ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಅನೇಕ ಶಾಸ್ತ್ರಗಳಿದೆ. ಕೆಲವರು ಇದನ್ನು ಮೀರಿ ನಡೆಯುತ್ತಾರೆ ಈಗಿನ ಕಾಲದವರಿಗೆ ಇದರ ಮಾಹಿತಿ ಗೊತ್ತಿಲ್ಲದೆ ತಪ್ಪುತ್ತಾರೆ. ಹಾಗಾಗಿ ಇಂತಹ ಪ್ರಮುಖ ಶಾಸ್ತ್ರಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಇವುಗಳನ್ನು ಪಾಲಿಸಿ ಮತ್ತು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
* ಜೇಷ್ಠ ಮಾಸದಲ್ಲಿ ಜೇಷ್ಠ ಪುತ್ರಿ ಹಾಗೂ ಜೇಷ್ಠ ಪುತ್ರ ಮತ್ತು ಜೇಷ್ಠ ನಕ್ಷತ್ರದಲ್ಲಿ ಹುಟ್ಟಿದವರ ಮದುವೆಗಳನ್ನು ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ.
* ಒಂದೇ ಪಂಚಾಂಗದಲ್ಲಿ ಎರಡು ಚಪ್ಪರ ಹಾಕಬಾರದು ಅಂದರೆ ಇಬ್ಬರು ಮಕ್ಕಳ ಮದುವೆ ಒಂದೇ ವರ್ಷದಲ್ಲಿ ಮಾಡಬಾರದು ಎಂದು ನಿಯಮ ಇದೆ. ಆದರೆ ಕೆಲವರು ಇಬ್ಬರು ಮಕ್ಕಳ ಮದುವೆಯನ್ನು ಒಟ್ಟಿಗೆ ಮಾಡುತ್ತಾರೆ ಈ ರೀತಿ ಕೂಡ ಮಾಡುವುದು ತಪ್ಪು. ಸಂಪ್ರದಾಯದ ಪ್ರಕಾರ ಈ ರೀತಿ ಮಾಡುವುದರಿಂದ ಒಬ್ಬರಿಗೆ ಪೂರ್ತಿ ಒಳ್ಳೆಯದು ಹಾಗೂ ಒಬ್ಬರಿಗೆ ವಿರುದ್ಧವಾದ ಫಲಿತಾಂಶಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ
* ವಿವಾಹ ಉಪನಯನ ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ ಸೂತಕ ಮೈಲಿಗೆ ಬರುವುದಿಲ್ಲ
* ನಾಂದಿ ಶಾಸ್ತ್ರವನ್ನು ಮಂಗಳವಾರ ಹಾಗೂ ಶನಿವಾರ ಬಿಟ್ಟು ವಾರದ ಬೇರೆ ದಿನಗಳಲ್ಲಿ ಮಾಡಬೇಕು
* ಪ್ರದೋಷಗಳ ದಿನಗಳಲ್ಲಿ ತಪ್ಪದೇ ಶಿವಪೂಜೆ ಮಾಡಬೇಕು
* ಒಂದೇ ವರ್ಷದಲ್ಲಿ ಮೂರು ಶುಭ ಕಾರ್ಯಗಳನ್ನು ಮಾಡಬಾರದು
* ಮದುವೆ ಮಾಡಿದ ಸ್ವಲ್ಪ ದಿನಗಳೊಂದಿಗೆ ಮುಂಜಿ, ಚೌಳ, ಗೃಹಪ್ರವೇಶ ಮಾಡಬಾರದು
* ಮದುವೆ ಮಾಡುವಾಗ ಹೆಣ್ಣಿಗೆ ಗುರುಬಲ ಹಾಗೂ ಗಂಡಿಗೆ ರವಿ ಬಲವನ್ನು ಮುಖ್ಯವಾಗಿ ನೋಡಬೇಕು ಮತ್ತು ಈ ಇಬ್ಬರಿಗೂ ಚಂದ್ರ ಬಲವನ್ನು ನೋಡಬೇಕು
* ಮನೆಯಲ್ಲಿ ಗರ್ಭಿಣಿ ಸ್ತ್ರೀಯರು ಇದ್ದಾಗ ಮನೆ ಕಟ್ಟುವುದು, ಬಾವಿ ತೋಡಿಸುವುದು, ಚೌಳ ಮಾಡಿಸುವುದು ಇವುಗಳನ್ನು ಮಾಡಬಾರದು
* ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕತಂಗಿಯರನ್ನು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮಂದಿರಿಗೆ ಮದುವೆ ಮಾಡಿಕೊಡಬಾರದು
* ಗುರು ಶುಕ್ರ ಹಸ್ತ ರಾಗಿದ್ದಾಗ ಯಾವುದೇ ಶುಭ ಕಾರ್ಯ ಮಾಡಬಾರದು
* ಚೌಳವನ್ನು ಮೂರು ಅಥವಾ ಐದನೇ ವರ್ಷದಲ್ಲಿ ಉತ್ತರಾಣದಲ್ಲಿ ಮಾಡಿಸಬೇಕು
* ಮನೆಯಲ್ಲಿ ಕುಲದೇವರ ಮೂರ್ತಿ ಇಟ್ಟು ಪೂಜಿಸುವುದು ಉತ್ತಮ
* ಸಗೋತ್ರದಲ್ಲಿ ವಿವಾಹ ಮಾಡಬಾರದು
* ಮಂಗಳವಾರ ಮಗಳನ್ನು ಗಂಡನ ಮನೆಗೆ ಹಾಗೂ ಶುಕ್ರವಾರ ಸೊಸೆಯನ್ನು ತವರು ಮನೆಗೆ ಕಳುಹಿಸಬಾರದು
* ಮಂಗಳವಾರ ಶನಿವಾರ ಸಾಲ ತರಬಾರದು, ಶುಕ್ರವಾರ ಸಾಲ ಕೊಡಬಾರದು
* ಮಗುವಿಗೆ ಹಾಲುಣಿಸುವಾಗ ಅಡ್ಡಿ ಪಡಿಸಬಾರದು
* ಗಿಣ್ಣಿನ ಹಾಲು ಕೊಟ್ಟವರಿಗೆ ಮರಳಿ ಖಾಲಿ ಪಾತ್ರೆ ಕೊಡಬಾರದು
* ಸಂತಾನ ದೋಷಕ್ಕೆ ನಾಗಪೂಜೆ ಹಾಗೂ ಬನ್ನಿ ಪೂಜೆ ಮಾಡಬೇಕು
* ಮನೆಯಲ್ಲಿ ಸೂತಕ ಇರುವಾಗ ಯಾವುದೇ ಪೂಜಾ ಕಾರ್ಯವನ್ನು ಅಥವಾ ಶುಭ ಕಾರ್ಯವನ್ನಾಗಲಿ ಮಾಡಬಾರದು
* ಸ್ಮಶಾನದಿಂದ ಬರುವಾಗ ಮತ್ತೆ ಹಿಂದಕ್ಕೆ ತಿರುಗಿ ನೋಡಬಾರದು
* ಅಮಾವಾಸ್ಯೆ, ಸಂಕ್ರಾಂತಿ ಹಾಗೂ ಗ್ರಹಣ ಸಮಯದಲ್ಲಿ ಯಾವುದೇ ಮುಖ್ಯ ಕೆಲಸಕ್ಕೆ ಪ್ರಯಾಣ ಮಾಡಬಾರದು
* ಗ್ರಹಣದ ದಿನ ಹಾಗೂ ಅದರ ಮರುದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು
* ರಾತ್ರಿ ಸಮಯದಲ್ಲಿ ಹೊಸ ಮನೆಯ ಗೃಹಪ್ರವೇಶ ಮಾಡಬಾರದು
* ಕರ್ಕ, ಕನ್ಯಾ ಹಾಗೂ ಕುಂಭ ಸಂಕ್ರಾಂತಿಯಲ್ಲಿ ಗೃಹಪ್ರವೇಶ ಮಾಡಬಾರದು
* ಅಧಿಕ ಮಾಸದಲ್ಲಿ ಶುಭ ಕಾರ್ಯವನ್ನು ಮಾಡಬಾರದು
* ವಿಜಯದಶಮಿಯು ಗೃಹಪ್ರವೇಶಕ್ಕೆ ಯೋಗ್ಯವಲ್ಲ
* ರಾತ್ರಿ ಸಮಯ ಉಪ್ಪು ಹಾಗೂ ಮೊಸರು ಮತ್ತು ನಿಂಬೆ ಇಂತಹ ಹುಳಿ ಪದಾರ್ಥಗಳನ್ನು ಯಾರಿಗೂ ಕೊಡಬಾರದು
* ಸೂರ್ಯಸ್ತವಾದ ನಂತರ ಹೂ ಹಾಗೂ ಹಣ್ಣುಗಳನ್ನು ಕೀಳಬಾರದು
* ತಂದೆ ಸ.ತ್ತರೆ ಒಂದು ವರ್ಷ, ತಾಯಿ ಸ.ತ್ತರೆ ಆರು ತಿಂಗಳು, ಸಹೋದರ ಸತ್ತ.ರೆ ಒಂದು ತಿಂಗಳು ವಿವಾಹ ಆಗಬಾರದು
* ತಂದೆ ಮಕ್ಕಳು ಒಂದೇ ದಿನಕ್ಕೆ ಚೌರ ಮಾಡಿಸಬಾರದು
* ಸಂಜೆ ಸಮಯ ದೀಪ ಹಚ್ಚಿದ ತಕ್ಷಣ ಬಾಗಿಲು ಹಾಕಬಾರದು
* ಉಗುರು ಕತ್ತರಿಸಲು ಬುಧವಾರ ಸೂಕ್ತ, ಆದರೆ ಬುಧವಾರ ಜನಿಸಿದವರು ಆ ದಿನ ಕತ್ತರಿಸಬಾರದು.