Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

1,000 ಕಟ್ಟಿದ್ರೆ ಒಂದು ಕೋಟಿ ಕೊಡುವ ಇನ್ಶೂರೆನ್ಸ್.!

Posted on December 13, 2023 By Kannada Trend News No Comments on 1,000 ಕಟ್ಟಿದ್ರೆ ಒಂದು ಕೋಟಿ ಕೊಡುವ ಇನ್ಶೂರೆನ್ಸ್.!

 

ನಾವು ಲೈಫ್ ಇನ್ಶುರೆನ್ಸ್ ಗಳ (Life Insurance) ಬಗ್ಗೆ ಕೇಳಿರುತ್ತೇವೆ. ಲೈಫ್ ಇನ್ಶೂರೆನ್ಸ್ ನಲ್ಲಿ ನೀವು ಪ್ರೀಮಿಯಂಗಳನ್ನು ಪಾವತಿಸುವುದು ಹೂಡಿಕೆ ಆಗಿರುತ್ತದೆ ಮತ್ತು ಅದರ ಮೆಚುರಿಟಿ ಅವಧಿ ಮುಗಿದ ಮೇಲೆ ನಿಮಗೆ ನೀವು ಒಪ್ಪಿಕೊಂಡಿದ್ದ ಕಂಡಿಶನ್ ಗಳ ಆಧಾರದ ಮೇಲೆ ಅನ್ವಯವಾಗುವ ಬಡ್ಡಿ ದರದಲ್ಲಿ ಲಾಭದ ಸಮೇತ ಹೂಡಿಕೆ ಮೊತ್ತ ವಾಪಸ್ ಸಿಗುತ್ತದೆ.

ಆದರೆ ಟರ್ಮ್ ಇನ್ಶುರೆನ್ಸ್ (Term Insurance) ಎನ್ನುವುದು ಹೂಡಿಕೆ ಅಲ್ಲ ಇದು ಜೀವಕ್ಕೆ ಮಾಡಿಕೊಳ್ಳುವ ವಿಮೆ. ಹೇಗೆ ನಾವು ವಾಹನಗಳಿಗೆ ವಿಮೆ ಕಟ್ಟುತ್ತಿರುವ ಹಾಗೆ ಟರ್ಮ್ ಇನ್ಸೂರೆನ್ಸ್ ಗಳಲ್ಲಿ ಪ್ರೀಮಿಯಂ ಗಳನ್ನು ಪಾವತಿಸಬೇಕು ಒಂದು ವೇಳೆ ನಿಮಗೆ ಅ’ಪ’ಘಾ’ತ, ಆ’ನಾ’ರೋ’ಗ್ಯ ಅಥವಾ ಇನ್ಯಾವುದೋ ಕಾರಣದಿಂದ ಅ’ಪ’ಮೃ’ತ್ಯು ಸಂಭವಿಸಿದಾಗ ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬಕ್ಕಾಗುವ ನ’ಷ್ಟವನ್ನು ಇದು ತಡೆಯುತ್ತದೆ.

ಹಾಗಾಗಿ ಕುಟುಂಬವನ್ನು ಪ್ರೀತಿಸುವ ಪ್ರತಿಯೊಬ್ಬರು ಕುಟುಂಬದ ಭದ್ರತೆಗಾಗಿ ಈ ಇನ್ಶುರೆನ್ಸ್ ಮಾಡಿಸಲೇಬೇಕು. ಲೈಫ್ ಇನ್ಶೂರೆನ್ಸ್ ಗಳ ರೀತಿಯೇ ಇದು IRDAI ನಿಯಂತ್ರಣದಲ್ಲಿರುತ್ತದೆ. ಭಾರತದಲ್ಲಿ TATA AIA life, Max Life Insurance, HDFC, ICICI life ಹೀಗೆ ಯಾವುದೇ ಕಂಪನಿಯ ಟರ್ಮ್ ಇನ್ಶುರೆನ್ಸ್ ಖರೀದಿಸಬಹುದು ಭಾರತದಲ್ಲಿ ನೂರಾರು ಟರ್ಮ್ ಇನ್ಸೂರೆನ್ಸ್ ಕಂಪನಿಗಳಿವೆ, ಆದರೆ ಎಲ್ಲದಕ್ಕೂ ಒಂದು ವೇದಿಕೆಯಾಗಿ ಪಾಲಿಸಿ ಬಜಾರ್ ಕಂಪನಿ ವೆದಿಕೆಯಾಗಿದೆ.

ಇದು ಪಾಲಿಸಿಗಳನ್ನು ಮಾರುವುದಿಲ್ಲ ಆದರೆ Policy bazar.com ಗೆ ಭೇಟಿ ಕೊಟ್ಟರೆ ಯಾವ ಯಾವ ಕಂಪನಿಗಳಿವೆ, ಯಾವುದರಲ್ಲಿ ಪ್ರೀಮಿಯಂ ಹೆಚ್ಚು ಪ್ರೀಮಿಯಂ ಕಡಿಮೆ, ಯಾವುದು ಬೆಸ್ಟ್ ಎಂದೆಲ್ಲಾ ಕಂಪೇರ್ ಮಾಡಿ ನೋಡಿ ನಿಮಗೆ ಅನುಕೂಲಕರವಾಗುವುದನ್ನು ಆರಿಸಿಕೊಳ್ಳಬಹುದು.

