ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಕನಸನ್ನು ಅಂದರೆ ಮನೆ ಕಟ್ಟುವಂತಹ ಕನಸನ್ನು ಈಡೇರಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆ ಎಂದರೆ ಅವರಿಗೆ ಬರುವಂತಹ ಆದಾಯದ ಮೂಲ ಅಧಿಕವಾಗಿದ್ದರೆ ಮಾತ್ರ ಕೆಲವೊಂದಷ್ಟು ಜನ ಅವರ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ.
ಆದರೆ ಕೆಲವೊಂದಷ್ಟು ಜನರಿಗೆ ಹಣಕಾಸಿನ ಲಾಭವೇ ಇಲ್ಲ ಎಂದರೆ ಅವರು ಈ ಕನಸನ್ನು ಹೇಗೆ ಈಡೇರಿಸಿಕೊಳ್ಳಲು ಸಾಧ್ಯ. ಹೌದು ಬಡ ವರ್ಗದ ಜನರು ಈ ಒಂದು ಕನಸನ್ನು ನನಸಾಗಿಸಿಕೊಳ್ಳಲು ಬಹಳ ಕಷ್ಟ ಎಂದೇ ಹೇಳಬಹುದು ಆದರೆ ಇಂದಿನ ಸರ್ಕಾರ. ಇಂತಹ ವಿಷಯಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ಬಡ ಜನರಿಗೆ ಅಂದರೆ ಕಡಿಮೆ ಹಣವನ್ನು ಸಂಪಾದನೆ ಮಾಡುವಂತಹ ಬಡ ಕುಟುಂಬಗಳಿಗೆ ಅವರು ವಾಸಿಸಲು ಸ್ವಂತ ಮನೆ ಇಲ್ಲದೆ ಇರುವವರಿಗೆ ಸರ್ಕಾರದ ವತಿಯಿಂದ ಇಂತಿಷ್ಟು ಎಂಬಂತೆ ಹಣವನ್ನು ಉಚಿತವಾಗಿ ಕೊಡುತ್ತಿದ್ದಾರೆ.
ಹೌದು ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ಕೆಲವು ಗ್ಯಾರಂಟಿಗಳನ್ನು ನಾವು ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಘೋಷಣೆಯನ್ನು ಮಾಡಿದ್ದರು. ಅದೇ ರೀತಿಯಾಗಿ ಆ ಯೋಜನೆಗಳಲ್ಲಿ ಮೊದಲನೆಯದಾಗಿ ಉಚಿತ ಬಸ್ ಪ್ರಯಾಣದ ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು ಎಲ್ಲ ಮಹಿಳೆಯರು ಕೂಡ ಉಚಿತವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಪ್ರಯಾಣವನ್ನು ಮಾಡಬಹುದಾಗಿದೆ.
ಅದೇ ರೀತಿಯಾಗಿ ಈಗ ನೂತನ ವಸತಿ ಸಚಿವರಾಗಿರುವಂತಹ ಜಮೀರ್ ಅಹ್ಮದ್ ಅವರು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಕಲೆಹಾಕಿ ಯಾರಿಗೆ ಸ್ವಂತ ಮನೆ ಸ್ವಂತ ಜಾಗ ಇರುವುದಿಲ್ಲವೋ ಹಾಗೂ ಅವರು ಬಡ ಜನರಾಗಿರುತ್ತಾರೋ ಅವರಿಗೆ ಸರ್ಕಾರದ ವತಿಯಿಂದ ಉಚಿತವಾಗಿ 25,000 ಹಣವನ್ನು ಕೊಡುವಂತೆ ಮಾಹಿತಿಯನ್ನು ಹೊರಡಿಸಿದ್ದಾರೆ.
ಹೌದು ಇದರಿಂದ ಅಂತಹ ಜನರು ಉಚಿತವಾಗಿ ಈ ಹಣವನ್ನು ಪಡೆದು ತಮ್ಮ ಮನೆ ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ ಹಾಗೂ ಈ ಒಂದು ಯೋಜನೆ ಅವರಿಗೆ ತುಂಬಾ ಅನುಕೂಲವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ವಸತಿ ಯೋಜನೆಯಡಿ ಹಲವಾರು ಜನರಿಗೆ ಈ ಒಂದು ಯೋಜನೆಯ ಪ್ರಯೋಜನ ಸಿಕ್ಕಿಲ್ಲ ಈ ವಿಷಯ ತಿಳಿದು ನನಗೆ ತುಂಬಾ ನೋವಾಗಿದೆ ಆದರೆ ಇನ್ನು ಮುಂದೆ ಈ ರೀತಿಯ ಯಾವುದೇ ಘಟನೆ ಸಂಭವಿಸುವುದಿಲ್ಲ ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಈಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಈ ಒಂದು ಅಧಿಕಾರ ಜನರಿಗೆ ಪ್ರಯೋಜನವಾ ಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಹಿಂದಿನ ಪಕ್ಷ ಮಾಡಿದಂತಹ ಸಹಾಯವು ಮುಂದೆ ಅಂದರೆ ಈಗ ನೆನಪಿಗೆ ಬಾರದಂತೆ ನಾವು ಕೂಡ ಒಳ್ಳೆಯ ಯೋಚನೆಗಳನ್ನು ಜಾರಿಗೆ ತರುವುದರ ಮೂಲಕ ಜನರಿಗೆ ಉತ್ತಮವಾದಂತಹ ಪ್ರಯೋಜನವನ್ನು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಸಹ ಜಮೀರ್ ಅಹ್ಮದ್ ಅವರು ತಿಳಿಸಿಕೊಟ್ಟಿದ್ದಾರೆ ಹಾಗೂ ಈ ಒಂದು ಯೋಜನೆಯಡಿ ನಿಗದಿತ ಕಾಲಮಾನದೊಳಗಡೆ ಎಲ್ಲರಿಗೂ ನಾವು ಯೋಜನೆಯ ಪ್ರಯೋಜನ ವನ್ನು ಕೊಡುವುದಾಗಿ ಹಲವಾರು ಸಭೆಗಳನ್ನು ನಡೆಸಿ ಮಹತ್ತರವಾದ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಹ ತಿಳಿಸಿದ್ದಾರೆ.