಬೇಕು ನಂತರ ಹಳದಿ ವಸ್ತ್ರಕ್ಕೆ ನಾಲ್ಕು ಮೂಲೆಗಳನ್ನು ಕೂಡ ಕುಂಕುಮವನ್ನು ಹಚ್ಚಬೇಕು ನಂತರ ನಿಮ್ಮ ಶಕ್ತಿ ಅನುಸಾರ 11 ಅಥವಾ 21 ರೂಪಾಯಿ ಅಥವಾ 54 ರೂಪಾಯಿ ಅಥವಾ 108 ರೂಪಾಯಿಯನ್ನು ಹಾಕಿ ಮೂರು ಗಂಟುಗಳನ್ನು ಹಾಕಬೇಕು.
ಪ್ರತಿಯೊಂದು ಗಂಟುಗಳನ್ನು ಹಾಕುವಾಗಲು ಕೂಡ ನೀವು ನಿಮ್ಮ ಸಮಸ್ಯೆ ಅಥವಾ ಕೋರಿಕೆ ಏನು ಯಾವ ಕಾರಣಕ್ಕಾಗಿ ಈ ರೀತಿ ಮುಡುಪು ಕಟ್ಟುತ್ತಿದ್ದೀರಾ ಎನ್ನುವುದನ್ನು ಹೇಳಿಕೊಂಡು ಮುಡುಪನ್ನು ಕಟ್ಟಬೇಕು. ಈ ರೀತಿ ಕೇಳಿಕೊಂಡ ಮೇಲೆ ಪ್ರತಿ ಶನಿವಾರ ಸಾಧ್ಯವಾದರೆ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು 21 ಬಾರಿ ಓಂ ಗೋವಿಂದಾಯ ನಮಃ ಎಂದು ಪಠಿಸುತ್ತಾ ಪ್ರದಕ್ಷಿಣೆಯನ್ನು ಹಾಕಬೇಕು.
ಈ ರೀತಿ ಮಾಡಿದರೆ ಇನ್ನೂ ಶೀಘ್ರವಾಗಿ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ನಿಮಗೆ ಸಿಗುತ್ತದೆ ಮತ್ತು ದೈವಬಲ ನಿಮ್ಮ ಎಲ್ಲಾ ಕಾರ್ಯಗಳಿಗೆ ಜೊತೆಗಿರುತ್ತದೆ. ನಿಮ್ಮ ಕೋರಿಕೆಗಳು ನೆರವೇರಿದ ಬಳಿಕ ಆ ಮುಡುಪನ್ನು ಏನು ಮಾಡಬೇಕು ಎನ್ನುವುದು ಅನೇಕರ ಗೊಂದಲ.
ನಿಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಅಥವಾ ಸಂಕಷ್ಟ ಪರಿಹಾರ ಆದ ಬಳಿಕ ನೀವು ಯಾವ ಉದ್ದೇಶಕ್ಕಾಗಿ ಮುಡುಪನ್ನು ಕಟ್ಟಿಕೊಂಡಿದ್ದೀರಾ ಅದು ಪೂರ್ತಿ ಆದ ಬಳಿಕ ಆ ಮುಡುಪು ಕಟ್ಟಿದ್ದ ಹಣವನ್ನು ನೀವು ತಪ್ಪದೆ ತಿರುಪತಿಯಲ್ಲಿರುವ ವೆಂಕಟೇಶ್ವರ ಸ್ವಾಮಿಯ ಹುಂಡಿಯಲ್ಲಿ ಹಾಕಬೇಕು. ಹೀಗೆ ಹಾಕುವಾಗ ಸ್ವಲ್ಪ ಹಣವನ್ನು ಹೆಚ್ಚಿಗೆ ಹಾಕಬೇಕು.
ಆಗ ನೀವು ವೆಂಕಟೇಶ್ವರರ ಬಳಿ ಹಣವನ್ನು ನಿಮ್ಮ ಹಣಕ್ಕೆ ಬಡ್ಡಿ ರೂಪದಲ್ಲಿ ಕೊಡುತ್ತಿದ್ದೇನೆ ಎಂದು ಹೇಳಿಕೊಂಡು ಹಾಕಬೇಕು. ಈ ರೀತಿಯ ವಿಧಿ ವಿಧಾನಗಳಿಂದ ವೆಂಕಟೇಶ್ವರ ಸ್ವಾಮಿಗೆ ಮುಡುಪು ಕಟ್ಟಿಕೊಂಡು ಹೇಳಿಕೊಂಡರೆ ಅದು ಶೀಘ್ರವಾಗಿ ಫಲ ಕೊಡುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.