
ಪತಿ ಪತ್ನಿ ಇಬ್ಬರಲ್ಲಿ ಸರಿಯಾದ ಹೊಂದಾಣಿಕೆ ಇರುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಕೆಲವೊಂದಷ್ಟು ಜನರ ನಡುವೆ ಕೆಲವೊಂದು ಕಾರಣಾಂತರಗಳಿಂದ ಕೆಲವೊಂದು ವಿಷಯದಲ್ಲಿ ಬಿರುಕು ಮೂಡಿರುತ್ತದೆ ಆದರೆ ಅವರಿಬ್ಬರೂ ಈ ಬಿರುಕು ಮೂಡಲು ಬಹಳ ಪ್ರಮುಖವಾದಂಥ ಕಾರಣ ಏನು ಎಂದು ತಿಳಿದುಕೊಳ್ಳಲು ಬಯಸುವುದಿಲ್ಲ.
ಬದಲಿಗೆ ಕ್ಷಣಮಾತ್ರದಲ್ಲಿ ಯಾವ ಮಾತುಗಳು ಬರುತ್ತಿದೆಯೋ ಅದನ್ನು ಮಾತನಾಡುವುದರ ಮೂಲಕ ಪತಿಪತ್ನಿಯರು ಒಂದಲ್ಲ ಒಂದು ಮಾತಿಗೆ ಜಗಳವಾಡುತ್ತಾ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಪತಿಯ ಮನಸ್ಸನ್ನು ಹಾಳು ಮಾಡುವುದು ಅಥವಾ ಪತ್ನಿಯ ಮನಸ್ಸನ್ನು ಹಾಳು ಮಾಡುವುದು. ಇಬ್ಬರಿಗೂ ಇಷ್ಟವಿಲ್ಲದೆ ಇರುವಂತಹ ಕೆಲವೊಂದಷ್ಟು ವಿಚಾರದ ಬಗ್ಗೆ ಚರ್ಚೆ ಮಾಡುವುದು ಹೀಗೆ ಕೆಲವೊಂದು ಕಾರಣಾಂತರಗಳಿಂದ ನಿಮ್ಮ ಸಂಸಾರದಲ್ಲಿ ಬಿರುಕು ಮೂಡಿರುತ್ತದೆ.
ಆದರೆ ಪ್ರತಿಯೊಬ್ಬ ಗಂಡ ಹೆಂಡತಿ ತಮ್ಮ ಜೀವನಪರ್ಯಂತ ಸಂತೋಷ ವಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದರೆ ನಿಮ್ಮ ಜೀವನ ದಲ್ಲಿ ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಹೌದು ಯಾವುದೇ ಒಂದು ವಿಷಯ ನಿಮ್ಮ ಜೀವನದಲ್ಲಿ ಬದಲಾಗುತ್ತಿದೆ ಎಂದರೆ ಅದರಲ್ಲೂ ನೀವು ಮಗುವಾಗಿದ್ದಾಗ ಬೆಳೆದು ದೊಡ್ಡವರಾದ ಮೇಲೆ ನಿಮ್ಮ ತಂದೆ ತಾಯಿಗಳು ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗಲು ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ.
ಆನಂತರ ನಿಮ್ಮನ್ನು ಒಂದು ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಬೇಕು ಎಂದಂತಹ ಸಮಯದಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಅವರು ನಿಮಗೆ ಹಲವಾರು ರೀತಿಯ ಅನುಕೂಲವನ್ನು ಸಹ ಮಾಡಿಕೊಡುತ್ತಾರೆ ನೀವು ಒಳ್ಳೆಯ ವಿದ್ಯಾರ್ಥಿಯಾಗಬೇಕು ಎಂದು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸಿ ನನ್ನ ಮಗಳು ಅಥವಾ ಮಗ ಒಳ್ಳೆಯ ವಿದ್ಯಾವಂತನಾಗಬೇಕು ಎಂದು ಆಸೆ ಪಡುತ್ತಿರುತ್ತಾರೆ.
