Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeUseful Information2,000 ಮುಖ ಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ RBI. ಸೆಪ್ಟೆಂಬರ್ 30 ರವರೆಗೆ ಮಾತ್ರ ನೋಟು...

2,000 ಮುಖ ಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ RBI. ಸೆಪ್ಟೆಂಬರ್ 30 ರವರೆಗೆ ಮಾತ್ರ ನೋಟು ಬದಲಾವಣೆಗೆ ಅವಕಾಶ.!

2006 ನವೆಂಬರ್ 8ರಂದು ಪ್ರಧಾನ ಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದರು. ಆಗ ಚಲಾವಣೆಯಲ್ಲಿದ್ದ 500ರೂ. ಮುಖಬೆಲೆಯ ನೋಟು ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಕರಣಗೊಳಿಸಿದ್ದರು. ಆ ಸಮಯದಲ್ಲಿ ಜನಸಾಮಾನ್ಯರಿಗೆ ಇದು ಸ್ವಲ್ಪ ತೊಂದರೆ ಆದರೂ ಕೂಡ ಒಂದು ರೀತಿಯಲ್ಲಿ ಕಪ್ಪು ಹಣದ ಮೇಲೆ ಕಡಿವಾಳ ಹಾಕಿದ ರೀತಿಯಾಯಿತು.

ಬ್ಲಾಕ್ ಮನಿ ಹೊರ ತರುವ ಪ್ರಮುಖ ಉದ್ದೇಶದೊಂದಿಗೆ ಆದ ಈ ಆದೇಶದ ಬಗ್ಗೆ ಪ್ರತಿಪಕ್ಷಗಳು ಇಂದು ಕೂಡ ಟೀಕೆ ಮಾಡುತ್ತಿವೆ. ಹಳೆಯ ನೋಟುಗಳು ಚಲಾವಣೆ ನಿಂತ ತಕ್ಷಣವೇ 2,000ರೂ. ಮುಖಬೆಲೆಯ ಹೊಸ ನೋಟುಗಳು ಮತ್ತು 200ರೂ. ಮುಖಬೆಲೆಯ ನೋಟುಗಳು ಮೊದಲಿಗೆ ಬಾರಿಗೆ ಜಾರಿಗೆ ಬಂದವು. ಬಾಹ್ಯಾಕಾಶ ಯಾನ ಹೊಂದಿದ್ದ ಗುಲಾಬಿ ಬಣ್ಣದಿಂದ ಕೂಡಿದ್ದ ಹೊಸ ಮಾರ್ಪಾಡಿನ 2000 ರೂ ಮುಖಬೆಲೆಗೂ ಕೂಡ ಈಗ ಸಮಯ ಮುಗಿದಿದೆ.

ಆರಂಭದಲ್ಲಿ 2000 ನೋಟು ಚಲಾವಣೆಗೆ ಬಂದಾಗ ಎಲ್ಲೆಡೆ ಕೂಡ ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ ತೊಂದರೆ ಎದುರಾಗಿತ್ತು. ನಂತರ ದಿನಗಳಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಾದ ಕಾರಣ ಆ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ದೊಡ್ಡ ದೊಡ್ಡ ನಗದು ವ್ಯವಹಾರ ನಡೆಯುವಲ್ಲಿ 2000ರೂ. ಮುಖಬೆಲೆಯ ನೋಟುಗಳು ಬಾರಿ ಪಾತ್ರ ವಹಿಸಿದ್ದವು.

ಅಲ್ಲದೆ 2000ರೊ. ಮುಖಬೆಲೆಯ ನೋಟಿನಲ್ಲಿ ನ್ಯಾನೋ ಚಿಪ್ ಅಳವಡಿಸಲಾಗಿದೆ ಅದನ್ನು ಮೊಬೈಲ್ ಆಪ್ ಮೂಲಕ ಸ್ಕ್ಯಾನ್ ಮಾಡಿದಾಗ ನರೇಂದ್ರ ಮೋದಿ ಅವರು ಮಾತನಾಡುವುದನ್ನು ನೋಡಬಹುದು, ಅಲ್ಲದೆ ಈ ಹಣ ಎಲ್ಲೇ ಶೇಖರಣೆ ಆಗಿದ್ದರು ಅದನ್ನು ಈ ಚಿಪ್ ಮೂಲಕ ಕಂಡುಹಿಡಿಯಬಹುದು ಇದರಿಂದ ಕಪ್ಪು ಹಣದ ಸಂಗ್ರಹಣೆ ಕಂಡುಹಿಡಿಲು ಸುಲಭವಾಗಲಿದೆ ಎನ್ನುವ ವಿಷಯ ನೋಟು ಚಲಾವಣೆಗೆ ಬಂದ ಸಮಯದಲ್ಲಿ ಸಂಚಲನವನ್ನು ಸೃಷ್ಟಿಸಿ ಹೊಸದೊಂದು ಅಲೆಯನ್ನೇ ಎಬ್ಬಿಸಿತ್ತು.

