ನಮ್ಮ ಭಾರತ ದೇಶದಲ್ಲಿ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳು ಇವೆ. ಕೆಲವು ರಾಮಾಯಣ ಮಹಾಭಾರತದ ಕಾಲದಲ್ಲಿ ಸೃಷ್ಟಿಯಾಗಿದೆ ಎಂದು ನಂಬಲಾದರೆ ಕೆಲವೊಂದನ್ನು ದೇವತೆಗಳೇ ಸೃಷ್ಟಿಸಿ ಹೋಗಿದ್ದಾರೆ ಎನ್ನುವುದನ್ನು ಕೂಡ ಪುರಾಣ ಕಥೆಗಳು ಹೇಳುತ್ತವೆ. ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ನಂಬುವ ಹಾಗೂ ಪೂಜಿಸುವ ದೇವರಾದ ಮಹಾದೇವನ ಮಂದಿರಗಳು ಸಾಕಷ್ಟು ಇವೆ.
12 ಜ್ಯೋತಿರ್ಲಿಂಗಗಳು ಮಾತ್ರವಲ್ಲದೆ ಉಳಿದ ದೇವಾಲಯಗಳು ಕೂಡ ಶಿವನ ಪವಾಡಗಳಿಂದ ಅಷ್ಟೇ ಖ್ಯಾತಿಯನ್ನು ಹೊಂದಿವೆ. ಅಂತಹದೇ ಒಂದು ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಶಿವಲಿಂಗದ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುವ ಚಮತ್ಕಾರ ನಡೆಯುತ್ತಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕೂಡ ಕಣ್ಣಾರೆ ಈ ಪವಾಡವನ್ನು ನೋಡಿ ಶಿವನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ಈ ದೇವಾಲಯದಲ್ಲಿ ಸಾಕ್ಷಾತ್ ಶಿವನೇ ಶಿಲೆಯಾಗಿ ನಿಂತಿದ್ದಾರೆ ಎಂದು ನಂಬಲಾಗುತ್ತದೆ. ಹಿಮಾಚಲಪ್ರದೇಶ ರಾಜ್ಯದಲ್ಲಿ ಈ ದೇವಸ್ಥಾನ ಇದೆ. ಈ ದೇವಸ್ಥಾನಕ್ಕೆ ಹೋಗಬೇಕು ಎಂದರೆ ಹಿಮಾಚಲ ಪ್ರದೇಶಕ್ಕೆ ವಿಮಾನ ಮಾರ್ಗದಲ್ಲಿ ತೆರಳಿ ಬಂಟರ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು. ಅಲ್ಲಿಂದ 13 ಕಿಲೋಮೀಟರ್ ವರೆಗೆ ಪ್ರಯಾಣ ಮಾಡಿದರೆ ಕುಲ್ಲು ಎಂಬುವ ಗ್ರಾಮ ಸಿಗುತ್ತದೆ.
ಆ ಗ್ರಾಮದಿಂದ 47 km ವರೆಗೆ ಮತ್ತೆ ಪ್ರಯಾಣ ಬೆಳೆಸಿದರೆ ಮಣಿ ಕರಣ್ ಪ್ರದೇಶ ತಲುಪುತ್ತೀರಾ, ಈ ಮಣಿ ಕರಣ್ ಪ್ರದೇಶದಲ್ಲಿಯೇ ಈ ಪವಾಡ ಸದೃಶ ಶಿವಲಿಂಗ ನೆಲೆಸಿರುವುದು. ಈ ಶಿವಲಿಂಗವನ್ನು ಮೂರು ಹೆಸರಿನಿಂದ ಕರೆಯುತ್ತಾರೆ ಮಣಿಕರ್ಣಿಕ ಶಿವಲಿಂಗ, ಚಾವಲ್ ಲಿಂಗ, ಕಾಲಭೈರವೇಶ್ವರ ಲಿಂಗ ಎಂದು ಕರೆಯಲಾಗುತ್ತದೆ. ಮತ್ತು ಈ ದೇವಸ್ಥಾನವನ್ನು ಮಣಿ ಕರ್ಣಿಕ ಕಾಲಭೈರವ ರುದ್ರ ಮಹದೇವ ಮಂದಿರ ಎಂದು ಕರೆಯಲಾಗುತ್ತದೆ.
ಈ ದೇವಸ್ಥಾನದ ಶಿವಲಿಂಗವು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯಿಂದಲೂ ಪೂಜಿಸಲ್ಪಡುತ್ತಿದೆ ಎನ್ನುವುದನ್ನು ಕೆಲವು ಪುರಾಣ ಕಥೆಗಳು ಹೇಳುತ್ತವೆ ಮತ್ತು 1756ನೇ ಇಸ್ವಿಯಲ್ಲಿ ಇಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜನಾದ ರಾಜಘಟ್ ಸಿಂಗ್ ಈಗಿರುವ ಶಿವಾಲಯವನ್ನು ನಿರ್ಮಿಸಿದ ಎನ್ನುವ ಉಲ್ಲೇಖ ಇತಿಹಾಸದಲ್ಲಿದೆ. ಈ ದೇವಸ್ಥಾನದ ವಿಶೇಷತೆ ಏನೆಂದರೆ ದಿನದ 24 ಗಂಟೆಗಳು ಕೂಡ ಇಲ್ಲಿ ನಿಮಗೆ ಅನ್ನಪ್ರಸಾದ ಸಿಗುತ್ತದೆ.