ಅದೇ ರೀತಿಯಾಗಿ ಬೆಳೆದು ದೊಡ್ಡವರಾದ ಮೇಲೆ ಅವರಿಗೆ ಒಳ್ಳೆಯ ಹುಡುಗ ಅಥವಾ ಹುಡುಗಿಯನ್ನು ಮದುವೆ ಮಾಡುವುದರ ಮೂಲಕ ಅವರು ಒಳ್ಳೆಯ ಜೀವನವನ್ನು ನಡೆಸಲಿ ಎಂದು ಮದುವೆಯನ್ನು ಮಾಡುತ್ತಾರೆ. ಆದರೆ ಅವರ ಆಸೆಯಂತೆ ನೀವು ಜೀವನದಲ್ಲಿ ಒಳ್ಳೆಯ ಸಂಸಾರವನ್ನು ಮಾಡಿಕೊಂಡು ಜೀವನ ಪರ್ಯಂತ ಖುಷಿಯಾಗಿ ಇರುವುದನ್ನು ಅವರು ನೋಡಲು ಬಯಸುತ್ತಾರೆ.
ಆದರೆ ಕೆಲವೊಂದು ಕಾರಣಾಂತರಗಳಿಂದ ನಿಮ್ಮಿಬ್ಬರ ನಡುವೆ ಬಿರುಕು ಹುಟ್ಟಿಕೊಂಡಿರುತ್ತದೆ ಇದಕ್ಕೆ ಬಹಳ ಪ್ರಮುಖವಾದಂಥ ಕಾರಣಗಳೇನು ಹಾಗೂ ನಿಮ್ಮಿಬ್ಬರ ನಡುವೆ ಯಾವ ರೀತಿಯಾದಂತಹ ಬಾಂಧವ್ಯ ವಿಶ್ವಾಸ ಇರಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.
* ಪತಿ ಆಫೀಸಿನಿಂದ ಮನೆಗೆ ಬಂದಾಗ ಮುಖವನ್ನು ಗಂಟು ಹಾಕಿ ಕೊಂಡು ಇರುವುದು ಅಥವಾ ಫೋನಿನಲ್ಲಿ ಮಾತಾಡಿಕೊಂಡು ಬಿಜಿ ಯಾಗಿರುವುದು ಟಿವಿ ಮುಂದೆ ಕುಳಿತಿರುವುದು ಹೀಗೆ ಯಾವುದಾದ ರೊಂದು ಕೆಲಸದಲ್ಲಿ ಬಿಜಿಯಾಗಿ ಇರಬೇಡಿ. ಅವರು ಬಂದ ತಕ್ಷಣ ಒಂದು ಗ್ಲಾಸ್ ನೀರು ಕೊಟ್ಟು ನಗುನಗುತ್ತಾ ಮಾತನಾಡಿಸಿ.
* ಹಣ, ಆಸ್ತಿ, ಒಡವೆ, ಕಾರು, ಬಂಗಲೆ ಇದು ಬಹಳ ಮುಖ್ಯ ಜೀವನಕ್ಕೆ ಆದರೆ ಜೀವನಕ್ಕೆ “ನಿಮ್ಮದಿ” ಇದಕ್ಕಿಂತ ಮುಖ್ಯ ಇದು ನಿಮ್ಮಿಬ್ಬರಿಗೂ ನೆನಪಿರಲಿ.
