ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ಹುಟ್ಟಿರುವ ದಿನ, ಘಳಿಗೆ, ವಾರ, ರಾಶಿ, ನಕ್ಷತ್ರದ ಇವುಗಳ ಆಧಾರದ ಮೇಲೆ ಅವರ ಗುಣಲಕ್ಷಣಗಳು ಹೇಗಿರುತ್ತವೆ ಎಂದು ಲೆಕ್ಕ ಹಾಕಬಹುದು. ಜೊತೆಗೆ ಇಟ್ಟಿರುವ ಹೆಸರು ಕೂಡ ಅವರ ಗುಣ ಸ್ವಭಾವ ಮತ್ತು ಜನ್ಮ ರಾಶಿ ನಕ್ಷತ್ರಕ್ಕೆ ಹೊಂದುವ ರೀತಿ ಇಟ್ಟಿರುವುದರಿಂದ ಬಳಿಕ ಅವರ ಹೆಸರನ್ನು ಕೇಳಿದವರು ಕೂಡ ಅವರ ಸ್ವಭಾವ ಹೇಗಿರುತ್ತದೆ ಎಂದು ಲೆಕ್ಕಾಚಾರ ಹಾಕಬಹುದು.
ಇದರಲ್ಲಿ ಬಹಳ ವಿಶೇಷ ಎನಿಸುವುದು ಹುಟ್ಟಿದ ವಾರದ ಆಧಾರದ ಮೇಲು ಕೂಡ ಅವರ ವ್ಯಕ್ತಿತ್ವ ನಿರ್ಧಾರ ಆಗುತ್ತದೆ ಎನ್ನುವುದು. ಇದು ಮಹಿಳೆ ಮತ್ತು ಪುರುಷರಲ್ಲಿ ಬೇರೆ ಬೇರೆ ರೀತಿ ಸ್ವಭಾವ ಆಗಿರುತ್ತದೆ, ಪ್ರತಿಯೊಂದು ವಾರಗಳ ಮೇಲು ಸಂಬಂದಿಸಿದ ಗ್ರಹಗಳ ಪ್ರಭಾವ ಹೆಚ್ಚಾಗಿರುವುದರಿಂದ ಯಾವ ವಾರದಲ್ಲಿ ಜನಿಸಿದವರ ಸ್ಥಿತಿ ಯಾವ ರೀತಿ ಇರುತ್ತದೆ ಎಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಭಾನುವಾರ ಹೆಸರೇ ಹೇಳುವಂತೆ ಸೂರ್ಯನ ಪ್ರಭಾವ ಹೆಚ್ಚಾಗಿರುವ ವಾರ. ಈ ವಾರ ಜನಿಸಿದ ಹುಡುಗಿಯರು ಕೂಡ ಸೂರ್ಯನಂತೆ ಪ್ರಕಾಶಮಾನವಾದ ತೇಜಸ್ಸನ್ನು ಹೊಂದಿರುತ್ತಾರೆ. ಇವರು ಬಹಳ ಬುದ್ಧಿವಂತರಾಗಿದ್ದು ಬಹಳ ಹೆಸರು ಗಳಿಸುತ್ತಾರೆ. ಇವರ ಕಲ್ಪನಾ ಶಕ್ತಿ ಮತ್ತು ಜ್ಞಾಪಕ ಶಕ್ತಿಗೆ ಇವರೇ ಸರಿಸಾಟಿ. ನಾಯಕತ್ವದ ಗುಣ ಹೊಂದಿರುವ ಇವರು ಬಹಳ ಧೈರ್ಯವಂತರಾಗಿರುತ್ತಾರೆ.
● ಸೋಮವಾರ ಹುಟ್ಟಿದವರು ಚಂದ್ರನಂತೆ ಹೆಚ್ಚು ಸುಂದರವಾಗಿರುತ್ತಾರೆ. ಇವರು ಬಹಳ ಸೂಕ್ಷ್ಮ ಮನಸ್ಸಿನವರು ಬಹಳ ಭಾವನ ಜೀವಿಗಳು. ಸಣ್ಣ ಪುಟ್ಟ ವಿಚಾರಗಳಿಗೂ ಕೂಡ ಬಹಳ ಬೇಗ ಗೊಂದಲಕ್ಕೆ ಒಳಗಾಗುತ್ತಾರೆ ಮತ್ತು ಚಿಂತೆ ಮಾಡುತ್ತಾರೆ. ಅಧಿಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಬಹಳ ಮೃದು ಸ್ವಭಾವದವರಾಗಿದ್ದು ಎಲ್ಲರ ಭಾವನೆಗಳನ್ನು ಗೌರವಿಸುತ್ತಾರೆ.
