ಡಿಸೆಂಬರ್ 23, ಶನಿವಾರದಂದು ವೈಕುಂಠ ಏಕಾದಶಿ ಬಂದಿದೆ. ಇದು ವೆಂಕಟೇಶ್ವರನ ಭಕ್ತರೆಲ್ಲರಿಗೂ ಕೂಡ ಬಹಳ ಪವಿತ್ರವಾದ ದಿನವಾಗಿದೆ. ಭಗವಾನ್ ವಿಷ್ಣು ಮಾತ್ರವಲ್ಲದೇ ವೆಂಕಟೇಶ್ವರನನ್ನು ಪೂಜಿಸುವವರು ಮಾತ್ರವಲ್ಲದೆ ಜಾತಿ, ಮತ ವರ್ಣ ಭೇದವಿಲ್ಲದೆ ಎಲ್ಲರೂ ಕೂಡ ಈ ಒಂದು ದಿನ ಉಪವಾಸ ಇದ್ದು ಏಕಾದಶಿ ಆಚರಿಸುತ್ತಾರೆ.
ಈ ದಿನದಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎನ್ನುವುದು ನಂಬಿಕೆ ಮತ್ತು ಈ ದಿನದಂದು ವೆಂಕಟೇಶ್ವರನ ದರ್ಶನ ಅಥವಾ ವಿಷ್ಣುವಿನ ಯಾವುದೇ ಅವತಾರದ ದರ್ಶನ ಮಾಡಿದರು ಕೂಡ ಕೋಟಿ ಪುಣ್ಯ ಎನ್ನುವುದು ನಂಬಿಕೆ ಹಾಗಾಗಿ ಬೆಳಗ್ಗೆಯಿಂದ ಎಲ್ಲಾ ದೇವಸ್ಥಾನಗಳನ್ನು ಕೂಡ ಅಪಾರ ಜನಸ್ತೋಮ ನೆರೆದಿರುತ್ತದೆ.
ವೈಜ್ಞಾನಿಕ ದೃಷ್ಟಿಕೋನದಿಂದಲೂ ಆರೋಗ್ಯದ ಉದ್ದೇಶದಿಂದ ಏಕಾದಶಿ ಆಚರಿಸುವುದು ಬಹಳ ಒಳ್ಳೆಯದು ಎನ್ನುವುದು ಇತ್ತೀಚಿಗೆ ಸಂಶೋಧನೆಗಳಿಂದ ಸಾಬೀತಾಗಿದ್ದು ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಆಹಾರ ತಜ್ಞರು ಕೂಡ ಹಿರಿಯರು ಆಚರಿಸುತ್ತಿದ್ದ ಈ ಒಂದು ಏಕಾದಶಿ ದಿನದ ಉಪವಾಸವು ಅರ್ಥಪೂರ್ಣವಾಗಿತ್ತು ಎನ್ನುತ್ತಿದ್ದಾರೆ ಹಾಗಾಗಿ ನಮ್ಮ ಸಂಪ್ರದಾಯ ಬಹಳ ಶ್ರೇಷ್ಠ ಎಂದು ನಾವು ಹೆಮ್ಮೆ ಪಡಬಹುದು.
ಏಕಾದಶಿಯ ದಿನ ಸ್ನಾನ, ಪೂಜೆ ಹಾಗೂ ದೇವರ ದರ್ಶನಕ್ಕೆ ಇಡೀ ದಿನ ಮೀಸಲು ಈ ಒಂದು ದಿನ ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ ದೇವರ ದರ್ಶನವನ್ನು ಮಾಡುವವರು ಇದ್ದಾರೆ. ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅಥವಾ ನಿಮ್ಮ ಕುಟುಂಬದಲ್ಲಿ ಆಚರಿಸಿಕೊಂಡು ಬಂದಿರುವ ನಿಯಮದ ಪ್ರಕಾರ ನೀವು ಏಕಾದಶಿಯನ್ನು ಆಚರಿಸಿ ಆದರೆ ಈ ದಿನ ಸ್ನಾನ ಮಾಡುವಾಗ ತಪ್ಪದೇ ಒಂದು ಉಪಾಯವನ್ನು ಮಾಡಿ ನಿಮ್ಮ ಅದೃಷ್ಟ ಹೇಗೆ ಬದಲಾಯಿಸುತ್ತದೆ ಎನ್ನುವುದನ್ನು ನೀವೇ ಪರೀಕ್ಷೆ ಮಾಡಿ ತಿಳಿದುಕೊಳ್ಳಿ.