* ಫ್ರೆಂಡ್ಸ್ ಫ್ಯಾಮಿಲಿ ,ಅಕ್ಕ ಪಕ್ಕದವರು ಹೊರಗಡೆ ಸುತ್ತಾಡಲು ಹೋಗುತ್ತಿದ್ದಾರೆ. ಒಡವೆ ತಗೊಂಡಿದ್ದಾರೆ ಅಥವಾ ಶಾಪಿಂಗ್ ಮಾಡುತ್ತಿದ್ದಾರೆ ಎಂದ ಮಾತ್ರಕ್ಕೆ ನಾವು ಕೂಡ ಅದನ್ನೇ ಮಾಡಬೇಕು ಅದನ್ನೇ ತಗೊಳ್ಳಬೇಕು ಎಂಬುವ ಬಯಕೆ ಇಟ್ಟುಕೊಳ್ಳಬೇಡಿ. ಇದರಿಂದಲೇ ಸಂಸಾರದಲ್ಲಿ ಇಲ್ಲದ ಕಲಹಗಳು ಉಂಟಾಗುತ್ತದೆ. ನಿಮಗೆ ಅವಶ್ಯಕತೆ ಇದೆ ಮತ್ತು ತೆಗೆದುಕೊಳ್ಳುವ ಶಕ್ತಿ ಇದೆ ಎಂದರೆ ಖಂಡಿತ ತೆಗೆದುಕೊಳ್ಳಿ. ಶಕ್ತಿ ಇಲ್ಲ ಮತ್ತೆ ಅವಶ್ಯಕತೆ ಇಲ್ಲ ಎಂದಾಗ ಇದರ ಬಗ್ಗೆ ಚರ್ಚೆ ಬೇಡ.
* ಪತ್ನಿಯ ಮನೆಯವರ ಬಗ್ಗೆ ಪತಿ, ಪತಿಯ ಮನೆಯವರ ಬಗ್ಗೆ ಪತ್ನಿ ಚರ್ಚಿಸುವ ಅವಶ್ಯಕತೆ ಇಲ್ಲ. ಮಾತಾಡಬೇಕಾದ ವಿಷಯದ ಬಗ್ಗೆ ಮಾತಾಡಿ, ಈಯಾಳಿಸುವ ಅಥವಾ ವೈಯಕ್ತಿಕ ಮಾತು ಬೇಡ. ಇಲ್ಲದ ಸಲ್ಲದ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡಬೇಡಿ. ಸಂಸಾರ ಎಂದಾಗ ಮನೆ, ಮಕ್ಕಳು, ವ್ಯವಹಾರ, ಮತ್ತು ಆರೋಗ್ಯದ ಮಾತುಗಳೇ ತುಂಬಾ ಇರುತ್ತದೆ. ಇದರ ಹೊರತು ಬೇರೆಯವರ ಬಗ್ಗೆ ಇಲ್ಲದ ಸಲ್ಲದ ಮಾತಿನ ಚರ್ಚೆ ಇಬ್ಬರಿಗೂ ಬೇಡ.
ಪತಿ ಪತ್ನಿಯ ನಡುವೆ ಜಗಳ ಬರಲು ಇದೇ ಮುಖ್ಯವಾದ ಕಾರಣ
* ಒಬ್ಬರಿಗೊಬ್ಬರ ಮೇಲೆ ಪ್ರೀತಿ ವಿಶ್ವಾಸ ಗೌರವವಿರಲಿ ಆದರೆ ಸಂಶಯ, ಚುಚ್ಚು ಮಾತುಗಳು, ಅಪಮಾನಿಸುವ ಮಾತುಗಳು ಬೇಡ.
* ಇಬ್ಬರೂ ಜಾಬ್ ಮಾಡುತ್ತಿದ್ದೀರಿ ಎಂದರೆ ಇದು ನನ್ನ ದುಡ್ಡು ಅದು ನಿನ್ನ ದುಡ್ಡು ಎನ್ನುವ ಮಾತು ಬೇಡವೇ ಬೇಡ. ಗಂಡ ಹೆಂಡತಿ ಎಂದರೆ ಒಂದೇ ಎಂದರ್ಥ ಮತ್ತು ಅವರ ದುಡಿಮೆಗೆ ಮಾತ್ರ ನಿನ್ನದು ನನ್ನದು ಯಾಕೆ. ಇತ್ತೀಚೆಗೆ ಗಂಡ ಹೆಂಡತಿಯರಲ್ಲಿ ಬಿರುಕು ಬರಲು ಇದು ಮುಖ್ಯವಾದ ಕಾರಣ ಎನ್ನಬಹುದು.