ಗ್ಯಾಸ್ ಸ್ಟವ್ ಅನ್ನು ನಾವು ಪ್ರತಿನಿತ್ಯ ಉಪಯೋಗಿಸುತ್ತಲೇ ಇರುತ್ತೇವೆ ಹೌದು ನಾವು ದಿನನಿತ್ಯ ಸೇವನೆ ಮಾಡುವಂತಹ ಆಹಾರವನ್ನು ತಯಾರಿಸುವಂತಹ ಸ್ಥಳ ಇದಾಗಿರುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಸಾಮಾನ್ಯವಾಗಿ ಕೊಳೆ ಹೆಚ್ಚಾಗಿ ಇರುತ್ತದೆ ಯಾವುದೇ ಒಂದು ಪದಾರ್ಥವನ್ನು ತಯಾರಿಸುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ಪದಾರ್ಥಗಳು ಆಚೆ ಬೀಳುತ್ತದೆ.
ಕೆಲವೊಮ್ಮೆ ಹಾಲನ್ನು ಬಿಸಿ ಮಾಡಲು ಇಟ್ಟರೆ ಅದು ಉಕ್ಕಿ ಕೆಳಗಡೆ ಬೀಳುವ ಸಾಧ್ಯತೆ ಇರುತ್ತದೆ. ಹೀಗೆ ಯಾವುದಾದರೂ ಒಂದು ಆಹಾರ ಪದಾರ್ಥ ಸ್ಟೌ ಮೇಲೆ ಬೀಳುತ್ತಿರುತ್ತದೆ ಹಾಗೆಂದ ಮಾತ್ರಕ್ಕೆ ನಾವು ಅದನ್ನು ಸ್ವಚ್ಛ ಮಾಡದೆ ಹಾಗೆ ಬಿಡುವುದು ಒಳ್ಳೆಯದಲ್ಲ ಈ ರೀತಿ ಸ್ಟವ್ ಅನ್ನು ಹಾಗೆ ಬಿಡುವುದರಿಂದ ಸ್ಟವ್ ಹಾಳಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಯಾವುದೇ ರೀತಿಯ ಕೊಳೆ ಇದ್ದರೂ ಸಹ ಅದನ್ನು ನಾವು ತಕ್ಷಣವೇ ಸ್ವಚ್ಛ ಮಾಡಿಕೊಳ್ಳುವುದು ಉತ್ತಮ. ಆದರೆ ಕೆಲವೊಂದಷ್ಟು ಮಹಿಳೆಯರು ಪ್ರತಿನಿತ್ಯ ಇಂತಹ ಕೆಲಸಗಳನ್ನು ಮಾಡಲು ಅವರಿಗೆ ಸಮಯ ಇರುವುದಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಸಹ ಮನೆಯಲ್ಲಿಯೇ ಇರುವುದಿಲ್ಲ ಕೆಲವೊಂದಷ್ಟು ಜನ ಹೊರಗಡೆ ಹೋಗಿ ಕೆಲಸ ಮಾಡುವಂತಹ ಸಂದರ್ಭಗಳು ಕೂಡ ಇರುತ್ತದೆ.
ಈ ಸುದ್ದಿ ಓದಿ:- ಫಂಕ್ಷನ್ ಪಾರ್ಟಿಗೆ ಹೋಗುವ ಮೊದಲು ಇದನ್ನು ಹಚ್ಚಿ ಹಲ್ಲು ಬೆಳ್ಳಗಾಗಿ ಹೊಳೆಯುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೂ ರಾಮಾಬಾಣ.!
ಅಂತಹ ಸಂದರ್ಭದಲ್ಲಿ ಅವರಿಗೆ ಸಮಯ ಇರುವುದಿಲ್ಲ ಹಾಗಾಗಿ ಇವರು ವಾರಕ್ಕೆ ಒಮ್ಮೆ ಅಥವಾ 15 ದಿನಗಳಿಗೆ ಒಮ್ಮೆ ಈ ಸ್ಟೌ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳುತ್ತಿರುತ್ತಾರೆ ಅದೇ ರೀತಿಯಾಗಿ ಅವರಿಗೆ ತುಂಬಾ ಅನುಕೂಲವಾಗುವಂತೆ ಹಾಗೂ ಮನೆಯಲ್ಲಿರುವಂತಹ ಮಹಿಳೆಯರಿಗೂ ಕೂಡ ತುಂಬಾ ಅನುಕೂಲವಾಗುವಂತೆ ಈ ದಿನ ನಾವು ಸ್ಟವ್ ಅನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎನ್ನುವಂತಹ ಮಾಹಿತಿ ಯನ್ನು ತಿಳಿಸುತ್ತಿದ್ದೇವೆ.
ಹಾಗಾದಈ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಟವ್ ಮೇಲೆ ಯಾವುದೇ ರೀತಿಯ ಹಾಲಿನ ಕರೆ ಇರಲಿ ಅಥವಾ ಇನ್ಯಾವುದೇ ಕೊಳೆ ಇದ್ದರೂ ಸಹ ಅದನ್ನು ಹೇಗೆ ತೆಗೆದು ಹಾಕುವುದು ಅದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಏನು ನಾವು ಯಾವ ವಿಧಾನ ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಮೊದಲನೆಯದಾಗಿ ಈ ಒಂದು ವಿಧಾನ ಅನುಸರಿಸುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು.
* ಒಂದು ಇನೋ ಪ್ಯಾಕೆಟ್
* ಒಂದು ಚಮಚ ಪುಡಿ ಉಪ್ಪು
* ಒಂದು ಚಮಚ ನಿಂಬೆ ಹಣ್ಣಿನ ರಸ
* ಒಂದು ಚಮಚ ವಿಂ ಲಿಕ್ವಿಡ್
ಇಷ್ಟು ಪದಾರ್ಥ ಇದ್ದರೆ ಸಾಕು ನೀವು ಸ್ಟವ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದಾಗಿದೆ. ಯಾವುದೇ ರೀತಿಯ ಹೆಚ್ಚಿನ ಶ್ರಮಪಡದೆ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇರುವುದಿಲ್ಲ.
ಈ ಸುದ್ದಿ ಓದಿ:- ಹಳೆ ಬಟ್ಟೆಯಿಂದ ಮಾಪ್ ಮಾಡುವ ಸುಲಭ ವಿಧಾನ.!
ಕ್ಲೀನ್ ಮಾಡುವ ವಿಧಾನ ನೋಡುವುದಾದರೆ :- ಮೊದಲು ನಿಮ್ಮ ಸ್ಟೌ ಸ್ವಚ್ಛ ಮಾಡುವಂಥ ಸಂದರ್ಭದಲ್ಲಿ ಮೊದಲು ಗ್ಯಾಸ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿರಬೇಕು. ಆನಂತರ ಬರ್ನಲ್ ಎಲ್ಲವನ್ನು ಸಹ ಆಚೆ ತೆಗೆದು ಕೊಳೆ ಆಗಿರುವಂತಹ ಸ್ಥಳಕ್ಕೆ ಇನೋ ಪ್ಯಾಕೆಟ್ ಅನ್ನು ತೆಗೆದು ಹಾಕಬೇಕು.
ನಂತರ ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಪುಡಿ ಉಪ್ಪು ನಿಂಬೆ ಹಣ್ಣಿನ ರಸ ಹಾಗೂ ವಿಮ್ ಲಿಕ್ವಿಡ್ ಇಷ್ಟನ್ನು ಹಾಗೆ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಸ್ಟವ್ ಮೇಲೆ ಕೊಳೆಯಾಗಿರುವಂತಹ ಸ್ಥಳಕ್ಕೆ ಹಾಕಿ ಐದು ನಿಮಿಷ ಹಾಗೆ ಬಿಡಬೇಕು ಆನಂತರ ಒಂದು ಸ್ಟೀಲ್ ಬ್ರಷ್ ಸಹಾಯದಿಂದ ಮೆಲ್ಲನೆ ಒಂದು ಕಡೆಯಿಂದ ಉಜ್ಜಿದರೆ ಸಾಕು ನಿಮ್ಮ ಸ್ಟವ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.