ಸಾಮಾನ್ಯವಾಗಿ ಸಿಟ್ಟು ಮಾಡಿ ಕೊಂಡರೆ ಬಿಪಿ ಏರಿಸಿ ಕೊಳ್ಳದಿರಿ ಎಂದು ಸಲಹೆ ನೀಡುತ್ತಾರೆ. ಅಂದರೆ ಸಿಟ್ಟಿಗೂ ಬಿಪಿ ಗೂ ನೇರವಾದ ನಂಟಿದೆ ಎಂದೇ ಜನರು ತಿಳಿದು ಕೊಂಡಿದ್ದಾರೆ. ಆದರೆ ಇದು ಪೂರ್ತಿಸತ್ಯವಲ್ಲ ಕೇವಲ ಅರ್ಧ ಸತ್ಯ ಏಕೆಂದರೆ ಸಿಟ್ಟಿನಲ್ಲಿದ್ದಾಗ ಮೆದುಳಿಗೆ ಹೆಚ್ಚಿನ ರಕ್ತ ಸಂಚಾರದ ಅಗತ್ಯ ವಿರುವ ಕಾರಣ ಹೃದಯ ಜೋರಾಗಿ ಒಡೆದುಕೊಳ್ಳುತ್ತದೆ.
ಆ ಕ್ಷಣ ಬಿಪಿ ಹೆಚ್ಚುತ್ತದೆ ಆದರೆ ನಿಜವಾಗಿಯೂ ಬಿಪಿ ಅಂದರೆ ಸಿಟ್ಟಿಲ್ಲದ ಸಮಯದಲ್ಲಿಯೂ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹೃದಯ ರಕ್ತವನ್ನು ನೂಕುವುದು .ಬನ್ನಿ ಇಂತಹ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಉಪಯುಕ್ತ ವಾದಂತ ಮನೆ ಮದ್ದುಗಳ ಬಗ್ಗೆ ತಿಳಿದು ಕೊಳ್ಳೋಣ. ಹಾಗೂ ಯಾವ ಕೆಲವು ಮನೆ ಮದ್ದುಗಳನ್ನು ಮಾಡಿ ನೀವೇ ಬಿಪಿ ಸಮಸ್ಯೆಯನ್ನು ಮನೆಯಲ್ಲಿ ಸರಿಪಡಿಸಿ ಕೊಳ್ಳ ಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.
ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.!
• ನಿಯಮಿತವಾಗಿ ವ್ಯಾಯಾಮ ಮಾಡಿ:-
ಒಳ್ಳೆಯ ವ್ಯಾಯಾಮ ದಿನಚರಿ ಯಿಂದ ಹೃದಯ ತುಂಬಾ ಪರಿಣಾಮ ಕಾರಿಯಾಗಿ ರಕ್ತವನ್ನು ಪಂಪ್ ಮಾಡಲು ನೆರವಾಗುವುದು ಇದರಿಂದ ರಕ್ತದೊತ್ತಡ ನೈಸರ್ಗಿಕವಾಗಿ ಕಡಿಮೆಯಾಗುವುದು. ಹಾಗೂ ವ್ಯಾಯಾಮ ಮಾಡುವುದರಿಂದ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ ಹಾಗೂ ನಮ್ಮ ಮನಸ್ಸು ಶಾಂತವಾಗಿ ಇರುತ್ತದೆ.
ಇದರಿಂದ ಯಾವುದೇ ರೀತಿಯ ಬಿಪಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ಶೈಲಿಯಲ್ಲಿ ಈ ಒಂದು ನಿಯಮವನ್ನು ಅನುಸರಿಸುವುದು ತುಂಬಾ ಒಳ್ಳೆಯದು ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಮುಖ್ಯ.
ಪೂರ್ವಜರ ಫೋಟೋ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮನೆಯ ಸಂತೋಷ ಶಾಂತಿ ಭಂಗ.!
• ಚಾಕಲೇಟ್ ತಿನ್ನಿ:-
ಹೌದು ಸ್ನೇಹಿತರೆ ಕಡು ಬಣ್ಣದ ಚಾಕೊಲೇಟ್ ಅಧಿಕ ರಕ್ತ ದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಒಂದು ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನು ಉಂಟುಮಾಡಲಿದೆ. ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
• ಕೆಫಿನ್ ಕಡಿಮೆ ಮಾಡಿ:-
ಕೆಫಿನ್ ಅಂಶವೂ ರಕ್ತದೊತ್ತಡವನ್ನು ತಕ್ಷಣವೇ ಹೆಚ್ಚಿಸುವುದು ಅತಿಯಾಗಿ ಕಾಫಿ ಸೇವನೆ ಮಾಡಿದರೆ ಸಮಸ್ಯೆಗಳು ಮತ್ತು ಬಿಪಿಯು ಸಹ ಬರುತ್ತದೆ.