ಆರಿಸಿಕೊಳ್ಳುವಾಗ ತಪ್ಪದೆ ಆ ಕಂಪನಿಗಳ ಕ್ಲೈಮ್ ರೇಟ್ ಏನಿದೆ ಎನ್ನುವುದನ್ನು ಗಮನಿಸಿ. ಇನ್ನು 30-40 ವರ್ಷ ಕಳೆದ ಮೇಲೆ ಆ ಕಂಪನಿ ಗಟ್ಟಿಯಾಗಿ ಇರುತ್ತದೆಯೇ ಪರೀಕ್ಷಿಸಿ ಆ ಕಂಪನಿಯನ್ನು ಆಯ್ದುಕೊಳ್ಳಿ. ಟರ್ಮ್ ಇನ್ಸೂರೆನ್ಸ್ ಹೇಗೆ ಮಾಡಿಸಬೇಕು ಎಂದರೆ ಅತಿ ಕಡಿಮೆ ವಯಸ್ಸಿನಲ್ಲಿ ಮಾಡಿಸುವುದು ಬಹಳ ಬೆಸ್ಟ್. ಯಾಕೆಂದರೆ ಚಿಕ್ಕ ವಯಸ್ಸಿನಲ್ಲಿ ಖರೀದಿಸಿದಷ್ಟು ಪ್ರೀಮಿಯಂ ಮೊತ್ತ ಕಡಿಮೆ ಆಗುತ್ತದೆ.

ಉದಾಹರಣೆಗೆ ನೀವು 1 ಕೋಟಿ ಹಣಕ್ಕೆ ಟರ್ಮ್ ಇನ್ಸೂರೆನ್ಸ್ ಖರೀದಿಸಿದರೆ 60 ವರ್ಷ ಆಗುವವರೆಗೂ ಪ್ರೀಮಿಯಂ ಪಾವತಿಸಬೇಕು, ನೀವೇನಾದರೂ 20ನೇ ವಯಸ್ಸಿಗೆ ಆರಂಭಿಸಿದರೆ 500 ರೂಪಾಯಿಗಿಂತ ಕಡಿಮೆ ಪ್ರೀಮಿಯಂ ಇರುತ್ತದೆ ಮತ್ತು ಪ್ರೀಮಿಯಂ ಬ್ಲಾಕ್ ಮಾಡುವ ಆಪ್ಷನ್ ಇರುವುದರಿಂದ ನಂತರದ ದಿನಗಳಲ್ಲಿ ನಿಮ್ಮ ಆದಾಯ ಹೆಚ್ಚಾದರೂ ನಿಮ್ಮ ಪ್ರೀಮಿಯಂ ಮೊತ್ತ 500 ಮಾತ್ರ ಇರುತ್ತದೆ ಮತ್ತು ಈ ರೀತಿ ಇನ್ಸೂರೆನ್ಸ್ ಮೊತ್ತ ಆರಿಸುವಾಗ ನಿಮ್ಮ ವಾರ್ಷಿಕ ಆದಾಯಕ್ಕಿಂತ 10 ಪಟ್ಟು ಹೆಚ್ಚಿನ ಮೊತ್ತಕ್ಕೆ ಇನ್ಸೂರೆನ್ಸ್ ಮಾಡಿಸಿ.

ಯಾಕೆಂದರೆ ಯಾರ ಜೀವಕ್ಕೂ ಬೆಲೆಕಟ್ಟಲು ಆಗುವುದಿಲ್ಲ ಒಬ್ಬ ಕುಟುಂಬದಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಾಗ ಆ ತಂದೆ ತಾಯಿಗೆ ಅಥವಾ ಆತನ ಹೆಂಡತಿ ಮಕ್ಕಳಿಗೆ ಆಗುವ ನೋ’ವನ್ನು ವಿವರಿಸಲು ಆಗುವುದಿಲ್ಲ. ಅಂತಹ ಸಮಯದಲ್ಲೂ ಇನ್ಶೂರೆನ್ಸ್ ಆಶಾಕಿರಣವಾಗಿ ಅವರ ಬದುಕನನ್ನು ಮುಂದಕ್ಕೆ ನಡೆಸಿಕೊಂಡು ಹೋಗುವುದಕ್ಕೆ ಅನುಕೂಲವಾಗುತ್ತದೆ.

ಹಾಗಾಗಿ ಟರ್ಮ್ ಇನ್ಸೂರೆನ್ಸ್ ಮಾಡಿಸುವುದು ಅಷ್ಟೊಂದು ಇಂಪಾರ್ಟೆಂಟ್. ಕೆಲವು ಟರ್ಮ್ ಇನ್ಸೂರೆನ್ಸ್ ನಲ್ಲಿ ಕೆಲವೊಂದು ಕಂಪನಿಗಳು ಆಡೋನ್ ಸೇವೆಗಳು (add on) ಕೂಡ ಕೊಡುತ್ತವೆ, ಅವುಗಳ ಬಗ್ಗೆಯೂ ಕೂಡ ಗಮನಹರಿಸಿದರೆ ಇನ್ನು ಹೆಚ್ಚು ಅನುಕೂಲವಾಗುತ್ತದೆ. ಇವುಗಳ ಬಗ್ಗೆ ಇನ್ನಷ್ಟು ವಿವರ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/OvQmqY8dbLc?si=1u35dnGKNsCaV3py

Useful Information
WhatsApp Group Join Now
Telegram Group Join Now

Post navigation

Previous Post: ಈ ರೀತಿಯ ಫುಡ್ ಗಳನ್ನು ತಿಂದರೆ ಕಿಡ್ನಿ ತುಂಬಾ ಚೆನ್ನಾಗಿರುತ್ತೆ, ಕಿಡ್ನಿ ಹೆಲ್ತ್ ಇಂಪ್ರೂ ಮಾಡುವ ಸೂಪರ್ ಟಿಪ್ ಗಳು ಇವು.!
Next Post: ಪೋಸ್ಟ್ ಆಫೀಸ್ ನ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ನಲ್ಲಿ ರೂ.1 ಲಕ್ಷ ಕಟ್ಟಿದರೆ ರೂ.38,570 ಪಡೆಯಬಹುದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore