ಪ್ರತಿಯೊಬ್ಬರಿಗೂ ಕೂಡ ಅವರ ಜೀವನದಲ್ಲಿ ಹೆಚ್ಚು ಹಣ ಹೊಂದಬೇಕು ಶ್ರೀಮಂತಿಕೆ ಪಡೆಯಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಯಾವುದೇ ಬಿಸಿನೆಸ್ ಆಗಲಿ, ಉದ್ಯೋಗವೇ ಆಗಲಿ ಅದರ ಮುಖ್ಯ ಉದ್ದೇಶ ಹಣ ಗಳಿಕೆಯೇ ಆಗಿದೆ. ಗಳಿಕೆ ಹಾಗಿರುವ ಹಣವನ್ನು ಉಳಿಸಿಕೊಳ್ಳುವುದು ಅಥವಾ ಇನ್ನಷ್ಟು ವೃದ್ಧಿಯಾಗುವಂತೆ ಮಾಡುವುದು ಅದಕ್ಕಾಗಿ ಇನ್ನಷ್ಟು ಆದಾಯ ಮೂಲಗಳನ್ನು ಹುಡುಕುವುದು ಮನುಷ್ಯನ ಸಹಜ ಗುಣ.
ಇದಕ್ಕಾಗಿ ಆತ ಕಷ್ಟಪಟ್ಟು ಹಗಲುರಾತ್ರಿ ಶ್ರಮ ಹಾಕಿ ದುಡಿಯುವುದು ಮಾತ್ರವಲ್ಲದೆ ಪೂಜೆ ಪುನಸ್ಕಾರಗಳನ್ನು ಮಾಡಿ ದೇವರ ಮೊರೆ ಹೋಗುತ್ತಾನೆ. ನಮ್ಮ ದೇಶದಲ್ಲಿ ಹಣವನ್ನು ಲಕ್ಷ್ಮಿಗೆ ಹೋಲಿಸಲಾಗಿದೆ. ಹಣದ ದೇವತೆ ಆಗಿರುವ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇದ್ದವರು ಶ್ರೀಮಂತರಾಗಿರುತ್ತಾರೆ ಅವರ ಜೀವನದಲ್ಲಿ ಏನು ಕೊರತೆ ಇರುವುದಿಲ್ಲ ಎನ್ನುವುದನ್ನು ನಂಬಿಕೊಂಡು ಬರಲಾಗಿದೆ.
ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕಾಗಿ ವ್ರತಗಳನ್ನು ಮಾಡುತ್ತಾರೆ, ಅದ್ದೂರಿಯಾಗಿ ಪೂಜೆ ಪುನಸ್ಕಾರ ಮಾಡಿ ಮಹಾಲಕ್ಷ್ಮಿಯು ಪ್ರಸನ್ನಳಾಗುವಂತೆ ಮಾಡುತ್ತಾರೆ. ಈ ರೀತಿ ಮಹಾಲಕ್ಷ್ಮಿಗೆ ಇಷ್ಟವಾದ ವಸ್ತುಗಳಿಂದ ಅಲಂಕರಿಸಿ ಇಷ್ಟವಾದ ನೈವೇದ್ಯಗಳನ್ನು ಮಾಡಿ, ಮಡಿ ಉಟ್ಟು ಭಕ್ತಿಯಿಂದ ಧ್ಯಾನದಿಂದ ಪ್ರಾರ್ಥಿಸಿದರೆ ಆಗ ಲಕ್ಷ್ಮಿ ದೇವಿ ತೃಪ್ತರಾಗಿ ಅವರು ಜೀವನ ಪರ್ಯಂತ ಶ್ರೀಮಂತರಾಗಿ ಬದುಕುವಂತೆ ಆಶೀರ್ವಾದ ಮಾಡುತ್ತಾರೆ ಎಂದು ಜನರ ನಂಬುತ್ತಾರೆ.
ಇದು ಜನ ಸಾಮಾನ್ಯರ ನಂಬಿಕೆ ಮಾತ್ರ ಅಲ್ಲದೆ ಪುರಾಣಗಳಲ್ಲೂ ಕೂಡ ಈ ಬಗ್ಗೆ ಉಲ್ಲೇಖ ಇದೆ. ನಾವು ಅನೇಕ ದಂತ ಕಥೆಗಳಲ್ಲಿ ಈ ರೀತಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ ಅವರ ಕಷ್ಟಗಳನ್ನು ಕಳೆದುಕೊಂಡಿರುವ ಉದಾಹರಣೆಗಳ ಉಪಕಥೆಗಳನ್ನು ಕೇಳಬಹುದು. ಅಂದಿನಿಂದ ಇಂದಿನ ಕಲಿಗಾಲದಲ್ಲೂ ಸಹ ಪೂಜೆ ಪುರಸ್ಕಾರ ಮಾಡಿ, ವೃತ ಮತ್ತು ಆಚರಣೆಗಳನ್ನು ಮಾಡಿ ಮುತ್ತು ಮಂತ್ರಗಳನ್ನು ಪಠಿಸಿ, ದೇವರನ್ನು ಒಲಿಸಿಕೊಳ್ಳುವ ಬಗ್ಗೆ ಇರುವ ನಂಬಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ.