ಬಹಳ ವಿಶೇಷವಾದ ದಿನದಾದ ಈ ವೈಕುಂಠ ಏಕಾದಶಿ ದಿನದಂದು ಬೆಳಗ್ಗೆ ಮತ್ತು ಸಂಜೆ ಸಮಯ ಸಮಯ ಕೂಡ ಸ್ನಾನ ಮಾಡಿ ಭಗವಂತನ ಧ್ಯಾನ ಮಾಡಿ. ಈ ರೀತಿ ಸಂಜೆ ಹೊತ್ತು ಸ್ನಾನ ಮಾಡುವಾಗ ನೀರಿಗೆ ನೀವು ಸ್ವಲ್ಪ ಹರಳುಪ್ಪು ಬೆರೆಸಿ ಸ್ನಾನ ಮಾಡಬೇಕು. ಇದರಿಂದ ನಿಮ್ಮ ಮೇಲೆ ಆಗಿರುವ ಕೆಟ್ಟ ದೃಷ್ಟಿಗಳು ನರ ದೃಷ್ಟಿಗಳ ಪ್ರಭಾವ ಎಲ್ಲವೂ ಕೂಡ ನಾಶ ಆಗುತ್ತದೆ, ನಿಮ್ಮ ಔರ ಸ್ವಚ್ಛವಾಗುತ್ತದೆ.
ನೀವು ಬಹಳ ಪಾಸಿಟಿವ್ ಆಗಿ ಬದಲಾಗುತ್ತಿರಿ ಮತ್ತು ನಿಮ್ಮ ಮೇಲೆ ಆಗಿರುವ ನ’ಕಾ’ರಾ’ತ್ಮ’ಕ ಪ್ರಯೋಗಳು ಕಳೆಯುವುದೆಂದರೆ ಭಗವಂತನ ಸಂಪೂರ್ಣ ಅನುಗ್ರಹ ನಿಮಗೆ ಸಿಗುತ್ತದೆ. ಹಾಗಾಗಿ ತಪ್ಪದೆ ಈ ರೀತಿ ಸ್ನಾನ ಮಾಡಿ ಹತ್ತಿರದಲ್ಲಿರುವ ಯಾವುದೇ ವಿಷ್ಣು ಅವತಾರದ ಸನ್ನಿಧಾನಗಳಿಗೆ ಭೇಟಿ ಕೊಟ್ಟು ಶ್ರೀ ಮಹಾ ವಿಷ್ಣುವಿನ ಅಥವಾ ವೆಂಕಟೇಶ್ವರ ಸ್ವಾಮಿಯ ಅಥವಾ ನರಸಿಂಹ ಸ್ವಾಮಿಯ, ಕೃಷ್ಣನ ದರ್ಶನವನ್ನು ಪಡೆಯಿರಿ.
ದೇವಸ್ಥಾನಕ್ಕೆ ಹೋಗುವಾಗ ನೀವು ತಪ್ಪದೆ ಮತ್ತೊಂದು ಕೆಲಸವನ್ನು ಮಾಡಬೇಕು. ಅದೇನೆಂದರೆ ನೀವು ಈ ದಿನ ಸಂಜೆ ದೇವಸ್ಥಾನಕ್ಕೆ ಹೋಗುವಾಗ ಗೊನೆ ಬಾಳೆಹಣ್ಣನ್ನು ತೆಗೆದುಕೊಂಡು ಹೋಗಬೇಕು, ಭಿನ್ನ ಆಗಿರದ ಪೂರ್ತಿ ಗೊನೆ ತೆಗೆದುಕೊಂಡು ಹೋದರೆ ಒಳ್ಳೆಯದು. ಶಕ್ತಿ ಇಲ್ಲದಿದ್ದವರು ಒಂದು Kg ಚಿಪ್ಪು ಆದರೂ ತೆಗೆದುಕೊಂಡು ಹೋಗಿ ಆದರೆ ಆ ಚಿಪ್ಪಿನಲ್ಲಿ ಒಂದು ಹಣ್ಣು ಕೂಡ ಮುರಿದಿರಬಾರದು.
ಈ ರೀತಿ ಪೂರ್ತಿ ಚಿಪ್ಪು ಬಾಳೆಹಣ್ಣನ್ನು ದೇವಸ್ಥಾನಕ್ಕೆ ಅರ್ಪಿಸಿ ಇದರಿಂದ ನಿಮ್ಮ ಅನೇಕ ದೋಷಗಳು ಪರಿಹಾರವಾಗಿ ವೈಕುಂಠ ಏಕಾದಶಿ ಆಚರಿಸಿದ ಸಂಪೂರ್ಣ ಫಲಗಳು ನಿಮಗೆ ಅನುಗ್ರಹವಾಗುತ್ತದೆ. ನಿಮ್ಮ ಉದ್ಯೋಗ, ವಿವಾಹ, ಕುಟುಂಬ, ಆರೋಗ್ಯ, ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರವಾಗಿ ಅದೃಷ್ಟಶಾಲಿಗಳಾಗುತ್ತೀರಿ.