ಆದರೆ ನಿಧಾನವಾಗಿ 2018 ರಿಂದ ಈಚೆಗೆ ಇದರ ಚಲಾವಣೆ ಕಡಿಮೆ ಆಗಿದೆ 2018 ನೇ ಇಸ್ವಿಯಲ್ಲಿಯೇ ಈ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಜನಸಾಮಾನ್ಯರಲ್ಲಿ ಓಡಾಡುತ್ತಿದ್ದ ಹಣವಷ್ಟೇ ವಹಿವಾಟು ನಡೆಯುತ್ತಿತ್ತು ಹೊರತು ಬ್ಯಾಂಕಿನಿಂದ ಯಾವುದೇ ಹೊಸ 2,000ರೂ. ನೋಟು ಸಿಗುತ್ತಿರಲಿಲ್ಲ. ಆಗಾಗ ಜನರು ಈ ನೋಟು ಕೂಡ ಸದ್ಯದಲ್ಲೇ ಬ್ಯಾನ್ ಆಗಲಿದೆ ಹಾಗಾಗಿ ಇದು ಹೆಚ್ಚು ಚಲಾವಣೆಯಲ್ಲಿಲ್ಲ ಎಂದು ಮಾತನಾಡುತ್ತಿದ್ದರು ಕೂಡ RBI ಆಗಲಿ ಸರ್ಕಾರ ಆಗಲಿ ಇದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರಲಿಲ್ಲ.

ಈಗ ಅಧಿಕೃತವಾಗಿ ಮೇ 19ರಂದು RBI ಈ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಣೆಯನ್ನು ಹೊರಡಿಸಿ ದೇಶದ ಜನತೆಗೆ ಶಾ’ಕ್ ನೀಡಿದೆ. 2000 ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ ಜೊತೆಗೆ ಜನರಿಗೂ ಸಹ ವಿನಿಮಯ ಮಾಡಿಕೊಳ್ಳುವುದಕ್ಕೆ ಕಾಲಾವಕಾಶವನ್ನು ನೀಡಿದೆ. ಈ ವಿಷಯದಲ್ಲಿ ನೋಟ್ ಬದಲಾಯಿಸುವುದಕ್ಕೆ ಹೆಚ್ಚಿನ ಕಾಲಾವಕಾಶ ನೀಡಿರುವುದು ಸಮಾಧಾನಕರ ವಿಷಯ ಆಗಿದೆ.

ಜನರು ಉಳಿತಾಯ ಖಾತೆಯಲ್ಲಿ ಜಮೆ ಮಾಡಬಹುದು ಅಥವಾ ಬ್ಯಾಂಕಿಗೆ ಕೊಟ್ಟು ಅದನ್ನು ಬದಲು ಸಹ ಮಾಡಿಸಿಕೊಳ್ಳಬಹುದು. ಅಕ್ಟೋಬರ್ 1ರಿಂದ 2,000ರೂ. ಮುಖಬೆಲೆಯ ನೋಟು ಚಲಾವಣೆ ನಿಲ್ಲುವುದರಿಂದ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕಿಗೆ 2000 ಮುಖಬೆಲೆಯ ನೋಟುಗಳನ್ನು ನೀಡಬೇಕು. ಒಂದು ದಿನಕ್ಕೆ ಒಬ್ಬ ವ್ಯಕ್ತಿಯು ರೂ.20,000 ವರೆಗೂ ಮಾತ್ರ 2,000 ನೋಟುಗಳನ್ನು ಠೇವಣಿ ಇಡಬಹುದು ಎನ್ನುವ ಮಿತಿಯನ್ನು ಸರ್ಕಾರ ಹೇರಿದೆ.

ಮೇ 23ನೇ ತಾರೀಖಿನಿಂದ ಈ ವಿನಿಮಯ ಕಾರ್ಯವು ಆರಂಭ ಆಗಲಿದೆ. ನೀವು ಸಹ 2000 ನೋಟುಗಳನ್ನು ಹೊಂದಿದ್ದರೆ RBI ನೀತಿಯಂತೆ ಬ್ಯಾಂಕ್ಗಳಿಗೆ ಹಿಂದಿರುಗಿಸಿ ಮತ್ತು ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ತಪ್ಪದೇ ಹಂಚಿಕೊಳ್ಳಿ.