ಕರ್ನಾಟಕ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಈ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ರೈತರಿಗೆ ಅನುಕೂಲವಾಗುವಂತೆ ಅವರು ಕೂಡ ತಮ್ಮ ಜಮೀನಿನಲ್ಲಿ ಬೋರ್ವೆಲ್ ಹಾಕಿಸಿಕೊಳ್ಳುವುದರ ಮೂಲಕ ಹಲವಾರು ಬೆಳೆಗಳನ್ನು ಬೆಳೆಯಬಹುದಾಗಿದೆ ಹೌದು ಕೆಲವೊಂದಷ್ಟು ಜನ ರೈತರು ತಮ್ಮದೇ ಹಣವನ್ನು ಖರ್ಚು ಮಾಡಿ ತಮ್ಮ ಜಮೀನುಗಳಲ್ಲಿ ಬೋರ್ವೆಲ್ ಹಾಕಿಸಿಕೊಳ್ಳುತ್ತಾರೆ.
ಆದರೆ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯನ್ನು ಸದುಪಯೋಗಪಡಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಕೆಲವೊಂದಷ್ಟು ರೈತರಿಗೆ ಇದರ ಮಾಹಿತಿಯು ಸಹ ತಿಳಿದಿರುವುದಿಲ್ಲ ಆದ್ದರಿಂದ ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಮಾಹಿತಿಗಳನ್ನು ಎಲ್ಲರಿಗೂ ತಿಳಿಸುವುದು ಒಳ್ಳೆಯದು.
ಹಾಗೂ ಅವರಿಗೆ ಅನುಕೂಲವಾಗುವಂತೆ ಇದರ ಬಗ್ಗೆ ತಿಳಿಯದವರಿಗೆ ತಿಳಿಸಿ ಹೇಳುವುದು ಅವರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೌದು ಕರ್ನಾಟಕ ರಾಜ್ಯ ಸರ್ಕಾರ ಈ ಒಂದು ಯೋಜನೆಯನ್ನು 2023|| 24ನೇ ಸಾಲಿನಲ್ಲಿ ಬಿಡುಗಡೆ ಮಾಡಿದ್ದು ಸರ್ಕಾರದಿಂದ ಇಂತಿಷ್ಟು ಹಣವನ್ನು ಪ್ರತಿಯೊಬ್ಬ ರೈತರು ಕೂಡ ಪಡೆಯಬಹುದಾಗಿದೆ. ಹೌದು ಒಂದುವರೆ ಲಕ್ಷದಿಂದ 3 ಲಕ್ಷದವರೆಗೆ ಸಬ್ಸಿಡಿ ಹಣವನ್ನು ಪಡೆಯಬಹುದಾಗಿದ್ದು.
ಈ ಒಂದು ಯೋಜನೆಯನ್ನು ಪ್ರತಿಯೊಬ್ಬ ರೈತರು ಕೂಡ ಸದುಪಯೋಗಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಯಾವ ರೈತರು ಈ ಒಂದು ಯೋಜನೆಯ ನ್ನು ಪಡೆದುಕೊಳ್ಳಬಹುದು ಹಾಗೂ ಯಾರೆಲ್ಲ ಅರ್ಹರು ಅರ್ಹರಲ್ಲ ಹಾಗೂ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.
• ಮೊದಲೇ ಹೇಳಿದಂತೆ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು.
• ಹಾಗೂ ಈ ಒಂದು ಯೋಜನೆ ಪ್ರತಿಯೊಬ್ಬರಿಗೂ ಕೂಡ ಇದ್ದು ಅಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಒಬಿಸಿ ಒಕ್ಕಲಿಗ ಹೀಗೆ ಪ್ರತಿಯೊಂದು ವರ್ಗಕ್ಕೂ ಕೂಡ ಈ ಒಂದು ಯೋಜನೆ ಅನ್ವಯವಾಗು ತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ.
• ಈ ಒಂದು ಯೋಜನೆಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಆನ್ಲೈನ್ ನಲ್ಲಿ ಹೋಗಿ ನೀವು ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹು ದಾಗಿದೆ.
ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಏನೆಲ್ಲಾ ಶರತ್ತುಗಳು ಅಂದರೆ ಏನೆಲ್ಲ ನಿಯಮಗಳು ಇದೆ ಎಂದು ನೋಡುವುದಾದರೆ.
• ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹೌದು 18 ವರ್ಷ ತುಂಬಿದಂತಹ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆ ಯನ್ನು ಪಡೆದುಕೊಳ್ಳಬಹುದು ಅಂದರೆ ಈ ಒಂದು ಯೋಜನೆಗೆ ಅರ್ಹರಿರುತ್ತಾರೆ ಎಂದೇ ಹೇಳಬಹುದು.
• ಜೊತೆಗೆ ಮೊದಲೇ ಹೇಳಿದಂತೆ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರ ಬೇಕು.
ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ಅರ್ಜಿ ಸಲ್ಲಿಸುವುದು ಎಂದು ನೋಡುವುದಾದರೆ:-
• ಜಮೀನಿನ ಪಹಣಿ ಹೊಂದಿರಬೇಕು.
• ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆದಾಯ ಮತ್ತು ದೃಢೀ ಕರಣ ಪತ್ರ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ.
ಕೊನೆಯದಾಗಿ ಎಲ್ಲಿ ಅರ್ಜಿ ಸಲ್ಲಿಸುವುದು ಅಂದರೆ
• ನಿಮಗೆ ಸಂಬಂಧಪಟ್ಟ ಜಿಲ್ಲೆ ಅಥವಾ ತಾಲೂಕಿನ ವರ್ಗದ ನೇಮ ಕಾಮಕ್ಕೆ ಭೇಟಿ ನೀಡುವುದರ ಮೂಲಕ ಮೇಲಿನ ಎಲ್ಲ ದಾಖಲಾತಿ ಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿ.
• ಈ ಮೊತ್ತವನ್ನು ಬೋರ್‌ವೆಲ್ ಕೊರೆಯುವಿಕೆ, ಪಂಪ್ ಪೂರೈಕೆ ಮತ್ತು ವಿದ್ಯುದ್ದೀಕರಣಕ್ಕಾಗಿ 50000 ರೂ. ಠೇವಣಿ ಇಡಲಾಗುವುದು.
ಇದರೊಂದಿಗೆ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ, ತುಮಕೂರು ರಾಮನಗರಕ್ಕೆ 3.5 ಲಕ್ಷ ಸಹಾಯಧನ ವನ್ನು ಸರ್ಕಾರ ನೀಡುತ್ತದೆ. ಇದರೊಂದಿಗೆ ರಾಜ್ಯ ಸರ್ಕಾರ ಇತರೆ ಜಿಲ್ಲೆಗಳಿಗೆ ₹ 2 ಲಕ್ಷದವರೆಗೆ ಸಹಾಯಧನ ನೀಡಲಿದೆ.