● ಮಂಗಳವಾರ ಹುಟ್ಟಿದ ಹುಡುಗಿಯರು ಬಹಳ ಚುರುಕಿನ ಸ್ವಭಾವದವರು ಮತ್ತು ಎಲ್ಲಾ ವಿಷಯಗಳಲ್ಲೂ ಕೂಡ ಬಹಳ ಉತ್ಸಾಹ ತೋರುತ್ತಾರೆ. ಯಾವುದೇ ಹೊಸ ವಿಷಯದ ಬಗ್ಗೆ ಕೂಡ ಬಹಳ ಬೇಗ ತಿಳಿದುಕೊಂಡು ಕರಗತ ಮಾಡಿಕೊಳ್ಳುತ್ತಾರೆ. ಇವರಿಗೂ ಸಹ ಧೈರ್ಯ ಹೆಚ್ಚಾಗಿರುತ್ತದೆ ಬಹಳ ಸ್ಟ್ರಾಂಗ್ ಆದ ನಿರ್ಧಾರಗಳನ್ನು ತೆಗೆದುಕೊಂಡು ಅದಕ್ಕೆ ಬದ್ದವಾಗಿ ಬದುಕುತ್ತಾರೆ.
● ಬುಧವಾರ ಜನಿಸಿದ ಹೆಣ್ಣು ಮಕ್ಕಳು ಸದಾ ಲವಲವಿಕೆಯಿಂದ ಇರುತ್ತಾರೆ, ನಗುನಗುತ್ತ ಮಾತನಾಡುವ ಇವರು ಎಷ್ಟು ಜನರ ಮಧ್ಯೆ ಇದ್ದರೂ ಗುರುತಿಸಿಕೊಳ್ಳುತ್ತಾರೆ. ಬುಧವಾರ ಜನಿಸಿದವರಿಗೂ ಕೂಡ ಬುದ್ಧಿವಂತಿಕೆ ಹೆಚ್ಚಿಗೆ ಇರುತ್ತದೆ. ಯಾವುದಾದರೂ ಒಂದು ವಿಷಯದ ಬಗ್ಗೆ ಇವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಇದೇ ಕಾರಣಕ್ಕೆ ಅನೇಕ ಬಾರಿ ಸಮಸ್ಯೆಗೆ ಸಿಲುಕಿ ಕೊಳ್ಳುತ್ತಾರೆ. ಜೀವನದಲ್ಲಿ ಏನೇ ಆದರೂ ಕೂಡ ಸಂತೋಷದಿಂದಲೇ ಇರುವ ಮನಸ್ಥಿತಿ ಇವರದ್ದು. ಇವರಿಗೂ ಸಹ ಯಾವಾಗಲೂ ಕಲಿಯುವ ಆಸಕ್ತಿ ಹೆಚ್ಚಿಗೆ ಇರುತ್ತದೆ.
● ಹೆಣ್ಣು ಮಕ್ಕಳು ಗುರುವಾರ ಜನಿಸಿದ್ದರೆ ಇವರಿಗೆ ಎಲ್ಲಾ ವಿಷಯದಲ್ಲೂ ಕೂಡ ತಿಳುವಳಿಕೆ ಹೆಚ್ಚು ಮತ್ತು ಇವರ ಸುತ್ತಮುತ್ತ ಯಾವಾಗಲೂ ಜನರು ಇರುತ್ತಾರೆ. ಇವರು ಎಲ್ಲರ ಸಮಸ್ಯೆಯನ್ನು ಆಲಿಸುವ ಮತ್ತು ಒಳ್ಳೆ ಸಲಹೆಯನ್ನು ನೀಡುವಂತಹ ಸ್ವಭಾವದವರಾಗಿರುತ್ತಾರೆ.
● ಶುಕ್ರವಾರ ಜನಿಸಿದ ಹೆಣ್ಣು ಮಕ್ಕಳು ಹೆಚ್ಚು ಆಕರ್ಷಣೀಯವಾಗಿರುತ್ತಾರೆ ಇದರ ಜೊತೆಗೆ ಇವರಿಗೆ ಒಳ್ಳೆ ಗುಣ ಕೂಡ ಇರುತ್ತದ. ಯಾವಾಗಲೂ ಒಳ್ಳೆಯದನ್ನೇ ಯೋಚಿಸುತ್ತಾ ಇತರರಿಗೆ ಒಳ್ಳೆಯದನ್ನೇ ಮಾಡುವ ಮತ್ತು ಎಲ್ಲರ ಜೊತೆ ಸಂತೋಷದಿಂದ ಇರುವ ಗುಣವು ಇವರಿಗೆ ಇರುತ್ತದೆ. ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಇರುತ್ತಾರೆ.
● ಶನಿವಾರ ಹುಟ್ಟಿದ ಹೆಣ್ಣು ಮಕ್ಕಳು ಕೂಡ ಬಹಳ ಧೈರ್ಯವಂತರು ಇವರು ಸ್ನೇಹಕ್ಕಾಗಿ ಏನನ್ನು ಬೇಕಾದರೂ ಮಾಡುವ ಮನಸ್ಥಿತಿಯವರಾಗಿರುತ್ತಾರೆ. ಜೀವನದಲ್ಲಿ ಏನೇ ಕಷ್ಟ ಬಂದರೆ ಕೂಡ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಹೊಂದಿರುತ್ತಾರೆ, ಇವರು ನಂಬಿಕೆಗೆ ಅರ್ಹರು.