ಕೆಲವೊಂದು ಸಂಬಂಧಗಳ ಬಗ್ಗೆ ನಾವು ಅತಿ ಹೆಚ್ಚು ಯೋಚಿಸುತ್ತೇವೆ ಹಾಗೂ ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಬಯಸುತ್ತೇವೆ. ಈ ರೀತಿ ಆಲೋಚನೆಗಳು ಹೆಚ್ಚಾಗಿ ಬರುವುದು ಒಬ್ಬ ವ್ಯಕ್ತಿಯ ಮೇಲೆ ಪ್ರೀತಿ ಆದಾಗ. ಎರಡು ಕಡೆಯಿಂದ ಒಂದೇ ರೀತಿಯ ಭಾವನೆಗಳು ಇದ್ದು ಮುಖಾಮುಖಿಯಾಗಿ ನೇರವಾಗಿ ಮಾತನಾಡಿಕೊಂಡರೆ ಸಮಸ್ಯೆ ಇರುವುದಿಲ್ಲ ಆದರೆ ಕೆಲವರಿಗೆ ಆ ಸ್ಪಷ್ಟತೆ ಇರುವುದಿಲ್ಲ ಮತ್ತು ಕೆಲವರು ಎದುರಿಗಿರುವ ವ್ಯಕ್ತಿಯ ಭಾವನೆ ಅರಿಯಲು ಕ’ಷ್ಟ ಪಡುತ್ತಾರೆ.
ಹೀಗಾಗಿ ಸದಾ ಅವರದೇ ಯೋಚನೆಯಲ್ಲಿ ಮುಳುಗಿ ಕನಸು ಕಾಣುತ್ತಾರೆ ಮುಂದೊಂದು ದಿನ ಅವರ ನಿರೀಕ್ಷೆ ಉತ್ತರ ಬರದೇ ಇದ್ದಾಗ ಡಿಪ್ರೆಶನ್ ಗೆ ಹೋಗಿ ಬಿಡುತ್ತಾರೆ. ಈ ರೀತಿ ದು’ರಂ’ತ ಆಗುವುದರ ಬದಲು ಮೊದಲೇ ಭಾವನೆ ಏನಿದೆ ಎಂದು ತಿಳಿದುಕೊಳ್ಳುವುದು ಉತ್ತಮ. ನೇರವಾಗಿ ತಿಳಿದುಕೊಳ್ಳಲು ಆಗದೆ ಇದ್ದರೆ ಈಗ ನಾವು ಹೇಳಿದ ಈ ವಿಧಾನವನ್ನು ಅನುಸರಿಸಿ ಅದನ್ನು ಗೆಸ್ ಮಾಡಿ.
ಈಗ ನಿಮ್ಮ ಎದುರಿಗೆ ಮೂರು ಪುಸ್ತಕಗಳು ಇದೆ ಎಂದುಕೊಳ್ಳಿ. ಒಂದು ಪುಸ್ತಕ ಕೇಸರಿ ಬಣ್ಣದ್ದು 1 ಎಂದು ಬರೆದಿದೆ, ಮತ್ತೊಂದು ಪುಸ್ತಕ ಬಿಳಿ ಬಣ್ಮದಲ್ಲಿದ್ದು ಅದರಲ್ಲಿ 2 ಎಂದು ಬರೆದಿದೆ, ಮತ್ತೊಂದು ಪುಸ್ತಕ ಹಳದಿ ಬಣ್ಣದಲ್ಲಿದ್ದು ಅದರಲ್ಲಿ 3 ಎಂದು ಬರೆದಿದೆ ಎಂದುಕೊಳ್ಳಿ ಈಗ ಕಣ್ಣು ಮುಚ್ಚಿಕೊಂಡು ಆ ಮೂರು ಪುಸ್ತಕಗಳಲ್ಲಿ ಯಾವುದಾದರು ಒಂದನ್ನು ಆರಿಸಿ.
ನಿಮಗೆ ಈಗಲೂ ಕೂಡ ನಿಮ್ಮ ನಿರ್ಧಾರದ ಬಗ್ಗೆ ನಂಬಿಕೆ ಇಲ್ಲ ಎಂದರೆ ನೀವು ಮೂರು ಚೀಟಿಗಳಲ್ಲಿ ಮೂರು ಸಂಖ್ಯೆಯನ್ನು ಬರೆದು ಅದನ್ನು ಚೆನ್ನಾಗಿ ಕುಲಕ್ಕೆ ಕೆಳಗೆ ಹಾಕಿ ಯಾವುದಾದರೂ ಚಿಕ್ಕ ಮಕ್ಕಳಿಗೆ ತೆಗೆದುಕೊಡಲು ಹೇಳಿ ಮತ್ತು ಅದರಲ್ಲಿರುವ ಸಂಖ್ಯೆ ಯಾವುದು ಎಂದು ನೋಡಿ ಆ ಸಂಖ್ಯೆ ಆಧಾರದ ಮೇಲೆ ರಿಸಲ್ಟ್ ಹೀಗಿದೆ.