• ಕಲ್ಲಂಗಡಿ ಹಣ್ಣಿನ ಸೇವನೆ ಮಾಡಿ:-
ಕಲ್ಲಂಗಡಿ ಹಣ್ಣಿನಲ್ಲಿರುವ ಸೆಟೋರಿಯನ್ ಎಂಬ ಸಾವಯವ ಸಂಯುಕ್ತವೂ ಹೃದಯವು ರಕ್ತವನ್ನು ಪಂಪ್ ಮಾಡಲು ಸಹಕರಿಸುತ್ತದೆ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಕಲಂಗಡಿಹಣ್ಣನ್ನು ತಿನ್ನುವುದನ್ನು ರೂಡಿಸಿ ಕೊಳ್ಳಿ ಇದರಿಂದ ಬಿಪಿಯನ್ನು ಕಂಟ್ರೋಲ್ಮಾಡಲು ಸಹಾಯವಾಗುತ್ತದೆ.
ಪ್ರತಿದಿನ ಹೆಣ್ಣು ಮಕ್ಕಳ ಈ ಅಂಗವನ್ನು ಸ್ಪರ್ಶಿಸಿದರೆ ಶ್ರೀಮಂತರಾಗ್ತೀರ.!
• ನುಗ್ಗೆಕಾಯಿ ಸೇವನೆ ಮಾಡುವುದು:-
ನುಗ್ಗೆ ಕಾಯಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಫಲಕಾರಿ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್ ವಿಟಮಿನ್ ಹಾಗೂ ಖನಿಜಾಂಶಗಳು ರಕ್ತದೊತ್ತಡವನ್ನು ಕಡಿಮೆ ಗೊಳಿಸುತ್ತವೆ ನುಗ್ಗೆ ಸಸ್ಯದ ಎಲೆಗಳು ಸಹ ತುಂಬಾ ಸಹಕಾರಿ.
• ಉಪ್ಪಿನ ಸೇವನೆ ಮಿತವಾಗಿರಲಿ:-
ಹೆಚ್ಚು ಉಪ್ಪು ಸೇವಿಸಿದರೆ ಅದರಿಂದ ದೇಹದಲ್ಲಿ ಸೋಡಿಯಂ ಅಂಶವು ಹೆಚ್ಚಾಗುವುದು. ಇದರಿಂದ ಕಿಡ್ನಿಗೆ ನಿಮ್ಮದೇಹದಿಂದ ದ್ರವವನ್ನು ಹೊರಗೆ ಹಾಕಲು ತುಂಬಾ ಕಷ್ಟವಾಗುತ್ತದೆ ಇದರ ಪರಿಣಾಮವಾಗಿ ರಕ್ತದೊತ್ತಡ ಹೆಚ್ಚಾಗುವುದು.
• ನಿಮ್ಮ ತೂಕವನ್ನು ಪರೀಕ್ಷಿಸಿಕೊಳ್ಳಿ:-
ದೇಹದ ತೂಕವು ಹೆಚ್ಚಾದ ಕೂಡಲೇ ರಕ್ತದೊತ್ತಡ ಕೂಡ ಹೆಚ್ಚಾಗು ವುದು ತೂಕ ಇಳಿಕೆ ಮಾಡಿದರೆ ಅದರ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡಿ ತೂಕವನ್ನು ಇಳಿಸಿಕೊಳ್ಳಿ.
ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!
• ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ:-
ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಉಂಟುಮಾಡುತ್ತದೆ ಆದ್ದರಿಂದ ಆಸ್ಕೋಹಾಲ್ ಕಡಿಮೆಮಾಡಿ ಉತ್ತಮ ಆರೋಗ್ಯವನ್ನು ಪಡೆದು ಕೊಳ್ಳಿ.
• ಒತ್ತಡವನ್ನು ಕಡಿಮೆ ಮಾಡಿ:-
ನಮ್ಮ ಜೀವನ ವ್ಯಸ್ತ ಮತ್ತು ಒತ್ತಡದಿಂದ ಕೂಡಿರುವುದು ಆದರೆ ನಾವು ಈ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ನಮ್ಮ ರಕ್ತದೊತ್ತಡವು ಹೆಚ್ಚಾಗುವುದು.