ಅಲ್ಲದೆ ಈ ಅನ್ನಪ್ರಸಾದ ಶಿವನ ಎದುರೇ ತಯಾರಾಗುತ್ತದೆ. ಅಂದರೆ ಶಿವಲಿಂಗದ ಎದುರುಗಡೆ ಒಂದು ಬಿಸಿನೀರಿನ ಬಗ್ಗೆ ಇದೆ, ಆ ಬುಗ್ಗೆಯಲ್ಲಿ ದೇವಸ್ಥಾನದ ಸಿಬ್ಬಂದಿ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮುಚ್ಚುತ್ತಾರೆ ಅಥವಾ ಪಾತ್ರೆ ಒಳಗಡೆ ಬಿಸಿನೀರನ್ನು ತುಂಬಿ ಹಾಕುತ್ತಾರೆ ಹೀಗೆ ಹಾಕಿದ ಒಂದು ನಿಮಿಷದ ಒಳಗಡೆ ಅದು ಅನ್ನ ಆಗಿ ಪರಿವರ್ತನೆ ಆಗಿರುತ್ತದೆ ಜೊತೆಗೆ ಇಲ್ಲಿ ಎಲ್ಲಾ ಆಹಾರ ಪದಾರ್ಥವನ್ನು ಈ ಬಿಸಿ ನೀರನ್ನೇ ಬಳಸಿ ಮಾಡುತ್ತಾರೆ.
ಸುತ್ತಲೂ ಚಳಿ ಕೊರೆಯುವ ಹಿಮಾಚಲ ಪ್ರದೇಶದ ಈ ಜಾಗದಲ್ಲಿ ಬಿಸಿ ನೀರಿನ ಬುಗ್ಗೆ ಹೇಗೆ ಬಂತು ಎಂದು ಕಂಡುಹಿಡಿಯಲು ವಿಜ್ಞಾನಿಗಳು ನೂರಾರು ಬಾರಿ ಸಂಶೋಧನೆ ಕೈಗೊಂಡು ವಿಫಲರಾಗಿದ್ದಾರೆ. ಆದರೆ ಇದರ ಹಿನ್ನೆಲೆ ಶಿವನ ಕಾಲಭೈರವ ಅವತಾರದ ಕಥೆಯನ್ನು ಹೇಳುತ್ತದೆ. ಶಿವನು ಕಾಲಭೈರವನ ಅವತಾರ ತಾಳಿ ರಾಕ್ಷಸರನ್ನು ಸಂಹಾರ ಮಾಡಿದ ಮೇಲೆ ಸ್ನಾನ ಮಾಡಲು ಈ ಜಾಗಕ್ಕೆ ಬಂದಾಗ ನೀರಿಲ್ಲದ ಕಾರಣ ತನ್ನ ಮುಡಿಯಲ್ಲಿದ್ದ ಗಂಗೆಯನ್ನು ಈ ಕೊಳದಲ್ಲಿ ತುಂಬಿ ಸ್ನಾನ ಮಾಡಿದರಂತೆ.
ಅಂದಿನಿಂದ ಈ ಕೊಳದಲ್ಲಿ ಬಿಸಿನೀರು ತುಂಬಿದೆ, ಇಲ್ಲಿ ಎಷ್ಟು ನೀರು ಖಾಲಿ ಮಾಡುತ್ತಾರೋ ಅಷ್ಟು ಬಿಸಿ ನೀರು ತುಂಬಿಕೊಳ್ಳುತ್ತಲೇ ಇರತ್ತದೆ ಮತ್ತು ಇದು ಇಂದಿಗೂ ಶಿವನ ಜಟೆಯಿಂದ ಹರಿದು ಬರುತ್ತಿದೆ ಎನ್ನುವುದು ಭಕ್ತಾದಿಗಳ ನಂಬಿಕೆ ಮತ್ತು ದೇವಸ್ಥಾನದಲ್ಲಿ ಕಾಲಭೈರವನ ವಿಗ್ರಹವು ಕೂಡ ಇದ್ದು ಇದು ಸಾಕ್ಷಾತ್ ಶಿವನೇ ವಿಗ್ರಹ ಆಗಿರುವುದು, ಪರಶಿವನು ನೋಡುವುದಕ್ಕೆ ಇದೇ ರೀತಿ ಇರುತ್ತಾರೆ ಎನ್ನುವುದನ್ನು ಅಲ್ಲಿನ ಭಕ್ತರು ಹೇಳುತ್ತಾರೆ.
ಜೊತೆಗೆ ವರ್ಷದಿಂದ ವರ್ಷಕ್ಕೆ ಈ ಕಾಲಭೈರವನ ವಿಗ್ರಹದ ಎತ್ತರವೂ ಕೂಡ ಹೆಚ್ಚಾಗುತ್ತಿದೆ. ಹಿಮಾಚಲ ಪ್ರದೇಶದ ಪ್ರೇಕ್ಷಣೀಯ ಸ್ಥಳ ಮನಾಲಿಗೆ ಈ ಪ್ರದೇಶವು ಬಹಳ ಹತ್ತಿರದಲ್ಲಿದೆ ಅಲ್ಲಿಗೆ ಪ್ರವಾಸಕ್ಕೆ ಹೋಗುವ ಪ್ರತಿಯೊಬ್ಬರೂ ಕೂಡ ಈ ದೇವಸ್ಥಾನಕ್ಕೆ ತಪ್ಪದೆ ಭೇಟಿ ಕೊಡುತ್ತಾರೆ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*