ಕಲಿಯುಗದಲ್ಲಿ ಒಂದು ಮಂತ್ರವು ಇಷ್ಟೇ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಕೂಡ ನಿಮಗೆ ಮಹಾಲಕ್ಷ್ಮಿ ಆರಾಧನೆ ಮಾಡಿದ್ದಷ್ಟೇ ಫಲ ದೊರೆಯುತ್ತದೆ. ಇದೊಂದು ವಿಶೇಷವಾದ ಮಂತ್ರ ಆಗಿದೆ. ರಾವಣ ಸಂಹಿತೆಲ್ಲೂ ಕೂಡ ಇದರ ಬಗ್ಗೆ ಉಲ್ಲೇಖ ಇದೆ. ರಾವಣನು ಕಡುಕಷ್ಟದಲ್ಲಿ ಇದ್ದಾಗ ಈ ಮಂತ್ರವನ್ನು ಪಠಿಸಿ ಅತಿ ಶ್ರೀಮಂತನಾದ ಎಂದು ಹೇಳಲಾಗುತ್ತದೆ.
ಜೊತೆಗೆ ಜೀವನದಲ್ಲಿ ಯಾರು ಯಾವುದಕ್ಕೆ ಹೆಚ್ಚು ಹೋರಾಡುತ್ತಿರುತ್ತಾರೆ ಅವರು ಅದನ್ನು ಪಡೆದುಕೊಳ್ಳಬೇಕು ಎಂದರೆ ಈ ಮಂತ್ರವನ್ನು ವಿಧಿ ವಿಧಾನಗಳ ಪ್ರಕಾರ ಪಠಿಸಬೇಕು ಎನ್ನುವ ಮಾತುಗಳು ಇವೆ. ಇಷ್ಟು ಪ್ರಭಾವಶಾಲಿ ಆಗಿರುವ ಈ ಮಂತ್ರ ಯಾವುದು ಎಂದರೆ ಅತಿ ಸರಳವಾದ ಒಂದೇ ಸಾರಿನಲ್ಲಿ ಬರುವ ಮಂತ್ರ ಇದಾಗಿದೆ.
“ಓಂ ನಮೋ ವಿಘ್ನ ವಿನಾಶಾಯ ವಿಧಿ ದರ್ಶಿನಾ ಕುರು ಕುರು ಸ್ವಾಹಾ” ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಮಹಾ ಗಣಪತಿ ಹಾಗೂ ತಾಯಿ ಮಹಾಲಕ್ಷ್ಮಿಯ ಸಂಪೂರ್ಣ ಕೃಪಾಕಟಾಕ್ಷ ದೊರೆತು ಕೆಲಸಗಳು ನಿರ್ವಿಘ್ನವಾಗಿ ಸಾಗಿ ಲಾಭ ತಂದುಕೊಡುತ್ತವೆ ಎನ್ನುವುದು ನಂಬಿಕೆ. ಈ ಮಂತ್ರವನ್ನು ದಿನಕ್ಕೆ ಸಾಧ್ಯವಾದರೆ ಹತ್ತು ಸಾವಿರ ಬಾರಿ ಪಠಿಸಬೇಕು. ಹೀಗೆ ಪಠಿಸಿದಾಗ ಇದು ನಿಮಗೆ ಸಿದ್ಧಿ ಆಗುತ್ತದೆ. ಪ್ರತಿದಿನವೂ ಕೂಡ ನಿಮಗೆ ಸಾಧ್ಯವಾದರೆ ಈ ಮಂತ್ರವನ್ನು ಪಠಿಸಿ ಅಥವಾ ಜೀವನದಲ್ಲಿ ತುಂಬಾ ಕಷ್ಟ ಇರುವ ಸಂದರ್ಭದಲ್ಲಿ ಇದನ್ನು ಪಠಿಸಿ ಸಮಸ್ಯೆಯಿಂದ ಹೊರಬನ್ನಿ. ಈ ಉಪಯುಕ್ತ ಮಾಹಿತಿ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಮಾಹಿತಿ ಹಂಚಿಕೊಳ್ಳಿ.