ನೀವಾಗಿ ಆರಿಸಿರುವ ಅಥವಾ ನಿಮಗೆ ಬಂದಿರುವ ಸಂಖ್ಯೆ ಕೇಸರಿ ಬಣ್ಣದ ಪುಸ್ತಕದ 1 ಎಂದು ಇದ್ದರೆ ನೀವು ನೇರವಾಗಿ ಹೋಗಿ ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲವನ್ನು ಅವರ ಮುಂದೆ ಹೇಳಿಕೊಳ್ಳುವುದು ಬಹಳ ಉತ್ತಮ ಮತ್ತು ಈ ವಿಚಾರದಲ್ಲಿ ಅವರು ಸಮ್ಮತಿ ಸೂಚಿಸುವ ಸಾಧ್ಯತೆಗಳು ಕೂಡ ಇವೆ.
ಒಂದು ವೇಳೆ ಅವರದ್ದೇ ಆದ ಕಾರಣಗಳು ಇದ್ದರೂ ಅವು ನಿಮಗೆ ಬಹಳ ಬೇಗ ಮನೆವರಿಗೆ ಆಗಿ ಆ ಕ್ಷಣದಲ್ಲಿ ನೋವಾದರೂ ಅದರಿಂದ ಬಹಳ ಬೇಗ ಆಚೆ ಬಂದು ನಿಮ್ಮ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತೀರಾ ಹಾಗಾಗಿ ಯಾವುದೇ ಗೊಂದಲ ಇಲ್ಲದೆ ಈ ವಿಚಾರದ ಬಗ್ಗೆ ಮುಕ್ತವಾಗಿ ಅವರೊಂದಿಗೆ ಮಾತನಾಡಿ.
ನಿಮಗಿರುವ ಸಂಖ್ಯೆ 2 ಆಗಿದ್ದರೆ ನೀವು ಅವರ ಮೇಲೆ ಅಪಾರ ಪ್ರೀತಿ ಹೊಂದಿದ್ದೀರಾ ಹಾಗೂ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ಅರ್ಥ. ಆದರೆ ಅವರು ನಿಮಗೆ ಯಾವುದೇ ರೀತಿಯ ಸ್ಪಷ್ಟ ಸೂಚನೆ ಕೊಡದೆ ಆಗಾಗ ಹತ್ತಿರವಾಗಿ, ಆಗಾಗ ಕಾರಣ ಇಲ್ಲದೆ ದೂರ ಆಗುತ್ತಿರುತ್ತಾರೆ.
ಈ ಸಂಬಂಧದಿಂದ ನಿಮಗೆ ನೋ’ವು ಹೆಚ್ಚಾಗುತ್ತದೆ ಆದರೆ ಎಷ್ಟೇ ನೋ’ವು ಆದರೂ ಅವರನ್ನೇ ಬಯಸುತ್ತೀರಿ. ನೀವು ಇದರಿಂದ ಆಚೆ ಬರಲು ಬಹಳ ಗಟ್ಟಿ ಮನಸ್ಸು ಮಾಡಬೇಕು ಇಲ್ಲವಾದಲ್ಲಿ ಅವರನ್ನು ಪಡೆದುಕೊಳ್ಳಲು ಅವರ ಮನಸ್ಸನ್ನು ಗೆಲ್ಲಲಾದರು ಪ್ರಯತ್ನ ಪಡಬೇಕು.
ನಿಮಗೇನಾದರೂ ಹಳದಿ ಬಣ್ಣದ ಪುಸ್ತಕದಲ್ಲಿರುವ 3 ಎನ್ನುವ ಸಂಖ್ಯೆ ಬಂದಿದ್ದರೆ ಸ್ವಲ್ಪ ದಿನ ಕಾದು ನೋಡಿ ನಿಮ್ಮ ರಿಸಲ್ಟ್ ತಿಳಿಯುತ್ತದೆ. ಯಾಕೆಂದರೆ ಅವರು ನಿಮ್ಮ ಮೇಲೆ ಇದೇ ಭಾವನೆ ಹೊಂದಿದ್ದರೆ ಅವರೇ ಬಂದು ಹೇಳುತ್ತಾರೆ.
ಒಂದು ವೇಳೆ ಅವರಿಗೆ ನಿಮ್ಮ ಮೇಲೆ ನಿಮ್ಮದೇ ರೀತಿ ಭಾವನೆ ಇಲ್ಲದೆ ಇದ್ದರೆ ನೀವು ಅದನ್ನು ಗಮನಿಸಿ ನಿಮಗೆ ಅವರ ಮೇಲಿರುವ ಆಸಕ್ತಿ ಕಳೆದುಕೊಳ್ಳುತ್ತೀರಿ ಮತ್ತು ಒಂದು ವೇಳೆ ನೀವು ಈಗ ಸಮಯದಲ್ಲಿ ಸೈಲೆಂಟ್ ಆಗಿದ್ದು ಅವರ ನಡವಳಿಕೆಗಳಿಂದ ಉತ್ತರ ಕಂಡುಕೊಂಡು ಸುಮ್ಮನಾದರೆ ಜೀವನಪೂರ್ತಿ ನೀವು ಅವರ ಜೊತೆ ಒಳ್ಳೆಯ ಸ್ನೇಹವನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ.